ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,30,31,2017

Question 1

1. ಯಾವ ದಿನದಂದು ಪರಮಾಣು ಪರೀಕ್ಷೆ ಅಂತಾರಾಷ್ಟ್ರೀಯ ವಿರೋಧಿ ದಿನವನ್ನು ಆಚರಿಸಲಾಗುತ್ತದೆ?

A
ಆಗಸ್ಟ್ 28
B
ಆಗಸ್ಟ್ 29
C
ಆಗಸ್ಟ್ 30
D
ಆಗಸ್ಟ್ 31
Question 1 Explanation: 
ಆಗಸ್ಟ್ 29

ಜಾಗತಿಕ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳ ಅಥವಾ ಯಾವುದೇ ಪರಮಾಣು ಸ್ಫೋಟಗಳ ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ಆಗಸ್ಟ್ 29 ರಂದು ಪರಮಾಣು ಪರೀಕ್ಷೆ ಅಂತಾರಾಷ್ಟ್ರೀಯ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವ. ಪರಮಾಣು ಪರೀಕ್ಷೆಯನ್ನು ಅಂತ್ಯಗೊಳಿಸಲು ಮತ್ತು ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ.

Question 2

2. ಈ ಕೆಳಗಿನ ಯಾರು ನಾಸಾ 2030 ರಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಮಂಗಳ ಯಾನಕ್ಕೆ ಆಯ್ಕೆಯಾದ 2 ನೇ ಭಾರತೀಯ ಮಹಿಳೆ ಮತ್ತು ಮೊದಲ ಸಿಖ್ ಮಹಿಳಾ ಎನಿಸಿದ್ದಾರೆ?

A
ಜಸ್ಪ್ರೀತ್ ಕೌರ್
B
ಹರ್ಪೀತ್ ಸಿಂಗ್
C
ಜಸ್ಲೀನ್ ಕೌರ್ ಜೋಸನ್
D
ರಮಣಿತೊ ಕೌರ್
Question 2 Explanation: 
ಜಸ್ಲೀನ್ ಕೌರ್ ಜೋಸನ್

ಕಲ್ಪಾನಾ ಚಾವ್ಲಾ ನಂತರ ಜಸ್ಲೀನ್ ಕೌರ್ ಜೋಸನ್ 2030 ರಲ್ಲಿ ನಾಸಾ ಕೈಗೊಳ್ಳಲಿರುವ ಮಂಗಳ ಗ್ರಹ ಯಾನಕ್ಕೆ ಆಯ್ಕೆಯಾದ 2 ನೇ ಭಾರತೀಯ ಮಹಿಳಾ ಮತ್ತು ಮೊದಲ ಸಿಖ್ ಮಹಿಳೆಯರಾಗಿದ್ದಾರೆ.

Question 3

3. ವಿಶ್ವದ ಮೊದಲ ಐಎಇಎ (IAEA) ಕಡಿಮೆ ಸಮೃದ್ಧ ಯುರೇನಿಯಂ (ಲೆಯು) ಬ್ಯಾಂಕ್ ಅನ್ನು ಯಾವ ದೇಶದಲ್ಲಿ ಸ್ಥಾಪಿಸಲಾಗಿದೆ?

A
ಕಝಾಕಸ್ತಾನ್
B
ಜಪಾನ್
C
ನಾರ್ವೆ
D
ಚೀನಾ
Question 3 Explanation: 
ಕಝಾಕಸ್ತಾನ್

ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (IAEA) ವಿಶ್ವದ ಮೊದಲ ಐಎಇಎ ಕಡಿಮೆ ಸಮೃದ್ಧ ಯುರೇನಿಯಂ (ಲೆಯು) ಬ್ಯಾಂಕನ್ನು ಕಝಾಕಸ್ತಾನದ ಉಲ್ಬಾ ಮೆಟಲರ್ಜಿಕಲ್ ಪ್ಲಾಂಟ್ (ಯುಎಂಪಿ) ನಲ್ಲಿ ಪ್ರಾರಂಭಿಸಿದೆ. ಈ ಬ್ಯಾಂಕ್ ಐಎಇಎ ಒಡೆತನದಲ್ಲಿ ಕಾರ್ಯ ನಿರ್ವಹಿಸಲಿದೆ.

Question 4

4. ಈ ಕೆಳಗಿನ ಯಾರು ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಆಗಿ ನೇಮಕಗೊಂಡಿದ್ದಾರೆ?

A
ಶಶಿಕಾಂತ್ ಶರ್ಮ
B
ರವೀಶ್ ಚಂದ್ರ
C
ರಾಜೀವ್ ಮೆಹರ್ಷಿ
D
ರಾಕೇಶ್ ಭಂಗ್ರ
Question 4 Explanation: 
ರಾಜೀವ್ ಮೆಹರ್ಷಿ

ಮಾಜಿ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಷಿ ರವರು ಭಾರತದ ಹೊಸ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕಗೊಂಡಿದ್ದಾರೆ. ಶಶಿಕಾಂತ್ ಶರ್ಮಾ ಅವರ ಅವಧಿ ಸೆಪ್ಟೆಂಬರ್ 30, 2017 ರಂದು ಪೂರ್ಣಗೊಳ್ಳಲಿದ್ದು, ಅವರ ಉತ್ತರಾಧಿಕಾರಿಯಾಗಿ ಮೆಹರ್ಷಿ ನೇಮಕಗೊಂಡಿದ್ದಾರೆ.

Question 5

5. ಈ ಮುಂದಿನ ಯಾರು ಕೇಂದ್ರ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ?

A
ರಾಜೀವ್ ಗೌಬಾ
B
ಎಸ್ ಕೆ ಪಟ್ನಾಯಕ್
C
ರಮೇಶ್ ಕುಲಕರ್ಣಿ
D
ಸುಚೀತ್ ನಾಯಕ್
Question 5 Explanation: 
ರಾಜೀವ್ ಗೌಬಾ

ರಾಜೀವ್ ಗೌಬಾ ನೂತನ ಗೃಹ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 1982 ರ ಜಾರ್ಖಂಡ್ ಕೇಡರ್ ನ ಐಎಎಸ್ ಅಧಿಕಾರಿಯಾಗಿರುವ ರಾಜೀವ್ ಗೌಬಾ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಗೃಹ ಇಲಾಖೆಯ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

Question 6

6. ಇತ್ತೀಚೆಗೆ “ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (SFB) ಲಿಮಿಟೆಡ್ ಆರ್ಬಿಐಯಿಂದ 'ಷೆಡ್ಯೂಲ್ ಬ್ಯಾಂಕ್' ಸ್ಥಾನಮಾನವನ್ನು ಪಡೆದುಕೊಂಡಿತ್ತು. ಈ ಬ್ಯಾಂಕಿನ ಕೇಂದ್ರ ಕಚೇರಿ ಎಲ್ಲಿದೆ?

A
ಬೆಂಗಳೂರು
B
ಚೆನ್ನೈ
C
ಹೈದ್ರಾಬಾದ್
D
ಮುಂಬೈ
Question 6 Explanation: 
ಬೆಂಗಳೂರು

ಉಜ್ಜೀವನ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಎಸ್ಎಫ್ಬಿ) ಲಿಮಿಟೆಡ್ ಅನ್ನು ರಿಸರ್ವ್ ಬ್ಯಾಂಕ್ (ಆರ್ಬಿಐ) ಆಕ್ಟ್-1934ರ ಎರಡನೇ ಷೆಡ್ಯೂಲ್ ನಲ್ಲಿ ಸೇರಿಸಲಾಗಿದೆ. ಪ್ರಸ್ತುತ ಉಜ್ಜೀವನ್ ಬ್ಯಾಂಕ್ ಎಂಟು ರಾಜ್ಯಗಳಲ್ಲಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 65 ಪೂರ್ಣ ಪ್ರಮಾಣದ ಶಾಖೆಗಳನ್ನು ಹೊಂದಿದೆ. ಉಜ್ಜೀವನ್ SFB ಕೇಂದ್ರ ಕಾರ್ಯಾಲಯವು ಬೆಂಗಳೂರಿನಲ್ಲಿದೆ.

Question 7

7. 10 ನೇ ಭಾರತ-ಐರೋಪ್ಯ ಒಕ್ಕೂಟ ಭಯೋತ್ಪಾದನಾ ವಿರೋಧಿ ಮಾತುಕತೆ ಯಾವ ದೇಶದಲ್ಲಿ ನಡೆಯಿತು?

A
ಭಾರತ
B
ಫ್ರಾನ್ಸ್
C
ಜರ್ಮನಿ
D
ಬ್ರೆಜಿಲ್
Question 7 Explanation: 
ಭಾರತ

10ನೇ ಭಾರತ-ಐರೋಪ್ಯ ಒಕ್ಕೂಟ ಭಯೋತ್ಪಾದನಾ ವಿರೋಧಿ ಮಾತುಕತೆ ಹೊಸದಿಲ್ಲಿಯಲ್ಲಿ ಆಗಸ್ಟ್ 10, 2017 ರಂದು ನಡೆಯಿತು. ಭಾರತೀಯ ನಿಯೋಗವನ್ನು ಭಾರತದ ವಿದೇಶಾಂಗ ಸಚಿವಾಲಯದಲ್ಲಿ ಭಯೋತ್ಪಾದನೆ ವಿರೋಧಿ ಜಂಟಿ ಕಾರ್ಯದರ್ಶಿ ಮಹಾವೀರ್ ಸಿಂಘ್ವಿ ನೇತೃತ್ವ ವಹಿಸಿದ್ದರು. ಐರೋಪ್ಯ ಒಕ್ಕೂಟದ ಪರವಾಗಿ ಪವೆಲ್ ಹೆರ್ಸಿನನ್ಸ್ಕಿ, ಭಾಗವಹಿಸಿದ್ದರು.

Question 8

8. ಈ ಮುಂದಿನ ಯಾರು ಭಾರತದ ನೂತನ ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ?

A
ರಮೇಶ್ ಕಠೋರ್
B
ಸುನೀಲ್ ಅರೋರ
C
ಭರತ್ ಕುಲಕರ್ಣಿ
D
ಸುಮಿತ್ ಮಹಜನ್
Question 8 Explanation: 
ಸುನೀಲ್ ಅರೋರ

1980 ಬ್ಯಾಚ್ ಐಎಎಸ್ ಅಧಿಕಾರಿಯಾಗಿ ಸುನೀಲ್ ಅರೋರಾ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ (ಇಸಿ) ನೇಮಕ ಮಾಡಲಾಗಿದೆ. ಪ್ರಸ್ತುತ, ಅಚಲ್ ಕುಮಾರ್ ಜೋಟಿ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಓಂ ಪ್ರಕಾಶ್ ರಾವತ್ ಅವರು ಇತರ ಚುನಾವಣಾ ಆಯುಕ್ತರಾಗಿದ್ದಾರೆ.

Question 9

9. ರೈಲ್ವೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಮತ್ತು ಯಾವ ದೇಶ ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿವೆ?

A
ರಷ್ಯಾ
B
ಸ್ವಿಟ್ಜರ್ಲ್ಯಾಂಡ್
C
ಜರ್ಮನಿ
D
ಜಪಾನ್
Question 9 Explanation: 
ಸ್ವಿಟ್ಜರ್ಲ್ಯಾಂಡ್

ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವಿಸ್ ಒಕ್ಕೂಟದ ಅಧ್ಯಕ್ಷೆ ಡಾರಿಸ್ ಲಿಯುಥಾರ್ಡ್ಗೆ ನಡುವಿನ ಮಾತುಕತೆಯ ನಂತರ ರೈಲ್ವೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಮತ್ತು ಸ್ವಿಟ್ಜರ್ಲೆಂಡ್ ಒಪ್ಪಂದಗಳಿಗೆ ಸಹಿ ಹಾಕಿವೆ.

Question 10

10. ಮ್ಯಾನ್ಮಾರಿನ ಬಗಾನ್ನಲ್ಲಿ ಭೂಕಂಪದಿಂದ ಹಾನಿಗೊಳಗಾದ ಪಗೋಡಗಳ ಸಂರಕ್ಷಣೆಗಾಗಿ ಯಾವ ದೇಶದೊಂದಿಗೆ ಮ್ಯಾನ್ಮಾರ್ ಒಪ್ಪಂದಕ್ಕೆ ಸಹಿ ಹಾಕಲಿದೆ?

A
ಚೀನಾ
B
ಭಾರತ
C
ಫಿಲಿಫೈನ್ಸ್
D
ಆಸ್ಟ್ರೇಲಿಯ
Question 10 Explanation: 
ಭಾರತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 6-7, 2017 ಮ್ಯಾನ್ಮಾರ್ಗೆ ಭೇಟಿ ನೀಡಿಲಿದ್ದು, ಆ ವೇಳೆ ಬಾಗನ್ನಲ್ಲಿ ಭೂಕಂಪದಿಂದ ಹಾನಿಗೊಳಗಾದ ಪಗೋಡಗಳ ಸಂರಕ್ಷಣೆಗಾಗಿ ಭಾರತ ಮತ್ತು ಮ್ಯಾನ್ಮಾರ್ ಸಹಿ ಹಾಕಲಿವೆ. ಬಗಾನ್ ಮಯನ್ಮಾರ್ ನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಒಪ್ಪಂದವು ಮಯನ್ಮಾರ್ ಜೊತೆಗಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಭಾರತದ ನಿರಂತರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ.

There are 10 questions to complete.

[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್30312017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,30,31,2017”

  1. Santosh

    Very nice quiz and best questions sir

  2. Kavya

    It’s helpfull tq

Leave a Comment

This site uses Akismet to reduce spam. Learn how your comment data is processed.