ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,13,14,15,2017

Question 1

1. ಲ್ಯಾಟಿನ್ ಅಮೇರಿಕಾದಲ್ಲಿ ವ್ಯವಹಾರವನ್ನು ಹೆಚ್ಚಿಸಲು ಇಂಟರ್-ಅಮೆರಿಕನ್ ಇನ್ವೆಸ್ಟ್ಮೆಂಟ್ ಕಾರ್ಪೋರೇಷನ್ (ಐಐಸಿ) ನೊಂದಿಗೆ ಯಾವ ಭಾರತೀಯ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ?

A
ಆಕ್ಸಿಸ್ ಬ್ಯಾಂಕ್
B
ಐಸಿಐಸಿಐ ಬ್ಯಾಂಕ್
C
ಕಾರ್ಪೋರೇಶನ್ ಬ್ಯಾಂಕ್
D
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Question 1 Explanation: 
ಆಕ್ಸಿಸ್ ಬ್ಯಾಂಕ್

ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ರಾಷ್ಟ್ರಗಳಲ್ಲಿ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ ಇಂಟರ್ ಅಮೇರಿಕನ್ ಇನ್ವೆಸ್ಟ್ಮೆಂಟ್ ಕಾರ್ಪೋರೇಷನ್ (ಐಐಸಿ) ನೊಂದಿಗೆ ಆಕ್ಸಿಸ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.

Question 2

2. ಯಾವ ರಾಜ್ಯ ಸರ್ಕಾರ ಇತ್ತೀಚೆಗೆ “ಜೀವನೋಪಾಯ ಮಧ್ಯಸ್ಥಿಕೆ ಮತ್ತು ಉದ್ಯಮಶೀಲತೆ ಸೌಲಭ್ಯವನ್ನು (ಲೈಫ್)” ಪ್ರಾರಂಭಿಸಿದೆ?

A
ಮಣಿಪುರ
B
ಮೇಘಾಲಯ
C
ಸಿಕ್ಕಿಂ
D
ಮಿಜೋರಾಂ
Question 2 Explanation: 
ಮೇಘಾಲಯ

ಮೇಘಾಲಯ ಮುಖ್ಯಮಂತ್ರಿ ಡಾ. ಮುಕುಲ್ ಸಂಗ್ಮಾ ಅವರು ಜುಲೈ 11, 2017 ರಂದು “ಜೀವನೋಪಾಯ ಮಧ್ಯಸ್ಥಿಕೆ ಮತ್ತು ಉದ್ಯಮಶೀಲತೆ ಸೌಕರ್ಯ (ಲೈಫ್)”ಗೆ ಚಾಲನೆ ನೀಡಿದರು. ಈ ಕಾರ್ಯಕ್ರಮವು ಗ್ರಾಮೀಣ ಬಡವರ ಜೀವನೋಪಾಯವನ್ನು ಸ್ವಸಹಾಯ ಸಂಘಗಳು, ಗ್ರಾಮ ಸಂಘಟನೆ ಮತ್ತು ಗುಂಪುಗಳ ಪ್ರಕ್ರಿಯೆಯ ಮೂಲಕ ಸುಸ್ಥಿರ ರೀತಿಯಲ್ಲಿ ಸುಧಾರಿಸುವಲ್ಲಿ ಒತ್ತು ನೀಡುತ್ತದೆ.

Question 3

3. ಸಹಕಾರ ಸಂಘಗಳ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ಶಿಕ್ಷಣ ಅರ್ಹತೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಯಾವುದು?

A
ರಾಜಸ್ತಾನ
B
ಗುಜರಾತ್
C
ಮಧ್ಯ ಪ್ರದೇಶ
D
ಮಹಾರಾಷ್ಟ್ರ
Question 3 Explanation: 
ರಾಜಸ್ತಾನ

ಗ್ರಾಮ ಸಹಕಾರ ಸಂಘಗಳು ಮತ್ತು ಇತರೆ ಸಹಕಾರಿ ಸಂಸ್ಥೆಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ರಾಜಸ್ಥಾನ ಸರ್ಕಾರ ಜಾರಿಗೆ ತಂದಿದೆ. ಆ ಮೂಲಕ ಸಹಕಾರಿ ಸಂಘಗಳ ಚುನಾವಣೆಗೆ ಶಿಕ್ಷಣ ಅರ್ಹತೆಯನ್ನು ನಿಗದಿಪಡಿಸಿದ ಭಾರತದ ಮೊದಲ ರಾಜ್ಯವಾಗಿದೆ. ಈ ಉದ್ದೇಶಕ್ಕಾಗಿ, ರಾಜ್ಯ ಸಹಕಾರ ಸಂಘಗಳ ನಿಯಮಗಳು, 2003, ಅನ್ನು ತಿದ್ದುಪಡಿ ಮಾಡಲಾಗುವುದು. ಹೊಸ ನಿಯಮಗಳು ಸುಮಾರು 10,000 ಸಹಕಾರಿ ಮತ್ತು ಕೃಷಿ ಸಾಲ ಸಂಸ್ಥೆಗಳಿಗೆ ಅನ್ವಯವಾಗಲಿದೆ.

Question 4

4. 2017 ಮಾರುತಿ ಸುಜುಕಿ ಲಿವಿಂಗ್ ಲೆಜೆಂಡ್ ಪ್ರಶಸ್ತಿ ಪಡೆದ ಭಾರತೀಯ ಕ್ರೀಡಾಪಟು ಯಾರು?

A
ಮಿಲ್ಖಾ ಸಿಂಗ್
B
ಸಚಿನ್ ತೆಂಡುಲ್ಕರ್
C
ರಾಹುಲ್ ದ್ರಾವಿಡ್
D
ಸೌರವ್ ಗಂಗೂಲಿ
Question 4 Explanation: 
ಮಿಲ್ಖಾ ಸಿಂಗ್

ದಿ ಫ್ಲೈಯಿಂಗ್ ಸಿಖ್ ಎಂದೇ ಪ್ರಸಿದ್ದರಾಗಿರುವ ಮಿಲ್ಖಾ ಸಿಂಗ್ ಅವರಿಗೆ 2017 ಮಾರುತಿ ಸುಜುಕಿ ಲಿವಿಂಗ್ ಲೆಜೆಂಡ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದಲ್ಲದೆ, ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಪಿ.ವಿ. ಸಿಂಧು ಅವರು ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಮತ್ತು ಭಾರತೀಯ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರಿಗೆ ಗೇಮ್ಸ್ಚೇಂಜರ್ ಆಫ್ ದಿ ಇಯರ್ ಪ್ರಶಸ್ತಿ ನೀಡಲಾಯಿತು.

Question 5

5. ಯಾವ ರಾಜ್ಯ ಪ್ರತ್ಯೇಕ ರಾಜ್ಯ ಧ್ವಜವನ್ನು ವಿನ್ಯಾಸಗೊಳಿಸಲು ಸಮಿತಿಯನ್ನು ರಚಿಸಿದೆ?

A
ಕರ್ನಾಟಕ
B
ಗೋವಾ
C
ಕೇರಳ
D
ಓಡಿಶಾ
Question 5 Explanation: 
ಕರ್ನಾಟಕ

ಕರ್ನಾಟಕ ರಾಜ್ಯ ರಾಜ್ಯದ ನೂತನ ಧ್ವಜ ವಿನ್ಯಾಸಗೊಳಿಸಲು ಸರಕಾರ 9 ಜನ ತಜ್ಞರ ಸಮಿತಿ ರಚನೆ ಮಾಡಿದೆ. ಈ ಮೂಲಕ ಅಧಿಕೃತ ಧ್ವಜ ಪಡೆಯುವ ಸನ್ನಾಹದಲ್ಲಿದೆ ಕರ್ನಾಟಕ. ಸಂವಿಧಾನಸ 370ನೇ ವಿಧಿ ಪ್ರಕಾರ ವಿಶೇಷ ಸ್ಥಾನಮಾನ ಪಡೆದಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಾತ್ರ ಈ ರೀತಿಯ ವಿಶೇಷ ಧ್ವಜವನ್ನು ಹೊಂದಿದೆ ಎಂಬುದು .

Question 6

6. ಇತ್ತೀಚಿನ "OECD-FAO” ಕೃಷಿ ಹೊರನೋಟ 2017-2026 ವರದಿಯ ಪ್ರಕಾರ, 2026 ರ ಹೊತ್ತಿಗೆ ಯಾವ ದೇಶವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಲಿದೆ?

A
ಭಾರತ
B
ವಿಯೆಟ್ನಾಂ
C
ಬ್ರೆಜಿಲ್
D
ರಷ್ಯಾ
Question 6 Explanation: 
ಭಾರತ

ವಿಶ್ವಸಂಸ್ಥೆ ಮತ್ತು ಓಇಸಿಡಿ ಇತ್ತೀಚಿನ ವರದಿಯ ಪ್ರಕಾರ 2026ರ ಹೊತ್ತಿಗೆ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಲಿದೆ. "

Question 7

7. ವಿಶ್ವದ ಮೊದಲ ಸಾಲೋ (Saolo) ತಳಿ ಕೇಂದ್ರ ನಿರ್ಮಾಣಕ್ಕೆ IUCN ಯಾವ ದೇಶವನ್ನು ಆಯ್ಕೆ ಮಾಡಿದೆ?

A
ಮಲೇಷಿಯಾ
B
ಮಾರಿಷಸ್
C
ವಿಯೆಟ್ನಾಂ
D
ಥಾಯ್ಲೆಂಡ್
Question 7 Explanation: 
ವಿಯೆಟ್ನಾಂ

ವಿಯೆಟ್ನಾಂನ ಥುವಾ ಥೀನ್ ಹ್ಯು ಪ್ರಾಂತ್ಯದ ಬಾಚ್ ಮಾ ನ್ಯಾಶನಲ್ ಪಾರ್ಕ್ನಲ್ಲಿ ನಿರ್ಮಿಸಿದ ಅಳಿವಿನಂಚಿನಲ್ಲಿರುವ ಸಾಲೋ ಸಸ್ತನಿಗಳ ವಿಶ್ವದ ಮೊದಲ ತಳಿ ಕೇಂದ್ರವನ್ನು ನಿರ್ಮಿಸಲಾಗುವುದು. ಕೇಂದ್ರವನ್ನು 2018 ರಲ್ಲಿ ಸಾಲೋ ವರ್ಲ್ಡ್ ವರ್ಕಿಂಗ್ ಗ್ರೂಪ್ (SWWG) ಮತ್ತು ನ್ಯಾಚುರಲ್ ಕನ್ಸರ್ವೇಷನ್ ಆಫ್ ನೇಚರ್ (ಐಯುಯುಸಿಎನ್) ಜಂಟಿಯಾಗಿ 2018ರಲ್ಲಿ ಈ ಕೇಂದ್ರವನ್ನು ಉದ್ಘಾಟಿಸಲಿವೆ.

Question 8

8. ಮಹಿಳೆಯರ ಏಕದಿನ ಕ್ರಿಕೆಟ್ನಲ್ಲಿ 6000 ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು?

A
ಸೃತಿ ಮಂದನ
B
ಥಿರುಶ್ ಕಾಮಿನಿ
C
ಮಿಥಲಿ ರಾಜ್
D
ವೇದಾ ಕೃಷ್ಣಮೂರ್ತಿ
Question 8 Explanation: 
ಮಿಥಲಿ ರಾಜ್

ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಕ್ರಿಕೆಟ್ ಆಟಗಾರ್ತಿ ಮಿಥಲಿ ರಾಜ್ ರವರು 6000 ರನ್ಗಳನ್ನು ದಾಟಿದ ಮೊದಲ ಮಹಿಳಾ ಆಟಗಾರ್ತಿ ಎನಿಸಿದರು. ಜುಲೈ 12, 2017 ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2017 ಪಂದ್ಯದಲ್ಲಿ ಅವರು ಮೈಲಿಗಲ್ಲನ್ನು ತಲುಪಿದರು. ಇಲ್ಲಿಯವರೆಗೆ, ಮಿಥಾಲಿ ಐದು ಶತಕಗಳು ಮತ್ತು 49 ಅರ್ಧಶತಕಗಳ ನೆರವಿನಿಂದ 6028 ರನ್ ಗಳಿಸಿದ್ದಾರೆ. ಮಿಥಲಿ ರವರು ಮಹಿಳಾ ಕ್ರಿಕೆಟ್ನಲ್ಲಿ ಸಾರ್ವಕಾಲಿಕ ಅತ್ಯಧಿಕ ರನ್ ದಾಖಲಿಸಿರುವ ಆಟಗಾರ್ತಿ ಆಗಿದ್ದಾರೆ. ಇಂಗ್ಲೆಂಡ್ನ ಚಾರ್ಲೊಟ್ಟೆ ಎಡ್ವರ್ಡ್ಸ್ (5992) ಅತಿ ಹೆಚ್ಚು ರನ್ ದಾಖಲಿಸಿರುವ ಎರಡನೇ ಆಟಗಾರ್ತಿ.

Question 9

9. ಈ ಕೆಳಗಿನ ಯಾವ ರಾಜ್ಯದಲ್ಲಿ ಮುರ್ಲೆನ್ ರಾಷ್ಟ್ರೀಯ ಉದ್ಯಾನವನ ಕಾಣಬಹುದಾಗಿದೆ?

A
ಮಿಜೋರಾಂ
B
ಮಣಿಪುರ
C
ಅಸ್ಸಾಂ
D
ಅರುಣಾಚಲ ಪ್ರದೇಶ
Question 9 Explanation: 
ಮಿಜೋರಾಂ

ಮುರ್ಲೆನ್ ರಾಷ್ಟ್ರೀಯ ಉದ್ಯಾನವು ಮಿಜೋರಾಮ್ನ ಚಂಫೈ ಜಿಲ್ಲೆಯಲ್ಲಿದೆ. ಇದು ಸುಮಾರು 200 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಹುಲಿ, ಚಿರತೆ, ಸಾಂಬರ್, ಬಾರ್ಕಿಂಗ್ ಜಿಂಕೆ, ಮಲಯನ್ ದೈತ್ಯ ಅಳಿಲು, ಹಿಮಾಲಯದ ಕಪ್ಪು ಕರಡಿ, ಸೆರೋವ್, ಹೂಲಾಕ್ ಗಿಬ್ಬನ್, ಇತ್ಯಾದಿ ಪ್ರಮುಖ ಪ್ರಾಣಿಗಳನ್ನು ಕಾಣಬಹುದಾಗಿದೆ.

Question 10

10. 2017 ಸುಸ್ಥಿರ ಅಭಿವೃದ್ದಿ ಗುರಿಗಳ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
89
B
116
C
121
D
130
Question 10 Explanation: 
116

2017 ಸುಸ್ಥಿರ ಅಭಿವೃದ್ದಿ ಗುರಿಗಳ ಸೂಚ್ಯಂಕದಲ್ಲಿ ಭಾರತವು 151 ರಾಷ್ಟ್ರಗಳಲ್ಲಿ 116 ನೇ ಸ್ಥಾನದಲ್ಲಿದೆ. ಸ್ವೀಡನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ, ಡೆನ್ಮಾರ್ಕ್ ಮತ್ತು ಫಿನ್ಲ್ಯಾಂಡ್ ನಂತರದ ಸ್ಥಾನದಲ್ಲಿವೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ1314152017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,13,14,15,2017”

Leave a Comment

This site uses Akismet to reduce spam. Learn how your comment data is processed.