ಬ್ರಹ್ಮಾಂಡದ ಪುರಾತನ ಸುರುಳಿಯಾಕಾರದ ನಕ್ಷತ್ರಪುಂಜ ಪತ್ತೆ

galaxy_upವಿಜ್ಞಾನಿಗಳು A1689B11 ಎಂದು ಕರೆಯಲ್ಪಡುವ ಅತ್ಯಂತ ಪುರಾತನ ಸುರುಳಿಯಾಕಾರದ ನಕ್ಷತ್ರಪುಂಜವನ್ನು ಕಂಡುಹಿಡಿದಿದ್ದಾರೆ. ವಿಶ್ವದಲ್ಲಿ ಇದುವರೆಗೆ ದಾಖಲಾಗಿರುವ ಅತ್ಯಂತ ಪುರಾತನ ನಕ್ಷತ್ರಪುಂಜ ಇದಾಗಿದೆ. ಹವಾಯಿಯ ಜೆಮಿನಿ ನಾರ್ತ್ ಟೆಲಿಸ್ಕೋಪ್ ಮೂಲಕ ಇನ್ಫ್ರಾರೆಡ್ ಇಂಟೆಗ್ರಲ್ ಫೀಲ್ಡ್ ಸ್ಪೆಕ್ಟ್ರೋಗ್ರಾಫ್ (ಎನ್ಐಎಫ್ಎಸ್) ನೊಂದಿಗೆ ಗುರುತ್ವಾಕರ್ಷಣೆಯ ಲೆನ್ಸಿಂಗ್ ಅನ್ನು ಸಂಯೋಜಿಸುವ ಶಕ್ತಿಯುತ ತಂತ್ರವನ್ನು ಬಳಸಿ ಇದನ್ನು ಪತ್ತೆ ಮಾಡಲಾಗಿದೆ.

  • A1689B11 ನಕ್ಷತ್ರಪುಂಜವು 11 ಶತಕೋಟಿ ವರ್ಷಗಳ ಹಿಂದೆ ಜನಿಸಿದ್ದು, ಬಿಗ್ ಬ್ಯಾಂಗ್ ಆದ ನಂತರ ಕೇವಲ 2.6 ಶತಕೋಟಿ ವರ್ಷಗಳ ನಂತರ ಅಸ್ತಿತ್ವದಲ್ಲಿತ್ತು.
  • A1689B11 ಬಹಳ ತಂಪಾದ ಮತ್ತು ತೆಳುವಾದ ಡಿಸ್ಕ್ ಹೊಂದಿದೆ, ಅದೇ ಯುಗದ ಇತರ ಗೆಲಕ್ಸಿಗಳಂತಲ್ಲದೆ ಆಶ್ಚರ್ಯಕರವಾಗಿ ಕಡಿಮೆ ಪ್ರಕ್ಷುಬ್ಧತೆಯೊಂದಿಗೆ ಶಾಂತವಾಗಿ ತಿರುಗುತ್ತದೆ.

Leave a Reply

Your email address will not be published. Required fields are marked *