ನೀತಿ ಆಯೋಗದ ಉಪಾಧ್ಯಕ್ಷ ಹುದ್ದೆಗೆ ಅರವಿಂದ್ ಪನಗರಿಯಾ ರಾಜೀನಾಮೆ

ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಪನಗರಿಯಾ ಅವರು ರಾಜೀನಾಮೆ ನೀಡಿದ್ದಾರೆ.  ಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಕಾರಣದಿಂದ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಪನಗರಿಯಾ ಹೇಳಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಪನಗರಿಯಾ ಅವರ ಎರಡು ವರ್ಷ ರಜೆ ಅವಧಿಯನ್ನು ವಿಸ್ತರಿಸಲು ವಿಶ್ವವಿದ್ಯಾಲಯ ನಿರಾಕರಿಸಿರುವ ಹಿನ್ನೆಯಲ್ಲಿ ಸೆಪ್ಟೆಂಬರ್ 5ರಂದು ಮತ್ತೆ ಪ್ರಾಧ್ಯಪಕ ಹುದ್ದೆಗೆ ಮರಳಲಿದ್ದಾರೆ.

ಪನಗರಿಯಾ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ 2014ರ ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಅವರು ಕ್ಯಾಬಿನೆಟ್ ಸಚಿವರ ಸ್ಥಾನವನ್ನು ಹೊಂದಿದ್ದರು.

ಅರವಿಂದ್ ಪನಗರಿಯಾ:

ನೀತಿ ಆಯೋಗ ಸೇರುವ ಮೊದಲು ಪನಗರಿಯಾ ಅವರು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು ಮತ್ತು ಏಷ್ಯಾ ಅಭಿವೃದ್ದಿ ಬ್ಯಾಂಕಿನಲ್ಲಿ (ಎಬಿಡಿ) ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು. ವಿಶ್ವ ಬ್ಯಾಂಕ್, ವಿಶ್ವ ವಾಣಿಜ್ಯ ಕೇಂದ್ರ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ವಿವಿಧಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವವನ್ನು ಅವರು ಹೊಂದಿದ್ದಾರೆ. ಅವರು ಸುಮಾರು 10 ಪುಸ್ತಕಗಳನ್ನು ಬರೆದಿದ್ದಾರೆ. 2008 ರಲ್ಲಿ ಪ್ರಕಟವಾದ “ದಿ ಎಮರ್ಜಿಂಗ್ ಜೈಂಟ್” ಅವರ ಇತ್ತೀಚಿನ ಪುಸ್ತಕ. ಪನಗರಿಯಾ ಅವರಿಗೆ 2102ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನೀತಿ ಆಯೋಗ:

ನೀತಿ ಆಯೋಗ ಅಥವಾ ಭಾರತದ ಬದಲಾವಣೆಗಾಗಿನ ರಾಷ್ಟ್ರೀಯ ಸಂಸ್ಥೆ (ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ (NITI=National Institution for Transforming India)ವನ್ನು ಭಾರತದ ಯೋಜನಾ ಆಯೋಗದ ಬದಲಿಗೆ ಜನವರಿ 1, 2015ರಲ್ಲಿ ಸ್ಥಾಪಿಸಲಾಗಿದೆ. ಯೂನಿಯನ್ ಕ್ಯಾಬಿನೆಟ್ ನಿರ್ಣಯದ ಮೂಲಕ ನೀತಿ ಆಯೋಗವನ್ನು ಸ್ಥಾಪಿಸಲಾಗಿದೆ. ಇದು ಮುಖ್ಯವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ರೂಪಣೆಯಲ್ಲಿ ಬೌದ್ಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಇರುತ್ತಾರೆ. ಒಬ್ಬ ಉಪಾಧ್ಯಕ್ಷ,ಓರ್ವ ಕಾರ್ಯನಿರ್ವಹಣಾಧಿಕಾರಿ ಜತೆಗೆ,ವಿವಿಧ ಕ್ಷೇತ್ರಗಳಲ್ಲಿ ತಜ್ಞರಾಗಿರುವ ಐದು ಜನ ಖಾಯಂ ಸದಸ್ಯರು, ಇಬ್ಬರು ಅರೆಕಾಲಿಕ ಸದಸ್ಯರು ಹಾಗೂ ನಾಲ್ವರು ಕೇಂದ್ರ ಸಚಿವರನ್ನು ಇದು ಹೊಂದಿದೆ.

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಾಹಿದ್ ಖಕಾನ್‌ ಅಬ್ಬಾಸಿ ಆಯ್ಕೆ

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪಿಎಂಎಲ್–ಎನ್ ಹಿರಿಯ ಮುಖಂಡ ಶಾಹಿದ್ ಖಕಾನ್‌ ಅಬ್ಬಾಸಿ ಅವರನ್ನು ಅಲ್ಲಿನ ಸಂಸತ್ತಿನಲ್ಲಿ ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ.

ಪನಾಮಾ ಪೇಪರ್ಸ್‌ ಪ್ರಕರಣದಲ್ಲಿ ಪಾಕಿಸ್ತಾನದ ಸುಪ್ರೀಂಕೋರ್ಟ್ ದೋಷಿ ಎಂದು ತೀರ್ಪು ನೀಡಿದ್ದರಿಂದ ಹಿಂದಿನ ಪ್ರಧಾನಿ ನವಾಜ್ ಷರೀಫ್ ಅವರು ಶುಕ್ರವಾರ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅಬ್ಬಾಸಿ ಅವರನ್ನು ಹಂಗಾಮಿ ‍ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

342 ಸದಸ್ಯಬಲದ ಪಾಕಿಸ್ತಾನ ಸಂಸತ್ತಿನಲ್ಲಿ ಮಂಗಳವಾರ ನಡೆದ ಮತದಾನದಲ್ಲಿ ಅಬ್ಬಾಸಿ ಪರ 221 ಮತ ಚಲಾವಣೆಯಾಗಿವೆ. ಪ್ರತಿಸ್ಪರ್ಧಿ, ಪಾಕಿಸ್ತಾನ್ ಪೀಪಲ್ಸ್ ಪಕ್ಷದ ನವೀದ್ ಖಮರ್ ಪರ ಕೇವಲ 47 ಮತ ಚಲಾವಣೆಯಾಗಿವೆ.

ಅಬ್ಬಾಸಿ ಅವರು ಪ್ರಧಾನಿಯಾಗಿ ಆಯ್ಕೆಯಾಗಿರುವುದನ್ನು ಸ್ಪೀಕರ್ ಸರ್ದಾರ್ ಆಯಾಜ್ ಸಾದಿಕ್ ಘೋಷಿಸಿದರು. ಜತೆಗೆ, ಪ್ರಧಾನಿ ಸ್ಥಾನ ಅಲಂಕರಿಸಿ ಸದನವನ್ನು ಉದ್ದೇಶಿಸಿ ಮಾತನಾಡುವಂತೆ ಅಬ್ಬಾಸಿ ಅವರಿಗೆ ಸೂಚಿಸಿದರು.

ಖ್ಯಾತ ದ್ರುಪದ್ ಗಾಯಕ ಉಸ್ತಾದ್ ಸಯೀದುದ್ದೀನ್ ಡಾಗರ್ ನಿಧನ

ಖ್ಯಾತ ದ್ರುಪದ್ ಗಾಯಕ ಉಸ್ತಾದ್ ಸಯೀದುದ್ದೀನ್ ಡಾಗರ್ ಅವರು ನಿಧನರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 78 ವರ್ಷ ವಯಸ್ಸಾಗಿತ್ತು. ಜೈಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಉಸ್ತಾದ್ ಸಯೀದುದ್ದೀನ್ ಡಾಗರ್:

ಉಸ್ತಾದ್ ಸಯೀಮುದ್ದೀನ್ ಡಾಗರ್ ಅವರು 1939 ಏಪ್ರಿಲ್ 29 ರಂದು ರಾಜಸ್ತಾನದ ಅಲ್ವಾರ್ನಲ್ಲಿ ಜನಿಸಿದರು. ಅವರು ಪ್ರಸಿದ್ಧ ಡಾಗರ್ ಸಂಗೀತ ಮನೆತನದ ಸದಸ್ಯರಾಗಿದ್ದರು ಮತ್ತು ಖ್ಯಾತ ಏಳು ‘ಡಾಗರ್ ಬಾಂಧಸ್ (ಸಹೋದರರು)’ ರಲ್ಲಿ ಕಿರಿಯರಾಗಿದ್ದರು. ದ್ರುಪದ್ ಶೈಲಿಯನ್ನು ಜೀವಂತವಾಗಿರಿಸಲು ತಮ್ಮ ಜೀವನವನ್ನು ಸಮರ್ಪಿಸಿದ್ದರು. ದೇಶ ಮತ್ತು ವಿದೇಶದ ಪ್ರಸಿದ್ದ ಸ್ಥಳಗಳು ಮತ್ತು ಹಬ್ಬ ಉತ್ಸವಗಳಲ್ಲಿ ದ್ರುಪದ್ ಗಾಯನವನ್ನು ನಡೆಸಿಕೊಟ್ಟಿದ್ದರು.

ಉಸ್ತಾದ್ ಡಾಗರ್ ಅವರು ಜೈಪುರ ಮತ್ತು ಪುಣೆಯ ದ್ರುಪಡ್ ಸೊಸೈಟಿಯ ಅಧ್ಯಕ್ಷರಾಗಿದ್ದರು.

ಭಾರತದಲ್ಲಿ ದ್ರುಪದ್ ಕುರಿತು ಕಾರ್ಯಾಗಾರವನ್ನು

1939, ಎಪ್ರಿಲ್ 20ರಂದು ಅಲ್ವಾರ್ ನ ಖ್ಯಾತ ಶಾಸ್ತ್ರೀಯ ಗಾಯಕರ ಕುಟುಂಬದಲ್ಲಿ ಜನಿಸಿದ್ದ ಉಸ್ತಾದ್ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಕಾರವಾದ ದ್ರುಪದ್ ನಲ್ಲಿ ಖ್ಯಾತಿ ಗಳಿಸಿದ್ದರು.

ಹೈದರಾಬಾದಿನಲ್ಲಿ 19ನೇ RPEC ವ್ಯಾಪಾರ ಸಮಾಲೋಚನಾ ಸಭೆ

19ನೇ ಸುತ್ತಿನ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RPEC)ದ ವ್ಯಾಪಾರ ಸಮಾಲೋಚನಾ ಸಭೆ ಹಾಗೂ ಇತರೆ ಸಭೆಗಳು ತೆಲಂಗಣದ ಹೈದರಾಬಾದಿನಲ್ಲಿ ಜರುಗಿತು. ಇದರ ಜೊತೆಗೆ ಸರಕು, ಸೇವೆಗಳು ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಸಭೆಗಳನ್ನು ಆಯೋಜಿಸಲಾಗಿತ್ತು.

5 Thoughts to “ಪ್ರಚಲಿತ ವಿದ್ಯಮಾನಗಳು- ಆಗಸ್ಟ್,1-5,2017”

  1. DEVARAJ.S

    Dear Sir….
    July month du current events update agilla so please upload madi bcz KPSC exam nalli july month du questions kelidre ans madodu kasta agutte so plzzzz update madi.. Thank you

Leave a Comment

This site uses Akismet to reduce spam. Learn how your comment data is processed.