Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,11,12,2017

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,11,12,2017

Question 1

1. ಅಸ್ಸಾಂ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡವರು ಯಾರು?

A
ಎಸ್.ಎಂ.ಕೃಷ್ಣ
B
ಕೇಸರ್ ನಾಥ್ ತ್ರಿಪಾಠಿ
C
ಬಲವಿಂದರ್ ಪುರೋಹಿತ್
D
ಜಗದೀಶ್ ಮುಖಿ
Question 1 Explanation: 
ಜಗದೀಶ್ ಮುಖಿ
Question 2

2. 2017 ನೇ ಸಾಲಿನ ರಾಜ್ಯಪಾಲರ ಸಮ್ಮೇಳನವನ್ನು ಈ ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗಿದೆ?

A
ಬೆಂಗಳೂರು
B
ದೆಹಲಿ
C
ಅಹಮದಾಬಾದ್
D
ಕೊಚ್ಚಿ
Question 2 Explanation: 
ದೆಹಲಿ
Question 3

3. ನೂತನವಾಗಿ ರಚಿತವಾದ “ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ” (Economic Advisory Council to Prime Minister) ಯ ಮೊಟ್ಟಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದವರು ಯಾರು?

A
ಬಿಬೇ ದೇಬ್ರಾಯ್
B
ಕೀರ್ತಿ ಕುಮಾರ್
C
ಅರವಿಂದ ಪನಗಾರಿಯ
D
ನಂದನ್ ನಿಲೆಕಣಿ
Question 3 Explanation: 
ಬಿಬೇ ದೇಬ್ರಾಯ್

ನೂತನವಾಗಿ ರಚಿತವಾದ “ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ” (Economic Advisory Council to Prime Minister) ಯ ಮೊಟ್ಟಮೊದಲ ಸಭೆಯ ಅಧ್ಯಕ್ಷತೆಯನ್ನು ಬಿಬೇ ದೇಬ್ರಾಯ್ ರವರು ವಹಿಸಿಕೊಂಡಿದ್ದರು. ಈ ಸಭೆ ದೆಹಲಿಯ ನೀತಿ ಆಯೋಗದಲ್ಲಿ ಜರುಗಿತು. ಈ ಸಭೆಯಲ್ಲಿ ಮುಂದಿನ 6 ತಿಂಗಳಲ್ಲಿ ಪ್ರಗತಿ ಮತ್ತು ಉದ್ಯೋಗವನ್ನು ಹೆಚ್ಚಿಸುವ 10 ಕ್ಷೇತ್ರಗಳನ್ನು ಗುರುತಿಸಿಲಾಯಿತು.

Question 4

4. ಕೆಳ ಹಂತದ ನ್ಯಾಯಾಲಯಗಳ ನ್ಯಾಯಾಧೀಶರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?

A
ಎಸ್.ಆರ್.ಲೋಹಿಯಾ
B
ಪಿ.ವಿ.ರೆಡ್ಡಿ
C
ವಿನೋದ್ ರಾಯ್
D
ಬಿ.ವಿ.ಆಚಾರ್ಯ
Question 4 Explanation: 
ಪಿ.ವಿ.ರೆಡ್ಡಿ

ಭಾರತದ ಕೆಳ ಹಂತದ ನ್ಯಾಯಾಲಯಗಳ ಸುಮಾರು 21000 ನ್ಯಾಯಾಧೀಶರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗವನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಪಿ.ವಿ. ರೆಡ್ಡಿ ಯವರ ಅಧ್ಯಕ್ಷತೆಯಲ್ಲಿ ಕೇಂದ್ರ ನ್ಯಾಯಾಂಗ ಸಚಿವಾಲಯ ರಚನೆ ಮಾಡಿದೆ. ಮೊದಲನೇ ನ್ಯಾಯಾಂಗ ವೇತನ ಆಯೋಗದ ಅಧ್ಯಕ್ಷರಾಗಿ ಜಸ್ಟೀಸ್ ಜಗನ್ನಾಥ ಶೆಟ್ಟಿರವರು ನೇಮಕಗೊಂಡಿದ್ದರು.

Question 5

5. ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ನಿಗಾ ವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕೆಳಕಂಡ ಯಾವ ಸಂಸದೀಯ ಸಮಿತಿಯನ್ನು ರಚಿಸಿದೆ?

A
ಮಲ್ಲಿಖಾರ್ಜುನ ಖರ್ಗೆ ಸಮಿತಿ
B
ಸುಭಾಷ್ ರಾಮರಾವ್ ಬಾಮ್ರೆ ಸಮಿತಿ
C
ಸುಷ್ಮಾ ಸ್ವರಾಜ್ ಸಮಿತಿ
D
ಶಶಿ ತರೂರ್ ಸಮಿತಿ
Question 5 Explanation: 
ಶಶಿ ತರೂರ್ ಸಮಿತಿ

ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ನಿಗಾ ವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಾಂಗ್ರೆಸ್ ಸಂಸದ ಶಶಿತರೂರ್ ರವರ ಅಧ್ಯಕ್ಷತೆಯಲ್ಲಿ ಸಂಸದೀಯ ಸಮಿತಿಯನ್ನು ರಚಿಸಿದೆ. ಈ ಸಮಿತಿ ಭಾರತ ಮತ್ತು ಚೀನಾ ನಡುವಿನ ಸಹಕಾರ, ಡೋಕ್ಲಂ ಸಂಬಂಧಿಸಿದಂತೆ ಚೀನಾ ನಡೆ ಅಲ್ಲದೆ ಮ್ಯಾನ್ಮರ್ ಮತ್ತು ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಗಮನ ಹರಿಸಲಿದೆ.

Question 6

6. 2017 ಜಾಗತಿಕ ಹಸಿವು ಸೂಚ್ಯಂಕ (Global Hunger Index)ದಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದುಕೊಂಡಿದೆ?

A
96
B
100
C
105
D
110
Question 6 Explanation: 
100

2017 ಜಾಗತಿಕ ಹಸಿವು ಸೂಚ್ಯಂಕ (ಜಿಹೆಚ್ಐ) ವರದಿಯಲ್ಲಿ 119 ದೇಶಗಳಲ್ಲಿ ಭಾರತವು 100ನೇ ಸ್ಥಾನ ಪಡೆದಿದೆ, ಈ ಸೂಚ್ಯಂಕವನ್ನು ವಾಷಿಂಗ್ಟನ್ ಮೂಲದ ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (ಐಎಫ್ಪಿಆರ್ಐ) ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಲಾರಸ್, ಬೊಸ್ನಿಯಾ ಮತ್ತು ಹರ್ಜೆಗೋವಿನಾ, ಚಿಲಿ, ಕ್ರೊಯೇಷಿಯಾ ಮತ್ತು ಕ್ಯೂಬಾಗಳು ಅಗ್ರಸ್ಥಾನದಲ್ಲಿದೆ. ಜಿಹೆಚ್ಐ ಸ್ಕೋರ್ ಎನ್ನುವುದು ನಾಲ್ಕು ಸೂಚಕಗಳನ್ನು ಒಳಗೊಂಡ ಒಂದು ಬಹುಆಯಾಮದ ಸೂಚ್ಯಂಕ. ಜನಸಂಖ್ಯೆಯಲ್ಲಿ ಪೋಷಣೆಯ ಕೊರತೆಯ ಪ್ರಮಾಣ, ಮಕ್ಕಳ ಮರಣ ಪ್ರಮಾಣ, ಮಗುವಿನ ಬೆಳವಣಿಗೆ ಕುಂಠಿತಗೊಳಿಸುವಿಕೆ ಮತ್ತು ಮಕ್ಕಳ ಕ್ಷೀಣಿಸುವಿಕೆ ಮಾನದಂಡಗಳನ್ನು ಆಧರಿಸಿ ಸಿದ್ದಪಡಿಸಲಾಗುವುದು.

Question 7

7. ಲಾರೆಸ್ ಗೆ ಮೊದಲ ಭಾರತೀಯ ಬ್ರಾಂಡ್ ಅಂಬಾಸಿಡರ್ ಆಗಿ ಯಾರು ನೇಮಕಗೊಂಡಿದ್ದಾರೆ?

A
ಯುವರಾಜ್ ಸಿಂಗ್
B
ವಿರಾಟ್ ಕೊಹ್ಲಿ
C
ರಾಹುಲ್ ದ್ರಾವಿಡ್
D
ಸೌರವ್ ಗಂಗೂಲಿ
Question 7 Explanation: 
ಯುವರಾಜ್ ಸಿಂಗ್
Question 8

8. 17ನೇ AFC ಏಷ್ಯಾ ಕಪ್ ಪುಟ್ಬಾಲ್ ಟೂರ್ನಮೆಂಟ್ ಆತಿಥ್ಯವಹಿಸಲಿರುವ ದೇಶ ___________?

A
ಭಾರತ
B
ಯುಎಇ
C
ಫ್ರಾನ್ಸ್
D
ಚಿಲಿ
Question 8 Explanation: 
ಯುಎಇ

2019 AFC ಏಷ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆಯೋಜಿಸುತ್ತದೆ. ಈ ಪಂದ್ಯಾವಳಿಯನ್ನು ಏಷ್ಯನ್ ಫುಟ್ ಬಾಲ್ ಕಾನ್ಫಿಡರೇಷನ್ (ಎಎಫ್ಸಿ) ಆಯೋಜಿಸುತ್ತಿದೆ.

Question 9

9. ಮೂರನೇ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (ಐಐಎಸ್ಎಫ್-2017)ವನ್ನು ಯಾವ ನಗರದಲ್ಲಿ ಆಯೋಜಿಸಲಾಗುತ್ತಿದೆ?

A
ಬೆಂಗಳೂರು
B
ಚೆನ್ನೈ
C
ಪುಣೆ
D
ಹೈದ್ರಾಬಾದ್
Question 9 Explanation: 
ಚೆನ್ನೈ

ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದ 3ನೇ ಆವೃತ್ತಿಗೆ ಕೇಂದ್ರ ಸಚಿವ ಡಾ. ಹರ್ಷವರ್ಧನ್ ರವರು ಚೆನ್ನೈನಲ್ಲಿ ಅಕ್ಟೋಬರ್ 13, 2017 ರಂದು ಚಾಲನೆ ನೀಡಿದರು. ಈ ಉತ್ಸವವನ್ನು ಜಂಟಿಯಾಗಿ ವಿಜ್ಞಾನ ಸಚಿವಾಲಯ ಮತ್ತು ತಂತ್ರಜ್ಞಾನ, ಭೂವಿಜ್ಞಾನ ಸಚಿವಾಲಯ, ಮತ್ತು ವಿಜ್ಞಾನ ಭಾರತಿ (VIBHA) ಆಯೋಜಿಸುತ್ತಿವೆ.

Question 10

10. ಎಂಸಿಸಿ ವರ್ಲ್ಡ್ ಕ್ರಿಕೆಟ್ ಸಮಿತಿಗೆ ಸೇರ್ಪಡೆಗೊಂಡ ಬಾಂಗ್ಲದೇಶದ ಮೊದಲ ಕ್ರಿಕೆಟ್ ಆಟಗಾರ ಯಾರು?

A
ತಮೀಮ್ ಇಕ್ಬಾಲ್
B
ಮಶ್ರಫೆ ಮೊರ್ಟಜ್
C
ಶಕೀಬ್ ಅಲ್ ಹಸನ್
D
ನಾಸೀರ್ ಹುಸೇನ್
Question 10 Explanation: 
ಶಕೀಬ್ ಅಲ್ ಹಸನ್

ಆಲ್-ರೌಂಡರ್ ಶಕೀಬ್ ಅಲ್ ಹಸನ್ ಎಂ.ಸಿ.ಸಿ ವಿಶ್ವ ಕ್ರಿಕೆಟ್ ಸಮಿತಿಗೆ ಸೇರ್ಪಡೆಗೊಂಡ ಬಾಂಗ್ಲಾದೇಶದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾದರು. ಬಾಂಗ್ಲಾದೇಶದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಅವರು 2000ನೇ ಇಸವಿಯಲ್ಲಿ ಟೆಸ್ಟ್ ಸ್ಥಾನಮಾನವನ್ನು ಪಡೆದುಕೊಂಡರು. ಶಕೀಲ್ ರವರು 51 ಟೆಸ್ಟ್ ಪಂದ್ಯಗಳನ್ನು ಮತ್ತು 177 ಏಕದಿನ ಪಂದ್ಯಗಳನ್ನು (ODI) ಆಡಿದ್ದಾರೆ.

There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

7 Responses to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,11,12,2017”

 1. Deepika says:

  Comment

 2. Deepika says:

  Super information

 3. thanu says:

  fentastic

 4. Aruna Savyasachi says:

  Thumba help aguthe

 5. SANTOSH says:

  Very important this type msg

 6. Dore N Rajegowda says:

  Good question

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.