ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಪ್ರಚಲಿತ ವಿದ್ಯಮಾನ ಮತ್ತು ಸಾಮಾನ್ಯ ಜ್ಞಾನ-29

Question 1

1. 2017ನೇ ಸಾಲಿನ ರಾಜ್ಯ ಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿಯನ್ನು ಈ ಕೆಳಗಿನ ಯಾರಿಗೆ ನೀಡಲಾಗಿದೆ?

A
ಮಲ್ಲಿಕಾರ್ಜುನ ಖರ್ಗೆ
B
ಎಚ್. ಆಂಜನೇಯ
C
ಕೆ. ಜೆ. ಜಾರ್ಜ್
D
ಎಚ್.ಕೆ. ಪಾಟೀಲ್
Question 1 Explanation: 
ಮಲ್ಲಿಕಾರ್ಜುನ ಖರ್ಗೆ

ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 102ನೇ ಜನ್ಮದಿನಾಚರಣೆ ಪ್ರಯುಕ್ತ 2017ನೇ ಸಾಲಿನ ರಾಜ್ಯಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿಯನ್ನು ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿ ಸನ್ಮಾಸಿಲಾಯಿತು.

Question 2

2. ಇತ್ತೀಚೆಗೆ ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ರವರು ರೈಲ್ವೆ ಭೋಗಿ ತಯಾರಿಕಾ ಕಾರ್ಖಾನೆಗೆ ಚಾಲನೆ ನೀಡಿದರು?

A
ಕಲ್ಬುರ್ಗಿ
B
ಯಾದಗಿರಿ
C
ರಾಯಚೂರು
D
ವಿಜಯಪುರ
Question 2 Explanation: 
ಯಾದಗಿರಿ

ಯಾದಗಿರಿ ತಾಲೂಕಿನ ಗುರುಮಠಕಲ್ ಬಳಿಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆಗೆ ಹಾಗೂ ವಾಡಿ ಬೈಪಾಸ್ ರೈಲ್ವೆ ಮಾರ್ಗ ನಿರ್ಮಾಣಕ್ಕೆ ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ರಿಮೋಟ್ ಲಿಂಕ್ ಮೂಲಕ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಶುಕ್ರವಾರ ಚಾಲನೆ ನೀಡಿದರು. ಯಾದಗಿರಿ ಜಿಲ್ಲೆಯಲ್ಲಿ ವಾರ್ಷಿಕ 600 ಬೋಗಿ ಫ್ರೇಮ್ ಉತ್ಪಾದನಾ ಸಾಮರ್ಥಯದ ರೈಲ್ವೆ ಬೋಗಿ ಕಾರ್ಖಾನೆ ಇದಾಗಲಿದೆ.

Question 3

3. ಸ್ವರ ಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನೀಡುವ 2017ನೇಸಾಲಿನ ರಾಷ್ಟ್ರೀಯ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

A
ಡಾ. ಪ್ರಭಾ ಅತ್ರೆ
B
ಕೃಷ್ಣೇಂದ್ರ ವಾಡೀಕರ
C
ಮಂಜೂಷಾ ಪಾಟೀಲ
D
ಮಂಜುನಾಥ್ ಜೋಶಿ
Question 3 Explanation: 
ಡಾ. ಪ್ರಭಾ ಅತ್ರೆ

ಸ್ವರ ಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನೀಡುವ 2017ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಮುಂಬೈನ ಖ್ಯಾತ ಗಾಯಕಿ, ಸ್ವರಯೋಗಿನಿ ಡಾ|ಪ್ರಭಾ ಅತ್ರೆ ಹಾಗೂ ಯುವ ಪ್ರಶಸ್ತಿಗೆ ಮೂಲದ ವಿದುಷಿ ಮಂಜೂಷಾ ಪಾಟೀಲ ಹಾಗೂ ಹುಬ್ಬಳ್ಳಿಯ ಕೃಷ್ಣೇಂದ್ರವಾಡೀಕರ ಭಾಜನರಾಗಿದ್ದಾರೆ ರಾಷ್ಟ್ರೀಯ ಪ್ರಶಸ್ತಿ ಲಕ್ಷ ರೂ. ಮೊತ್ತ ಹೊಂದಿದ್ದರೆ, ಯುವ ಪ್ರಶಸ್ತಿ ತಲಾ 25 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

Question 4

4. ಇತ್ತೀಚೆಗೆ ರಾಜ್ಯ ಸರ್ಕಾರ ಶಿವಪುರ ತಾಂಡವನ್ನು ರಾಜ್ಯದ ಮೊದಲ ಕಂದಾಯ ಗ್ರಾಮವೆಂದು ಘೋಷಿಸಿದೆ. ಶಿವಪುರ ತಾಂಡ ಯಾವ ಜಿಲ್ಲೆಯಲ್ಲಿದೆ?

A
ಹಾವೇರಿ
B
ಧಾರವಾಡ
C
ಗದಗ
D
ಕೊಪ್ಪಳ
Question 4 Explanation: 
ಹಾವೇರಿ

ಹಾವೇರಿ ಜಿಲ್ಲೆಯ ಹಾನಗಲ್ಲ ಗ್ರಾಮದ ಶಿವಪುರ ತಾಂಡಾವನ್ನು ಸರಕಾರ ರಾಜ್ಯದ ಪ್ರಥಮ ಕಂದಾಯ ಗ್ರಾಮವಾಗಿ ಘೋಷಿಸಿ, ಅಧಿಸೂಚನೆ ಪ್ರಕಟಿಸಲಾಗಿದೆ.

Question 5

5. ಮರಳಿನ ಕೊರತೆಯಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈ ಕೆಳಗಿನ ಯಾವ ದೇಶದಿಂದ ಮರಳನ್ನು ಆಮದು ಮಾಡಿಕೊಳ್ಳಲಿದೆ?

A
ಶ್ರೀಲಂಕಾ
B
ಮಲೇಷಿಯಾ
C
ಮಾರಿಷಸ್
D
ಬಾಂಗ್ಲದೇಶ
Question 5 Explanation: 
ಮಲೇಷಿಯಾ

ರಾಜ್ಯದಲ್ಲಿ ಉಂಟಾಗಿರುವ ಮರಳು ಅಭಾವ ನೀಗಿಸಲು ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, ಪ್ರತಿ ಲೋಡ್ 35 ಸಾವಿರ ರೂ. ದರದಲ್ಲಿ ಲಭ್ಯವಾಗಲಿದೆ.

Question 6

6. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ದೇಶದ ಮೊದಲ ಹೆಲಿಟ್ಯಾಕ್ಸಿ ಸೇವೆ ಬೆಂಗಳೂರಿನಲ್ಲಿ ಆರಂಭವಾಗಲಿದೆ

II) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್)ವು ಜೆಟ್ ಏರ್ವೇಸ್ ಪ್ರೈ.ಲಿ., ಸಹಯೋಗದಲ್ಲಿ "ಹೆಲಿಟ್ಯಾಕ್ಸಿ' ಸೇವೆಯನ್ನು ಪರಿಚಯಿಸಲಿದೆ.

ಮೇಲಿನ ಯಾವ ಹೇಳಿಕೆ ಸರಿಯಾಗಿದೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 6 Explanation: 
ಹೇಳಿಕೆ ಒಂದು ಮಾತ್ರ

ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್)ವು ಥುಂಬಿ ಏವಿಯೇಷನ್ ಪ್ರೈ.ಲಿ., ಸಹಯೋಗದಲ್ಲಿ "ಹೆಲಿಟ್ಯಾಕ್ಸಿ' ಸೇವೆಯನ್ನು ಪರಿಚಯಿಸುತ್ತಿದೆ.

Question 7

7. ಈ ಕೆಳಗಿನ ಯಾರು ಬಾಲಗಂಗಾಧರನಾಥ ಸ್ವಾಮೀಜಿ ಕುರಿತಾದ ಪುಸ್ತಕ “ದಿ ಸ್ಟೋರಿ ಆಫ್ ಎ ಗುರು” ಪುಸ್ತಕದ ಲೇಖಕರು?

A
ಡಾ. ಸುಧಾಮಯಿ ರಘುನಾಥನ್
B
ಸುಧಾ ಬರಗೂರು
C
ರಾಮಚಂದ್ರ ಗುಹಾ
D
ನಿರ್ಮಲನಂದ ಸ್ವಾಮೀಜಿ
Question 7 Explanation: 
ಡಾ. ಸುಧಾಮಯಿ ರಘುನಾಥನ್

ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಕುರಿತಾದ ಪುಸ್ತಕ “ದಿ ಸ್ಟೋರಿ ಆಫ್ ಎ ಗುರು” ಪುಸ್ತಕವನ್ನು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಬಿಡುಗಡೆಗೊಳಿಸಿದರು. ಈ ಪುಸ್ತಕವನ್ನು ಡಾ. ಸುಧಾಮಯಿ ರಘುನಾಥನ್ ಬರೆದಿದ್ದಾರೆ.

Question 8

8. ರಾಜ್ಯದಲ್ಲಿ ಕೃತಕ ಮೋಡ ಬಿತ್ತನೆ ಕಾರ್ಯಕ್ರಮವನ್ನು ಈ ಕೆಳಗಿನ ಯಾವ ಹೆಸರಿನಡಿ ಕೈಗೊಳ್ಳಲಾಗಿದೆ?

A
ಪ್ರಾಜೆಕ್ಟ್ ವರುಣ
B
ಪ್ರಾಜೆಕ್ಟ್ ವರ್ಷಧಾರೆ
C
ಪ್ರಾಜೆಕ್ಟ್ ಜಲಧಾರೆ
D
ಆಪರೇಶನ್ ವರುಣ
Question 8 Explanation: 
ಪ್ರಾಜೆಕ್ಟ್ ವರ್ಷಧಾರೆ

‘ಪ್ರಾಜೆಕ್ಟ್ ವರ್ಷಧಾರೆ’ ಹೆಸರಿನಲ್ಲಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಯೋಜನೆಯನ್ನು ಕೈಗೊಂಡಿದೆ.

Question 9

9. ಇತ್ತೀಚೆಗೆ ನಿಧನರಾದ ಏಣಗಿ ಬಾಳಪ್ಪ ರವರಿಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಇವರನ್ನು “ನಡೆದಾಡುವ ರಂಗಭೂಮಿಯ ವಿಶ್ವಕೋಶ’ ಎಂತಲೇ ಕರೆಯಲಾಗುತ್ತಿತ್ತು.

II) 2005 ರಲ್ಲಿ ಇವರಿಗೆ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು

III) ಕೇಂದ್ರ ಸರ್ಕಾರ 2011 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಇವರಿಗೆ ನೀಡಿತ್ತು

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
I, II & III
Question 9 Explanation: 
I & II

“ನಡೆದಾಡುವ ರಂಗಭೂಮಿಯ ವಿಶ್ವಕೋಶ’ ಎನ್ನುವ ಖ್ಯಾತಿ ಹೊಂದಿದ್ದ ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ (103) ವಿಧಿವಶರಾದರು. ‘ಪಾದುಕಾ ಪಟ್ಟಾಭಿಷೇಕ’ ನಾಟಕ ಮೂಲಕ ಬಾಳಪ್ಪ ತಮ್ಮ 12ನೇ ವಯಸ್ಸಿನಲ್ಲಿ ರಂಗಪ್ರವೇಶಿಸಿದರು. 1973ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1976ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 1978ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ, 1995ರಲ್ಲಿ ಕೇಂದ್ರ ಸರ್ಕಾರದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1995ರಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ, 2005ರಲ್ಲಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, 2006ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಸಂದಿವೆ.

Question 10

10. ಈ ಮುಂದಿನ ಯಾರು ಈ ಬಾರಿಯ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ?

A
ಕೆ ಎಸ್ ನಿಸಾರ್ ಅಹಮ್ಮದ್
B
ದೇವನೂರು ಮಹಾದೇವ
C
ಕುಂ ವೀರಭದ್ರಪ್ಪ
D
ಜಿ ಎಸ್ ಶಿವರುದ್ರಪ್ಪ
Question 10 Explanation: 
ಕೆ ಎಸ್ ನಿಸಾರ್ ಅಹಮ್ಮದ್

ಜಗತ್ಪ್ರಸಿದ್ಧ ಮೈಸೂರು ದಸರಾವನ್ನು ಈ ಬಾರಿ ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮ್ಮದ್ ಅವರು ಉದ್ಘಾಟಿಸಲಿದ್ದಾರೆ. ಸೆಪ್ಟೆಂಬರ್ 21 ರಿಂದ 30ರ ತನಕ ನಡೆಯಲಿರುವ ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್ ಎರಡನೇ ವಾರದಲ್ಲಿ ನಿಸಾರ್ ಅಹಮದ್ ಅವರಿಗೆ ಆಹ್ವಾನ ನೀಡಲಾಗುವುದು

There are 10 questions to complete.

[button link=”http://www.karunaduexams.com/wp-content/uploads/2017/08/ರಾಜ್ಯ-ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-29.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -29”

  1. Santosh

    Very nice quiz questions self prepare for competitive exams….!

Leave a Reply to Sangappa Cancel reply

This site uses Akismet to reduce spam. Learn how your comment data is processed.