ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,19,20,21,2017

Question 1

1. 2017 ಫೀಫಾ ಅಂಡರ್ -17 ವಿಶ್ವ ಕಪ್ ಆತಿಥ್ಯ ವಹಿಸಲಿರುವ ದೇಶ ಯಾವುದು?

A
ಬ್ರೆಜಿಲ್
B
ರಷ್ಯಾ
C
ಭಾರತ
D
ದಕ್ಷಿಣ ಆಫ್ರಿಕ
Question 1 Explanation: 
ಭಾರತ

2017 ಫಿಫಾ ಅಂಡರ್ -17 ವಿಶ್ವ ಕಪ್ ಭಾರತದಲ್ಲಿ ಅಕ್ಟೋಬರ್ 6 ರಿಂದ 28 ರವರೆಗೆ ನಡೆಯಲಿದೆ, ಇದೇ ಮೊದಲ ಬಾರಿಗೆ ಭಾರತದಲ್ಲಿ ಫಿಫಾ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ.

Question 2

2. ಈ ಕೆಳಗಿನ ಯಾವ ರಾಜ್ಯದಲ್ಲಿ ಪೆರಿಯಾರ್ ರಾಷ್ಟ್ರೀಯ ಉದ್ಯಾನವನ ಕಾಣಬಹುದಾಗಿದೆ?

A
ಕೇರಳ
B
ಕರ್ನಾಟಕ
C
ತೆಲಂಗಣ
D
ತಮಿಳುನಾಡು
Question 2 Explanation: 
ಕೇರಳ
Question 3

3. ಯಾವ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ 24 × 7 ಸಹಾಯವಾಣಿ '181' ಪ್ರಾರಂಭಿಸಿದೆ?

A
ತೆಲಂಗಣ
B
ಮಹಾರಾಷ್ಟ್ರ
C
ಮಧ್ಯ ಪ್ರದೇಶ
D
ಗುಜರಾತ್
Question 3 Explanation: 
ತೆಲಂಗಣ

ಮಹಿಳಾ ಕಲ್ಯಾಣಕ್ಕಾಗಿ ತೆಲಂಗಾಣ ಸರ್ಕಾರವು ಇತ್ತೀಚೆಗೆ 24 × 7 ಸಹಾಯವಾಣಿ '181' ಪ್ರಾರಂಭಿಸಿದೆ. ವರದಕ್ಷಿಣೆ ಕಿರುಕುಳ ಪ್ರಕರಣಗಳು, ಹಿಂಬಾಲಿಸುವುದು, ಗೃಹ ಹಿಂಸೆ, ಹೆಣ್ಣು ಮಕ್ಕಳ ಮಾರಾಟ ಮತ್ತು ಕಳ್ಳಸಾಗಣೆ ಕುರಿತಾದ ಕರೆಗಳಿಗೆ ಸಹಾಯವಾಣಿ ಸಹಾಯ ಮಾಡುತ್ತದೆ. ಆತ್ಮಹತ್ಯಾ ಮನೋಭಾವ ಮಹಿಳೆಯರು ಅಥವಾ ಮಾನಸಿಕವಾಗಿ ತೊಂದರೆಗೊಳಗಾದವರನ್ನು ಸಹ ಸಹಾಯವಾಣಿ ಸಂಪರ್ಕಿಸಬಹುದು.

Question 4

4. 8ನೇ ವಿಶ್ವ ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಕಾಂಗ್ರೆಸ್ ಯಾವ ನಗರದಲ್ಲಿ ನಡೆಯಲಿದೆ?

A
ಪುಣೆ
B
ನವ ದೆಹಲಿ
C
ಚೆನ್ನೈ
D
ಮೈಸೂರು
Question 4 Explanation: 
ನವ ದೆಹಲಿ
Question 5

5. 2017 ರಾಷ್ಟ್ರೀಯ ಕೃಷಿ ನಾಯಕತ್ವ ಪ್ರಶಸ್ತಿಗೆ ಯಾವ ರಾಜ್ಯದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ?

A
ತೆಲಂಗಣ
B
ತ್ರಿಪುರ
C
ಮಣಿಪುರ
D
ಸಿಕ್ಕಿಂ
Question 5 Explanation: 
ತೆಲಂಗಣ

ಖ್ಯಾತ ಕೃಷಿ ವಿಜ್ಞಾನಿ ಪ್ರೊಫೆಸರ್ ಎಂ.ಎಸ್. ಸ್ವಾಮಿನಾಥನ್ ಅವರ ನೇತೃತ್ವದಭಾರತೀಯ ಕೌನ್ಸಿಲ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್ (ಐಸಿಎಫ್ಎ) 2017ನೇ ಸಾಲಿನ ರಾಷ್ಟ್ರೀಯ ಕೃಷಿ ನಾಯಕತ್ವ ಪ್ರಶಸ್ತಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ರಾವ್ ರವರು ರೈತರು ಮತ್ತು ಕೃಷಿ ಕ್ಷೇತ್ರದ ಕಲ್ಯಾಣಕ್ಕೆ ನೀಡಿದ ನವೀನ ಸೇವೆಗಳಿಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹೊಸದಿಲ್ಲಿಯ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ಸೆಪ್ಟೆಂಬರ್ 5, 2017 ರಂದು ಪ್ರಶಸ್ತಿಯನ್ನು ನೀಡಲಾಗುವುದು.

Question 6

6. “I am HIV positive, so what” ಪುಸ್ತಕದ ಲೇಖಕರು ____________?

A
ಜಯಂತ ಕಲಿತಾ
B
ವಿಕ್ರಂ ಸೇಟ್
C
ಕರಣ್ ಸಿಂಗ್
D
ಶರತ್ ಚಂದ್ರ
Question 6 Explanation: 
ಜಯಂತ ಕಲಿತಾ
Question 7

7. ಇತ್ತೀಚೆಗೆ ನಿಧನರಾದ ಪ್ರಸಿದ್ಧ ಹಾಸ್ಯನಟ ಜೆರ್ರಿ ಲೆವಿಸ್ ಯಾವ ದೇಶದವರು?

A
ಅಮೆರಿಕ
B
ಜಪಾನ್
C
ಫ್ರಾನ್ಸ್
D
ಜರ್ಮನಿ
Question 7 Explanation: 
ಅಮೆರಿಕ

ಪ್ರಸಿದ್ಧ ಹಾಸ್ಯನಟ ಮತ್ತು ಚಲನಚಿತ್ರ ನಿರ್ಮಾಪಕ ಜೆರ್ರಿ ಲೆವಿಸ್ (91) ಅಮೆರಿಕದ ಲಾಸ್ ವೇಗಾಸ್ನಲ್ಲಿ ನಿಧನ ಹೊಂದಿದ್ದಾರೆ. ಅವರು 1950 ಮತ್ತು 60 ರ ದಶಕದ ಅತ್ಯಂತ ಜನಪ್ರಿಯ ಹಾಸ್ಯ ನಟರಾಗಿದ್ದರು.

Question 8

8. ಯಾವ ದಿನದಂದು “ವಿಶ್ವ ಸೊಳ್ಳೆ ದಿನ“ ವನ್ನು ಆಚರಿಸಲಾಗುತ್ತದೆ?

A
ಆಗಸ್ಟ್ 19
B
ಆಗಸ್ಟ್ 20
C
ಆಗಸ್ಟ್ 21
D
ಆಗಸ್ಟ್ 22
Question 8 Explanation: 
ಆಗಸ್ಟ್ 20

ಮಲೇರಿಯಾ ಮತ್ತು ಇತರೆ ಮಾರಣಾಂತಿಕ ರೋಗಗಳನ್ನು ಹರಡುವ ಸೊಳ್ಳೆಗಳ ಬಗ್ಗೆ ಅರಿವು ಮೂಡಿಸಲು ಆಗಸ್ಟ್ 20 ರಂದು ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. 1897 ರಲ್ಲಿ ಬ್ರಿಟೀಷ್ ವೈದ್ಯ ಸರ್ ರೊನಾಲ್ಡ್ ರಾಸ್ ಅವರು ಮಲೇರಿಯಾ ರೋಗವು ಹೆಣ್ಣು ಅನಾಫಿಲಿಸ್ ಸೊಳ್ಳೆಗಳಿಂದ ಹರಡುತ್ತದೆ ಎಂಬ ಐತಿಹಾಸಿಕ ಆವಿಷ್ಕಾರವನ್ನು ಈ ದಿನದಂದು ಮಾಡಿದ ಸ್ಮರಣಾರ್ಥ ಈ ದಿನವನ್ನು

Question 9

9. “ಗಡಿ ರಸ್ತೆಗಳ ಸಂಸ್ಥೆ (Border Road Organisation)” ಕೇಂದ್ರ ಕಚೇರಿ ಎಲ್ಲಿದೆ?

A
ನವ ದೆಹಲಿ
B
ಗುವಾಹಟಿ
C
ಕೊಲ್ಕತ್ತ
D
ರಾಂಚಿ
Question 9 Explanation: 
ನವದೆಹಲಿ

“ಗಡಿ ರಸ್ತೆಗಳ ಸಂಸ್ಥೆ” 2015 ರಿಂದ ರಕ್ಷಣಾ ಸಚಿವಾಲಯದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ದೇಶದ ಗಡಿ ಪ್ರದೇಶಗಳಲ್ಲಿ ಕಷ್ಟ ಮತ್ತು ಪ್ರವೇಶಿಸಲಾಗದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣದಲ್ಲಿ ತೊಡಗಿದೆ. ಇದರ ಪ್ರಧಾನ ಕಚೇರಿಯು

Question 10

10. ಈ ಕೆಳಗಿನ ಯಾರನ್ನು 2017 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ?

A
ದೇವೇಂದ್ರ ಝಾಜಾರಿಯಾ ಮತ್ತು ಸರ್ದಾರ್ ಸಿಂಗ್
B
ವರುಣ್ ಸಿಂಗ್ ಭಾಟಿ ಮತ್ತು ಸರ್ದಾರ್ ಸಿಂಗ್
C
ಪ್ರಕಾಶ್ ನಂಜಪ್ಪ ಮತ್ತು ಹರ್ಮನ್ ಪ್ರೀತ್ ಕೌರ್
D
ಚೇತೇಶ್ವರ ಪೂಜಾರ್ ಮತ್ತು ವರುಣ್ ಸಿಂಗ್
Question 10 Explanation: 
ದೇವೇಂದ್ರ ಝಾಜಾರಿಯಾ ಮತ್ತು ಸರ್ದಾರ್ ಸಿಂಗ್

ಪ್ಯಾರಲಂಪಿಯನ್ ದೇವೇಂದ್ರ ಝಾಜಾರಿಯಾ ಮತ್ತು ಹಾಕಿ ಆಟಗಾರ ಸರ್ದಾರ್ ಸಿಂಗ್ ಅವರನ್ನು 2017ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಕ್ರಿಕೆಟಿಗ ಚೇತೇಶ್ವರ ಪೂಜಾರಾ, ಮಹಿಳಾ ಕ್ರಿಕೆಟಿಗ ಹರ್ಮನ್ಪ್ರೀತ್ ಕೌರ್ ಮತ್ತು ಶೂಟರ್ ಪಿ.ಎನ್.ಪ್ರಕಾಶ್ ಸೇರಿದಂತೆ 17 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ

There are 10 questions to complete.

[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್-192021-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.