ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,21,22,23,2017

Question 1

1. ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿ-2017 ರಲ್ಲಿ ಯಾವ ದೇಶವು ಪ್ರಶಸ್ತಿ ಪಡೆಯಿತು?

A
ಜಪಾನ್
B
ಭಾರತ
C
ಮಲೇಷಿಯ
D
ಪಾಕಿಸ್ತಾನ
Question 1 Explanation: 

ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿ-2017 ರ ಫೈನಲ್ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ 2-1 ಗೋಲುಗಳಿಂದ ಭಾರತದ ಪುರುಷರ ಹಾಕಿ ತಂಡ ಪ್ರಶಸ್ತಿಗಳಿಸಿತು.

Question 2

2. ಮಕಾವ್ ಓಪನ್ ಗಾಲ್ಫ್ ಪಂದ್ಯಾವಳಿ 2017 ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಗಾಲ್ಫ್ ಆಟಗಾರ ಯಾರು?

A
ಚಿಕ್ಕರಂಗಪ್ಪ
B
ಅರ್ಜುನ್ ಅತ್ವಾಲ್
C
ಜ್ಯೋತಿ ರಾಂಧವ
D
ಗಗನ್ ಜೀತ್ ಬುಲ್ಲರ್
Question 2 Explanation: 

ಭಾರತದ ಗಗನ್ ಜೀನ್ ಬುಲ್ಲರ್ ಮಕಾವ್ ಓಪನ್ ಗಾಲ್ಫ್ ಪಂದ್ಯಾವಳಿ 2017 ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ವಿಜಯದೊಂದಿಗೆ ಬುಲ್ಲರ್ ರವರು ಅರ್ಜುನ್ ಅತ್ವಾಲ್ ಮತ್ತು ಜ್ಯೋತಿ ರಾಂಧವ ರೊಂದಿಗೆ ಏಷ್ಯಾ ಖಂಡದ ಪ್ರವಾಸದಲ್ಲಿ ಅತೀ ಹೆಚ್ಚು (8)ಜಯ ದಾಖಲಿಸಿದವರಾಗಿ ಸ್ಥಾನ ಗಳಿಸಿದರು.

Question 3

3. 2017 ರ ಡೆನ್ಮಾರ್ಕ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದ ಭಾರತೀಯ ಆಟಗಾರ ಯಾರು?

A
ಕಿಡಂಬಿ ಶ್ರೀಕಾಂತ್
B
ಪರುಪಲ್ಲಿ ಕಶ್ಯಪ್
C
ಪಿ.ವಿ.ಸಿಂಧು
D
ಅಜಯ್ ಜಯರಾಮ್
Question 3 Explanation: 

2017 ರ ಡೆನ್ಮಾರ್ಕ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಪ್ರಶಸ್ತಿ ಪಡೆದರು.

Question 4

4. ಭಾರತದಲ್ಲಿ ಪ್ರಪ್ರಥಮವಾಗಿ “ರೋಲ್ ಆನ್-ರೋಲ್ ಆಫ್ (ರೋ-ರೋ) ಹಡಗು ಸೇವೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಿಸಲಾಯಿತು?

A
ಪಶ್ಚಿಮ ಬಂಗಾಳ
B
ತಮಿಳುನಾಡು
C
ಗುಜರಾತ್
D
ಆಂಧ್ರಪ್ರದೇಶ
Question 4 Explanation: 

ಗುಜರಾತ್ ನ ಭವನಗರ ಜಿಲ್ಲೆಯ ಘೋಗಾದಿಂದ ಬರೂಚ್ ಜಿಲ್ಲೆಯ ದಹೆಜ್ ವರೆಗೂ ಭಾರತದ ಪ್ರಪ್ರಥಮವಾಗಿ “ರೋಲ್ ಆನ್-ರೋಲ್ ಆಫ್ (ರೋ-ರೋ) ಹಡಗು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ರವರು ಉದ್ಘಾಟಿಸಿದರು. ಈ ಹಡಗು ಸೇವೆ ಪ್ರಯಾಣಿಕ ಮತ್ತು ವಾಹನಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯಲಿದೆ, ಅಲ್ಲದೆ ಈ ಹಡಗು ಎರಡೂ ನಗರಗಳ ಅಂತರವನ್ನು 310 ಕಿ.ಮೀ. ಗಳಿಂದ ಕೇವಲ 30 ಕಿ.ಮೀ.ಗಳಿಗೆ ತಗ್ಗಿಸಲಿದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗಿಲಿದೆ. ಸದ್ಯ ಈ ಹಡಗು ಸುಮಾರು 100 ವಾಹನಗಳು ಮತ್ತು 250 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Question 5

5. ಈ ಕೆಳಗಿನ ಯಾವ ರಾಜ್ಯ ಬಾಳೆಹಣ್ಣಿನ ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಇತ್ತೀಚೆಗೆ ಬಾಳೆಹಣ್ಣಿನ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A
ಆಂಧ್ರಪ್ರದೇಶ
B
ಕೇರಳ
C
ಕರ್ನಾಟಕ
D
ತಮಿಳುನಾಡು
Question 5 Explanation: 

ಬಾಳೆಹಣ್ಣಿನ ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಆಂಧ್ರಪ್ರದೇಶ ಸರ್ಕಾರದೊಂದಿಗೆ ಇತ್ತೀಚೆಗೆ ಬಾಳೆಹಣ್ಣಿನ ರಾಷ್ಟ್ರೀಯ ಸಂಶೋಧನಾ ಸಂಸ್ಥೆ, ತಿರುಚಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Question 6

6. ಕೌಶಲ್ಯಾಧಾರಿತ ತರಬೇತಿ ನೀಡಲು ಭಾರತದ ಮೊಟ್ಟಮೊದಲ “ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ” ಯಾವ ನಗರದಲ್ಲಿ ಸ್ಥಾಪನೆಗೊಂಡಿದೆ?

A
ಅಹಮದಾಬಾದ್
B
ಅಲಹಾಬಾದ್
C
ಮುಂಬೈ
D
ದೆಹಲಿ
Question 6 Explanation: 

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರುದ್ಯೋಗಿ ಯುವಕ/ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿ ನೀಡಲು ಭಾರತದ ಮೊಟ್ಟಮೊದಲ “ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ” ದೆಹಲಿಯಲ್ಲಿ ಸ್ಥಾಪನೆ ಮಾಡಲಾಯಿತು.

Question 7

7. ಜಮ್ಮು-ಕಾಶ್ಮೀರ ರಾಜ್ಯದೊಂದಿಗೆ ನಿರಂತರ ಮಾತುಕತೆ ನಡೆಸಲು ಭಾರತ ಸರ್ಕಾರದ ಪ್ರತಿನಿಧಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ಮುಕುಲ್ ರಾಯ್
B
ದಿನೇಶ್ವರ್ ಶರ್ಮಾ
C
ರಾಜೀವ್ ಕುಮಾರ್
D
ಸಯ್ಯದ್ ಆಸಿಫ್ ಇಬ್ರಾಹಿಂ
Question 7 Explanation: 

ಜಮ್ಮು-ಕಾಶ್ಮೀರ ರಾಜ್ಯದೊಂದಿಗೆ ನಿರಂತರ ಮಾತುಕತೆ ನಡೆಸಲು ಭಾರತ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಮಾಜಿ ಐ.ಬಿ. ಮುಖ್ಯಸ್ಥರಾದ ದಿನೇಶ್ವರ್ ಶರ್ಮಾ ರವರನ್ನು ನೇಮಕ ಮಾಡಲಾಗಿದೆ. ಇವರು ಜಮ್ಮು-ಕಾಶ್ಮೀರದ ಎಲ್ಲಾ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾತುಕತೆ ನಡೆಸಲಿದ್ದಾರೆ.

Question 8

8. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಾಮಾಜಿಕ ಮಾಧ್ಯಮಗಳ ಪ್ರವೃತ್ತಿ ಮತ್ತು ದತ್ತಾಂಶಗಳನ್ನು ಸುರಕ್ಷತೆಯ ದೃಷ್ಠಿಯಿಂದ ವಿಶ್ಲೇಷಣೆ ನಡೆಸುತ್ತಿದೆ. ಈ ಪಡೆಯ ಕೇಂದ್ರ ಕಚೇರಿ ಎಲ್ಲಿದೆ?

A
ಕಾನ್ಪುರ
B
ನಾಗಪುರ
C
ಚಂಡೀಗಡ
D
ದೆಹಲಿ
Question 8 Explanation: 

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಕೇಂದ್ರ ಕಚೇರಿ ದೆಹಲಿಯಲ್ಲಿದೆ. ಈ ಪಡೆ ಸಾಮಾಜಿಕ ಮಾಧ್ಯಮಗಳ ಪ್ರವೃತ್ತಿ ಮತ್ತು ದತ್ತಾಂಶಗಳನ್ನು ಸುರಕ್ಷತೆಯ ದೃಷ್ಠಿಯಿಂದ ವಿಶ್ಲೇಷಣೆ ನಡೆಸಿ ದೇಶದ ವಿಮಾನ ನಿಲ್ದಾಣ, ಪರಮಾಣು ಕೇಂದ್ರ ಮತ್ತು ಅಂತರಿಕ್ಷ ಕೇಂದ್ರಗಳ ಸುರಕ್ಷತೆಯನ್ನು ಹೆಚ್ಚಿಸಲು ಬಳಸಲಿದೆ.

Question 9

9. ಭಾರತದಲ್ಲಿ ಅತೀ ದೊಡ್ಡ ಮಾನವ ನಿರ್ಮಿತ ಚಿನ್ಹೆಯನ್ನು ನಿರ್ಮಿಸಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಿಸಿದ ಚುನಾವಣಾ ಆಯೋಗ ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ?

A
ಉತ್ತರಪ್ರದೇಶ
B
ಮೇಘಾಲಯ
C
ಹಿಮಾಚಲ ಪ್ರದೇಶ
D
ಮಹಾರಾಷ್ಟ್ರ
Question 9 Explanation: 

ಹೊಸದಾಗಿ ನೋಂದಣಿಯಾದ ಯುವ ಮತದಾರರಿಂದ ಭಾರತದಲ್ಲಿ ಅತೀ ದೊಡ್ಡ ಮಾನವ ಚಿನ್ಹೆಯನ್ನು ನಿರ್ಮಿಸಿ, ಮೇಘಾಲಯ ಚುನಾವಣಾ ಆಯೋಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಿಸಿತು. 2870 ಯುವ ಮತದಾರರಿಂದ ಈ ಮಾನವ ಸರಪಳಿಯನ್ನು ನಿರ್ಮಿಸಿತು.

Question 10

10. ಫಿಪಾ (FIFA) 2017 ರ “ವರ್ಷದ ಅತ್ಯುತ್ತಮ ಆಟಗಾರ” ಪ್ರಶಸ್ತಿಗೆ ಭಾಜನರಾದ ಪುರುಷ ಆಟಗಾರ ಯಾರು?

A
ಒಲಿವಿಯರ್ ಗಿರೋಡ್
B
ನೇಮರ್
C
ರೊನಾಲ್ಡೀನೊ
D
ಕ್ರಿಸ್ಟಿಯಾನ ರೊನಾಲ್ಡೊ
Question 10 Explanation: 

ಪೋರ್ಚುಗಲ್ ನ ರಿಯಲ್ ಮ್ಯಾಡ್ರಿಡ್ ಕ್ಲಬ್ ನ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನ ರೊನಾಲ್ಡೊ ಫಿಪಾ (FIFA) 2017 ರ “ವರ್ಷದ ಅತ್ಯುತ್ತಮ ಆಟಗಾರ” ಪ್ರಶಸ್ತಿಗೆ ಭಾಜನರಾದರು.

There are 10 questions to complete.

[button link=”http://www.karunaduexams.com/wp-content/uploads/2017/11/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್2122232017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,21,22,23,2017”

  1. SRIRAMAKANTHA KELADI

    Thank you sir

  2. vishal

    ಧನ್ಯವಾದಗಳು.

Leave a Comment

This site uses Akismet to reduce spam. Learn how your comment data is processed.