ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,25,26,2017

Question 1

1. ಈ ಕೆಳಗಿನ ಯಾವ ರಾಜ್ಯ 2017ನೇ ವರ್ಷವನ್ನು ಇ-ಪ್ರಗತಿ ವರ್ಷವೆಂದು ಘೋಷಿಸಿದೆ?

A
ತೆಲಂಗಣ
B
ಆಂಧ್ರ ಪ್ರದೇಶ
C
ಕರ್ನಾಟಕ
D
ಗೋವಾ
Question 1 Explanation: 
ಆಂಧ್ರ ಪ್ರದೇಶ

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ರವರು 2017-18 ವರ್ಷವನ್ನು ಇ-ಪ್ರಗತಿ ವರ್ಷವೆಂದು ಘೋಷಿಸಿದ್ದಾರೆ. ಆಂಧ್ರ ಪ್ರದೇಶದ ಸರ್ಕಾರಿ ಅಧಿಕಾರಿಗಳಿಗೆ ಹೊಸ ತಂತ್ರಜ್ಞಾನಗಳು ಮತ್ತು ಅದರ ಬಳಕೆಯ ಪರಿಚಯ ಮತ್ತು ನವೀಕರಿಸಲು ಇ-ಪ್ರಗತಿ ತರಬೇತಿ ಕಾರ್ಯಕ್ರಮವಾಗಿದೆ. ಆರು ವಾರಗಳ ತರಬೇತಿಯನ್ನು ಆಂಧ್ರ ಸರಕಾರದ ಎಲ್ಲಾ 32 ವಿಭಾಗಗಳಿಗೆ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಬಿಎಸ್), ಹೈದರಾಬಾದಿನಲ್ಲಿ ನಡೆಸಲಾಗುತ್ತದೆ.

Question 2

2. ಜಂಟಿ ಮಿಲಿಟರಿ ವ್ಯಾಯಾಮ "DRUZBA 2017" ಯಾವ ದೇಶಗಳ ನಡುವೆ ಆರಂಭವಾಗಿದೆ?

A
ಪಾಕಿಸ್ತಾನ ಮತ್ತು ಚೀನಾ
B
ಚೀನಾ ಮತ್ತು ನೇಪಾಳ
C
ಪಾಕಿಸ್ತಾನ ಮತ್ತು ಭಾರತ
D
ಪಾಕಿಸ್ತಾನ ಮತ್ತು ರಷ್ಯಾ
Question 2 Explanation: 
ಪಾಕಿಸ್ತಾನ ಮತ್ತು ರಷ್ಯಾ

ಜಂಟಿ ಮಿಲಿಟರಿ ವ್ಯಾಯಾಮ "DRUZBA 2017" ಪಾಕಿಸ್ತಾನ ವಿಶೇಷ ಪಡೆ ಮತ್ತು ರಷ್ಯಾದ ಸೇನೆ ನಡುವೆ ಸೆಪ್ಟೆಂಬರ್ 25, 2017 ರಷ್ಯಾದ ಮಿನರಲ್ ವೇಡಿನಲ್ಲಿ ಪ್ರಾರಂಭವಾಗಿದೆ. ಜಂಟಿ ಭಯೋತ್ಪಾದನಾ ಕಾರ್ಯಾಚರಣೆಗಳು, ಸೆರೆಯಾಳು ಕಾರ್ಯಾಚರಣೆ ಅಭ್ಯಾಸ ಮಾಡಲಾಗುವುದು. ಮೊದಲನೆ ಜಂಟಿ ಸೇನಾ ಕಾರ್ಯಾಚರಣೆ ಅಕ್ಟೋಬರ್ 2016 ರಲ್ಲಿ

Question 3

3. “The Shershah of Kargil: Captain Vikram Batra” ಪುಸ್ತಕದ ಲೇಖಕರು _______-?

A
ದೀಪಕ್ ಸುರಾನಾ
B
ಮಾಧವನ್
C
ರಮಣ್ ಮುಖರ್ಜಿ
D
ವಿ ಕೆ ಸಿಂಗ್
Question 3 Explanation: 
ದೀಪಕ್ ಸುರಾನಾ

“The Shershah of Kargil: Captain Vikram Batra” ಎಂಬ ಪುಸ್ತಕವನ್ನು ದೀಪಕ್ ಸುರನಾ ಬರೆದಿದ್ದಾರೆ. ಇದು ಕಾರ್ಗಿಲ್ ಯುದ್ಧದ ನಾಯಕ ಲೇಟ್ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನಚರಿತ್ರೆಯಾಗಿದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಿಗೆ ಪರಮ ವೀರ ಚಕ್ರವನ್ನು ಮರಣೋತ್ತರವಾಗಿ ನೀಡಲಾಗಿದೆ.

Question 4

4. ಹೊಸದಾಗಿ ರಚಿಸಲಾಗಿರುವ ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಸಮಿತಿ (PMEAC)ಯ ಮುಖ್ಯಸ್ಥ ಯಾರು?

A
ಮಣಿಕಾಂತ್ ಶರ್ಮಾ
B
ಸುಶೀಲ್ ಕಾಂತ್
C
ಬಿಬೆಕ್ ದೆಬ್ರಾಯ್
D
ಯಶ್ವಂತ್ ಸಿನ್ಹಾ
Question 4 Explanation: 
ಬಿಬೆಕ್ ದೆಬ್ರಾಯ್

ಪ್ರಧಾನಿ ನರೇಂದ್ರ ಮೋದಿ ರವರು ಇತ್ತೀಚೆಗೆ ಪ್ರಧಾನ ಮಂತ್ರಿ (ಪಿಎಂಇಎಸಿ) ಗೆ ನೀತಿ ಆಯೋಗದ ಸದಸ್ಯ ಬಿಬೆಕ್ ದೆಬ್ರಾಯ್ ಅಧ್ಯಕ್ಷತೆ ವಹಿಸಿರುವ ಆರ್ಥಿಕ ಸಲಹಾ ಮಂಡಳಿಯನ್ನು ರಚಿಸಿದ್ದಾರೆ. 5 ಸದಸ್ಯರ ಆರ್ಥಿಕ ಸಲಹಾ ಮಂಡಳಿಯು ಆರ್ಥಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಪರಿಹರಿಸಲಿದೆ. ದೆಬ್ರಾಯೊ ಜೊತೆಗೆ ಅರ್ಥಶಾಸ್ತ್ರಜ್ಞರಾದ ಸುರಿತ್ ಭಲ್ಲಾ, ರತಿನ್ ರಾಯ್ ಮತ್ತು ಅಶಿಮಾ ಗೋಯಲ್ ರವರು ಸಮಿತಿಯ ಅರೆಕಾಲಿಕ ಸದಸ್ಯರಾಗಿ ಇರಲಿದ್ದಾರೆ.

Question 5

5. ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ಯಾವ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ?

A
Pencil
B
Shiksha
C
Childcare
D
Sriraksha
Question 5 Explanation: 
Pencil

ಕೇಂದ್ರ ಗೃಹ ಸಚಿವರಾd ರಾಜನಾಥ್ ಸಿಂಗ್ ರವರು ನವದೆಹಲಿಯಲ್ಲಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು 'ಪೆನ್ಸಿಲ್' ಎಂಬ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ. PENCIL ಎಂದರೆ Platform for Effective Enforcement for No Child Labour, ಇದನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ (MoLE) ಅಭಿವೃದ್ಧಿಪಡಿಸಿದೆ. ಬಾಲಕಾರ್ಮಿಕರಿಗಾಗಿ ಇದು ವಿದ್ಯುನ್ಮಾನ ವೇದಿಕೆಯಾಗಿದೆ.

Question 6

6. ಭಾರತದ ಚೊಚ್ಚಲ “ಇಂಡಿಯಾ ಮೊಬೈಲ್ ಕಾಂಗ್ರೆಸ್ 2017” ಆತಿಥ್ಯ ವಹಿಸಲಿರುವ ನಗರ ಯಾವುದು?

A
ಹೈದ್ರಾಬಾದ್
B
ನವ ದೆಹಲಿ
C
ಪುಣೆ
D
ಬೆಂಗಳೂರು
Question 6 Explanation: 
ನವ ದೆಹಲಿ

ಮೊಟ್ಟ ಮೊದಲ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) ಸೆಪ್ಟೆಂಬರ್ 27 ರಿಂದ 29, 2017 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ. ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಸಚಿವಾಲಯದ ಬೆಂಬಲದೊಂದಿಗೆ ಈ ಕಾಂಗ್ರೆಸ್ ಅನ್ನು ಆಯೋಜಿಸಲಾಗುತ್ತಿದೆ

Question 7

7. ಈ ಕೆಳಗಿನ ಯಾವ ಭಾರತೀಯ ವ್ಯಕ್ತಿಗೆ “2017 ವಾನ್ ಹಿಪ್ಪೆಲ್” ಪ್ರಶಸ್ತಿ ಲಭಿಸಿದೆ?

A
ಅಜೀಂ ಪ್ರೇಮ್ ಜಿ
B
ಸಿ ಎನ್ ಆರ್ ರಾವ್
C
ನಾರಾಯಣ ಮೂರ್ತಿ
D
ಕಿರಣ್ ಮಜುಂದಾರ್ ಷಾ
Question 7 Explanation: 
ಸಿ ಎನ್ ಆರ್ ರಾವ್

ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್ ಹಿಪ್ಪಲ್’ ಪ್ರಶಸ್ತಿ ಲಭಿಸಿದೆ. ಅಮೆರಿಕದ ಮೆಟಿರಿಯಲ್ ರಿಸರ್ಚ್ ಸೊಸೈಟಿಯು ಮೆಟಿರಿಯಲ್ ರಿಸರ್ಚ್ (ವಸ್ತುಗಳ ಸಂಶೋಧನೆ) ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಈ ಪ್ರಶಸ್ತಿ ನೀಡುತ್ತದೆ.ಈ ಪ್ರಶಸ್ತಿ ಪಡೆಯುತ್ತಿರುವ ಏಷ್ಯಾ ಖಂಡದ ಮೊದಲ ವಿಜ್ಞಾನಿ ಎನ್ನುವ ಕೀರ್ತಿಗೆ ರಾವ್ ಅವರು ಭಾಜನರಾಗಿದ್ದಾರೆ.

Question 8

8. ಮಾನವೀಯ ಸಹಾಯ ಮತ್ತು ವಿಪತ್ತು ನಿರ್ವಹಣಾ ವ್ಯಾಯಾಮ “ಪ್ರಲೇ ಸಹಾಯಂ” ಯಾವ ರಾಜ್ಯದಲ್ಲಿ ನಡೆಯಿತು?

A
ಕೇರಳ
B
ಪಂಜಾಬ್
C
ತೆಲಂಗಣ
D
ತಮಿಳುನಾಡು
Question 8 Explanation: 
ತೆಲಂಗಣ

ಹೈದರಾಬಾದ್ ಮತ್ತು ಸಿಕಂದರಾಬಾದಿನ ನಗರಗಳಲ್ಲಿ 2 ದಿನಗಳ ಮಾನವೀಯ ಸಹಾಯ ಮತ್ತು ವಿಪತ್ತು ನಿರ್ವಹಣಾ ವ್ಯಾಯಾಮ “ಪ್ರಲೇ ಸಹಾಯಂ” ನಡೆಯಿತು. ಮಾನವ ನಿರ್ಮಿತ ಮತ್ತು ನೈಸರ್ಗಿಕ ವಾತಾವರಣ ಬದಲಾವಣೆ ಮತ್ತು ಪ್ರವಾಹಗಳು ಸೇರಿದಂತೆ ನಗರ ದುರಂತಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವುದು ವ್ಯಾಯಾಮದ ಉದ್ದೇಶವಾಗಿದೆ.

Question 9

9. ‘ದೇಶದಲ್ಲಿ ಪ್ರತಿ ಕುಟುಂಬಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರ ಯಾವ ಯೋಜನೆ ಜಾರಿಗೆ ತಂದಿದೆ?

A
ಸುರಕ್ಷಾ
B
ಸೌಭಾಗ್ಯ
C
ನಿತ್ಯಜ್ಯೋತಿ
D
ಬೆಳಕು
Question 9 Explanation: 
ಸೌಭಾಗ್ಯ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ರವರು “ಸಹಜ್ ಬಿಜ್ಲಿ ಹರ್ ಘರ್ ಯೋಜಾನ 'ಸೌಭಾಗ್ಯ' ಯೋಜನೆಗೆ ಚಾಲನೆ ನೀಡಿದರು. ಡಿಸೆಂಬರ್ 2017 ವೇಳೆಗೆ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡುವುದು ಇದರ ಉದ್ದೇಶ.

Question 10

10. ಬೆಲ್ಜಿಯನ್ ಜೂನಿಯರ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ U-19 ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?

A
ಅರ್ಪಿತ ರೆಡ್ಡಿ
B
ಮಾನ್ವಿ ಸಿಂಗ್
C
ವೈಷ್ಣವಿ ರೆಡ್ಡಿ
D
ಶ್ರಾನ್ವಿ ರಾಜ್
Question 10 Explanation: 
ವೈಷ್ಣವಿ ರೆಡ್ಡಿ
There are 10 questions to complete.

[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್25262017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

8 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,25,26,2017”

  1. Arunkumargowda

    Most helpful thank u karnadu..com

  2. SHILPA BABU

    Nice questions and answers to know current events. …..thanks

  3. Ppp

    Really helpful
    Please upload septemder masika vidyamanagalu and quiz

Leave a Comment

This site uses Akismet to reduce spam. Learn how your comment data is processed.