ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,27,28,29,2017

Question 1

1. ಕರ್ನಾಟಕದ ಕರಾವಳಿ ಪ್ರದೇಶ ಅಭಿವೃದ್ಧಿಗಾಗಿ ಭಾರತ ಯಾವ ಅಂತರರಾಷ್ಟ್ರೀಯ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A
ವಿಶ್ವ ಬ್ಯಾಂಕ್
B
ಬ್ರಿಕ್ಸ್ ಬ್ಯಾಂಕ್
C
ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್
D
ಸಾರ್ಕ್ ಬ್ಯಾಂಕ್
Question 1 Explanation: 

ಕರ್ನಾಟಕದ ಕರಾವಳಿ ಪ್ರದೇಶ ಅಭಿವೃದ್ಧಿಗಾಗಿ ಭಾರತ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನೊಂದಿಗೆ 65.5 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದೆ. ಕರಾವಳಿ ಪ್ರದೇಶದ ಸುಸ್ಥಿರ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಬ್ಯಾಂಕ್ ಸಾಲ ವಿನಿಯೋಗಿಸಲಿದೆ.

Question 2

2. “ಹೃದಯನಾಥ್ ಮಂಗೇಷ್ಕರ್ ಪ್ರಶಸ್ತಿ 2017” ನ್ನು ಈ ವರ್ಷ ಯಾರಿಗೆ ನೀಡಿ ಗೌರವಿಸಲಾಯಿತು?

A
ಜಾವೇದ್ ಅಕ್ತರ್
B
ರಿಕ್ಕಿ ಕೇಜ್
C
ಎಸ್.ಪಿ.ಬಾಲಸುಬ್ರಮಣ್ಯಂ
D
ಸುಲೋಚನ ತಾಯ್
Question 2 Explanation: 

ಹಿರಿಯ ಸಾಹಿತಿ ಮತ್ತು ಬರಹಗಾರರಾದ ಜಾವೇದ್ ಅಕ್ತರ್ ರವರಿಗೆ 2017 ರ “ಹೃದಯನಾಥ್ ಮಂಗೇಷ್ಕರ್ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು. ಖ್ಯಾತ ಸಂಗೀತ ಸಂಯೋಜಕರಾದ ಹೃದಯನಾಥ್ ಮಂಗೇಷ್ಕರ್ ರವರ ಜನ್ಮದಿನದ ಅಂಗವಾಗಿ ಈ ಪ್ರಶಸ್ತಿ ನೀಡಿಲಾಗುತ್ತದೆ.

Question 3

3. ಭಾರತದ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಕ್ರಿಕೆಟ್ ಅಸೋಸಿಯೇಷನ್ ಇತ್ತೀಚೆಗೆ ಬಿಸಿಸಿಐ ನ ನೂತನ ಸದಸ್ಯತ್ವ ಸ್ಥಾನ ಪಡೆಯಿತು?

A
ಅಸ್ಸಾಂ
B
ಪಾಂಡಿಚೆರಿ
C
ನಾಗಾಲ್ಯಾಂಡ್
D
ಲಕ್ಷದ್ವೀಪ
Question 3 Explanation: 

ದಿ ಕ್ರಿಕೆಟ್ ಅಸೋಸಿಯೇಷನ್ ಆಫ್ ಪಾಂಡಿಚೆರಿ ಇತ್ತೀಚೆಗೆ ಬಿಸಿಸಿಐ ನ ನೂತನ ಸದಸ್ಯ ಸ್ಥಾನ ಪಡೆಯಿತು. ಈ ಸದಸ್ಯ ಸ್ಥಾನದಿಂದ ತನ್ನ ರಾಜ್ಯದ ಕ್ರಿಕೆಟ್ ತಂಡ ಮುಂದಿನ ಋತುವಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ

Question 4

4. ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಸದಸ್ಯತ್ವವನ್ನು ತ್ಯಜಿಸಿದ ವಿಶ್ವದ ಪ್ರಥಮ ರಾಷ್ಟ್ರ ಯಾವುದು?

A
ಉಗಾಂಡ
B
ಬೊಲೆವಿಯಾ
C
ಗ್ಯಾಂಬಿಯ
D
ಬುರುಂಡಿ
Question 4 Explanation: 

ಆಫ್ರಿಕಾ ಖಂಡದ ಬುರುಂಡಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಸದಸ್ಯತ್ವವನ್ನು ತ್ಯಜಿಸಿದ ವಿಶ್ವದ ಪ್ರಥಮ ರಾಷ್ಟ್ರವಾಗಿದೆ. ಬುರುಂಡಿ ರಾಷ್ಟ್ರದ ಆಂತರಿಕ ರಾಜಕೀಯ ಅರಾಜಕತೆಯಿಂದ ಐಸಿಸಿ ಸದಸ್ಯತ್ವವನ್ನು ಹಿಂಪಡೆದಿದೆ.

Question 5

5. “ಗ್ಲೋಬಲ್ ಲೇಡರ್ ಷಿಪ್ ಇನ್ ಪಬ್ಲಿಕ್ ಸರ್ವಿಸ್ ಆ್ಯಂಡ್ ಎಕನಾಮಿಕ್ ಟ್ರಾನ್ಸ್ ಫಾರ್ಮೆಷನ್” ವಿಭಾಗದಲ್ಲಿ ಯಾವ ರಾಜ್ಯದ ಮುಖ್ಯಮಂತ್ರಿಗೆ ಗೋಲ್ಡನ್ ಪಿಕಾಕ್ ಪ್ರಶಸ್ತಿ ದೊರೆತಿದೆ?

A
ಆಂಧ್ರಪ್ರದೇಶ
B
ತೆಲಂಗಾಣ
C
ಕರ್ನಾಟಕ
D
ಮಹಾರಾಷ್ಟ್ರ
Question 5 Explanation: 

“ಗ್ಲೋಬಲ್ ಲೇಡರ್ ಷಿಪ್ ಇನ್ ಪಬ್ಲಿಕ್ ಸರ್ವಿಸ್ ಆ್ಯಂಡ್ ಎಕನಾಮಿಕ್ ಟ್ರಾನ್ಸ್ ಫಾರ್ಮೆಷನ್” ವಿಭಾಗದಲ್ಲಿ ಅತ್ಯುತ್ತಮ ಸಾರ್ವನಿಕ ಸೇವೆಗಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರಿಗೆ ಇಂಗ್ಲೆಂಡ್ ನ ಪ್ರತಿಷ್ಠಿತ ಗೋಲ್ಡನ್ ಪಿಕಾಕ್ ಪ್ರಶಸ್ತಿ ದೊರೆತಿದೆ.

Question 6

6. ನ್ಯೂಜಿಲ್ಯಾಂಡ್ ನ ನೂತನ ಪ್ರಧಾನಮಂತ್ರಿಯಾಗಿ ಅಧಿಕೃತವಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದರು?

A
ಜಸಿಂಡ ಅರ್ಡೆನ್
B
ಬಿಲ್ ಇಂಗ್ಲಿಷ್
C
ಡೇಮ್ ಪ್ಯಾಟ್ಸಿ
D
ವ್ಯಾಟ್ಸನ್ ಪೀಟರ್
Question 6 Explanation: 
ಜಸಿಂಡ ಅರ್ಡೆನ್
Question 7

7. ಭಾರತದ ರಾಷ್ಟ್ರೀಯ ಕ್ರೀಡಾ ಕೂಟ 2018 (National Games of India) 36 ನೇ ಆವೃತ್ತಿ ಎಲ್ಲಿ ಆಯೋಜನೆಗೊಂಡಿದೆ?

A
ಜಾರ್ಖಂಡ್
B
ಹಿಮಾಚಲ ಪ್ರದೇಶ
C
ಗೋವಾ
D
ಪಂಜಾಬ್
Question 7 Explanation: 

ಭಾರತದ ರಾಷ್ಟ್ರೀಯ ಕ್ರೀಡಾ ಕೂಟ 2018 (National Games of India) 36 ನೇ ಆವೃತ್ತಿ ಗೋವದಲ್ಲಿ ಜರುಗಲಿದೆ. ಈ ಹಿಂದೆ 34 ಮತ್ತು 35 ನೇ ಆವೃತ್ತಿಯ ಕ್ರೀಡಾಕೂಟ ಕ್ರಮವಾಗಿ ಜಾರ್ಖಂಡ್ ಮತ್ತು ಕೇರಳದಲ್ಲಿ ಜರುಗಿತ್ತು.

Question 8

8. ಬೆಂಗಳೂರಿನಲ್ಲಿ ನಡೆದ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿ-2017 ಯಲ್ಲಿ ಪ್ರಶಸ್ತಿ ಪಡೆದ ತಂಡ ಯಾವುದು?

A
ಇಂಗ್ಲೆಂಡ್
B
ಘಾನ
C
ಸ್ಪೇನ್
D
ಫ್ರಾನ್ಸ್
Question 8 Explanation: 

ಬೆಂಗಳೂರಿನಲ್ಲಿ ನಡೆದ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿ-2017 ನ್ನು ಇಂಗ್ಲೆಂಡ್ ಫುಟ್ ಬಾಲ್ ತಂಡ ಇದೇ ಪ್ರಥಮ ಬಾರಿಗೆ ಜಯಿಸಿತು. ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇಂಗ್ಲೆಂಡ್ ನ ‘ಗೋಲ್ ಮೆಷಿನ್’ ಎಂದು ಕರೆಯಲ್ಪಡುವ ರಿಯಾನ್ ಬ್ರಿವಸ್ಟರ್ “ಗೋಲ್ಡನ್ ಬೂಟ್” ಪ್ರಶಸ್ತಿ ಪಡೆದರು.

Question 9

9. ಕಡಲತೀರದ ಸುರಕ್ಷತೆಯನ್ನು ಹೆಚ್ಚಿಸಲು HOSTAC ಅನ್ನು ಅನುಷ್ಟಾನಗೊಳಿಸಲು ಭಾರತ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A
ರಷ್ಯಾ
B
ಜಪಾನ್
C
ದಕ್ಷಿಣ ಕೊರಿಯ
D
ಅಮೆರಿಕ
Question 9 Explanation: 

ಭಾರತದಲ್ಲಿ ಕಡಲತೀರದ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ (Helicopter Operations from Ships other Than Aircraft Carriers (HOSTAC) ಅನ್ನು ಅನುಷ್ಟಾನಗೊಳಿಸಲು ಭಾರತ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪಡೆದರು.

Question 10

10. 5 ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ 2017 ಪ್ರಶಸ್ತಿಯನ್ನು ಯಾವ ತಂಡ ಜಯಿಸಿತು?

A
ಬೆಂಗಳೂರು ಬುಲ್ಸ್
B
ಪಾಟ್ನಾ ಪೈರೆಟ್ಸ್
C
ಬೆಂಗಾಲ್ ವಾರಿಯರ್ಸ್
D
ಜೈಪುರ ಪಿಂಕ್ ಪ್ಯಾಂಥರ್ಸ್
Question 10 Explanation: 

ಪಾಟ್ನಾ ಪೈರೆಟ್ಸ್ ತಂಡ ಗುಜರಾತ್ ಫಾರ್ಚುನ್ ಜೈಟ್ಸ್ ತಂಡವನ್ನು ಸೋಲಿಸುವ ಮೂಲಕ 5 ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ 2017 ಪ್ರಶಸ್ತಿಯನ್ನು ಪಡೆಯಿತು. ಪಾಟ್ನಾ ತಂಡ ಸತತ ಮೂರನೇ ಬಾರಿಗೆ ಪ್ರೋ ಕಬಡ್ಡಿ ಲೀಗ್ ಪ್ರಶಸ್ತಿ ಪಡೆದುಕೊಂಡಿತು.

There are 10 questions to complete.

[button link=”http://www.karunaduexams.com/wp-content/uploads/2017/11/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್2728292017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

14 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,27,28,29,2017”

  1. Ravi

    its very nice and usefull to us

  2. Obaleshappa N

    very very thank you.so much use rural candidate

  3. Obaleshappa N

    very use full from all compitative exam candidate

  4. sunu toli

    ALL computituv exzam help in question thanks

  5. Sir very use but too delay uploading

  6. Mallayya Devadurga

    Very usefull questions in all computituv exams

  7. Manjula

    Were we get answer

  8. Divya

    Very Nice But very difficult questions
    we are unable to ans the questions
    next time upload little easy question and answers plz

  9. Vishalakshiu

    Sir .. plz update daily current affairs… Nivu thumbaa late madthirA…. It’s alrdy December came.. but u r still in the month of actober. Nd November…

  10. Sir , tumba late yak madtira? quizzes novber month du bande illa .. Plz update madi .. Daily quizzes 2-3 nalli updat madtiri sir plz ..

Leave a Comment

This site uses Akismet to reduce spam. Learn how your comment data is processed.