ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,16,17,18,2017

Question 1

1. 2017 ರಾಷ್ಟ್ರೀಯ ಹಿಂದಿ ದಿವಸವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಸೆಪ್ಟೆಂಬರ್ 12
B
ಸೆಪ್ಟೆಂಬರ್ 14
C
ಸೆಪ್ಟೆಂಬರ್ 15
D
ಸೆಪ್ಟೆಂಬರ್ 16
Question 1 Explanation: 
ಸೆಪ್ಟೆಂಬರ್ 14
Question 2

2. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು “ಸ್ವಚ್ಚತಾ ಹೈ ಸೇವಾ” ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಯಾವ ನಗರದಲ್ಲಿ ಚಾಲನೆ ನೀಡಿದರು?

A
ಕಾನ್ಪುರ
B
ವಾರಣಾಸಿ
C
ಬೆಂಗಳೂರು
D
ಅಹ್ಮದಾಬಾದ್
Question 2 Explanation: 
ಕಾನ್ಪುರ

ಉತ್ತರಪ್ರದೇಶದ ಕಾನ್ಪುರದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ರಾಷ್ಟ್ರವ್ಯಾಪಿ “ಸ್ವಚ್ಚತಾ ಹೈ ಸೇವಾ” ಅಭಿಯಾನಕ್ಕೆ ಸೆಪ್ಟೆಂಬರ್ 15 ರಂದು ಚಾಲನೆ ನೀಡಿದರು. ಹದಿನೈದು ದಿನಗಳ ಪ್ರಚಾರ ಕಾರ್ಯಕ್ರಮ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿವಸ ಮುಕ್ತಾಯಗೊಳ್ಳಲಿದೆ. ಜನರನ್ನು ಒಟ್ಟುಗೂಡಿಸಿ ಸ್ವಚ್ಚ ಭಾರತಕ್ಕಾಗಿ ಮಹಾತ್ಮ ಗಾಂಧಿಯವರ ಕನಸಿಗೆ ಕೊಡುಗೆ ನೀಡಲು ನೈರ್ಮಲ್ಯಕ್ಕಾಗಿ ಸಾರ್ವಜನಿಕ ಚಳವಳಿಯನ್ನು ಬಲಪಡಿಸುವುದು ಇದರ ಉದ್ದೇಶ.

Question 3

3. ಭಾರತದ ಮೊದಲ ಸುಧಾರಿತ ಹೋಮಿಯೋಪತಿ ವೈರಾಲಜಿ ಪ್ರಯೋಗಾಲಯವು ಯಾವ ನಗರದಲ್ಲಿದೆ ಸ್ಥಾಪನೆಗೊಂಡಿದೆ?

A
ಬೆಂಗಳೂರು
B
ಕೊಲ್ಕತ್ತ
C
ಹೈದ್ರಾಬಾದ್
D
ಮುಂಬೈ
Question 3 Explanation: 
ಕೊಲ್ಕತ್ತ

ಆಯುಶ್ ರಾಜ್ಯ ಕೇಂದ್ರ ಸಚಿವ ಶ್ರೀಪಾದ್ ಯೆಸೊ ನಾಯಕ್ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಡಾ. ಅಂಜಲಿ ಚಟರ್ಜಿ ರೀಜನಲ್ ರಿಸರ್ಚ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಭಾರತದ ಮೊದಲ ಸುಧಾರಿತ ವೈರಾಲಜಿ ಪ್ರಯೋಗಾಲಯವನ್ನು ಉದ್ಘಾಟಿಸಿದರು. ವೈರಲ್ ಕಾಯಿಲೆಗಳಾದ ಜಪಾನೀಸ್ ಎನ್ಸೆಫಾಲಿಟಿಸ್, ಡೆಂಗ್ಯೂ, ಚಿಕುನ್ಗುನ್ಯಾ ಮತ್ತು ಎಚ್ 1 ಎನ್ 1 (ಹಂದಿ ಜ್ವರ) ಮುಂತಾದ ರೋಗಗಳಿಗೆ ಮೂಲಭೂತ ಸಂಶೋಧನೆ ನಡೆಸಲು ರೂ8 ಕೋಟಿ ವೆಚ್ಚದಲ್ಲಿ ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.

Question 4

4. 2017 ಜಾಗತಿಕ ಮಾನವ ಬಂಡವಾಳ ಸೂಚ್ಯಂಕ (Global Human Capital Index)ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
67
B
98
C
103
D
110
Question 4 Explanation: 
103

2017 ಜಾಗತಿಕ ಮಾನವ ಬಂಡವಾಳ ಸೂಚ್ಯಂಕದಲ್ಲಿ 130 ದೇಶಗಳಲ್ಲಿ ಭಾರತ 103ನೇ ಸ್ಥಾನ ಪಡೆದಿದೆ. ಜಿನೀವಾ ಮೂಲದ ವರ್ಲ್ಡ್ ಎಕನಾಮಿಕ್ ಫೋರಮ್ (WEF) ಈ ಸೂಚ್ಯಂಕವನ್ನು ಹೊರತಂದಿದೆ. ಈ ಪಟ್ಟಿಯಲ್ಲಿ ನಾರ್ವೆ, ಫಿನ್ಲ್ಯಾಂಡ್, ಸ್ವಿಜರ್ಲ್ಯಾಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಅಗ್ರಸ್ಥಾನದಲ್ಲಿದೆ.

Question 5

5. ಭಾರತದ ಮೊದಲ ಲಿಥಿಯಂ-ಅಯಾನ್ ಬ್ಯಾಟರಿ ತಯಾರಿಕ ಘಟಕವು ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?

A
ಪಶ್ಚಿಮ ಬಂಗಾಳ
B
ಗುಜರಾತ್
C
ಹರಿಯಾಣ
D
ಉತ್ತರ ಪ್ರದೇಶ
Question 5 Explanation: 
ಗುಜರಾತ್

ಭಾರತದ ಮೊದಲ ಲಿಥಿಯಂ ಐಯಾನ್ ಬ್ಯಾಟರಿ ತಯಾರಿಕೆ ಸೌಲಭ್ಯವನ್ನು ಗುಜರಾತಿನ ಹನ್ಸಾಲ್ಪುರದಲ್ಲಿ ಜಪಾನಿನ ಆಟೋಮೊಬೈಲ್ ದೈತ್ಯ ಸುಜುಕಿ ಮೋಟಾರ್ ಕಾರ್ಪೊರೇಷನ್ (ಎಸ್ಎಂಸಿ) ಸ್ಥಾಪಿಸಲಿದೆ. ಈ ಸೌಲಭ್ಯವನ್ನು ಸುಝುಕಿ, ತೋಷಿಬಾ ಕಾರ್ಪೋರೇಶನ್ ಮತ್ತು ಡೆನ್ಸೊ ಜಂಟಿಯಾಗಿ $ 180 ದಶಲಕ್ಷದಷ್ಟು ಹೂಡಿಕೆಯೊಂದಿಗೆ ಸ್ಥಾಪಿಸಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜಪಾನಿನ ಪ್ರಧಾನಿ ಶಿಂಝೊ ಅಬೆ ಉಪಸ್ಥಿತಿಯಲ್ಲಿ ಮಹಾತ್ಮ ಮಂದಿರದಲ್ಲಿ 12ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಸುಝುಕಿ ಈ ಪ್ರಕಟಣೆಯನ್ನು ಮಾಡಿದೆ.

Question 6

6. ಬ್ರಿಟನ್ನ ಹೌಸ್ ಆಫ್ ಕಾಮನ್ಸ್ನಲ್ಲಿ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ನಟ ಯಾರು?

A
ಸಲ್ಮಾನ್ ಖಾನ್
B
ಅಮಿತಾಬ್ ಬಚ್ಚನ್
C
ಅಕ್ಷಯ್ ಕುಮಾರ್
D
ಶಾರೂಖ್ ಖಾನ್
Question 6 Explanation: 
ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ರವರಿಗೆ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಯನ್ನು ಸೆಪ್ಟೆಂಬರ್ 15 ರಂದು ಬ್ರಿಟನ್ನ ಹೌಸ್ ಆಫ್ ಕಾಮನ್ಸ್ನಲ್ಲಿ ನೀಡಲಾಯಿತು.

Question 7

7. “Unstoppable: My Life So Far” ಪುಸ್ತಕ ಯಾವ ಕ್ರೀಡಾಪುಟ ಬರೆದಿದ್ದಾರೆ?

A
ಮರಿಯಾ ಶರಾಪೋವ
B
ಚೇತೇಶ್ವರ ಪೂಜಾರ್
C
ಸೆರೆನಾ ವಿಲಿಯಮ್ಸ್
D
ಸೌರವ್ ಗಂಗೂಲಿ
Question 7 Explanation: 
ಮರಿಯಾ ಶರಾಪೋವ

ಟೆನ್ನಿಸ್ ತಾರೆ ಮರಿಯಾ ಶರಾಪೋವ ರವರು “Unstoppable: My Life So Far” ಪುಸ್ತಕವನ್ನು ಬರೆದಿದ್ದಾರೆ.

Question 8

8. ಅಂತಾರಾಷ್ಟ್ರೀಯ ಓಝೋನ್ ಸಂರಕ್ಷಣಾ ದಿನವನ್ನು _________ ರಂದು ಆಚರಿಸಲಾಗುತ್ತದೆ?

A
ಸೆಪ್ಟೆಂಬರ್ 14
B
ಸೆಪ್ಟೆಂಬರ್ 15
C
ಸೆಪ್ಟೆಂಬರ್ 16
D
ಸೆಪ್ಟೆಂಬರ್ 17
Question 8 Explanation: 
ಸೆಪ್ಟೆಂಬರ್ 16

ಓಝೋನ್ ಪದರವನ್ನು ಸಂರಕ್ಷಿಸುವ ಸಲುವಾಗಿ 1987 ರಲ್ಲಿ ಮಾಂಟ್ರಿಯಲ್ ಶಿಷ್ಟಚಾರಕ್ಕೆ ಸಹಿ ಮಾಡಿದ ದಿನಾಂಕವನ್ನು ಸ್ಮರಿಸಲು ಸೆಪ್ಟೆಂಬರ್ 16 ರಂದು ಅಂತಾರಾಷ್ಟ್ರೀಯ ಓಝೋನ್ ಪದರ ಸಂರಕ್ಷಣೆ ದಿನವನ್ನು ಆಚರಿಸಲಾಗುತ್ತದೆ. 2017 ರ ಥೀಮ್ ‘Caring for all life under the sun’.

Question 9

9. ಇತ್ತೀಚೆಗೆ ನಿಧನರಾದ ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್ ರವರು ಯಾವ ವರ್ಷ ನಡೆದ ಭಾರತ-ಪಾಕಿಸ್ತಾನ ಯುದ್ದದಲ್ಲಿ ಭಾರತದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು?

A
1961
B
1965
C
1966
D
1971
Question 9 Explanation: 
1965

ಭಾರತೀಯ ವಾಯುಪಡೆಯ ಮೊದಲ ಫೈವ್–ಸ್ಟಾರ್ ದರ್ಜೆ ಅಧಿಕಾರಿ ಅರ್ಜನ್ ಸಿಂಗ್ನಿಧನರಾದರು. ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಿಕೊಂಡ ಅರ್ಜನ್ ಸಿಂಗ್ ಅವರನ್ನು ಭಾರತೀಯ ವಾಯುಪಡೆಯ ಮೊದಲ ಮಾರ್ಷಲ್ ಎಂದೇ ಖ್ಯಾತರಾದವರು. 1965ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತದ ಗೆಲುವಿಗೆ ಅರ್ಜನ್ ಸಿಂಗ್ ಮಹತ್ವದ ಪಾತ್ರವಹಿಸಿದ್ದರು. 1964ರ ಆಗಸ್ಟ್ನಿಂದ 1969ರ ವರೆಗೂ ವಾಯುಪಡೆಯ ನೇತೃತ್ವ ವಹಿಸಿದ್ದರು. ಇವರು ಏರ್ ಚೀಫ್ ಮಾರ್ಷಲ್ ಸ್ಥಾನ(1966ರ ಜನವರಿ 16) ಪಡೆದ ಮೊದಲ ಭಾರತೀಯ ವಾಯುಪಡೆಯ ಮುಖ್ಯಸ್ಥ.

Question 10

10. 2017 ಕೊರಿಯಾ ಓಪನ್ ಸೀರಿಸ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?

A
ಪಿ ವಿ ಸಿಂಧು
B
ನೊಝೋಮಿ ಓಕುಹರಾ
C
ಸೈನಾ ನೆಹ್ವಾಲ್
D
ಪಿಗ್ಮಿ ಗೆಹ್ಲಟ್
Question 10 Explanation: 
ಪಿ ವಿ ಸಿಂಧು

ಪಿ.ವಿ.ಸಿಂಧು ಜಪಾನ್ ಎದುರಾಳಿ ನೊಝೋಮಿ ಓಕುಹರಾ ವಿರುದ್ಧ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 22-20, 11-21, 21-18 ಸೆಟ್ಗಳ ಅಂತರದಿಂದ ಜಯಗಳಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೊರಿಯಾ ಓಪನ್ ಸೂಪರ್ ಸಿರೀಸ್ ಗೆದ್ದ ಭಾರತದ ಏಕೈಕ ಮಹಿಳಾ ಕ್ರೀಡಾಪಟು ಎನ್ನುವ ಗೌರವಕ್ಕೆ ಪಿ.ವಿ.ಸಿಂಧು ಪಾತ್ರರಾಗಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್1617182017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,16,17,18,2017”

Leave a Comment

This site uses Akismet to reduce spam. Learn how your comment data is processed.