Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,16,17,2017

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,16,17,2017

Question 1

1. ಭಾರತದ ಮೊದಲ ಸಾಮಾಜಿಕ ಆಡಿಟ್ ಕಾನೂನನ್ನು ಯಾವ ರಾಜ್ಯ ಸರ್ಕಾರವು ಪ್ರಾರಂಭಿಸಿದೆ?

A
ಮೇಘಾಲಯ
B
ಕೇರಳ
C
ಮಹಾರಾಷ್ಟ್ರ
D
ಜಾರ್ಖಂಡ್
Question 1 Explanation: 
ಮೇಘಾಲಯ

ಸರ್ಕಾರಿ ಕಾರ್ಯಕ್ರಮಗಳ ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು ಯೋಜನೆಗಳನ್ನು ಸರ್ಕಾರದ ಅಭ್ಯಾಸದ ಭಾಗವಾಗಿ ಮಾಡುವ ಕಾನೂನನ್ನು ಕಾರ್ಯಗತಗೊಳಿಸುವ ಭಾರತದ ಮೊದಲ ರಾಜ್ಯವೆಂದು ಮೇಘಾಲಯವು ಮಾರ್ಪಟ್ಟಿದೆ. ಮುಖ್ಯಮಂತ್ರಿ ಮುಕುಲ್ ಸಂಗ್ಮಾಅವರು 2017 ರ ಡಿಸೆಂಬರ್ 15 ರಂದು ಶಿಲ್ಗಾಂಗ್ನ ರಾಷ್ಟ್ರೀಯ ಸಮಾವೇಶದಲ್ಲಿ ‘ಮೇಘಾಲಯ ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ಸಾರ್ವಜನಿಕ ಲೆಕ್ಕ ಪರಿಶೋಧನೆ ಆಕ್ಟ್ 2017 ‘ ಅನ್ನು ಪ್ರಾರಂಭಿಸಿದರು.

Question 2

2. ಲಖ್ ಬಹೋಸಿ ಅಭಯಾರಣ್ಯ (LBS) ಭಾರತದ ಯಾವ ರಾಜ್ಯದಲ್ಲಿದೆ?

A
ಒಡಿಶಾ
B
ಉತ್ತರ ಪ್ರದೇಶ
C
ಜಾರ್ಖಂಡ್
D
ಮಧ್ಯಪ್ರದೇಶ
Question 2 Explanation: 
ಉತ್ತರ ಪ್ರದೇಶ

ಲಖ್ ಬಹೋಸಿ ಅಭಯಾರಣ್ಯ (LBS) ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಲಖ್ ಮತ್ತು ಬಹೋಸಿ ಗ್ರಾಮಗಳ ಬಳಿ ಎರಡು ಪ್ರದೇಶದಲ್ಲಿ ಹರಡಿರುವ ಪಕ್ಷಿಧಾಮವಾಗಿದ್ದು, 3 ಚ.ಕಿ ಹರಡಿದೆ. ಈ ಅಭಯಾರಣ್ಯವು ನವೆಂಬರ್ ನಿಂದ ಮಾರ್ಚ್ ವರೆಗೆ ವಿವಿಧ ವಲಸೆ ಹಕ್ಕಿಗಳಿಗೆ ನೆಲೆಯಾಗಿದೆ.

Question 3

3. ಉತ್ತರ ಪ್ರದೇಶದ ಯಾವ ನಗರದಲ್ಲಿ ‘ಗೀತಾ ಸಂಶೋಧನಾ ಸಂಸ್ಥೆ’ ಯನ್ನು ಸ್ಥಾಪಿಸಲಾಗುತ್ತಿದೆ?

A
ಮಥುರಾ
B
ಝಾನ್ಸಿ
C
ಆಗ್ರಾ
D
ವಾರಣಾಸಿ
Question 3 Explanation: 
ಮಥುರಾ

ಗೀತಾ ರಿಸರ್ಚ್ ಇನ್ಸಿಟ್ಯೂಟ್ಅನ್ನು ಶೀಘ್ರದಲ್ಲೇ ಮಥುರಾದಲ್ಲಿ, ಉತ್ತರ ಪ್ರದೇಶ ಸರ್ಕಾರವು ಗಯಾನ್, ವದನ್ (ಸಂಗೀತದ ಕಲೆ) ಮತ್ತು ಕೃಷ್ಣ ಯುಗದ ನೃತ್ಯ ಕುರಿತಾದ ಸಂಶೋಧನೆಗಾಗಿ ಸ್ಥಾಪಿಸಲ್ಪಟ್ಟಿದೆ. ಇದು ‘ಭಗವದ್ಗೀತೆಯ” ಅಧ್ಯಯನಕ್ಕೆ ಸಂಶೋಧನಾ ಸಂಸ್ಥೆಯಾಗಿದೆ.

Question 4

4. ವಿಶ್ವ ಆರೋಗ್ಯ ಸಂಸ್ಥೆ (WHO) ಪೋಲಿಯೊ ಮುಕ್ತ ರಾಷ್ಟ್ರವನ್ನು ಇತ್ತೀಚೆಗೆ ಘೋಷಿಸಿದ ರಾಷ್ಟ್ರ ಯಾವುದು?

A
ಪಾಕಿಸ್ತಾನ
B
ಗೇಬೊನ್
C
ನೈಜೀರಿಯಾ
D
ಅಫಘಾನಿಸ್ತಾನ
Question 4 Explanation: 
ಗೇಬೊನ್

ಕೇಂದ್ರೀಯ ಆಫ್ರಿಕನ್ ದೇಶದಲ್ಲಿ ಹೊಸ ವರದಿಗಳು ಅಥವಾ ಶಂಕಿತ ಪ್ರಕರಣಗಳ ಕೊರತೆಯ ಕಾರಣದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO)ಯು ಅಧಿಕೃತವಾಗಿ ಗೇಬೊನ್ ಗೆ “ಪೋಲಿಯೊ ಮುಕ್ತ ರಾಷ್ಟ್ರ” ಎಂದು ಘೋಷಿಸಿದೆ. ಪೋಲಿಯೊ ಹೆಚ್ಚು ಸಾಂಕ್ರಾಮಿಕ ವೈರಸ್ ರೋಗವಾಗಿದ್ದು, ಇದು ಮುಖ್ಯವಾಗಿ ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಶಾಶ್ವತ ಪಾರ್ಶ್ವವಾಯುಗೆ ಕಾರಣವಾಗುತ್ತದೆ.

Question 5

5. ಬೀಜಿಂಗ್ 2022 ರ ಒಲಂಪಿಕ್ ವಿಂಟರ್ ಗೇಮ್ಸ್ ಗಾಗಿ ಯಾವ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಿದೆ?

A
ವಿಂಟರ್ ಡ್ರೀಮ್
B
ಪ್ಲೈಟ್
C
ನೇಚರ್
D
ಯೋಗ್ಗ್ಲ
Question 5 Explanation: 
ವಿಂಟರ್ ಡ್ರೀಮ್

ಬೀಜಿಂಗ್ 2022 ರ ಸಂಘಟನಾ ಸಮಿತಿ (BOCOG)ಯು ಇತ್ತೀಚೆಗೆ 2022 ರ ಬೀಜಿಂಗ್ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ವಿಂಟರ್ ಗೇಮ್ಸ್ ಗಾಗಿ ಚೀನಾದ ನ್ಯಾಷನಲ್ ಅಕ್ವಾಟಿಕ್ ಸೆಂಟರ್ನಲ್ಲಿ ಡಿಸೆಂಬರ್ 15, 2017 ರಂದು ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಿದೆ.

Question 6

6. National Institute of Nutrition (NIN)ನ ಹೊಸದಾಗಿ ನೇಮಕಗೊಂಡ ನಿರ್ದೇಶಕರು ಯಾರು?

A
ಕೀರ್ತಿ ಚಂದ್ರ
B
ಆರ್ ಹೆಮಲಥಾ
C
ಅತುಲ್ ದುಬೆ
D
ದೀಕ್ಷಾ ಜೈನ್
Question 6 Explanation: 
ಆರ್ ಹೆಮಲಥಾ

ಹೈದರಾಬಾದ್ನ National Institute of Nutrition (NIN)ನ ಹೊಸದಾಗಿ ನಿರ್ದೇಶಕರಾಗಿ ಆರ್ ಹೆಮಲಥಾ ಅವರು ನೇಮಕಗೊಂಡಿದ್ದಾರೆ. ಅವರು ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸನ್ ಮತ್ತು ಪೌಷ್ಠಿಕಾಂಶ ವಿಜ್ಞಾನದ ಅಂತರಾಷ್ಟ್ರೀಯ ಒಕ್ಕೂಟದ ಸಹವರ್ತಿಯಾಗಿದ್ದಾರೆ.

Question 7

7. ಇಂಟರ್ನ್ಯಾಶನಲ್ ಟ್ರೈನಿಂಗ್ ಸೆಂಟರ್ ಫಾರ್ ಆಪರೇಶನಲ್ ಓಷನೋಗ್ರಾಫಿಯನ್ನು ಸ್ಥಾಪಿಸಲು ಯುನೆಸ್ಕೋದೊಂದಿಗಿನ ಒಪ್ಪಂದವನ್ನು ಕೇಂದ್ರ ಕ್ಯಾಬಿನೆಟ್ ಇತ್ತೀಚೆಗೆ ಅನುಮೋದಿಸಿದೆ. ಇದರ ಕೇಂದ್ರವನ್ನು ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?

A
ಹೈದರಾಬಾದ್
B
ನವ ದೆಹಲಿ
C
ಚೆನ್ನೈ
D
ಲಕ್ನೋ
Question 7 Explanation: 
ಹೈದರಾಬಾದ್

International Training Centre for Operational Oceanography ನ ಕೇಂದ್ರವನ್ನು ಹೈದರಾಬಾದ್ನಲ್ಲಿ ಸ್ಥಾಪಿಸಲಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಹೈದರಾಬಾದ್ನ UNESCO ನ ವರ್ಗ-2 (C2C)ನ ಕಾರ್ಯಾಚರಣೆಯ ಸಮುದ್ರಶಾಸ್ತ್ರದ ಅಂತರಾಷ್ಟ್ರೀಯ ತರಬೇತಿ ಕೇಂದ್ರವನ್ನು ಇತ್ತೀಚೆಗೆ ಅಂಗೀಕರಿಸಿದೆ.

Question 8

8. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (National Disaster Management Authority (NDMA)) ನ ಪ್ರಧಾನ ಕಛೇರಿ ಎಲ್ಲಿದೆ?

A
ಕೊಚ್ಚಿ
B
ನವ ದೆಹಲಿ
C
ಡೆಹ್ರಾಡೂನ್
D
ಕಾನ್ಪುರ್
Question 8 Explanation: 
ನವ ದೆಹಲಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ನ ಪ್ರಧಾನ ಕಛೇರಿಯು ನವ ದೆಹಲಿಯಲ್ಲಿದೆ. ವಿಪತ್ತು ಅಪಾಯ ಕಡಿತ (Disaster Risk Reduction (DRR)) ಗಾಗಿ ಕ್ರಿಯಾ ಯೋಜನೆಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಸೆಂಡೈ ಮಾನಿಟರ್ನ ಬಳಕೆಗೆ 3 ದಿನದ ಕಾರ್ಯಕ್ರಮವು, ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು NDMA ಯು ಸಂವೇದನೆ ಮಾಡುತ್ತದೆ.

Question 9

9. ಯಾವ ದಿನಾಂಕದಂದು 2017 ವಿಜಯ್ ದಿವಸ್ ಅನ್ನು ಭಾರತದಲ್ಲಿ ಆಚರಿಸಲಾಗುತ್ತದೆ?

A
ಡಿಸೆಂಬರ್ 17
B
ಡಿಸೆಂಬರ್ 18
C
ಡಿಸೆಂಬರ್ 15
D
ಡಿಸೆಂಬರ್ 16
Question 9 Explanation: 
ಡಿಸೆಂಬರ್ 16

1971 ರ ಯುದ್ಧದಲ್ಲಿ ಭಾರತವು ಪಾಕಿಸ್ತಾನದ ಮೇಲೆ ವಿಜಯ್ ಸಾಧಿಸಿದ ಪ್ರಯುಕ್ತ ಪ್ರತಿ ವರ್ಷ ಡಿಸೆಂಬರ್ 16 ರಂದು ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ.

Question 10

10. ದ್ವಿಪಕ್ಷೀಯ ಸೇನಾ ವ್ಯಾಯಾಮದ 8 ನೇ ಆವೃತ್ತಿ “ಇಕುರ್ವಿನ್ 2017” ಭಾರತ ಮತ್ತು ಯಾವ ದೇಶದ ನಡುವೆ ಆರಂಭವಾಗಿದೆ?

A
ಜಪಾನ್
B
ನೇಪಾಳ
C
ಮಾಲ್ಡೀವ್ಸ್
D
ಶ್ರೀಲಂಕಾ
Question 10 Explanation: 
ಮಾಲ್ಡೀವ್ಸ್

“ಇಕುರ್ವಿನ್ 2017” ಎಂಬ ದ್ವಿಪಕ್ಷೀಯ ಮಿಲಿಟರಿ ವ್ಯಾಯಾಮದ 8 ನೇ ಆವೃತ್ತಿಯು ಕರ್ನಾಟಕದ ಬೆಳಗಾವಿಯಲ್ಲಿ ಡಿಸೆಂಬರ್ 15 ರಿಂದ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಆರಂಭವಾಗಿದೆ. ಇದು ಭಾರತೀಯ ಸೇನೆ ಮತ್ತು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (MNSF) ನಡುವೆ 14 ದಿನಗಳ ಕಾಲ ನಡೆಯುವ ಜಂಟಿ ಮಿಲಿಟರಿ ತರಬೇತಿಯಾಗಿದೆ.

There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

3 Responses to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,16,17,2017”

  1. Those questions are very helpful our compitive exam purpose and out future life purpose good helped ur through

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.