ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವೀಜ್ 36 - ಭೂಗೋಳ

Question 1

1. ಕೆಳಗಿನವುಗಳಲ್ಲಿ ಯಾವುದು "ಐಸೋಹೈಟ್ಸ್ (Isohyets)" ನ ಸರಿಯಾದ ವ್ಯಾಖ್ಯಾನವಾಗಿದೆ?

A

ಸಮಾನ ಮಳೆ ತೋರಿಸುವ ನಕ್ಷೆಯ ರೇಖೆಗಳು

B

ಸರಾಸರಿ ತಾಪಮಾನವನ್ನು ತೋರಿಸುವ ನಕ್ಷೆಯನ ರೇಖೆಗಳು

C

ಸಮಾನ ವಾಯು ಒತ್ತಡವನ್ನು ತೋರಿಸುವ ನಕ್ಷೆಯ ರೇಖೆಗಳು

D

ಸರಾಸರಿ ಸಮುದ್ರ ಮಟ್ಟದಿಂದ ಸಮಾನ ಎತ್ತರವನ್ನು ತೋರಿಸುವ ನಕ್ಷೆಯ ರೇಖೆಗಳು

Question 1 Explanation: 

ಸಮಾನ ಮಳೆ ತೋರಿಸುವ ನಕ್ಷೆಯ ರೇಖೆಗಳು

ಐಸೋಹೈಟ್ಸ್ ಎಂದರೆ ಸಮಾನ ಮಳೆ ತೋರಿಸುವ ನಕ್ಷೆಯ ರೇಖೆಗಳು

Question 2

2. ಭಾರತದ ಭೌಗೋಳಿಕ ವಿದ್ಯಮಾನದಲ್ಲಿ ಯಾವ ವಿದ್ಯಮಾನವನ್ನು ವಿವರಿಸಲು ವಿಭಿನ್ನ ತಾಪನದ ಪರಿಕಲ್ಪನೆ (differential heating) ನೀಡಲಾಗಿದೆ?

A
ಮುಂಗಾರು
B
ಚಂಡಮಾರುತ
C
ಜೆಟ್ ಮಾರುತ
D
ಮರುಭೂಮಿಯ ಬಿರುಗಾಳಿ
Question 2 Explanation: 
ಮುಂಗಾರು

ಭಾರತದ ಮುಂಗಾರಿನ ವಿದ್ಯಮಾನವನ್ನು ವಿವರಿಸಲು ವಿಭಿನ್ನ ತಾಪನದ (differential heating) ಪರಿಕಲ್ಪನೆಯನ್ನು ಹ್ಯಾಲಿಯು ನೀಡಿದನು.

Question 3

3. ಅಲೆಕ್ಸಾಂಡರ್ ನ ಕಾಲದಲ್ಲಿ "ಜಿಡ್ರೋಸಿಯಾ (Gedrosia)" ಎಂದು ಯಾವ ಪ್ರದೇಶವನ್ನು ಕರೆಯಲಾಗುತ್ತಿತ್ತು?

A
ಗುಜರಾತ್
B
ರಾಜಸ್ಥಾನ
C
ಪಂಜಾಬ್
D
ಬಲೂಚಿಸ್ತಾನ್
Question 3 Explanation: 
ಬಲೂಚಿಸ್ತಾನ್

ಗೆಡ್ರೋಸಿಯಾ ಪ್ರಸ್ತುತ ಬಲೂಚಿಸ್ತಾನ್ ಅಥವಾ ನಿರ್ದಿಷ್ಟವಾಗಿ ಮಕ್ರಾನ್ಗೆ ಸಂಬಂಧಿಸಿದೆ. ಗೆಡ್ರೋಸಿಯನ್ ಮರುಭೂಮಿಯ ಮೂಲಕ ತನ್ನ ಸೇನೆ ಹಾದುಹೋಗುವಾಗುವ ಸಮಯದಲ್ಲಿ ಅಲೆಕ್ಸಾಂಡರ್ ಸಾಕಷ್ಟು ಸೈನಿಕರನ್ನು ಕಳೆದುಕೊಂಡಿದ್ದನು.

Question 4

4. ಮೌರ್ಯರ ಯುಗದಲ್ಲಿ ತೆರಿಗೆ ವಿಧಿಸುವ ಬಗ್ಗೆ ತಿಳಿಸಿಕೊಡುವ ರಮ್ಮಿಂಡಿ ಸ್ತಂಭ ಶಾಸನವು (Rummindei Pillar Inscription ) ಯಾವ ಸ್ಥಳದಲ್ಲಿ ಕಂಡುಬಂದಿದೆ?

A
ಜುನಾಗಢ್, ಗುಜರಾತ್
B
ರಾಂಚಿ, ಜಾರ್ಖಂಡ್
C
ಭಬ್ರು, ರಾಜಸ್ತಾನ
D
ಲುಂಬಿನಿ, ನೇಪಾಳ
Question 4 Explanation: 
ಲುಂಬಿನಿ, ನೇಪಾಳ

ನೇಪಾಳದ ಲುಂಬಿನಿ ಸ್ತಂಭ ಶಾಸನವನ್ನು ರಮ್ಮಿಂಡಿ ಸ್ತಂಭ ಶಾಸನ ಎಂದು ಕರೆಯಲಾಗುತ್ತದೆ. .ಈ ಶಾಸನದಲ್ಲಿ ಅಶೋಕನು ತನ್ನ ಆಳ್ವಿಕೆ ಇಪ್ಪತ್ತನೇ ವರ್ಷದ ನಂತರ ಬುದ್ಧನ ಜನ್ಮಸ್ಥಳಕ್ಕೆ ನೀಡುವ ಮೂಲಕ ವೈಯಕ್ತಿಕವಾಗಿ ಅರ್ಪಣೆಗಳನ್ನು ನೀಡಿದನು ಎಂದು ದಾಖಲಿಸಲಾಗಿದೆ. ನಂತರ ಇಲ್ಲಿ ಕಲ್ಲಿನ ಕಂಬವನ್ನು ಸ್ಥಾಪಿಸಿ ಮತ್ತು ಆ ಪ್ರದೇಶದಲ್ಲಿನ ಜನರ ತೆರಿಗೆಗಳನ್ನು ಕಡಿಮೆ ಮಾಡಿದನು.

Question 5

5. ಕೆಳಗಿನ ಯಾವ ಆಡಳಿತಗಾರರು ಬುದ್ಧನ ಸಮಕಾಲೀನರಾಗಿದ್ದರು?

A
ಮಗಧದ ಬಿಂಬಿಸಾರ
B
ಕೋಸಲದ ಪ್ರಸಾನ್ಜಿತ್
C
ಅವಂತಿಯ ಉದಯನ್
D
ಮೇಲಿನ ಎಲ್ಲಾ
Question 5 Explanation: 
ಮೇಲಿನ ಎಲ್ಲಾ

ಮೇಲೆ ಪ್ರಸ್ತಾಪಿಸಿಲಾದ ಎಲ್ಲಾ ರಾಜರು ಬುದ್ಧನ ಸಮಕಾಲೀನರಾಗಿದ್ದರು. ಮಗಧದ ಬಿಂಬಿಸಾರ ಮತ್ತು ಅಜಾತಶತ್ರು ಇಬ್ಬರೂ ಬುದ್ಧನ ಸಮಕಾಲೀನರು.

Question 6

6. ಗ್ರೀಕ್ ರಾಯಭಾರಿ “ಡೀಮಾಕಸ್ ಆಫ್ ಪ್ಲಾಟಿಯಾ” ಮಗಧದ ಯಾವ ರಾಜನ ಆಸ್ಥಾನಕ್ಕೆ ಭೇಟಿ ನೀಡಿದ್ದನು?

A
ಬಿಂದುಸಾರ
B
ಚಂದ್ರಗುಪ್ತ ಮೌರ್ಯ
C
ಅಶೋಕ
D
ಧನನಂದ
Question 6 Explanation: 
ಬಿಂದುಸಾರ

ಗ್ರೀಕ್ ರಾಯಬಾರಿ ಡಿಮಾಕಸ್ ಚಂದ್ರಗುಪ್ತ ಮೌರ್ಯನ ಪುತ್ರ ಮತ್ತು ಉತ್ತರಾಧಿಕಾರಿ ಬಿಂದುಸಾರನ ಆಸ್ಥಾನಕ್ಕೆ ಭೇಟಿ ನೀಡಿದ್ದನು. ಡಿಮಾಕಸ್ ಮತ್ತು ಮೆಗಾಸ್ತಾನಿಸನು ಸಮಕಾಲೀನ ಸಮಾಜ ಮತ್ತು ರಾಜಕೀಯದ ಬಗ್ಗೆ ಪ್ರಮುಖ ಮಾಹಿತಿಯನ್ನು ಒದಗಿಸಿದ್ದಾರೆ.

Question 7

7. ಈ ಕೆಳಗಿನವರಲ್ಲಿ ಯಾರು 'ಕಲ್ಪಸೂತ್ರ'ದ ಬರಹಗಾರರಾಗಿದ್ದಾರೆ?

A
ಸಿಮುಖ
B
ಪನಿಣಿ
C
ಭದ್ರಬಾಹು
D
ಪತಂಜಲಿ
Question 7 Explanation: 
ಭದ್ರಬಾಹು

ಕಲ್ಪಸೂತ್ರವು ಜೈನ ತೀರ್ಥಂಕರರ ಜೀವನಚರಿತ್ರೆಯನ್ನು ಹೊಂದಿರುವ ಜೈನ ಗ್ರಂಥವಾಗಿದೆ, ಅದರಲ್ಲಿ ಮುಖ್ಯವಾಗಿ ಪಾರ್ಶ್ವನಾಥ ಮತ್ತು ಮಹಾವೀರ ಮತ್ತು ಅವರ ನಂತರ ನಿರ್ವಾಣ ಹೊಂದಿದವರು ಸಹ ಸೇರಿದ್ದಾರೆ. ಕಲ್ಪಸೂತ್ರದ ಲೇಖಕರು ಭದ್ರಬಾಹು.

Question 8

8. ಕಶ್ಯಪ ಮಾತಂಗನು ಭಾರತದಿಂದ ಬೌದ್ಧ ಧರ್ಮವನ್ನು ಪ್ರಸ್ತುತ ಯಾವ ಪ್ರದೇಶಕ್ಕೆ ಪರಿಚಯಿಸಿದನು?

A
ಶ್ರೀಲಂಕಾ
B
ಚೀನಾ
C
ಭೂತಾನ್
D
ನೇಪಾಳ
Question 8 Explanation: 
ಚೀನಾ

ಕಶ್ಯಪ ಮಾತಂಗ ಚೀನಾಕ್ಕೆ ಬೌದ್ಧ ಧರ್ಮವನ್ನು ಪರಿಚಯಿಸಿದವರಲ್ಲಿ ಮೊದಲಿಗನೆಂದು ಭಾವಿಸಲಾಗಿದೆ.

Question 9

9. ಈ ಕೆಳಗಿನವುಗಳಲ್ಲಿ ಯಾವುದನ್ನು ಪ್ರಾಚೀನ ಭಾರತದಲ್ಲಿ "ಕಹಪನ" ಅಥವಾ "ಕರ್ಶಾಪಾನ" ಎಂಬ ಪದದಿಂದ ಸೂಚಿಸಲಾಗಿದೆ?

A
ಬಟ್ಟೆ
B
ವ್ಯಾಪಾರ
C
ಸನ್ಯಾಸಿ
D
ನಾಣ್ಯ
Question 9 Explanation: 
ನಾಣ್ಯ

ಪೂರ್ವ-ಗುಪ್ತಾ ಅವಧಿಯಲ್ಲಿ "ಕಹಪನ" ಅಥವಾ "ಕರ್ಶಾಪಾನ್" ಒಂದು ಸಾಮಾನ್ಯ ನಾಣ್ಯವಾಗಿತ್ತು. ಇದು ತಾಮ್ರದಿಂದ ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿದೆ.

Question 10

10. ಪ್ರಾಚೀನ ಭಾರತದಲ್ಲಿ ಅರಿಕಮೇಡು (Arikamedu) ಎಂದರೇನು?

A
ಒಂದು ಕರಾವಳಿ ವಸಾಹತು ಮತ್ತು ವ್ಯಾಪಾರ ಕೇಂದ್ರ
B
ಒಂದು ಪರ್ವತ
C
ಗುಜರಾತಿನ ಅರಾವಳಿ ಪರ್ವತಗಳ ಒಂದು ನಗರ
D
ಒಂದು ಸರೋವರ
Question 10 Explanation: 
ಒಂದು ಕರಾವಳಿ ವಸಾಹತು ಮತ್ತು ವ್ಯಾಪಾರ ಕೇಂದ್ರ

ಅರಿಕಮೇಡು ಪ್ರಾಚೀನ ರೋಮನ್ ವ್ಯಾಪಾರ ಕೇಂದ್ರವಾಗಿದ್ದು ಪುದುಚೆರಿಯ ದಕ್ಷಿಣ ಭಾಗದಲ್ಲಿರುವ ಅರಿಯಂಕಪ್ಪಂ ನದಿಯ ಬಲ ದಂಡೆಯಿಂದ 4 ಕಿ.ಮೀ ದೂರದಲ್ಲಿತ್ತು. ಅರಿಕಮೇಡು ಎಂಬುದು ಇಂಡೋ-ರೋಮನ್ ಕರಾವಳಿ ವ್ಯಾಪಾರ ಕೇಂದ್ರವಾಗಿದ್ದು ಕ್ರಿಶ್ಚಿಯನ್ ಯುಗದ ಆರಂಭದ ಶತಮಾನಗಳಲ್ಲಿ ಪಾಶ್ಚಾತ್ಯ ಪ್ರಪಂಚದ ವ್ಯಾಪಾರ ಮತ್ತು ವಾಣಿಜ್ಯದ ಪ್ರಮುಖ ಕೇಂದ್ರವಾಗಿತ್ತು. ಈ ಬಂದರನ್ನು "ಪೆರಿಪ್ಲುಸ್ ಆಫ್ ದ ಎರಿತ್ರಿಯನ್ ಸಮುದ್ರ" ಲೇಖಕನು ಪಡುಕ್ಕೆ ಎಂದು ತಿಳಿದಿದ್ದನು ಎನ್ನಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/10/ಕ್ವೀಜ್-36.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಸಾಮಾನ್ಯ ಜ್ಞಾನ ಕ್ವೀಜ್ 36”

Leave a Reply to bhagya Cancel reply

This site uses Akismet to reduce spam. Learn how your comment data is processed.