ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,19,20,21,2017

Question 1

1. 2017 ಫಾರ್ಮುಲಾ ಒನ್ ಸಿಂಗಾಪುರ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಮೆಂಟ್ ಗೆದ್ದವರು ______?

A
ಲೇವಿಸ್ ಹ್ಯಾಮಿಲ್ಟನ್
B
ಡೆನಿಯಲ್ ರಿಕ್ಕಿಯಾರ್ಡೊ
C
ಸೆಬಾಸ್ಟಿಯನ್ ವೆಟಲ್
D
ಸೆರ್ಜಿಯೊ ಪೆರ್ಗಿ
Question 1 Explanation: 
ಲೇವಿಸ್ ಹ್ಯಾಮಿಲ್ಟನ್
Question 2

2. ಇತ್ತೀಚೆಗೆ “ಮರ್ಸಿಡಿಸ್ ಅರೌಝ್” ರವರು ಯಾವ ದೇಶದ ನೂತನ ಪ್ರಧಾನಿ ಆಗಿ ಆಯ್ಕೆಯಾಗಿದ್ದಾರೆ?

A
ಪೆರು
B
ಮೆಕ್ಸಿಕೊ
C
ನಾರ್ವೆ
D
ಘಾನ
Question 2 Explanation: 
ಪೆರು

ಪೆರುವಿನ ಇಬ್ಬರು ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದ ಮರ್ಸಿಡಿಸ್ ಅರೌಝ್ ರವರು ಪೆರುವಿನ ಹೊಸ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.

Question 3

3. ಈ ಕೆಳಗಿನ ಯಾರು “ಸಶಸ್ತ್ರ ಸೀಮಾ ಬಲ”ದ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ?

A
ಬ್ರಹ್ಮೇಂದ್ರ ವರ್ಮ
B
ರಜನಿ ಕಾಂತ್ ಮಿಶ್ರಾ
C
ಭಗವಾನ್ ದಾಸ್ ಗುಪ್ತ
D
ಅಶುತೋಶ್ ಮುಖರ್ಜಿ
Question 3 Explanation: 
ರಜನಿ ಕಾಂತ್ ಮಿಶ್ರಾ

ರಜನಿ ಕಾಂತ್ ಮಿಶ್ರಾ, 1984 ಬ್ಯಾಚ್ ಉತ್ತರ ಪ್ರದೇಶ ಕೇಡರ್ ಐಪಿಎಸ್ ಅಧಿಕಾರಿ ರವರು ಸಶಸ್ತ್ರ ಸೀಮಾ ಬಲದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅಚ್ಚಾನಾ ರಾಮಸುಂದರಾಮ್ ರವರು ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದು, ಆ ಸ್ಥಾನವನ್ನು ಮಿಶ್ರಾ ತುಂಬಲಿದ್ದಾರೆ.

Question 4

4. ಯಾವ ರಾಜ್ಯ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ಮನೆಗಳನ್ನು ಒದಗಿಸಲು “ಶಹೀದ್ ಗ್ರಾಮ ವಿಕಾಸ ಯೋಜನೆ” ಪ್ರಾರಂಭಿಸಿದೆ?

A
ಜಾರ್ಖಂಡ್
B
ಉತ್ತರ ಪ್ರದೇಶ
C
ಹರಿಯಾಣ
D
ಕೇರಳ
Question 4 Explanation: 
ಜಾರ್ಖಂಡ್

ಜಾರ್ಖಂಡ್ ಸರ್ಕಾರ ಖುಂಟಿ ಜಿಲ್ಲೆಯ ಉಲಿಯಾತುದಲ್ಲಿ “ಶಹೀದ್ ಗ್ರಾಮ ವಿಕಾಸ ಯೋಜನೆ”ಗೆ ಚಾಲನೆ ನೀಡಿದೆ. ಉಲಿಯಾತು ಜಾರ್ಖಂಡಿನ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಜನ್ಮಸ್ಥಳ. ಈ ಯೋಜನೆಯ ಉದ್ದೇಶವು ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಹಳ್ಳಿಗಳನ್ನು ಅಭಿವೃದ್ಧಿಪಡಿಸುವುದು. ಈ ಯೋಜನೆಯಡಿ, ಅನೇಕ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಅವರ ಆವಾಸಸ್ಥಾನಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಿದೆ.

Question 5

5. ರಾಷ್ಟ್ರೀಯ ತನಿಖಾ ದಳ (National Investigation Agency)ದ ನೂತನ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?

A
ಜೆ ಎಸ್ ಖುರೇಷಿ
B
ಪ್ರೇಮ್ ಚರಣ್
C
ವೈ ಸಿ ಮೋದಿ
D
ರಮೇಶ್ ಥಾಪರ್
Question 5 Explanation: 
ವೈ ಸಿ ಮೋದಿ

ಹಿರಿಯ ಐಪಿಎಸ್‌ ಅಧಿಕಾರಿ ವೈ.ಸಿ.ಮೋದಿ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಸಂಪುಟದ ನೇಮಕ ಸಮಿತಿಯು ವೈ.ಸಿ.ಮೋದಿ ಅವರನ್ನು ಎನ್‌ಐಎ ಪ್ರಧಾನ ನಿರ್ದೇಶಕರಾಗಿ ನೇಮಕ ಮಾಡಲು ಒಪ್ಪಿಗೆ ಸೂಚಿಸಿದೆ. ಮೋದಿ ಅವರು 2022ರ ಮೇ 31ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ.

Question 6

6. ಪತ್ನಿಯರಿಗೆ ಕಿರುಕುಳ ನೀಡುವ ಅಥವಾ ಬಿಟ್ಟುಬಿಡುವ NRI ಗಳಿಗೆ ಪಾಸ್ಪೋರ್ಟ್ ರದ್ದುಗೊಳಿಸಬೇಕೆಂದು ಯಾವ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ?

A
ಹರ್ಷವರ್ಧನ್ ಸಿಂಗ್ ಸಮಿತಿ
B
ಅರವಿಂದ್ ಕುಮಾರ್ ಗೋಯೆಲ್ ಸಮಿತಿ
C
ಜಯಕುಮಾರ್ ರಾಣೆ ಸಮಿತಿ
D
ಸಂತೋಷ್ ಮುಖರ್ಜಿ ಸಮಿತಿ
Question 6 Explanation: 
ಅರವಿಂದ್ ಕುಮಾರ್ ಗೋಯೆಲ್ ಸಮಿತಿ

ನಿವೃತ್ತ ನ್ಯಾಯಾಧೀಶ ಅರವಿಂದ್ ಕುಮಾರ್ ಗೋಯೆಲ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು, ಹೆಂಡತಿಯತಿಗೆ ಕಿರುಕುಳ ನೀಡುವ ಅಥವಾ ದೂರ ಮಾಡುವ NRI ಗಳ ಪಾಸ್ಪೋರ್ಟ್ ಅನ್ನು ಜಪ್ತಿ ಮಾಡುವ ಅಥವಾ ರದ್ದುಗೊಳಿಸಬೇಕೆಂದು ಶಿಫಾರಸ್ಸು ಮಾಡಿದೆ. ಭಾರತವು ಇತರ ದೇಶಗಳೊಂದಿಗೆ ಮಾಡಿಕೊಳ್ಳುವ ಹಸ್ತಾಂತರ ಒಪ್ಪಂದಗಳ ವ್ಯಾಪ್ತಿಯಲ್ಲಿ ಗೃಹ ಹಿಂಸಾಚಾರದ ಪ್ರಕರಣಗಳನ್ನು ಸೇರಿಸಬೇಕೆಂದು ಸಮಿತಿಯು ಶಿಫಾರಸು ಮಾಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮೇ 2017 ರಲ್ಲಿ ಈ ಸಮಿತಿಯನ್ನು ರಚಿಸಿತ್ತು.

Question 7

7. ಕುಟುಂಬ ಕಲ್ಯಾಣ ಸಮಿತಿಗಳನ್ನು ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?

A
ಅಸ್ಸಾಂ
B
ತ್ರಿಪುರ
C
ಜಾರ್ಖಂಡ
D
ಹಿಮಾಚಲ ಪ್ರದೇಶ
Question 7 Explanation: 
ತ್ರಿಪುರ

ಗಂಡಂದಿರು ಮತ್ತು ಸಂಬಂಧಿಕರ ವಿರುದ್ಧ ದಾಖಲಿಸಲಾದ ಮಹಿಳೆಯರ ದೂರುಗಳನ್ನು ಪರೀಕ್ಷಿಸಲು ಮತ್ತು ಸಮಾಲೋಚನೆಯ ಮೂಲಕ ಸೌಹಾರ್ದ ಪರಿಹಾರವನ್ನು ಕಂಡುಕೊಳ್ಳಲು ಕುಟುಂಬ ಕಲ್ಯಾಣ ಜಿಲ್ಲಾ ಸಮಿತಿಗಳನ್ನು ತ್ರಿಪುರ ಸರ್ಕಾರ ಸ್ಥಾಪಿಸಿದ್ದು, ಈ ಮೂಲಕ ಕುಟುಂಬ ಕಲ್ಯಾಣ ಸಮಿತಿ ಸ್ಥಾಪಿಸಿದ ಭಾರತದ ಮೊದಲ ರಾಜ್ಯ ತ್ರಿಪುರವಾಗಿದೆ. ಕುಟುಂಬ ಕಲ್ಯಾಣ ಜಿಲ್ಲೆಯ ಸಮಿತಿಗಳನ್ನು ಸ್ಥಾಪಿಸಿರುವ ದೇಶದ 24 ಹೈಕೋರ್ಟ್ಗಳಲ್ಲಿ ಮೊದಲ ಹೈಕೋರ್ಟ್ ತ್ರಿಪುರಾ ಹೈಕೋರ್ಟ್ ಆಗಿದೆ.

Question 8

8. ಈ ಕೆಳಗಿನ ಯಾರಿಗೆ 2017 ಅಕ್ವಿನೇನಿ ನಾಗೇಶ್ವರ ರಾವ್ (ಎಎನ್ಆರ್) ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ?

A
ಡಾ. ಶಿವರಾಜ್ ಕುಮಾರ್
B
ಎಸ್ ಎಸ್ ರಾಜಮೌಳಿ
C
ಕಮಲ್ ಹಾಸನ್
D
ರಜನೀಕಾಂತ್
Question 8 Explanation: 
ಎಸ್ ಎಸ್ ರಾಜಮೌಳಿ

ತೆಲುಗು ಚಲನಚಿತ್ರೋದ್ಯಮಕ್ಕೆ ನೀಡಿದ ಪ್ರಶಂಸನೀಯ ಕೊಡುಗೆಗಾಗಿ ಚಿತ್ರನಿರ್ದೇಶಕ ಎಸ್.ಎಸ್. ರಾಜಮೌಳಿ ಅವರಿಗೆ 2017 ಅಕ್ವಿನೇನಿ ನಾಗೇಶ್ವರ ರಾವ್ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ.

Question 9

9. ಜಂಟಿ ಮಿಲಿಟರಿ ಅಭ್ಯಾಸ "ಐರನ್ ಯೂನಿಯನ್ 5 (Iron Union 5)" ಯಾವ ಎರಡು ದೇಶಗಳ ನಡುವೆ ನಡೆಯಲಿದೆ?

A
ರಷ್ಯಾ ಮತ್ತು ಪಾಕಿಸ್ತಾನ
B
ಅಮೆರಿಕ ಮತ್ತು ಯುಎಇ
C
ಭಾರತ ಮತ್ತು ಬಾಂಗ್ಲದೇಶ
D
ಅಮೆರಿಕ ಮತ್ತು ಫ್ರಾನ್ಸ್
Question 9 Explanation: 
ಅಮೆರಿಕ ಮತ್ತು ಯುಎಇ

"ಐರನ್ ಯೂನಿಯನ್ 5" ಜಂಟಿ ಮಿಲಿಟರಿ ಅಭ್ಯಾಸ ಅಮೆರಿಕ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೆಪ್ಟೆಂಬರ್ 23, 2017 ರಂದು ಅಬುಧಾಬಿದಲ್ಲಿ ಪ್ರಾರಂಭವಾಗಲಿದೆ. ಯುಎಇಯ ಸಶಸ್ತ್ರ ಪಡೆಗಳ ಸನ್ನದ್ಧತೆಯನ್ನು ನವೀಕರಿಸುವುದು ಮತ್ತು ಹೆಚ್ಚಿಸುವುದು ಮತ್ತು ಜಂಟಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಎರಡೂ ಸೇನೆಗಳು ತಮ್ಮ ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ಅನುವು ಮಾಡಿಕೊಡುವುದು ಈ ವ್ಯಾಯಾಮದ ಉದ್ದೇಶವಾಗಿದೆ.

Question 10

10. ಯುಪಿಐ (UPI) ಅನ್ನು ತನ್ನ ಡಿಜಿಟಲ್ ಪ್ಲಾಟ್ ಫಾರ್ಮ್ ಗೆ ಏಕೀಕರಿಸಿದ ಭಾರತದ ಮೊದಲ ಪೇಮೆಂಟ್ ಬ್ಯಾಂಕ್ ಯಾವುದು?

A
ಏರ್ಟೆಲ್ ಪೇಮೆಂಟ್ ಬ್ಯಾಂಕ್
B
ಪೇಟಿಎಮ್ ಪೇಮೆಂಟ್ ಬ್ಯಾಂಕ್
C
ಪೋಸ್ಟಲ್ ಪೇಮೆಂಟ್ ಬ್ಯಾಂಕ್
D
ಬಂಧನ್ ಪೇಮೆಂಟ್ ಬ್ಯಾಂಕ್
Question 10 Explanation: 
ಏರ್ಟೆಲ್ ಪೇಮೆಂಟ್ ಬ್ಯಾಂಕ್

ಏರ್ಟೆಲ್ ಪೇಮೆಂಟ್ ಬ್ಯಾಂಕ್ (ಎಪಿಬಿ) ಯುಪಿಐ (UPI) ಅನ್ನು ತನ್ನ ಡಿಜಿಟಲ್ ಪ್ಲಾಟ್ ಫಾರ್ಮ್ ಗೆ ಏಕೀಕರಿಸಿದ ಭಾರತದ ಮೊದಲ ಪಾವತಿ ಬ್ಯಾಂಕ್ ಆಗಿದೆ. ಇದು ಆನ್ಲೈನ್ / ಆಫ್ಲೈನ್ ವ್ಯಾಪಾರಿಗಳಿಗೆ ಸುರಕ್ಷಿತ ಡಿಜಿಟಲ್ ಪಾವತಿಗಳನ್ನು ಮಾಡಲು ಮತ್ತು ಭಾರತದಲ್ಲಿನ ಯಾವುದೇ ಬ್ಯಾಂಕ್ ಖಾತೆಗೆ ಸುರಕ್ಷಿತವಾಗಿ ತ್ವರಿತ ಹಣ ವರ್ಗಾವಣೆ ಮಾಡಲು ಗ್ರಾಹಕರಿಗೆ ಅನುಕೂಲ ಒದಗಿಸಲಿದೆ.

There are 10 questions to complete.

[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್1920212017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,19,20,21,2017”

  1. Shiva

    Very nice I’m so happy

Leave a Comment

This site uses Akismet to reduce spam. Learn how your comment data is processed.