2017ನೇ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

ರಾಜ್ಯ ಸರ್ಕಾರ ಕೊಡಮಾಡುವ ಡಿ.ದೇವರಾಜ ಅರಸು ಪ್ರಶಸ್ತಿಯನ್ನು 2017ನೇ ಸಾಲಿಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್‌ 20ರಂದು ವಿಧಾನಸೌಧದಲ್ಲಿ ನಡೆಯಲಿರುವ ಡಿ.ದೇವರಾಜ ಅರಸು ಅವರ 102ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

  • ಸಾಹಿತಿ ಹಂ.ಪ.ನಾಗರಾಜಯ್ಯ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಶಿಫಾರಸು ಮಾಡಿತ್ತು.
  • ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರಾಜಕೀಯ ಸೇವೆ ಮಾಡಿ ಹಾಗೂ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಕಾರಣ ಖರ್ಗೆ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
  • ಪ್ರಶಸ್ತಿಯು ಎರಡು ಲಕ್ಷ ರೂ. ನಗದುಹಾಗೂ ಫ‌ಲಕ ಒಳಗೊಂಡಿದೆ.
  • ಕಳೆದ ವರ್ಷ ಪ್ರಶಸ್ತಿಯನ್ನು ಬಿ.ಎಮೋಹಿದ್ದಿನ್ ಅವರಿಗೆ ನೀಡಲಾಗಿತ್ತು.

ಬೆಂಗಳೂರಿನಲ್ಲಿ ದೇಶದ ಮೊದಲ ಹೆಲಿಟ್ಯಾಕ್ಸಿ ಸೇವೆ

ದೇಶದ ಮೊಟ್ಟ ಮೊದಲ ಹೆಲಿಟ್ಯಾಕ್ಸಿ ಸೇವೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಚಯಿಸಲಾಯಿತು. ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹ ಈ ನೂತನ ಸೇವೆಯನ್ನು ಪ್ರಕಟಿಸಿದರು. ಈ ಸೇವೆಯಿಂದ ಟ್ರಾಫಿಕ್ ಕಿರಿಕಿರಿ ತಪ್ಪುವ ಕಾರಣ ದೇಶ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುವ ನಾಗರಿಕರಿಗೆ ವರದಾನ ಆಗಲಿದೆ.

  • “ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ಈ ಸೇವೆಯನ್ನು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಪರಿಚಯಿಸಲಾಗಿದೆ.
  • ಪ್ರಾಯೋಗಿಕವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿ ನಡುವೆ ಈ ಹೆಲಿಟ್ಯಾಕ್ಸಿ ಸೇವೆ ಆರಂಭಗೊಳ್ಳಲಿದೆ. ಈ ಸಂಬಂಧ ಈಗಾಗಲೇ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಹೆಲಿಕಾಪ್ಟರ್‌ ನಿಲ್ದಾಣ (ಏರ್‌ಪೊರ್ಟ್‌ ಮಾದರಿಯಲ್ಲಿ ಹೆಲಿಪೋರ್ಟ್‌)ಕ್ಕೆ ಜಾಗ ಗುರುತಿಸಲಾಗಿದ್ದು, ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಈ ಸೇವೆ ಶುರುವಾಗಲಿದೆ.
  • ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್‌)ವು ಥುಂಬಿ ಏವಿಯೇಷನ್‌ ಪ್ರೈ.ಲಿ., ಸಹಯೋಗದಲ್ಲಿ “ಹೆಲಿಟ್ಯಾಕ್ಸಿ’ ಸೇವೆಯನ್ನು ಪರಿಚಯಿಸಲಾಗುವುದು.
  • ಬೆಂಗಳೂರಿನ 90 ಬಹುಮಹಡಿ ಕಟ್ಟಡಗಳ ಮೇಲ್ಛಾವಣಿಯಲ್ಲಿ ಹೆಲಿಪ್ಯಾಡ್‌ಗಳಿವೆ. ಇವುಗಳನ್ನು ಈಗ ಆರಂಭಿಸುತ್ತಿರುವ ಹೆಲಿಕಾಪ್ಟರ್‌ ಟ್ಯಾಕ್ಸಿ ಸೇವೆಗೆ ಬಳಸಿಕೊಳ್ಳಲಾಗುವುದು.
  • 6 ಆಸನಗಳ ಸಾಮರ್ಥ್ಯ ಇರುವ “ಬೆಲ್‌-407′ ಹೆಲಿಕಾಪ್ಟರ್‌ನಿಂದ ಸೇವೆ ಆರಂಭಗೊಳ್ಳಲಿದೆ.
  • ಬ್ರೆಜಿಲ್‌, ಸಾವೊಪಾಲೊ ನಲ್ಲಿ ಈಗಾಗಲೇ ಹೆಲಿಟ್ಯಾಕ್ಸಿ ಸೇವೆ ಲಭ್ಯವಿದೆ. ಅಲ್ಲಿ 300 ಹೆಲಿಟ್ಯಾಕ್ಸಿಗಳು ಕಾರ್ಯಾಚರಣೆ ಮಾಡುತ್ತಿವೆ.

ರಾಜ್ಯ ಸರ್ಕಾರದಿಂದ ಕ್ಷೇತ್ರಗಳ ದರ್ಶನಕ್ಕೆ “ಪುನೀತ ಯಾತ್ರೆ” ಯೋಜನೆ

ತೀರ್ಥಯಾತ್ರೆಗೆ ಹೋಗುವ ಎಲ್ಲ ಧರ್ಮ ಮತ್ತು ಜಾತಿಯವರಿಗೆ ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರ ‘ಪುನೀತ ಯಾತ್ರೆ’ ಹೆಸರಿನ ಹೊಸ ಯೋಜನೆ ರೂಪಿಸಿದೆ. ಪ್ರವಾಸೋದ್ಯಮ ಇಲಾಖೆ ಮೂಲಕ ಈ ಯೋಜನೆಯನ್ನು ಸಿದ್ಧಪಡಿಸಿದ್ದು, ಅಂತಿಮ ಘೋಷಣೆ ಮಾತ್ರ ಬಾಕಿ ಇದೆ.

ಪ್ರಮುಖಾಂಶಗಳು:

  • ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಉಸ್ತುವಾರಿಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.
  • ನಿಗಮದ ಬಸ್‌ಗಳನ್ನೇ ಯಾತ್ರೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.
  • ಎಲ್ಲ ಧರ್ಮದ ಪುಣ್ಯಕ್ಷೇತ್ರಗಳನ್ನು ಒಳಗೊಂಡಂತೆ ರಾಜ್ಯ ಮತ್ತು ಹೊರ ರಾಜ್ಯಗಳ 21 ಮಾರ್ಗಗಳನ್ನು ಇಲಾಖೆ ಗುರುತಿಸಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ “ಬಂಗಾರದ ಎಲೆಗಳು” ಯೋಜನೆ

ರಾಜ್ಯದ ಎಲ್ಲ ಸಾಹಿತಿಗಳ ಪ್ರಾಥಮಿಕ ವಿವರಗಳನ್ನು ಹೊಂದಿರುವ ಸಮಗ್ರ ಕೋಶ ರಚಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ “ಬಂಗಾರದ ಎಲೆಗಳು’ ಎಂಬ ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.

ಪ್ರಮುಖಾಂಶಗಳು:

  • “ಬಂಗಾರದ ಎಲೆಗಳು’ ಯೋಜನೆಯಡಿ ರಾಜ್ಯದ ಸರಿಸುಮಾರು ಎಲ್ಲ ಸಾಹಿತಿಗಳ ಪ್ರಾಥಮಿಕ ವಿವರಗಳನ್ನು ಸಮಗ್ರ ಕೋಶದಲ್ಲಿ ಅಳವಡಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಅಕಾಡೆಮಿ ಗುರಿ ಇಟ್ಟುಕೊಂಡಿದೆ.
  • ಸಾಹಿತಿಗಳ ಸಮಗ್ರ ಕೋಶದಲ್ಲಿ ನವೋದಯ ಪೂರ್ವದ ಕೆಂಪು ನಾರಾಯಣನ ಮುದ್ರಾಮಂಜೂಷ ಕೃತಿಯಿಂದ ಪ್ರಾರಂಭಿಸಿಇಂದಿನ ಕಾಲದವರೆಗಿನ ಎಲ್ಲ ಲೇಖಕರ ಮಾಹಿತಿ ಒಳಗೊಂಡ ಪುಸ್ತಕ ಹೊರತರುವ ಉದ್ದೇಶವಿದೆ. 1820ರಿಂದ 2020ರವರೆಗಿನ ಎಲ್ಲ ಲೇಖಕರ ಪರಿಚಯ ಇದು ಒಳಗೊಂಡಿರುತ್ತದೆ. ಇದರಲ್ಲಿ ಲೇಖಕನ ಹುಟ್ಟಿದ ದಿನಾಂಕ, ಊರು, ಉದ್ಯೋಗ, ಕುಟುಂಬದ ಸಂಕ್ಷಿಪ್ತ ವಿವರ, ಪ್ರಕಟಿತ ಕೃತಿಗಳು, ಪ್ರಶಸ್ತಿಗಳು, ಸಂದ ಗೌರವಗಳು ಮತ್ತು ವ್ಯಕ್ತಿತ್ವದ ಕುರಿತು ಸಂಕ್ಷಿಪ್ತವಾಗಿ ನೀಡಲಾಗುವುದು. ಪ್ರಮುಖ ಕೃತಿಗಳ ಕುರಿತು ಒಂದೆರಡು ವಾಕ್ಯದ ವಿವರಣೆಯನ್ನೂ ನೀಡುವ ಆಲೋಚನೆ ಇದೆ. ಕನಿಷ್ಠ ಎರಡು ಕೃತಿ ಪ್ರಕಟಿಸಿದವರನ್ನು ಲೇಖಕರು ಎಂದು ಪರಿಗಣಿಸಲು ಚಿಂತಿಸಲಾಗಿದೆ. ಆದರೆ, ಅಕಾಡೆಮಿಯ ಸಭೆಯಲ್ಲಿ ಚರ್ಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ಅವರು ಮಾಹಿತಿ ನೀಡಿದರು.
  • - ರಾಜ್ಯದ ಯಾವುದೇ ಭಾಗದ ಲೇಖಕ ತಮ್ಮ ವೈಯುಕ್ತಿಕ ವಿವರಗಳು ಹಾಗೂ ತನಗೆ ಗೊತ್ತಿರುವ ನೆರೆಹೊರೆಯ ಲೇಖಕರ, ಈಗಾಗಲೇ ನಿಧನ ಹೊಂದಿರುವ ಲೇಖಕರು, ಸಾಹಿತಿಗಳ ಮಾಹಿತಿಗಳನ್ನು ಅಕಾಡೆಮಿಯ ಇ-ಮೇಲ್‌academy@gmail.comವಿಳಾಸಕ್ಕೆ ಕಳುಹಿಸ ಬಹುದು. ಎಲ್ಲ ಕಡೆಯಿಂದ ಮಾಹಿತಿ ಬಂದ ಬಳಿಕ ಯಾವ ಸಾಹಿತಿ, ಲೇಖಕರ ಪರಿಚಯವನ್ನ ಸಾಹಿತ್ಯ ಕೋಶದಲ್ಲಿ ನೀಡಬಹುದು ಎಂಬ ಮಾನದಂಡಗಳನ್ನು ನಿಗದಿಗೊಳಿಸಲಾಗುವುದು. ಸಾಹಿತಿಗಳ ಕೋಶದ ಮಾಹಿತಿ ಮುದ್ರಣ ರೂಪದಲ್ಲಿ ಹೊರತರುವುದರ ಜೊತೆಗೆ ಅಕಾಡೆಮಿಯ ವೈಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮಾಲಗತ್ತಿ ವಿವರಿಸಿದರು.
  • ಅಕಾಡೆಮಿಗೆ ಆಧುನಿಕ ಸ್ಪರ್ಶ: ಅರವಿಂದ ಮಾಲಗತ್ತಿಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಉನ್ನತೀಕರಿಸಲು
    ನಿರ್ಧರಿಸಲಾಗಿದ್ದು, ಅದರಂತೆ ಟ್ವಿಟರ್‌, ಫೇಸ್‌ಬುಕ್‌, ಗೂಗಲ್‌ ಪ್ಲಸ್‌ಗಳಲ್ಲಿ ಅಕಾಡೆಮಿಯ ಖಾತೆ ಹಾಗೂ ಪುಟ
    ತೆರೆಯಲಾಗುವುದು. ಅಕಾಡೆಮಿಯ ಯೋಜನೆಗಳನ್ನು ರೂಪಿಸಲು ಗಣ್ಯರು- ಸಾಹಿತಿಗಳು, ಲೇಖಕರು, ವಿಮರ್ಶಕರ
    ಸಭೆ ಕರೆದು ಸಮಾಲೋಚನೆ ನಡೆಸಲಾಗುವುದು. ಇದರ ಜತೆಗೆ ಯುವ ಬರಹಗಾರರ ಸಲಹೆಗಳನ್ನು ಪಡೆದುಕೊಳ್ಳಲಾಗುವುದು.
  • ಅಕಾಡೆಮಿಯಲ್ಲಿ ಪತ್ಯೇಕ ಮಾರಾಟ ವಿಭಾಗ ತೆರೆಯಲು ಕ್ರಮಕೈಗೊಳ್ಳಲಾಗುವುದು ಎಂದು ಅರವಿಂದ ಮಾಲಗತ್ತಿ ಮಾಹಿತಿ ನೀಡಿದರು.ಸಹ ಸದಸ್ಯರ ನೇಮಕ: ಸರ್ಕಾರ ನೇಮಕ ಮಾಡಿದ ಸದಸ್ಯರಲ್ಲದೇ ಮೂವರು ಸಹ ಸದಸ್ಯರನ್ನು ನೇಮಿಸಿಕೊಳ್ಳುವ ಅಧಿಕಾರ ಅಕಾಡೆಮಿಗೆ ಇದೆ. ಅದರಂತೆ ಕಲಬುರಗಿಯ ವಿಕ್ರಂ ವಿಸಾಜಿ, ತುಮಕೂರಿನ ಶೈಲಾ ನಾಗರಾಜ್‌ ಹಾಗೂ ಮೈಸೂರಿನ ನೀಲಗಿರಿ ತಳವಾರ ಅವರನ್ನು ಅಕಾಡೆಮಿಯ ಸಹ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾಲಗತ್ತಿ ತಿಳಿಸಿದರು.
  • Read more at http://www.udayavani.com/kannada/news/state-news/231178/golden-leaves-scheme-from-sahitya-akademi#X6AgLykyRs2YfZeB.99

7 Thoughts to “ಪ್ರಚಲಿತ ವಿದ್ಯಮಾನಗಳು- ಆಗಸ್ಟ್,6-10,2017”

  1. sir ondu varshada current affair annu upload madi

  2. sunil

    Hi sir

    July month current affairs yavaga upload agutte

  3. RAJUNAIK L

    this app is very usefull

  4. Gajendra K T

    Thank you sir,this app is very useful

  5. BASAVARAJ N A

    This app is very useful all compitative exams

  6. Arun Kumar.G

    Nice qution

Leave a Comment

This site uses Akismet to reduce spam. Learn how your comment data is processed.