ಕಾಗದ ಮುಕ್ತ ವ್ಯವಹಾರಕ್ಕೆ ಇ-ಸಂಸದ್ ಮತ್ತು ಇ-ವಿಧಾನ್

Eapp_upಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಕಾಗದ ರಹಿತ ಕಾರ್ಯಾಚರಣೆಯನ್ನು ಉತ್ತೇಜಿಸುವ ಸಲುವಾಗಿ ಇ-ಸಂಸದ್ ಮತ್ತು ಇ-ವಿಧಾನ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಇ-ಸಂಸದ್ & ಇ-ವಿಧಾನ್:

ಇ-ಸಂಸದ್ ಮತ್ತು ಇ-ವಿಧಾನ್ ಸಂಸತ್ ಮತ್ತು ರಾಜ್ಯ ಶಾಸಕಾಂಗಗಳ ಕಾರ್ಯಚಟುವಟಿಕೆಯನ್ನು ಕಾಗದ ಮುಕ್ತ ಕಾರ್ಯರೂಪಕ್ಕೆ ತರಲು, ಡಿಜಿಟಲ್ ಇಂಡಿಯಾ ಅಡಿಯಲ್ಲಿ ಭಾರತದ ಸರ್ಕಾರದ ಯೋಜನೆಗಳಾಗಿವೆ. ಸಂಸದೀಯ ವ್ಯವಹಾರ ಸಚಿವಾಲಯ ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸುವ ನೋಡಲ್ ಸಚಿವಾಲಯವಾಗಿದೆ.

ಮಹತ್ವ:

ಈ ಎರಡು ಯೋಜನೆಗಳು ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳ ಕಾರ್ಯಚಟುವಟಿಕೆಗಳನ್ನು ಪಾರದರ್ಶಕವಾಗಿಸಲು, ಮತ್ತು ಸಾರ್ವಜನಿಕ ಜವಾಬ್ದಾರಿಯಾಗಿ ಸಂಪೂರ್ಣ ಶಾಸನ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಉದ್ದೇಶವನ್ನು ಹೊಂದಿವೆ. ಇದಲ್ಲದೆ, ಈ ಪರಿಸರ ಸ್ನೇಹಿ ಉಪಕ್ರಮವು ಸರ್ಕಾರದ ‘ಗೋ ಗ್ರೀನ್’ ಯೋಜನೆಗೆ ಅನುಗುಣವಾಗಿದೆ.

Leave a Reply

Your email address will not be published. Required fields are marked *