ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,19,20,2017

Question 1

1. ಯಾವ ದೇಶವು ಆಹಾರ ಭದ್ರತೆ ಮತ್ತು ಇತರ ವಿಷಯಗಳ ಕುರಿತು WTO ಸದಸ್ಯ ರಾಷ್ಟ್ರಗಳ ಸಭೆಯನ್ನು 2018ರ ಫೆಬ್ರುವರಿಯಲ್ಲಿ ಆಯೋಜಿಸಲಿದೆ?

A
ಆಸ್ಟ್ರೇಲಿಯಾ
B
ಭಾರತ
C
ಯುನೈಟೆಡ್ ಸ್ಟೇಟ್ಸ್
D
ಜಪಾನ್
Question 1 Explanation: 
ಭಾರತ

ಭಾರತವು ಆಹಾರ ಭದ್ರತೆ ಮತ್ತು ಇತರ ವಿಷಯಗಳ ಕುರಿತು 2018 ರ ಫೆಬ್ರುವರಿಯಲ್ಲಿ WTO ಸದಸ್ಯ ರಾಷ್ಟ್ರಗಳ ಸಭೆಯನ್ನು ನಡೆಸಲಿದೆ.

Question 2

2. ಜಮ್ಮು ಮತ್ತು ಕಾಶ್ಮೀರದ ಯಾವ ಪ್ರದೇಶದಲ್ಲಿ ಲೋಸಾರ್ ಉತ್ಸವವು ಪ್ರಾರಂಭವಾಯಿತು?

A
ಲಡಾಖ್
B
ಅನಂತ್ನಾಗ್
C
ಬಾರಾಮುಲ್ಲಾ
D
ಕತುವಾ
Question 2 Explanation: 
ಲಡಾಖ್

ಲೋಸಾರ್ ಉತ್ಸವವು ಡಿಸೆಂಬರ್ 19, 2017 ರಂದು ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ಪ್ರಾರಂಭವಾಯಿತು. ಟಿಬೆಟಿಯನ್ರ ಹೊಸ ವರ್ಷವನ್ನು ಗುರುತಿಸುವುದಕ್ಕಾಗಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಲಡಾಖ್ನ ವಿವಿಧ ಭಾಗಗಳಲ್ಲಿ ಲೋಸಾರ್ ಉತ್ಸವವು 3 ರಿಂದ 9 ದಿನಗಳವರೆಗೆ ಮುಂದುವರಿಯುತ್ತದೆ. ಈ ಉತ್ಸವವನ್ನು ಲಡಾಖ್ನಲ್ಲಿನ ಅತ್ಯಂತ ಪ್ರಮುಖ ಸಾಮಾಜಿಕ-ಧಾರ್ಮಿಕ ಉತ್ಸವವೆಂದು ಪರಿಗಣಿಸಲಾಗಿದೆ.

Question 3

3. ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಕೌಶಲ್ಯ ತರಬೇತಿ ನೀಡಲು ಯಾವ ಮೋಟಾರು ಕಂಪನಿಯೊಂದಿಗೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ?

A
ಮಾರುತಿ ಸುಜುಕಿ
B
ಚಿಂಕಾರ ಮೋಟಾರ್ಸ್
C
ಸ್ಯಾನ್ ಮೋಟಾರ್ಸ್
D
ಟಾಟಾ ಮೋಟಾರ್ಸ್
Question 3 Explanation: 
ಮಾರುತಿ ಸುಜುಕಿ

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಕೇಂದ್ರ ಸಚಿವಾಲಯವು ಕೌಶಲ್ಯ ತರಭೇತಿ ನೀಡುವ ಸಲುವಾಗಿ ಮಾರುತಿ ಸುಜುಕಿ ಲಿಮಿಟೆಡ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಯುವಜನರಿಗೆ ತರಬೇತಿ ನೀಡವುದು ಮತ್ತು ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವುದು ಒಪ್ಪಂದದ ಪ್ರಮುಖ ಉದ್ದೇಶ.

Question 4

4. ಯಾವ ದಿನದಂದು ಗೋವಾದ 56 ನೇ ವಿಮೋಚನಾ ದಿನವನ್ನು ಆಚರಿಸಲಾಯಿತು?

A
ಡಿಸೆಂಬರ್ 18
B
ಡಿಸೆಂಬರ್ 20
C
ಡಿಸೆಂಬರ್ 21
D
ಡಿಸೆಂಬರ್ 19
Question 4 Explanation: 
ಡಿಸೆಂಬರ್ 19

ಗೋವಾದ 56 ನೇ ವಿಮೋಚನಾ ದಿನವನ್ನು ಪಣಜಿಯಲ್ಲಿ 2017ರ ಡಿಸೆಂಬರ್ 19 ರಂದು ಮಹಾನ್ ವೈಭವ ಮತ್ತು ಪ್ರದರ್ಶನದೊಂದಿಗೆ ಆಚರಿಸಲಾಯಿತು. ಈ ಸಂದರ್ಭವನ್ನು ಗುರುತಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸುಮಾರು 450 ವರ್ಷಗಳ ವಸಾಹತುಶಾಹಿ ಆಡಳಿತದ ನಂತರ ಪೋರ್ಚುಗೀಸರ ನಿಯಂತ್ರಣದಿಂದ 1961 ರಲ್ಲಿ ಈ ದಿನದಂದು ಗೋವಾ ವಿವೋಚನೆ ಪಡೆಯಿತು. “ಆಪರೇಷನ್ ವಿಜಯ್" ಹೆಸರಿನಲ್ಲಿ ಡಿಸೆಂಬರ್ 1961 ರಲ್ಲಿ ಭಾರತೀಯ ಸಶಸ್ತ್ರ ಪಡೆ ಪೋರ್ಚಗೀಸರ ವಿರುದ್ದ ಹೋರಾಡಿ ಗೋವಾವನ್ನು ವಶ ಪಡೆಸಿಕೊಂಡಿತು.

Question 5

5. ಪ್ರತಿಷ್ಠಿತ ರಾಷ್ಟ್ರೀಯ ವಿನ್ಯಾಸ (National Design Award) ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?

A
ಮೃಣಾಲ್ ಸಕ್ಸೇನಾ
B
ಕಾಂಚನ್ ಗುಪ್ತಾ
C
ಜಿ. ಸತೀಶ್ ರೆಡ್ಡಿ
D
ಜ್ಯೋತಿ ದುಬೆ
Question 5 Explanation: 
ಜಿ. ಸತೀಶ್ ರೆಡ್ಡಿ

ರಕ್ಷಣಾ ಮಂತ್ರಿಯ ವೈಜ್ಞಾನಿಕ ಸಲಹೆಗಾರ ಮತ್ತು ಕ್ಷಿಪಣಿ ವ್ಯವಸ್ಥೆಯ ಡೈರೆಕ್ಟರ್ ಜನರಲ್ ಜಿ. ಸತೀಶ್ ರೆಡ್ಡಿ ಅವರನ್ನು ಪ್ರತಿಷ್ಠಿತ ರಾಷ್ಟ್ರೀಯ ವಿನ್ಯಾಸ (National Design Award) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವೈವಿಧ್ಯಮಯ ಕ್ಷಿಪಣಿ ವ್ಯವಸ್ಥೆಗಳು, ಮಾರ್ಗದರ್ಶಿ ಶಸ್ತ್ರಾಸ್ತ್ರಗಳು, ಏವಿಯೋನಿಕ್ಸ್ ತಂತ್ರಜ್ಞಾನಗಳು ಮತ್ತು ಭಾರತದಲ್ಲಿ ಅಂತರಿಕ್ಷಯಾನ ತಂತ್ರಜ್ಞಾನಗಳು ಮತ್ತು ಕೈಗಾರಿಕೆಗಳ ಪ್ರಗತಿಗೆ ಕಾರಣವಾದ ಅವರ ಸತತ ಪ್ರಯತ್ನಗಳಿಗಾಗಿ ಅವರ ಮಹತ್ವದ ರಾಷ್ಟ್ರೀಯ ಕೊಡುಗೆಗಾಗಿ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Question 6

6. ಆಕರ್ಶಿ ಕಶ್ಯಪ್ ಈ ಕೆಳಗಿನ ಯಾವ ಕ್ರಿಡೆಗೆ ಹೆಸರುವಾಸಿಯಾಗಿದ್ದಾರೆ?

A
ಟೇಬಲ್ ಟೆನಿಸ್
B
ವ್ರೆಸ್ಲಿಂಗ್
C
ಬಾಕ್ಸಿಂಗ್
D
ಬ್ಯಾಡ್ಮಿಂಟನ್
Question 6 Explanation: 
ಬ್ಯಾಡ್ಮಿಂಟನ್

ಆಕರ್ಶಿ ಕಶ್ಯಪ್ ಅವರು ಬ್ಯಾಡ್ಮಿಂಟನ್ ಕ್ರಿಡೆಗೆ ಹೆಸರುವಾಸಿಯಾಗಿದ್ದಾರೆ, ಇವರು ಬಿಹಾರ ರಾಜ್ಯದವರು ಮತ್ತು ಭಾರತದ ಅಗ್ರ ಶ್ರೇಯಾಂಕಿತ ಜೂನಿಯರ್ ಶಟ್ಲರ್ ಆಗಿದ್ದಾರೆ. ಇವರು ಡಿಸೆಂಬರ್ 18, 2017 ರಂದು ಅಸ್ಸಾಂನ ಗುವಾಹತಿಯಲ್ಲಿ ನಡೆದ ಬ್ಯಾಡ್ಮಿಂಟನ್ ಜೂನಿಯರ್ ನ್ಯಾಷನಲ್ಸ್ ನಲ್ಲಿ U-17 ಮತ್ತು U-19 ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದಿದ್ದಾರೆ.

Question 7

7. 31ನೇ ಮೂರ್ತಿದೆವಿ ಪ್ರಶಸ್ತಿ 2017 ಗೆ ಯಾರನ್ನು ಆಯ್ಕೆ ಮಾಡಲಾಗಿದೆ?

A
ಕೊಲಕುರಿ ಎನೋಚ್
B
ವಿಶ್ವನಾಥ್ ತ್ರಿಪಾಠಿ
C
ಎಮ್. ಪಿ. ವೀರೇಂದ್ರ ಕುಮಾರ್
D
ಜಾಯ್ ಗೋಸ್ವಾಮಿ
Question 7 Explanation: 
ಜಾಯ್ ಗೋಸ್ವಾಮಿ

ಶ್ರೇಷ್ಠ ಬಂಗಾಳಿ ಕವಿ ಜಾಯ್ ಗೋಸ್ವಾಮಿ ಅವರನ್ನು 31ನೇ ಮೂರ್ತಿದೇವಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಅವರ “ಡು ಡೋಂಡೋ ಫೊವಾರಾ ಮೆಟ್ರೊ (Du Dondo Phowara Matro)” ಎಂಬ ಶೀರ್ಷಿಕೆಯ ಕವನ ಸಂಗ್ರಹಕ್ಕಾಗಿ 2017ರ ವರ್ಷಕ್ಕೆ 31 ನೇ ಮೂರ್ತಿದೆವಿ ಪ್ರಶಸ್ತಿ 2017 ಲಭಿಸಿದೆ.

Question 8

8. “ಮೊ ಫರಹ್ (Mo Farah)” ಅವರು 2017ರ ಬಿಬಿಸಿ ವರ್ಷದ ಕ್ರೀಡಾಪಟು ಪಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಯಾವ ದೇಶದವರು?

A
ದಕ್ಷಿಣ ಆಫ್ರಿಕಾ
B
ಮೊರಾಕೊ
C
ಬ್ರಿಟನ್
D
ಆಸ್ಟ್ರೇಲಿಯಾ
Question 8 Explanation: 
ಬ್ರಿಟನ್

ಮೊ ಫರಹ್ ಅವರು ಬ್ರಿಟನ್ನ ಅತ್ಯಂತ ಯಶಸ್ವಿ ದೂರದ ಓಟಗಾರ. ಫರಹ್ ರವರಿಗೆ 2017 ಬಿಬಿಸಿ ವರ್ಷದ ಕ್ರೀಡಾಪಟು ಪಶಸ್ತಿ ಲಭಿಸಿದೆ. ಮೊ ಫರಹ್ ನಾಲ್ಕು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದಾರೆ. 2017 ರ ಲಂಡನ್ನಲ್ಲಿ ತನ್ನ ಸತತ ಮೂರನೇ 10,000 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ

Question 9

9. ಡಿಜಿಟಲ್ ವಹಿವಾಟು ಉತ್ತೇಜಿಸಲು ಕೇಂದ್ರ ಸರ್ಕಾರ ಎಷ್ಟು ಮೊತ್ತ ಪಾವತಿಸುವುದರ ಮೇಲಿನ ‘ಎಂಡಿಆರ್’ ಶುಲ್ಕವನ್ನು ಭರಿಸಲಿದೆ?

A
ರೂ 2000
B
ರೂ 5000
C
ರೂ 10000
D
ರೂ 20000
Question 9 Explanation: 
ರೂ 20000

ಡೆಬಿಟ್ ಕಾರ್ಡ್ ಬಳಸಿ ₹ 2,000ವರೆಗಿನ ಮೊತ್ತ ಪಾವತಿಸುವುದರ ಮೇಲಿನ ‘ಎಂಡಿಆರ್’ ಶುಲ್ಕವನ್ನು ಕೇಂದ್ರ ಸರ್ಕಾರವೇ ಭರಿಸಲು ಮುಂದಾಗಿದೆ. ನಗದುರಹಿತ (ಡಿಜಿಟಲ್) ವಹಿವಾಟು ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2018ರ ಜನವರಿ 1ರಿಂದ ಎರಡು ವರ್ಷಗಳವರೆಗೆ ಈ ಉತ್ತೇಜನಾ ಕೊಡುಗೆ ಜಾರಿಯಲ್ಲಿ ಇರಲಿದೆ.

Question 10

10. ಇ-NAM ನಲ್ಲಿ ನಗದು ರಹಿತ ಪಾವತಿಯನ್ನು ಸಕ್ರಿಯಗೊಳಿಸಲು ಕೇಂದ್ರ ಸರ್ಕಾರ ಯಾವ ಖಾಸಗಿ ವಲಯದ ಬ್ಯಾಂಕ್ ಅನ್ನು ತೊಡಗಿಸಿದೆ?

A
ಐಸಿಐಸಿಐ
B
ಆಕ್ಸಿಸ್ ಬ್ಯಾಂಕ್
C
ಫೆಡರಲ್ ಬ್ಯಾಂಕ್
D
ರತ್ನಾಕರ್ ಬ್ಯಾಂಕ್
Question 10 Explanation: 
ಐಸಿಐಸಿಐ

ಎಲೆಕ್ಟ್ರಾನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ಎನ್ಎಎಂ)ಯ ರಾಷ್ಟ್ರೀಯ ಪೋರ್ಟಲ್ನೊಂದಿಗೆ 470 ಮಂಡಿಗಳಲ್ಲಿ ಆನ್ಲೈನ್ ಪಾವತಿಗಳನ್ನು ಸಕ್ರಿಯಗೊಳಿಸಲು ಐಸಿಐಸಿಐ ಬ್ಯಾಂಕ್ ಅನ್ನು ಕೇಂದ್ರ ಸರ್ಕಾರ ತೊಡಗಿಸಿಕೊಂಡಿದೆ. ಪ್ರಸ್ತುತ, ಇ-ಎನ್ಎಎಂ ನಲ್ಲಿ ಭಾಗವಹಿಸುವವರು ಬ್ಯಾಂಕ್ ಶಾಖೆಗಳು, ಡೆಬಿಟ್ ಕಾರ್ಡುಗಳು ಮತ್ತು ನೆಟ್ ಬ್ಯಾಂಕಿಂಗ್ ಮುಂತಾದ ಸಾಂಪ್ರದಾಯಿಕ ವಿಧಾನಗಳ ಮೂಲಕ ಪಾವತಿಗಳನ್ನು ಮಾಡುತ್ತಿದ್ದಾರೆ. ಈಗ ಐಸಿಐಸಿಐ ಬ್ಯಾಂಕ್ BHIM ಮತ್ತು UIP (ಯುಪಿಐ) ಅನ್ನು ಬಳಸಿ ಇ-ಎನ್ಎಎಂ ಪೋರ್ಟಲ್ನಲ್ಲಿ ನಗದು ರಹಿತ ಪಾವತಿಗಳನ್ನು ಮಾಡಬಹುದಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2018/01/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್19202017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

10 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,19,20,2017”

    1. Arun m

      Thanks sir…..

    1. Rahul Hipparagi

      Yaa 9th ans wrong

  1. Sushma

    It nice
    Good work

  2. maruti moshi

    It is usefull to kannada medium candites so please update ur website

Leave a Reply to maruti moshi Cancel reply

This site uses Akismet to reduce spam. Learn how your comment data is processed.