ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಪ್ರಚಲಿತ ವಿದ್ಯಮಾನ ಮತ್ತು ಸಾಮಾನ್ಯ ಜ್ಞಾನ-32

Question 1

1. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಕೋಲಾರ ಜಿಲ್ಲೆಯ ವೈಚಕೂರಹಳ್ಳಿ 2017ನೇ ಸಾಲಿನ 'ದೇಶದ ಮೊದಲ ಹೊಗೆರಹಿತ ಗ್ರಾಮ' ಎನಿಸಿದೆ

II) ಇತ್ತೀಚೆಗೆ ಈ ಗ್ರಾಮ ಲಿಮ್ಕಾ ದಾಖಲೆಗೆ ಸೇರ್ಪಡೆಗೊಂಡಿದೆ

III) ಇಂಡಿಯನ್ ಆಯಿಲ್ ಸಂಸ್ಥೆ ಈ ಗ್ರಾಮವನ್ನು ಹೊಗೆ ರಹಿತ ಗ್ರಾಮವನ್ನಾಗಿಸಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
I, II & III
Question 1 Explanation: 
II & III

ಚಿಕ್ಕಬಳ್ಳಾಪುರ ಜಿಲ್ಲೆಯ ವೈಚಕೂರಹಳ್ಳಿ 2017ನೇ ಸಾಲಿನ 'ದೇಶದ ಮೊದಲ ಹೊಗೆರಹಿತ ಗ್ರಾಮ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಅಡಿಯಲ್ಲಿ ಶೇ. 100ರಷ್ಟು ಎಲ್ ಪಿಜಿ ಅಡುಗೆ ಅನಿಲವನ್ನು ಬಳಕೆ ಮಾಡುವ ಮೂಲಕ ಲಿಮ್ಕಾ ದಾಖಲೆ ನಿರ್ಮಿಸಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ತಿಳಿಸಿದೆ. ವೈಚಕೂರಹಳ್ಳಿ ಗ್ರಾಮದ ಎಲ್ಲ ಮನೆಗಳಲ್ಲೂ ಎಲ್ ಪಿಜಿ(ಅಡುಗೆ ಅನಿಲ) ಬಳಸುವ ಮೂಲಕ ಹೊಗೆ ರಹಿತ ಗ್ರಾಮವಾಗಿ ಗುರುತಿಸಿಕೊಂಡಿದೆ.

Question 2

2. ಈ ಕೆಳಗಿನ ಯಾರು ರಾಜ್ಯ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತರಾಗಿ ನೇಮಕಗೊಂಡಿದ್ದಾರೆ?

A
ಕೃಷ್ಣಮೂರ್ತಿ
B
ಚಂದ್ರೇಗೌಡ
C
ಸುಚೇತನ ಸ್ವರೂಪ
D
ಕುಮಾರಸ್ವಾಮಿ
Question 2 Explanation: 
ಸುಚೇತನ ಸ್ವರೂಪ

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತರಾಗಿ ಡಾ.ಸುಚೇತನ ಸ್ವರೂಪ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಮಾಣ ವಚನ ಬೋಧಿಸಿದರು.

Question 3

3. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಪ್ರೊ. ಎಸ್.ಜಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ

II) ಸಚಿವರು, ಸಂಸದರು, ಶಾಸಕರು ಸೇರಿ ಎಲ್ಲ ಹಂತದ ಜನಪ್ರತಿನಿಧಿಗಳು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ

III) ಸಮಿತಿಯ ಶಿಫಾರಸ್ಸು ಜಾರಿಗೆ ಬಂದರೆ ಈ ನಿಯಮವನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎನಿಸಲಿದೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
ಮೇಲಿನ ಎಲ್ಲವು
Question 3 Explanation: 
I & II

ಪ್ರೊ. ಎಸ್.ಜಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಇನ್ನು ಮುಂದೆ ಸಚಿವರು, ಸಂಸದರು, ಶಾಸಕರು ಸೇರಿ ಎಲ್ಲ ಹಂತದ ಜನಪ್ರತಿನಿಧಿಗಳು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸುವಂತೆ ಕಾನೂನು ಮಾಡುವಂತೆ ಸಮಿತಿ ಶಿಫಾರಸ್ಸು ಮಾಡಿದೆ. ಅಲ್ಲದೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಒಟ್ಟಾರೆ 21 ಶಿಫಾರಸುಗಳನ್ನೂ ಈ ಸಮಿತಿ ನೀಡಿದೆ. ಅಲಹಾಬಾದ್ ಹೈಕೋರ್ಟ್ನ ಸೂಚನೆಯಂತೆ ಉತ್ತರ ಪ್ರದೇಶದಲ್ಲಿ ಜನಪ್ರತಿಧಿಗಳು ಹಾಗೂ ಸರ್ಕಾರಿ ನೌಕರರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಅಥವಾ ಅನುದಾನಿತ ಶಾಲೆಗೆ ಸೇರಿಸುವಂತೆ ನಿಯಮ ರೂಪಿಸಿ ಜಾರಿಗೆ ತಂದಿದ್ದಾರೆ.

Question 4

4. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಕಾವೇರಿ ವನ್ಯಜೀವಿ ಧಾಮವನ್ನು ಕೇಂದ್ರ ಸರ್ಕಾರವು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದೆ

II) ರಾಜ್ಯದ ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಾವೇರಿ ವನ್ಯಜೀವಿ ಧಾಮ ಹರಡಿದೆ

III) ರಾಜ್ಯದಲ್ಲಿರುವ ಒಟ್ಟು 39 ಸಂರಕ್ಷಿತ ಪ್ರದೇಶಗಳಲ್ಲಿ ಈ ರೀತಿಯ ಗಡಿಯನ್ನು ಪಡೆದ ಮೊದಲ ಸಂರಕ್ಷಿತ ಪ್ರದೇಶ ಇದಾಗಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
I & III
C
II & III
D
I, II & III
Question 4 Explanation: 

ರಾಜ್ಯದ ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕಾವೇರಿ ವನ್ಯಜೀವಿ ಧಾಮವನ್ನು ಕೇಂದ್ರ ಸರ್ಕಾರವು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದೆ. ಗಣಿಗಾರಿಕೆ, ಪರಿಸರಕ್ಕೆ ಧಕ್ಕೆ ತರುವ ಕೈಗಾರಿಕೆಗಳ ಸ್ಥಾಪನೆ, ಜಲವಿದ್ಯುತ್ ಯೋಜನೆ, ಅಪಾಯಕಾರಿ ವಸ್ತುಗಳ ಉತ್ಪಾದನೆ, ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ದಹಿಸುವಿಕೆಗೆ ಅನುಮತಿ ನೀಡಕೂಡದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ರಾಜ್ಯದಲ್ಲಿರುವ ಒಟ್ಟು 39 ಸಂರಕ್ಷಿತ ಪ್ರದೇಶಗಳಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮಾತ್ರ ಈ ರೀತಿಯ ಗಡಿಯನ್ನು ರೂಪಿಸಲಾಗಿದೆ.

Question 5

5. ಕೇಂದ್ರ ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ‘ಭಾಷಾ ಸಮ್ಮಾನ್’ ಪ್ರಶಸ್ತಿಗೆ ಭಾಜನರಾಗಿರುವ ತುಳು ಸಾಹಿತಿ ಮತ್ತು ಜಾನಪದ ವಿದ್ವಾಂಸ ಯಾರು?

A
ಡಾ. ಕೆ ಶ್ರೀನಿವಾಸರಾವ್
B
ಡಾ. ಅಮೃತ ಸೋಮೇಶ್ವರ
C
ಡಾ. ಶ್ರೀನಾಥ್ ಕುಲಕರ್ಣಿ
D
ಡಾ. ಚಂದ್ರಶೇಖರ ನಾಯಕ್
Question 5 Explanation: 
ಡಾ. ಅಮೃತ ಸೋಮೇಶ್ವರ

ತುಳು ಸಾಹಿತಿ, ಜಾನಪದ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ‘ಭಾಷಾ ಸಮ್ಮಾನ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ತಾಮ್ರ ಪದಕ ಒಳಗೊಂಡಿದೆ. ಡಾ.ಅಮೃತ ಸೋಮೇಶ್ವರ ಅವರು, ತುಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದಾರೆ. ‘ತಂಬಿಲ’ ಮತ್ತು ’ರಂಗಿತ’ ಕವನ ಸಂಕಲನಗಳು ಹಾಗೂ ಏಳು ಪ್ರಮುಖ ನಾಟಕಗಳನ್ನು ರಚಿಸಿರುವ ಇವರು ಕನ್ನಡ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ, ಕನ್ನಡ ಸಾಹಿತ್ಯ ಪರಿಷತ್ನ ಶತಮಾನೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Question 6

6. ರಾಜ್ಯ ಸರ್ಕಾರದ “ಬೆಳಕು ಯೋಜನೆ”ಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಈ ಯೋಜನೆಯನ್ನು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲಾಗುತ್ತಿದೆ

II) ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಮಾದರಿ ಗ್ರಾಮಗಳನ್ನು ಯೋಜನೆಯಡಿ ಅಭಿವೃದ್ದಿಪಡಿಸಲಾಗುವುದು

III) ಕನಿಷ್ಠ 2500 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಗ್ರಾಮಗಳನ್ನು ಯೋಜನೆಯಡಿ ಆಯ್ಕೆಮಾಡಲಾಗುವುದು

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಹೇಳಿಕೆ ಒಂದು & ಎರಡು ಮಾತ್ರ
D
ಮೇಲಿನ ಎಲ್ಲವು
Question 6 Explanation: 
ಹೇಳಿಕೆ ಎರಡು ಮಾತ್ರ

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 187 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿನ 946 ಗ್ರಾಮಗಳನ್ನು 'ಬೆಳಕು ಗ್ರಾಮ' ಯೋಜನೆಗೆ ಆಯ್ಕೆ ಮಾಡಲಾಗಿದೆ. ಕನಿಷ್ಠ 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಪ್ರತೀ ಗ್ರಾಮಕ್ಕೆ 25 ರಿಂದ 40 ಲಕ್ಷ ರೂ. ವಿದ್ಯುತ್ ಸರಬರಾಜು ಕಂಪೆನಿಗಳ ಮೂಲಕವೆ ಹಣ ಒದಗಿಸಲಾಗುವುದು. ಇದಕ್ಕಾಗಿ 378 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

Question 7

7. ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ನ (ಎಚ್ಎಎಲ್) ಹೆಲಿಕಾಪ್ಟರ್ ಘಟಕ ಸ್ಥಾಪನೆ ಮಾಡಲು ಪರಿಸರ, ಅರಣ್ಯ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಘಟಕ ಯಾವ ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳಲಿದೆ?

A
ಮೈಸೂರು
B
ತುಮಕೂರು
C
ಧಾರಾವಾಡ
D
ಚಿತ್ರದುರ್ಗ
Question 7 Explanation: 
ತುಮಕೂರು

ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ತುಮಕೂರಿನಲ್ಲಿ ಹೆಲಿಕಾಪ್ಟರ್ ಘಟಕ ಸ್ಥಾಪನೆ ಮಾಡಲು ಪರಿಸರ, ಅರಣ್ಯ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಘಟಕ ಆರಂಭವಾದರೆ ಸುಮಾರು 4 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಸುಮಾರು 610 ಎಕರೆ ಜಾಗದಲ್ಲಿ ಹೆಲಿಕಾಪ್ಟರ್ ಘಟಕ ನಿರ್ಮಾಣವಾಗಲಿದೆ. ಸುಮಾರು 6300 ಕೋಟಿ ವೆಚ್ಚದಲ್ಲಿ ಈ ಘಟಕ ನಿರ್ಮಾಣ ವಾಗುತ್ತಿದೆ.ವರ್ಷಕ್ಕೆ 75ಹೆಲಿಕಾಪ್ಟರ್ ಉತ್ಪಾದನೆ ಮಾಡುವ ಸಾಮರ್ಥ್ಯದ ಘಟಕ ನಿರ್ಮಾಣವಾಗಲಿದೆ. ಜೊತೆಗೆ ಬಿಡಿಭಾಗಗಳ ಜೋಡಣೆ, ರನ್ ವೇ, ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆ, ಟೌನ್ ಶಿಪ್ ಅನ್ನು ಘಟಕ ಒಳಗೊಂಡಿರುತ್ತದೆ. 3000 ಕೆಜಿ ತೂಕದ ಲೈಟಿ ಯುಟಿಲಿಟಿ ಹೆಲಿಕಾಪ್ಟರ್ಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತದೆ. 5 ರಿಂದ 6 ಜನರು ಪ್ರಯಾಣ ಮಾಡಬಹುದಾದ ಹೆಲಿಕಾಪ್ಟರ್ಗಳನ್ನು ಭೂ ಮತ್ತು ವಾಯು ಸೇನೆ ಬಳಸಲಿವೆ. 2018-19ರ ವೇಳೆಗೆ ಇಲ್ಲಿ ಉತ್ಪಾದನೆಯಾಗುವ ಹೆಲಿಕಾಪ್ಟರ್ ಸೇನೆಗೆ ಸೇರುವ ಸಾಧ್ಯತೆ ಇದೆ.

Question 8

8. ಇತ್ತೀಚೆಗೆ ಈ ಕೆಳಗಿನ ಯಾವ ನಿಗಮ “ಕಾವೇರಿ ಲಾಯಲ್ಟ್ ಕಾರ್ಡ್” ಅನ್ನು ಹೊರ ತಂದಿದೆ?

A
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
B
ಕರ್ನಾಟಕ ರಾಜ್ಯ ಕರಕುಶಲ ನಿಗಮ
C
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ
D
ಮೇಲಿನ ಯಾವುದು ಅಲ್ಲ
Question 8 Explanation: 
ಕರ್ನಾಟಕ ರಾಜ್ಯ ಕರಕುಶಲ ನಿಗಮ

ಕರ್ನಾಟಕ ರಾಜ್ಯ ಕರಕುಶಲ ನಿಗಮವು ‘ಕಾವೇರಿ ಲಾಯಲ್ಟಿ ಕಾರ್ಡ್’ ಹಾಗೂ ‘ಕಾವೇರಿ ಗಿಫ್ಟ್ ಕಾರ್ಡ್’ಗಳನ್ನು ಹೊರತಂದಿದೆ. ಗ್ರಾಹಕರನ್ನು ಆಕರ್ಷಿಸಲು ಹಾಗೂ ನಿಗಮದ ವಹಿವಾಟು ಹೆಚ್ಚಿಸಲು ಈ ಕಾರ್ಡ್ಗಳು ಅನುಕೂಲ ಮಾಡಿಕೊಡಲಿವೆ.

Question 9

9. ಈ ಕೆಳಕಂಡ ಆಯೋಗಗಳನ್ನು ಗಮನಿಸಿ:

I) ವಾಸುದೇವ ರಾವ್ ಸಮಿತಿ

II) ಟಿ. ಎಂ. ಹುಂಡೇಕರ್ ಸಮಿತಿ

III) ಪಿ ಸಿ ಗದ್ದಿಗೌಡರ್ ಸಮಿತಿ

IV) ಎಂ ಬಿ ಪ್ರಕಾಶ್ ಸಮಿತಿ

ಮೇಲಿನ ಯಾವ ಸಮಿತಿಗಳು ರಾಜ್ಯದಲ್ಲಿ ತಾಲ್ಲೂಕು ಪುನರ್ ರಚನೆಗೆ ಸಂಬಂಧಿಸಿವೆ?

A
I, II & III
B
I, III & IV
C
II, III & IV
D
I, II, III & IV
Question 9 Explanation: 
I, II, III & IV

ತಾಲ್ಲೂಕು ಪುನರ್ ರಚನೆ ಸಂಬಂಧ 1973ರಲ್ಲಿ ವಾಸುದೇವ ರಾವ್ ಆಯೋಗ, 1984 ರಲ್ಲಿ ಟಿ.ಎಂ. ಹುಂಡೇಕರ್, 1986ರಲ್ಲಿ ಪಿ.ಸಿ. ಗದ್ದಿಗೌಡರ್, 2007ರಲ್ಲಿ ಎಂ.ಬಿ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಗಳು 40 ತಾಲ್ಲೂಕುಗಳನ್ನು ರಚಿಸುವಂತೆ ಶಿಫಾರಸು ಮಾಡಿದ್ದವು.

Question 10

10. ರಾಜ್ಯ ಸರ್ಕಾರ ಇತ್ತೀಚೆಗೆ 49 ಹೊಸ ತಾಲೂಕುಗಳನ್ನು ಘೋಷಿಸಿದೆ. ಆ ಮೂಲಕ ರಾಜ್ಯದಲ್ಲಿ ತಾಲೂಕುಗಳ ಸಂಖ್ಯೆ ಎಷ್ಟಕ್ಕೇ ಏರಲಿದೆ?

A
225
B
226
C
231
D
241
Question 10 Explanation: 
226

ರಾಜ್ಯದ ಹಾಲಿ ಇರುವ 177 ತಾಲೂಕುಗಳ ಪಟ್ಟಿಗೆ ಹೊಸದಾಗಿ ವಿವಿಧ 27 ಜಿಲ್ಲೆಗಳ ಒಟ್ಟು 49 ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 2018 ರಿಂದ ಹೊಸ ತಾಲೂಕುಗಳು ಜಾರಿಗೆ ಬರಲಿವೆ. ಆ ಮೂಲಕ ರಾಜ್ಯದಲ್ಲಿ ತಾಲೂಕುಗಳ ಸಂಖ್ಯೆ 226ಕ್ಕೆ ಏರಲಿದೆ.

There are 10 questions to complete.

[button link=”http://www.karunaduexams.com/wp-content/uploads/2017/09/ರಾಜ್ಯ-ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-32-1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -32”

  1. Sharanu

    Vychakurahalli Village is located in Gauribadanur Tehsil of Chikkaballapra Districtin Karnataka.
    (Samanya jnana 32 Q. No.1)
    Thank you..

Leave a Comment

This site uses Akismet to reduce spam. Learn how your comment data is processed.