Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,14,2017

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,14,2017

Question 1

1. Kanha Tiger Reserve (KTR) ಭಾರತದ ಯಾವ ರಾಜ್ಯದಲ್ಲಿದೆ?

A
ಒಡಿಶಾ
B
ಕರ್ನಾಟಕ
C
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
D
ಮಧ್ಯ ಪ್ರದೇಶ
Question 1 Explanation: 
ಮಧ್ಯ ಪ್ರದೇಶ

Kanha Tiger Reserve (KTR) ಭಾರತದ ಹುಲಿ ಮೀಸಲು ಮತ್ತು ಮಧ್ಯ ಪ್ರದೇಶದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು 940 ಚ.ಕ ವಿಸ್ತೀರ್ಣವನ್ನು ಹೊಂದಿದೆ. ಇದು 1000 ಕ್ಕಿಂತ ಹೆಚ್ಚು ಹೂಬಿಡುವ ಸಸ್ಯಗಳ ತವರಾಗಿದೆ.

Question 2

2. ಜವಾಬ್ದಾರಿಯುತ ಆಡಳಿತಕ್ಕಾಗಿ “ಸೇವಾ ಸಿಂಧು” ಎಂಬ ಡಿಜಿಟಲ್ ಪ್ಲಾಟ್ ಫಾರ್ಮ್ ಅನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

A
ಕರ್ನಾಟಕ
B
ಕೇರಳ
C
ಒಡಿಶಾ
D
ತಮಿಳುನಾಡು
Question 2 Explanation: 
ಕರ್ನಾಟಕ

ಸರ್ಕಾರದ ಸೇವೆಗಳಿಗೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಸಾಮಾನ್ಯ ನಾಗರಿಕ ಸಮಸ್ಯಗಳನ್ನು ಪರಿಹರಿಸಲು ಕರ್ನಾಟಕ ಸರ್ಕಾರ ಶೀಘ್ರದಲ್ಲೇ “ ಸೇವಾ ಸಿಂಧು” ಎಂಬ ಡಿಜಿಟಲ್ ಪ್ಲಾಟ್ ಫಾರ್ಮ್ ಅನ್ನು ಪ್ರಾರಂಭಿಸುತ್ತಿದೆ. ಇದಕ್ಕಾಗಿ, ರಾಜ್ಯ ಸಚಿವ ಸಂಪುಟವು “ಸೇವಾ ಸಿಂಧೂ”ನ ಪ್ರಸ್ತಾಪವನ್ನು ಅಂಗೀಕರಿಸಿದೆ.

Question 3

3. ಬೌದ್ಧ ಸನ್ಯಾಸಿಯಾದ ಧಮ್ಮಪಿಯ ಅವರು International Buddhist Confederation (IBC)ನ ಹೊಸ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರು ಭಾರತದ ಯಾವ ರಾಜ್ಯದವರು?

A
ಸಿಕ್ಕಿಂ
B
ತ್ರಿಪುರ
C
ಮಣಿಪುರ
D
ಅರುಣಾಚಲ ಪ್ರದೇಶ
Question 3 Explanation: 
ತ್ರಿಪುರ

ಬೌದ್ಧ ಸನ್ಯಾಸಿಯಾದ ಧಮ್ಮಪಿಯ ಅವರು International Buddhist Confederation (IBC)ನ ಹೊಸ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರು ತ್ರಿಪುರ ರಾಜ್ಯದವರು. International Buddhist Confederation (IBC) ಯು ಭಾರತ ಮತ್ತು ಧರ್ಮದ ಪರಂಪರೆಯ ತಾಣಗಳ ಸಂರಕ್ಚಣೆ ಮತ್ತು ಅಭಿವೃದ್ಧಿಯ ಜಾಗತಿಕ ಬೌದ್ಧ ವೇದಿಕೆಯಾಗಿದೆ.

Question 4

4. ಹಿಂದಿಯಲ್ಲಿ ಉಚಿತ ಇ-ಮೇಲ್ ವಿಳಾಸವನ್ನು ತನ್ನ ರಾಜ್ಯದ ನಿವಾಸಿಗಳಿಗೆ ನೀಡುತ್ತಿರುವ ಭಾರತದ ಮೊದಲ ರಾಜ್ಯ ಯಾವುದು?

A
ಉತ್ತರ ಪ್ರದೇಶ
B
ರಾಜ್ಯಸ್ಥಾನ
C
ಜಾರ್ಖಂಡ್
D
ಮಧ್ಯ ಪ್ರದೇಶ
Question 4 Explanation: 
ರಾಜ್ಯಸ್ಥಾನ

ರಾಜ್ಯಸ್ಥಾನವು ತನ್ನ ಉಚಿತ ಇ-ಮೇಲ್ ವಿಳಾಸವನ್ನು ತನ್ನ ರಾಜ್ಯದ ನಿವಾಸಿಗಳಿಗೆ ನೀಡುತ್ತಿರುವ ಭಾರತದ ಮೊದಲ ರಾಜ್ಯವಾಗಿದೆ.

Question 5

5. ಭಾರತದ Broadcast Audience Research Council (BARC)ನ ಹೊಸ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

A
ನಕುಲ್ ಚೋಪ್ರಾ
B
ಸುಧಾಂಶು ವ್ಯಾಟ್ಸ್
C
ಸುಭಾಷ್ ಚಂದ್ರ ಗಾರ್ಗ್
D
ಚೇತನ್ ಚೌಹಾಣ್
Question 5 Explanation: 
ನಕುಲ್ ಚೋಪ್ರಾ

ಪ್ರಸ್ತುತ AAAIನ ಅಧ್ಯಕ್ಷರು ಮತ್ತು ಪಬ್ಲಿಕ್ ಕಮ್ಯುನಿಕೇಶನ್ಸ್ ನ ಹಿರಿಯ ಸಲಹೆಗಾರ ನಕುಲ್ ಚೋಪ್ರಾ ಅವರು ಟೆಲಿವಿಷನ್ ಶ್ರೇಯಾಂಕಗಳ ಸಂಸ್ಥೆಯಾದ Broadcast Audience Research Council (BARC)ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Question 6

6. 2017ರ Legatum Prosperity Index (GPI)ನಲ್ಲಿ ಭಾರತ ಎಷ್ಟನೆ ಸ್ಥಾನದಲ್ಲಿದೆ?

A
104 ನೇ
B
111 ನೇ
C
100 ನೇ
D
149 ನೇ
Question 6 Explanation: 
100 ನೇ

2017ರ Legatum Prosperity Index (GPI)ನ 11 ನೇ ಆವೃತ್ತಿಯಲ್ಲಿ 149 ದೇಶಗಳಲ್ಲಿ ಭಾರತವು 100ನೇ ಸ್ಥಾನ ಪಡೆದಿದೆ. ಇದು ಸಂಪತ್ತು ಪ್ರಪಂಚದಾದ್ಯಂತ ಹೇಗೆ ರೂಪುಗೊಳ್ಳುತ್ತದೆ ಮತ್ತು ಬದಲಾಗುತ್ತದೆ ಎಂಬುದರ ಬಗ್ಗೆ ಒಳನೋಟವನ್ನು ಸೂಚಿಸುತ್ತದೆ.

Question 7

7. ಭಾರತದ 2017ರ National Energy Conservation Day (NECD)ಯನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?

A
ಡಿಸೆಂಬರ್13
B
ಡಿಸೆಂಬರ್ 14
C
ಡಿಸೆಂಬರ್ 15
D
ಡಿಸೆಂಬರ್ 16
Question 7 Explanation: 
ಡಿಸೆಂಬರ್ 14

National Energy Conservation Day (NECD)ಯನ್ನು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 14ರಂದು ಆಚರಿಸಲಾಗುತ್ತದೆ. ಇದು ಶಕ್ತಿ ಸಾಮರ್ಥ್ಯ ಮತ್ತು ಸಂರಕ್ಷಣೆಯಲ್ಲಿ ಭಾರತದ ಸಾಧನೆಗಳನ್ನು ಪ್ರದರ್ಶಿಸುತ್ತದೆ.

Question 8

8. ನೀರಜ್ ವೊರಾ ಅವರು ಇತ್ತೀಚೆಗೆ ನಿಧನರಾದರು. ಅವರು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಪ್ರಸಿದ್ಧರಾಗಿದ್ದರು?

A
ರಾಜಕೀಯ
B
ಚಲನಚಿತ್ರ ಉದ್ಯಮ
C
ಕಾನೂನು
D
ಪತ್ರಿಕೋದ್ಯಮ
Question 8 Explanation: 
ಚಲನಚಿತ್ರ ಉದ್ಯಮ

ಬಾಲಿವುಡ್ ನಟ, ಬರಹಗಾರ ಮತ್ತು ನಿರ್ದೇಶಕರಾದ ನೀರಜ್ ವೊರಾ ಅವರು ಡಿಸೆಂಬರ್ 14, 2017 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 54 ವಯಸ್ಸಾಗಿತ್ತು. ಅವರು “ಸತ್ಯ”, “ಫಿರ್ ಹೇರಾ ಫೆರಿ”, ಮತ್ತು “ಡಾಡ್” ಮುಂತಾದ ಚಲನಚಿತ್ರಗಳಿಗೆ ಹೆಸರುವಾಸಿಗಿದ್ದಾರೆ.

Question 9

9. ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಕುರಿತು 2ನೇ (UNWTO/UNESCO) World Conference on Tourism and Culture ಸಮ್ಮೇಳನವನ್ನು ಯಾವ ದೇಶವು ಆಯೋಜಿಸಿತು?

A
ಓಮನ್
B
ಇಸ್ರೇಲ್
C
ಭಾರತ
D
ಚೀನಾ
Question 9 Explanation: 
ಓಮನ್

ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಕುರಿತು 2ನೇ (UNWTO/UNESCO) World Conference on Tourism and Culture ಸಮ್ಮೇಳನವನ್ನು ಓಮನ್ನ ಮಸ್ಕಟ್ ನಲ್ಲಿ ಆಯೋಜಿಸಿಲಾಗಿತ್ತು. ಈ ಸಮ್ಮೇಳನವನ್ನು ಒಮಾನ್ ಸುಲ್ತಾನೇಂಟ್ ಸರ್ಕಾರವು ಆಯೋಜಿಸಿತ್ತು.

Question 10

10. OBOPAY ಇತ್ತೀಚೆಗೆ Reserve Bank of India (RBI)ಯು PPI n ಪರವಾನಗಿಯನ್ನು ಪಡೆದುಕೊಂಡಿದೆ. PPI ಎಂದರೇನು?

A
Prepaid Payment Instrument
B
Postpaid Payment Instruction
C
Prepaid Payment Instruction
D
Postpaid Payment Instrument
Question 10 Explanation: 
Prepaid Payment Instrument

OBOPAY , ಜಾಗತಿಕ ಮೊಬೈಲ್ ಪಾವತಿಯ ಪರಿಹಾರಗಳ ಕಂಪನಿ, ಇತ್ತೀಚೆಗೆ ಭಾರತದಲ್ಲಿ ಲೂಪ್ ಕೈಚೀಲವನ್ನು ನಿರ್ವಹಿಸಲು Reserve Bank of India (RBI)ಯು PPI ನ ಪರವಾನಗಿಯನ್ನು ಪಡೆದುಕೊಂಡಿದೆ. PPI ಎಂದರೆ Prepaid Payment Instrument ಆಗಿದೆ.

There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Response to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,14,2017”

  1. Mahadevswamy k says:

    Very very good questions are giving

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.