ನವದೆಹಲಿಯಲ್ಲಿ ವರ್ಲ್ಡ್ ಫುಡ್ ಇಂಡಿಯಾ: 2017 ಪ್ರಾರಂಭ

ನವದೆಹಲಿಯ ಇಂಡಿಯಾ ಗೇಟ್ ಲಾನ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ನವೆಂಬರ್ 3, 2017 ರಂದು ವಿಶ್ವ ಆಹಾರ ಭಾರತ 2017 (ವರ್ಲ್ಡ್ ಫುಡ್ ಇಂಡಿಯಾ) ಉದ್ಘಾಟಿಸಿದರು. ಮೂರು ದಿನಗಳ ವಿಶ್ವ ಆಹಾರ ಭಾರತವನ್ನು ಆಹಾರ ಸಂಸ್ಕರಣ ಕೈಗಾರಿಕೆ ಸಚಿವಾಲಯ ಆಯೋಜಿಸಿದೆ. 2017 ವಿಶ್ವ ಆಹಾರ ಭಾರತದ ಧ್ಯೇಯವಾಕ್ಯ “ಟ್ರಾನ್ಸ್ಫಾರ್ಮಿಂಗ್ ದಿ ಫುಡ್ ಎಕಾನಮಿ” ಆಗಿದೆ. ಜರ್ಮನಿ, ಜಪಾನ್ ಮತ್ತು ಡೆನ್ಮಾರ್ಕ್ ವಿಶ್ವ ಆಹಾರ ಭಾರತಕ್ಕೆ ಪಾಲುದಾರ ರಾಷ್ಟ್ರಗಳಾಗಿವೆ.

ವಿಶ್ವ ಆಹಾರ ಭಾರತ 2017:         

ವಿಶ್ವ ಆಹಾರ ಭಾರತದ ಉದ್ದೇಶವು ಆಹಾರದ ಆರ್ಥಿಕತೆಯನ್ನು ಪರಿವರ್ತಿಸುವುದು ಮತ್ತು ಭಾರತವನ್ನು ಹೂಡಿಕೆಯ ಆದ್ಯತೆಯ ರಾಷ್ಟ್ರವನ್ನಾಗಿ ಸ್ಥಾಪಿಸುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಭಾರತವನ್ನು ಜಾಗತಿಕ ಆಹಾರ ಸಂಸ್ಕರಣ ಕೈಗಾರಿಕ ಪ್ರಮುಖ ತಾಣವನ್ನಾಗಿಸುವುದು ಆಗಿದೆ.

  • ಪ್ರಪ್ರಥಮ ಬಾರಿಗೆ ಭಾರತ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
  • ಜಾಗತಿಕ ಹೂಡಿಕೆದಾರರು, ಕಂಪನಿಗಳು, ಬ್ಯುನಿನೆಸ್ ಪ್ರತಿನಿಧಿಗಳು ಮತ್ತು ದೇಶಿಯ ಆಹಾರ ಸಂಸ್ಕರಣ ಸಂಸ್ಥೆಗಳು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸೇರುತ್ತಿರುವುದು ಇದೆ ಮೊದಲು.
  • ದೇಶಿಯ ಸಂಸ್ಥೆಗಳು ಹಾಗೂ 22ಕ್ಕೂ ಹೆಚ್ಚು ವಿದೇಶಿ ಆಹಾರ ಸಂಸ್ಕರಣ ಸಂಸ್ಥೆಗಳು ಭಾಗವಹಿಸಲಿವೆ. ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ 10 ಬಿಲಿಯನ್ ಹೂಡಿಕೆಯನ್ನು ನಿರೀಕ್ಷಿಸಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ 1 ಮಿಲಿಯನ್ ಉದ್ಯೋಗ ಸೃಷ್ಟಿಸಲು ಇದು ವೇದಿಕೆಯಾಗಲಿದೆ.

ಹಿಂದಿ ಲೇಖಕಿ ಕೃಷ್ಣಾ ಸೋಬತಿ ಅವರಿಗೆ 2017 ಜ್ಞಾನಪೀಠ ಪ್ರಶಸ್ತಿ

ಹಿಂದಿ ಲೇಖಕಿ ಕೃಷ್ಣಾ ಸೋಬತಿ ಅವರಿಗೆ 53ನೇ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿನ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಕೃಷ್ಣಾ ಸೋಬತಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಸೋಬತಿ ರವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡ ಮಹಿಳೆಯರ ಪಟ್ಟಿಯಲ್ಲಿ ಎಂಟನೇಯವರು.

ಕೃಷ್ಣಾ ಸೋಬತಿ:

ಕೃಷ್ಣಾ ಸೋಬತಿ ರವರು ಫೆಬ್ರವರಿ  18, 1925ರಲ್ಲಿ ಗುಜರಾತ್ ಪಂಜಾಬ್ ನಲ್ಲಿ(ಈಗಿನ ಪಾಕಿಸ್ತಾನ) ಜನಿಸಿದರು. ಆದರೆ ಅವರ ಶಿಕ್ಷಣ ನಡೆದಿದ್ದು ದೆಹಲಿ ಮತ್ತು ಶಿಮ್ಲಾದಲ್ಲಿ. ಹಶ್‍ಮತ್ ಎಂಬ ಕಾವ್ಯನಾಮದಲ್ಲಿ ಇವರು ಕವಿತೆಗಳನ್ನು ಬರೆದಿದ್ದಾರೆ. ಕೃಷ್ಣಾ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಲಭಿಸಿದೆ. 2010ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಿದ್ದರೂ,

ದಾರ್  ಸೇ ಬಿಚುಡಿ, ಮಿತ್ರೊ ಮರ್ಜನಿ, ಜಿಂದಗೀನಾಮ, ದಿಲ್ ಓ ದನೀಶ್, ಬಾದಲೋಂಖೆ ಘೇರೇ,  ಏ ಲಡ್ಕೀ ಮತ್ತು ಗುಜರಾತ್ ಪಾಕಿಸ್ತಾನ್ ಸೇ ಗುಜರಾತ್ ಹಿಂದೂಸ್ತಾನ್  ಮೊದಲಾದುವು ಇವರ ಪ್ರಮುಖ ಕೃತಿಗಳು. ಇವರ ಹಲವಾರು ಕೃತಿಗಳು ಭಾರತೀಯ ಭಾಷೆ ಸೇರಿದಂತೆ ಸ್ವೀಡಿಷ್, ರಷ್ಯನ್ ಮತ್ತು ಇಂಗ್ಲಿಶ್ ಭಾಷೆಗಳಿಗೆ ಅನುವಾದಗೊಂಡಿವೆ.

ಜ್ಞಾನ ಪೀಠ ಪ್ರಶಸ್ತಿ:

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರುಪಾಯಿ ಚೆಕ್ ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಡಿಸೆಂಬರ್ 1, 2017 ರಿಂದ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ

ಎಲ್ಲಾ ನಾಲ್ಕು ಚಕ್ರ ವಾಹನಗಳಿಗೆ ಡಿಸೆಂಬರ್ 1, 2017 ರಿಂದ ಫಾಸ್ಟ್ಯಾಗ ಕಡ್ಡಾಯಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರೆ ಸಚಿವಾಲಯ ಆದೇಶ ಹೊರಡಿಸಿದೆ. ಕೇಂದ್ರ ಮೋಟಾರು ವಾಹನ (CMV) ನಿಯಮಗಳಿಗೆ ಕೇಂದ್ರ ಸರ್ಕಾರ ತಂದ ತಿದ್ದುಪಡಿಯ ಅನ್ವಯ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಪ್ರಮುಖಾಂಶಗಳು:

  • ಅಧಿಸೂಚನೆಯ ಪ್ರಕಾರ ಫಾಸ್ಟಾಗ್ ಎನ್ನುವುದು ಆನ್ಬೋರ್ಡ್ ಘಟಕ (ಟ್ರಾನ್ಸ್ಪಾಂಡರ್) ಅಥವಾ ವಾಹನದ ಮುಂಭಾಗದ ಗಾಜು ಪರದೆಯ ಮೇಲೆ ಅಳವಡಿಸಲಾಗಿರುವ ಅಂತಹ ಯಾವುದೇ ಸಾಧನ. ವಾಹನಗಳ ಮುಂಭಾಗದ ಗಾಜಿಗೆ (ವಿಂಡ್‌ಸ್ಕ್ರೀನ್‌) ಫಾಸ್ಟ್ಯಾಗ್‌ ಸಾಧನವನ್ನು ವಾಹನ ತಯಾರಿಕಾ ಕಂಪೆನಿಗಳು ಅಥವಾ ಡೀಲರ್‌ಗಳು ಅಳವಡಿಸಬೇಕು.
  • ಮುಂಭಾಗದ ಗಾಜು ಇಲ್ಲದ ವಾಹನಗಳನ್ನು ಮಾರಾಟ ಮಾಡಿದ ಸಂದರ್ಭದಲ್ಲಿ, ವಾಹನವನ್ನು ನೋಂದಣಿ ಮಾಡುವುದಕ್ಕೂ ಮುನ್ನ ಅದರ ಮಾಲೀಕ ಫಾಸ್ಟ್ಯಾಗ್‌ ಸಾಧನವನ್ನು ಅಳವಡಿಸಿಕೊಳ್ಳಬೇಕು’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
  • ಟ್ಯಾಗ್ ವಿತರಕರಿಂದ ಟ್ಯಾಗ್ ಅನ್ನು ಖರೀದಿಸದ ನಂತರ ಅದನ್ನು ಪ್ರಿಪೇಯ್ಡ್ ಖಾತೆಗೆ ಲಿಂಕ್ ಮಾಡಿಸಬೇಕು. ನಂತರ ವಾಹನ ಮಾಲೀಕರು ಅಗತ್ಯಕತೆಗೆ ತಕ್ಕಂತೆ ರೀಜಾರ್ಜ್ ಮಾಡಿಸಿಕೊಳ್ಳಬೇಕು.

ಫಾಸ್ಟ್ಯಾಗ್ (FASTag):

ರೇಡಿಯೊ ಫ್ರೀಕ್ವೆನ್ಸಿ ಐಡೆಂಫಿಕೇಷನ್‌ (ಆರ್‌ಎಫ್‌ಐಡಿ) ತಂತ್ರಜ್ಞಾನವನ್ನು ಒಳಗೊಂಡಿರುವ ಫಾಸ್ಟ್ಯಾಗ್‌ ಸಾಧನವು ಹೆದ್ದಾರಿಗಳಲ್ಲಿ ಎಲೆಕ್ಟ್ರಾನಿಕ್‌ ವಿಧಾನದಲ್ಲಿ ಟೋಲ್‌ ಪಾವತಿಸುತ್ತದೆ. ಈ ಸಾಧನದೊಂದಿಗೆ ಜೋಡಣೆ ಮಾಡಿರುವ ಖಾತೆಗೆ ಮೊದಲೇ ರೀಚಾರ್ಜ್‌ ಮಾಡಲಾಗಿರುತ್ತದೆ. ವಾಹನ  ಮಾಲೀಕ ತನ್ನ ಅಗತ್ಯಕ್ಕೆ ತಕ್ಕಂತೆ ಇದಕ್ಕೆ ರೀಚಾರ್ಜ್‌ ಮಾಡಬಹುದು. ವಾಹನವು ಟೋಲ್‌ ಸಂಗ್ರಹ ಕೇಂದ್ರದಲ್ಲಿ ಹಾದುಹೋದಾಗ, ಟೋಲ್‌ ಮೊತ್ತವು ಆರ್‌ಎಫ್‌ಐಡಿ ಕಾರ್ಡ್‌ನಿಂದ ಕಡಿತವಾಗುತ್ತದೆ. ಈ ವ್ಯವಸ್ಥೆಯಲ್ಲಿ ವಾಹನಗಳು ಟೋಲ್‌ ಕೇಂದ್ರದಲ್ಲಿ ನಿಲ್ಲುವ ಅಗತ್ಯವೇ ಇರುವುದಿಲ್ಲ. ಸದ್ಯ, ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ 370 ಟೋಲ್‌ ಕೇಂದ್ರಗಳಲ್ಲಿ ‘ಫಾಸ್ಟ್ಯಾಗ್‌’ ಕಾರ್ಯನಿರ್ವಹಿಸುತ್ತಿವೆ.

ಆಂಧ್ರಪ್ರದೇಶದ ಎಟಿಕೊಪ್ಪಕಾ ಗೊಂಬೆಗಳಿಗೆ  ಭೌಗೋಳಿಕ ಗುರುತು (ಜಿಐ) ಟ್ಯಾಗ್

ಭೌಗೋಳಿಕ ಗುರುತು ನೋಂದಣಿ ಸಂಸ್ಥೆಯು (GIR) ಆಂಧ್ರ ಪ್ರದೇಶದ ಸಾಂಪ್ರದಾಯಿಕ ಎಟಿಕೊಪ್ಪಕ ಗೊಂಬೆಗಳಿಗೆ ಭೌಗೋಳಿಕ ಗುರುತು (GI) ಟ್ಯಾಗ್ ನೀಡಿದೆ. ಈ ಸಾಂಪ್ರದಾಯಿಕ ಆಟಿಕೆಗಳನ್ನು ಆಂಧ್ರ ಪ್ರದೇಶ ರಾಜ್ಯದ ವಿಶಾಖಪಟ್ಟಣಂ ಜಿಲ್ಲೆಯ ವರಾಹ ನದಿಯ ದಡದಲ್ಲಿರುವ ಎಟಿಕೊಪ್ಪಕಾ ಹಳ್ಳಿಯಲ್ಲಿನ ಕುಶಲಕರ್ಮಿಗಳು ಮಾಡುತ್ತಾರೆ.

            ಜಿಐ ಹೆಗ್ಗುರುತು ಪಡೆಯುವ ಮೂಲಕ ಕೋಂಡಪಲ್ಲಿ ಆಟಿಕೆಗಳು, ತಿರುಪತಿ ಲಡ್ಡು, ಬೊಬ್ಬಿಲಿ ವೀಣ, ಶ್ರೀಕಾಲಹಸ್ತಿ ಕಲಂಕರಿ, ಉಪ್ಪದ ಜಮ್ದನಿ ಸೀರೆಗಳ ಪಟ್ಟಿಗೆ ಎಟಿಕೊಪ್ಪಕಾ ಬೊಂಬೆಗಳು ಸೇರ್ಪಡೆಗೊಂಡತಾಗಿದೆ.

ಎಟಿಕೊಪ್ಪಕಾ ಗೊಂಬೆಗಳು:

ಎಟಿಕೊಪ್ಪಕಾ ಗೊಂಬೆ ತಯಾರಿಸುವ ಕಲೆ ಸುಮಾರು 400 ವರ್ಷಗಳಷ್ಟು ಹಳೆಯದು. ತಲೆ ತಲಾಂತರವಾಗಿ ಈ ಕಲೆಯನ್ನು ಮುಂದುವರೆಸಿಕೊಂಡು ಬರಲಾಗಿದೆ. ಈ ಬೊಂಬೆಗಳನ್ನು ಮರದಲ್ಲಿ ತಯಾರಿಸಿ, ನೈಸರ್ಗಿಕ ಬಣ್ಣವನ್ನು ಹಚ್ಚಲಾಗುತ್ತದೆ. “ಅಂಕುಡಿ ಕರ (Ankuddi Karra)” ಮರವನ್ನು ಇವುಗಳ ತಯಾರಿಕೆಗೆ ಬಳಸಲಾಗುತ್ತದೆ.

4 Thoughts to “ಪ್ರಚಲಿತ ವಿದ್ಯಮಾನಗಳು-ನವೆಂಬರ್,4,2017”

  1. Lingaraj Paril

    Pls launch September and October month current affairs in pdf format.

  2. Lingaraj Patil

    pls launch Septmber and October months current affairs in pdf format.

  3. September and October month current affairs in pdf format.

  4. sunu toli

    october current affairs modal format

Leave a Comment

This site uses Akismet to reduce spam. Learn how your comment data is processed.