ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,24,25,26,2017

Question 1

1. ವಿಶ್ವ ಪೋಲಿಯೋ ದಿನಾಚರಣೆಯನ್ನು ಯಾವ ತಾರೀಖಿನಂದು ಆಚರಿಸಲಾಗುತ್ತದೆ?

A
ಅಕ್ಟೋಬರ್ 12
B
ಅಕ್ಟೋಬರ್ 18
C
ಅಕ್ಟೋಬರ್ 20
D
ಅಕ್ಟೋಬರ್ 24
Question 1 Explanation: 

ವಿಶ್ವದಾದ್ಯಂತ ಸಾರ್ವಜನಿಕರಲ್ಲಿ ಪೋಲಿಯೋ ರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ, ಪ್ರತಿ ವರ್ಷ ಅಕ್ಟೋಬರ್ 24 ರಂದು “ವಿಶ್ವ ಪೋಲಿಯೋ ದಿನ”ವನ್ನಾಗಿ ಆಚರಿಸಲಾಗುತ್ತಿದೆ. ದಶಕದ ಹಿಂದೆ ರೋಟರಿ ಇಂಟರ್ ನ್ಯಾಷನಲ್ ಪೋಲಿಯೋ ರೋಗಕ್ಕೆ ಪ್ರಥಮವಾಗಿ ವೈದ್ಯಕೀಯ ಚುಚ್ಚುಮದ್ದು ಕಂಡುಹಿಡಿದ ತಂಡದ ಮುಖ್ಯಸ್ಥರಾದ ಜೋನಸ್ ಸಾಲ್ಕ್ ರವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತಿದೆ.

Question 2

2. ವಿಶ್ವ ಸಂಸ್ಥೆ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?

A
ಅಕ್ಟೋಬರ್ 24
B
ಅಕ್ಟೋಬರ್ 22
C
ಅಕ್ಟೋಬರ್ 20
D
ಅಕ್ಟೋಬರ್ 30
Question 2 Explanation: 

ವಿಶ್ವ ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಸಾಧನೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 24 ರಂದು “ವಿಶ್ವ ಸಂಸ್ಥೆ ದಿನ” ವನ್ನಾಗಿ ಆಚರಿಸಲಾಗುತ್ತಿದೆ. 1948 ರಲ್ಲಿ ಐದು ಶಾಶ್ವತ ಸದಸ್ಯ ರಾಷ್ಟ್ರಗಳನ್ನೊಳಗೊಂಡು ವಿಶ್ವ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು.

Question 3

3. ರೈತರಿಗೆ ಟ್ರ್ಯಾಕ್ಟರ್ ಕೊಂಡುಕೊಳ್ಳಲು ಸಾಲ ಸೌಲಭ್ಯ ಒದಗಿಸಲು ಎಸ್ಕಾರ್ಟ್ಸ್ ಟ್ರ್ಯಾಕ್ಟರ್ ಉತ್ಪಾದಕ ಸಂಸ್ಥೆಯೊಂದಿಗೆ ಈ ಕೆಳಕಂಡ ಯಾವ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ?

A
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
B
ಕೆನರಾ ಬ್ಯಾಂಕ್
C
ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್
D
ಕಾರ್ಪೋರೇಷನ್ ಬ್ಯಾಂಕ್
Question 3 Explanation: 

ರೈತರಿಗೆ ಎಸ್ಕಾರ್ಟ್ಸ್ ಟ್ರ್ಯಾಕ್ಟರ್ ಕೊಂಡುಕೊಳ್ಳಲು ನೆರವಾಗಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಕಾರ್ಟ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೈತರಿಗೆ ಟ್ರ್ಯಾಕ್ಟರ್ ಕೊಂಡುಕೊಳ್ಳಲು ಸಾಲ ಸೌಲಭ್ಯ ನೀಡಲಿದೆ. ರೈತರಿಗೆ ಶಕ್ತಿಯುತ ಟ್ರ್ಯಾಕ್ಟರ್ ಕೊಳ್ಳಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಿದೆ.

Question 4

4. ಭಾರತೀಯ ರಿಸರ್ವ್ ಬ್ಯಾಂಕ್ ಯಾವ ಕಂಪನಿಗಳಿಗೆ Legal Entity Identifier (LEI) ಅನ್ನು ಕಡ್ಡಾಯಗೊಳಿಸಲಿದೆ?

A

ರೂ. 10 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ

B

ರೂ. 1 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ

C

ರೂ. 5 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ

D

ರೂ. 20 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ

Question 4 Explanation: 

ವಾರ್ಷಿಕ ರೂ. 5 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ಕಂಪನಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ 20 ಅಂಕಿಗಳ LEI ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಲಿದೆ. ಇದರಿಂದ ಬ್ಯಾಂಕ್ ಗಳಿಗೆ ಒಂದೇ ಕಂಪನಿಗೆ ಹಲವು ಬಾರಿ ಸಾಲ ಸೌಲಭ್ಯ ಒದಗಿಸುವುದನ್ನು ತಪ್ಪಿಸುತ್ತದೆ.

Question 5

5. ಕೇಂದ್ರ ಪಟ್ಟಿಯಲ್ಲಿರುವ ‘ಇತರೆ ಹಿಂದುಳಿದ ವರ್ಗ’ ದ (OBC) ಜಾತಿಗಳ ಮರುವಿಂಗಡಣೆ ಪರಿಶೀಲಿಸಲು ಈ ಕೆಳಕಂಡ ಯಾವ ವಿಧಿಯನ್ವಯ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ?

A
335 ನೇ ವಿಧಿ
B
340 ನೇ ವಿಧಿ
C
342 ನೇ ವಿಧಿ
D
348 ನೇ ವಿಧಿ
Question 5 Explanation: 

ರಾಷ್ಟ್ರಪತಿ ರಾಮ್ ನಾಥ್ ಕೋವಿಂಧ್ ಸಂವಿಧಾನದ 340 ನೇ ವಿಧಿಯನ್ವಯ ಕೇಂದ್ರ ಪಟ್ಟಿಯಲ್ಲಿರುವ ‘ಇತರೆ ಹಿಂದುಳಿದ ವರ್ಗ’ ದ (OBC) ಜಾತಿಗಳ ಮರುವಿಂಗಡಣೆ ಪರಿಶೀಲಿಸಲು ಸಮಿತಿ ರಚಿಸಿದೆ. 4 ಸದಸ್ಯರ ಸಮಿತಿಯ ಅಧ್ಯಕ್ಷರಾಗಿ ನ್ಯಾಯಮೂರ್ತಿ ಜಿ.ರೋಹಿಣಿ ನೇಮಕಗೊಂಡಿದ್ದಾರೆ. ಈ ಸಮಿತಿ 12 ವಾರಗಳೊಳಗಾಗಿ ತನ್ನ ವರದಿ ರಾಷ್ಟ್ರಪತಿಗಳಿಗೆ ಸಲ್ಲಿಸಲಿದೆ. ಓಬಿಸಿ ಪಟ್ಟಿಯಲ್ಲಿರುವ ಅತೀ ಹಿಂದುಳಿದ ಜಾತಿಗಳನ್ನು ಗುರುತಿಸಿ ಅಂತಹ ವರ್ಗದವರಿಗೆ ಶಿಕ್ಷಣ ಮತ್ತು ಹುದ್ದೆಗಳಲ್ಲಿ ಹೆಚ್ಚಿನ ಪ್ರತಿನಿಧ್ಯ ದೊರಕಿಸುವುದು ಸಮಿತಿಯ ಮುಖ್ಯ ಉದ್ದೇಶವಾಗಿದೆ.

Question 6

6. ಪ್ರಾಚೀನ ಔಷಧಿಗಳ BIMSTEC ಟಾಸ್ಕ್ ಫೋರ್ಸ್ ನ ಮೊದಲ ಸಭೆಯನ್ನು ಈ ಕೆಳಕಂಡ ಯಾವ ದೇಶ ಆಯೋಜಿಸಿತ್ತು?

A
ಬಾಂಗ್ಲಾದೇಶ
B
ನೇಪಾಳ
C
ಶ್ರೀಲಂಕ
D
ಭಾರತ
Question 6 Explanation: 

ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಾದ ಬಾಂಗ್ಲಾದೇಶ, ಭಾರತ, ಮ್ಯಾನ್ಮರ್, ಶ್ರೀಲಂಕ, ಥೈಲ್ಯಾಂಡ್, ಭೂತಾನ್ ಮತ್ತು ನೇಪಾಳ ದೇಶಗಳ ಒಕ್ಕೂಟ ಸಂಸ್ಥೆಯಾದ BIMSTEC (Bengal Initiative for Multi-Sectoral Technical and Economic Co-operation) ಪ್ರಾಚೀನ ಔಷಧಿಗಳ ಟಾಸ್ಕ್ ಫೋರ್ಸ್ ನ ಮೊದಲ ಸಭೆಯನ್ನು ಭಾರತದಲ್ಲಿ ಆಯೋಜಿಸಲಾಗಿತ್ತು.

Question 7

7. ವರ್ಲ್ಡ್ ಫುಡ್ ಇಂಡಿಯಾ (World Food India) 2017 ರ “ಕೇಂದ್ರಬಿಂದು ರಾಜ್ಯ” ಯಾವುದು?

A
ಕೇರಳ
B
ಒಡಿಸ್ಸಾ
C
ಅಸ್ಸಾಂ
D
ಪಂಜಾಬ್
Question 7 Explanation: 

ಅಂತರರಾಷ್ಟ್ರೀಯ ಆಹಾರ ಉತ್ಸವ “ವರ್ಲ್ಡ್ ಫುಡ್ ಇಂಡಿಯಾ” (World Food India) 2017 ರ ಕೇಂದ್ರಬಿಂದು ರಾಜ್ಯ ಒಡಿಸ್ಸಾ ಆಗಿದೆ. ಜಪಾನ್, ಡೆನ್ಮಾರ್ಕ್ ಮತ್ತು ಜರ್ಮನಿ ಪಾಲುದಾರ ದೇಶಗಳಾಗಿವೆ ಹಾಗೂ ಇಟಲಿ ಮತ್ತು ನೆದರ್ಲ್ಯಾಂಡ್ “ಕೇಂದ್ರಬಿಂದು ರಾಷ್ಟ್ರ”ಗಳಾಗಿವೆ. 450 ದೇಶೀಯ ಮತ್ತು 200 ಜಾಗತಿಕ ಸಂಸ್ಥೆಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ.

Question 8

8. ಜಾಗತಿಕ ಆರ್ಥಿಕ ಸಲಹಾ ಸಂಸ್ಥೆ ‘ಆರ್ಟನ್ ಕ್ಯಾಪಿಟಲ್’ ಬಿಡುಗಡೆಗೊಳಿಸಿದ “ಗ್ಲೋಬಲ್ ಪಾಸ್ ಪೋರ್ಟ್ ಪವರ್ Rank 2017” ರಲ್ಲಿ ಭಾರತ ಎಷ್ಟನೇ ಶ್ರೇಯಾಂಕ ಪಡೆದಿದೆ?

A
75 ನೇ ಶ್ರೇಯಾಂಕ
B
78 ನೇ ಶ್ರೇಯಾಂಕ
C
80 ನೇ ಶ್ರೇಯಾಂಕ
D
85 ನೇ ಶ್ರೇಯಾಂಕ
Question 8 Explanation: 

ಜಾಗತಿಕ ಆರ್ಥಿಕ ಸಲಹಾ ಸಂಸ್ಥೆ ‘ಆರ್ಟನ್ ಕ್ಯಾಪಿಟಲ್’ ಬಿಡುಗಡೆಗೊಳಿಸಿದ “ಗ್ಲೋಬಲ್ ಪಾಸ್ ಪೋರ್ಟ್ ಪವರ್ Rank 2017” ರಲ್ಲಿ ಭಾರತ 75 ನೇ ಶ್ರೇಯಾಂಕ ಪಡೆದಿದೆ. ಒಟ್ಟು 94 ರಾಷ್ಟ್ರಗಳ ಪೈಕಿ ಭಾರತ 51 ವೀಸಾ ರಹಿತ ಅಂಕಗಳನ್ನು ಗಳಿಸಿ 75 ನೇ ಸ್ಥಾನ ಗಳಿಸಿದೆ. ಈ ಪಟ್ಟಿಯಲ್ಲಿ ಸಿಂಗಾಪುರ, ಜರ್ಮನಿ, ಸ್ವೀಡನ್ ಮತ್ತು ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿವೆ.

Question 9

9. ಕೇಂದ್ರ ಸರ್ಕಾರದ ಈ ಕೆಳಕಂಡ ಯಾವ ಸಚಿವಾಲಯಗಳು ಜಂಟಿಯಾಗಿ “ಸಾಥಿ (SAATHI)” ಎಂಬ ನೂತನ ಯೋಜನೆಯನ್ನು ಪ್ರಾರಂಭಿಸಿವೆ?

A
ಇಂಧನ ಮತ್ತು ಜವಳಿ ಸಚಿವಾಲಯ
B
ಮಹಿಳಾ ಮತ್ತು ಮಕ್ಕಳ ಹಾಗೂ ಗೃಹ ಸಚಿವಾಲಯ
C
ಇಂಧನ ಮತ್ತು ರೈಲ್ವೆ ಸಚಿವಾಲಯ
D
ಅಲ್ಪಸಂಖ್ಯಾತರ ಮತ್ತು ಸಾರಿಗೆ ಸಚಿವಾಲಯ
Question 9 Explanation: 

ಕೇಂದ್ರ ಸರ್ಕಾರದ ಇಂಧನ ಮತ್ತು ಜವಳಿ ಸಚಿವಾಲಯಗಳು ಜಂಟಿಯಾಗಿ “ಸಾಥಿ (SAATHI)” ಎಂಬ ನೂತನ ಯೋಜನೆಯನ್ನು ಪ್ರಾರಂಭಿಸಿವೆ. ಈ ಯೋಜನೆಯಡಿ EESL (Energy Efficient Services Limited) ಸಣ್ಣ ಮತ್ತು ಮಧ್ಯಮ ಗಾತ್ರದ ಪವರ್ ಲೂಮ್ಸ್ ಗಳನ್ನು ಯಾವುದೇ ಮುಂಗಡ ಹಣ ಪಡೆಯದೆ ವಿತರಿಸಲಿದೆ.

Question 10

10. “ಇಂಡಿಯ 2017 ಇಯರ್ ಬುಕ್” ಎಂಬ ಇ-ಪುಸ್ತಕದ ಕರ್ತೃ ಯಾರು?

A
ಆರ್.ಕೆ.ವರ್ಮಾ
B
ಮುಕುಲ್ ರೊಹಟ್ಗಿ
C
ರಾಜೀವ್ ಮೆಹರ್ಷಿ
D
ನಾರಿಮನ್
Question 10 Explanation: 

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಹಾಗೂ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಷಿ ಭಾರತದ ಪ್ರಚಲಿತ ವಿದ್ಯಮಾನಗಳ “ಇಂಡಿಯ 2017 ಇಯರ್ ಬುಕ್” ಎಂಬ ಇ-ಪುಸ್ತಕವನ್ನು ರಚಿಸಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/11/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್2425262017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,24,25,26,2017”

Leave a Comment

This site uses Akismet to reduce spam. Learn how your comment data is processed.