ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,12,2017

Question 1

1. ವಿಶ್ವ ತೆಲುಗು ಸಮ್ಮೇಳನ (WTC-2017)ನ ವಾಡಿಕೆಯ ಕಾರ್ಯದಲ್ಲಿ ಮುಖ್ಯ ಅತಿಥಿ ಯಾರು?

A
ರಾಮ್ನಾಥ್ ಕೋವಿಂದ್
B
ನರೇಂದ್ರ ಮೋದಿ
C
ನರೇಂದ್ರ ಮೋದಿ
D
ಎಂ ವೆಂಕಯ್ಯ ನಾಯ್ಡು
Question 1 Explanation: 
ರಾಮ್ನಾಥ್ ಕೋವಿಂದ್

2017ರ ಡಿಸೆಂಬರ್ 15 ರಿಂದ 19 ರವರೆಗೆ ತೆಲಂಗಾಣ ಸರ್ಕಾರವು ಹೈದರಾಬಾದ್ನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಿಶ್ವ ತೆಲುಗು ಸಮ್ಮೇಳನ (WTC-2017)ನ ವಾಡಿಕೆಯ ಕಾರ್ಯದಲ್ಲಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಮುಖ್ಯ ಅತಿಥಿಯಾಗಿದ್ದಾರೆ.

Question 2

2. ಯುನಿವರ್ಸಲ್ ಹೆಲ್ತ್ ಕವರೇಜ್ ಡೇ (UHCD) ಯ ಕೇಂದ್ರ ಆರೋಗ್ಯ ಸಚಿವಾಲಯವು ಯಾವ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ?

A
ಸೌಭಾಗ್ಯಾ
B
ಸಾಗರ್
C
ಆರಂಬ
D
ಲಕ್ಷಾ
Question 2 Explanation: 
ಲಕ್ಷಾ

ಯುನಿವರ್ಸಲ್ ಹೆಲ್ತ್ ಕವರೇಜ್ ಡೇ (UHCD) ಯ ಕೇಂದ್ರ ಆರೋಗ್ಯ ಸಚಿವಾಲಯವು ಲಕ್ಷಾ ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ.

Question 3

3. ಮಾಧವ್ ರಾಷ್ಟ್ರೀಯ ಉದ್ಯಾನವನ (MNP) ಮಧ್ಯಪ್ರದೇಶದ ಯಾವ ಜಿಲ್ಲೆಯಲ್ಲಿದೆ?

A
ಶಿಯೋಪುರ್ ಜಿಲ್ಲೆ
B
ಶಿವಪುರಿ ಜಿಲ್ಲೆ
C
ಹೋಶಂಗಾಬಾದ್ ಜಿಲ್ಲೆ
D
ಬಾಲಾಘಾಟ್ ಜಿಲ್ಲೆ
Question 3 Explanation: 
ಶಿವಪುರಿ ಜಿಲ್ಲೆ

ಮಾಧವ್ ರಾಷ್ಟ್ರೀಯ ಉದ್ಯಾನವನ (MNP) ಮಧ್ಯಪ್ರದೇಶದ ವಾಯುವ್ಯದಲ್ಲಿರುವ ಗ್ವಾಲಿಯರ್ ಪ್ರದೇಶದ ಶಿವಪುರಿ ಜಿಲ್ಲೆಯಲ್ಲಿದೆ ಮತ್ತು 354 ಚ.ಕಿ ವಿಸ್ತೀರ್ಣವನ್ನು ಹೊಂದಿದೆ. ಈ ಉದ್ಯಾನವನವು ಸಮತಟ್ಟಾದ ಹುಲ್ಲುಗಾವಲು ಪ್ರದೇಶಗಳ ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿದೆ ಮತ್ತು ಇದು ಜೀವ ವೈವಿಧ್ಯದಲ್ಲಿ ಸಮೃದ್ಧವಾಗಿದೆ.

Question 4

4. Universal Health Coverage Day (UHCD) ಯನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?

A
ಡಿಸೆಂಬರ್ 13
B
ಡಿಸೆಂಬರ್ 12
C
ಡಿಸೆಂಬರ್ 10
D
ಡಿಸೆಂಬರ್ 11
Question 4 Explanation: 
ಡಿಸೆಂಬರ್ 12

Universal Health Coverage Day (UHCD) ಯನ್ನು ಡಿಸೆಂಬರ್ 12ರಂದು ಪ್ರತಿವರ್ಷ ಆಚರಿಸಲಾಗುತ್ತದೆ. ಪ್ರತಿ ದಿನವೂ ಎಲ್ಲ ರಾಷ್ಟ್ರಗಳು, ತಮ್ಮ ನಾಗರಿಕರಿಗೆ ಒಳ್ಳೆ, ಗುಣಮಟ್ಟದ ಆರೋಗ್ಯ, ಆರೈಕೆಯನ್ನು ಒದಗಿಸುವುದಾಗಿದೆ.

Question 5

5. Hockey World League (HWL-2017) ಪಂದ್ಯಾವಳಿಯಲ್ಲಿ ಯಾವ ದೇಶದ ತಂಡವು ಚಿನ್ನದ ಪದಕವನ್ನು ಪಡೆದಿದೆ?

A
ಜಪಾನ್
B
ಇಟಲಿ
C
ಆಸ್ಟ್ರೇಲಿಯಾ
D
ಅರ್ಜೆಂಟೀನಾ
Question 5 Explanation: 
ಆಸ್ಟ್ರೇಲಿಯಾ

2017 ರ ಡಿಸೆಂಬರ್ 11 ರಂದು ಒಡಿಶಾದ ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ಹಾಕಿ ತಂಡವು ಚಿನ್ನದ ಪದಕವನ್ನು ಪಡೆದಿದೆ. ಇದು ರಿಯೋ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾವನ್ನು 2-1 ಗೋಲುಗಳಿಂದ ಸೋಲಿಸಿದೆ.

Question 6

6. SAARC ಪ್ರೋಗ್ರಾಮಿಂಗ್ ಕಮಿಟಿಯ 54 ನೇ ಸಭೆಯು ಯಾವ ದೇಶದಲ್ಲಿ ಪ್ರಾರಂಭವಾಯಿತು?

A
ನೇಪಾಳ
B
ಶ್ರೀಲಂಕಾ
C
ಭಾರತ
D
ಮ್ಯಾನ್ಮಾರ್
Question 6 Explanation: 
ನೇಪಾಳ

South Asian Association for Regional Cooperation (SAARC) ಪ್ರೋಗ್ರಾಮಿಂಗ್ ಕಮಿಟಿಯ 54 ನೇ ಸಭೆಯು ನೇಪಾಳದ ಕಾಟ್ಮಂಡು ಮೂಲದ ಸಾರ್ಕ್ ಸಚಿವಾಲಯದಲ್ಲಿ ಡಿಸೆಂಬರ್ 11, 2017 ರಂದು ಪ್ರಾರಂಭವಾಯಿತು. ಈ 2 ದಿನದ ಸಭೆಯಲ್ಲಿ ಬಜೆಟ್ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

Question 7

7. ಸರ್ಕಾರದ ಉಪಯುಕ್ತತೆಗಳ ಮೇಲೆ ಸೈಬರ್ ದಾಳಿಯನ್ನು ತಡೆಯಲು ಮತ್ತು ಮುನ್ಸೂಚಿಸಲು ಯಾವ ಕೇಂದ್ರ ಸಚಿವರು ಮೊದಲ NIC-CERT ಯನ್ನು ಪ್ರಾರಂಭಿಸಿದ್ದಾರೆ?

A
ರವಿಶಂಕರ್ ಪ್ರಸಾದ
B
ಡಿ.ವಿ ಸದಾನಂದಗೌಡ
C
ಅರುಣ್ ಜೇಟ್ಲಿ
D
ನರೇಂದ್ರ ಮೋದಿ
Question 7 Explanation: 
ರವಿಶಂಕರ್ ಪ್ರಸಾದ

ಸರ್ಕಾರದ ಉಪಯುಕ್ತತೆಗಳ ಮೇಲೆ ಸೈಬರ್ ದಾಳಿಯನ್ನು ತಡೆಯಲು ಮತ್ತು ಮುನ್ಸೂಚಿಸಲು, ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ ಮೊದಲ NIC-CERT ಯನ್ನು ಪ್ರಾರಂಭಿಸಿದ್ದಾರೆ. NIC-CERT ಯು National Informatics Centre (NIC)ನ ಒಂದು ಭಾಗವಾಗಿದೆ.

Question 8

8. ಇತ್ತೀಚೆಗೆ ನಿಧನರಾದ ಸುಖರಂಜನ್ ಸೇನ್ಗುಪ್ತ ಅವರು ಈ ಕೆಳಗಿನ ಯಾವ ಕ್ಷೇತ್ರದವರು?

A
ರಾಜಕೀಯ
B
ಕಾನೂನು
C
ಜರ್ನಲಿಸಂ
D
ಫಿಲ್ಮ್ ಇಂಡಸ್ಟ್ರಿ
Question 8 Explanation: 
ಜರ್ನಲಿಸಂ

ಹಿರಿಯ ಪತ್ರಕರ್ತ ಸುಖರಂಜನ್ ಸೇನ್ಗುಪ್ತ (85 ವಯಸ್ಸು) ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಡಿಸೆಂಬರ್ 9, 2017 ರಂದು ನಿಧನರಾದರು. ಅವರು ಆರು ದಶಕಗಳ ಕಾಲ ಬಂಗಾಳಿ ದಿನಪತ್ರಿಕೆಗಳಾದ ‘ಜುಗಂತಾರ್’ ಮತ್ತು ‘ಆನಂದ ಬಜಾರ್ ಪತ್ರಿಕೆ” ಗಾಗಿ ಕೆಲಸ ಮಾಡಿದ್ದರು.

Question 9

9. ಜಪಾನ್ನಲ್ಲಿ 10 ನೇ ಏಷ್ಯನ್ ಚಾಂಪಿಯನ್ಶಿಪ್ 10 ಮೀ. ರೈಫಲ್/ಪಿಸ್ತೋಲ್ನಲ್ಲಿ ಮಹಿಳಾ 10 ಮೀ. ಏರ್ ಪಿಸ್ತೋಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದ ಭಾರತೀಯ ಕ್ರೀಡಾಪಟು ಯಾರು?

A
ಹರ್ವೀನ್ ಸ್ರಾವ್
B
ಮನು ಭೇಕರ್
C
ಹೀನಾ ಸಿಧು
D
ಶ್ರೀ ನೇವೇಥ ಪರಮಂತಮ್
Question 9 Explanation: 
ಹೀನಾ ಸಿಧು

ಜಪಾನ್ನ ವಾಕೊ ಸಿಟಿಯಲ್ಲಿ ನಡೆದ, 10 ನೇ ಏಷ್ಯನ್ ಚಾಂಪಿಯನ್ಶಿಪ್ 10 ಮೀ. ರೈಫಲ್/ಪಿಸ್ತೋಲ್ನಲ್ಲಿ ಮಹಿಳಾ 10 ಮೀ. ಏರ್ ಪಿಸ್ತೋಲ್ ಸ್ಪರ್ಧೆಯಲ್ಲಿ ಭಾರತದ ಏಸಸ್ ಜಿತು ರಾಯ್ ಮತ್ತು ಹೀನಾ ಸಿಧು ಕಂಚಿನ ಪದಕವನ್ನು ಪಡೆದ ಪಡೆದರು.

Question 10

10. 2018 Youth Olympic Games (YOG) ಗಾಗಿ, ಪುರುಷರ ಕೋಟಾ ಸ್ಥಳವನ್ನು ಪಡೆದುಕೊಂಡ ಸೌರಭ್ ಚೌಧರಿ ಅವರು ಈ ಕೆಳಗಿನ ಯಾವ ಕ್ರೀಡೆಯಲ್ಲಿ ಪದಕವನ್ನು ಪಡೆದಿದ್ದಾರೆ?

A
Boxing
B
Shooting
C
Sprint
D
Wrestling
Question 10 Explanation: 
Shooting

2017 ರ ಡಿಸೆಂಬರ್ 11 ರಂದು ಜಪಾನ್ನ ವಾಕೊ ಸಿಟಿಯಲ್ಲಿ ನಡೆದ, 10 ನೇ ಏಷ್ಯನ್ ಚಾಂಪಿಯನ್ಶಿಪ್ 10 ಮೀ. ರೈಫಲ್/ಪಿಸ್ತೋಲ್ನಲ್ಲಿ ಚಿನ್ನದ ಪದಕವನ್ನು ಪಡೆದ ಸೌರಭ್ ಚೌಧರಿ ಮತ್ತು ಮನು ಭೇಕರ್ 2018ರ Youth Olympic Games (YOG) ಗಾಗಿ ಪುರುಷರ ಕೋಟಾ ಸ್ಥಳವನ್ನು ಭದ್ರಪಡಿಸಿಕೊಂಡರು.

There are 10 questions to complete.

[button link=”http://www.karunaduexams.com/wp-content/uploads/2017/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್122017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,12,2017”

  1. Pls sir , November current affairs upload maadi…

Leave a Comment

This site uses Akismet to reduce spam. Learn how your comment data is processed.