ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,7,8,9,2017

Question 1

1. ಈ ಮುಂದಿನ ಯಾರು “ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)” ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?

A
ಸಂಜಯ್ ಕುಮಾರ್
B
ಅರುಣ್ ಮಿಶ್ರಾ
C
ಭಾರ್ಗವ್ ಸಿಂಗ್
D
ಸಂದೇಶ್ ಕುಮಾರ್
Question 1 Explanation: 
ಸಂಜಯ್ ಕುಮಾರ್

1985 ರ ಬ್ಯಾಚ್ ಐಪಿಎಸ್ ಅಧಿಕಾರಿ ಸಂಜಯ್ ಕುಮಾರ್ ಅವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್)ಯ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

Question 2

2. 2017 ಇಂಡೋ-ಥಾಯ್ ಜಂಟಿ ಮಿಲಿಟರಿ ಅಭ್ಯಾಸ "ಮೈತ್ರಿ" ಯಾವ ರಾಜ್ಯದಲ್ಲಿ ಪ್ರಾರಂಭವಾಗಿದೆ?

A
ರಾಜಸ್ತಾನ
B
ಹಿಮಾಚಲ ಪ್ರದೇಶ
C
ಉತ್ತರಖಂಡ್
D
ಜಾರ್ಖಂಡ್
Question 2 Explanation: 
ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಬಾಕ್ಲೋನಲ್ಲಿ ಭಾರತ-ಥಾಯ್ ಜಂಟಿ ಮಿಲಿಟರಿ ಅಭ್ಯಾಸ ಮೈತ್ರಿ ಜುಲೈ 15, 2017 ರಿಂದ ಆರಂಭಗೊಳ್ಳಲಿದೆ. 15 ದಿನಗಳ ದೀರ್ಘಾವಧಿಯ ಮಿಲಿಟರಿ ಅಭ್ಯಾಸ ಇದಾಗಿದೆ.

Question 3

3. 7ನೇ ಬ್ರಿಕ್ಸ್ ಆರೋಗ್ಯ ಸಚಿವರ ಸಭೆ-2017ರ ಆತಿಥ್ಯ ವಹಿಸಲಿರುವ ದೇಶ ಯಾವುದು?

A
ಭಾರತ
B
ರಷ್ಯಾ
C
ಚೀನಾ
D
ದಕ್ಷಿಣ ಆಫ್ರಿಕಾ
Question 3 Explanation: 
ಚೀನಾ

7 ನೇ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಆರೋಗ್ಯ ಸಚಿವರ ಸಭೆ ಜುಲೈ 6 ರಂದು ಚೀನಾದ ಟಿಯಾಂಜಿನ್ನಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಔಷಧಿ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಸಹಕಾರ ಸಭೆಯ ಪ್ರಮುಖ ವಿಷಯವಾಗಿದೆ. ಭಾರತದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜಗತ್ ಪ್ರಕಾಶ್ ನಡ್ಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Question 4

4. 2017 ಜಾಗತಿಕ ಸೈಬರ್ ಭದ್ರತೆ ಸೂಚ್ಯಂಕದಲ್ಲಿ (ಜಿಸಿಐ) ಭಾರತ ಎಷ್ಟನೇ ಸ್ಥಾನದಲ್ಲಿದೆ?

A
23
B
34
C
45
D
56
Question 4 Explanation: 
23

2017 ಜಾಗತಿಕ ಸೈಬರ್ ಭದ್ರತೆ ಸೂಚ್ಯಂಕದಲ್ಲಿ (ಜಿಸಿಐ) 165 ದೇಶಗಳಲ್ಲಿ ಭಾರತ 23 ನೇ ಸ್ಥಾನ ಪಡೆದಿದೆ. ವಿಶ್ವಸಂಸ್ಥೆಯ ಟೆಲಿಕಮ್ಯುನಿಕೇಶನ್ಸ್ ಏಜೆನ್ಸಿ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ಐಟಿಯು) ಈ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಸೂಚ್ಯಂಕವು ಡಿಜಿಟಲ್ ವ್ಯವಸ್ಥೆಗಳಿಗೆ ಸೈಬರ್ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಪ್ರಪಂಚದಾದ್ಯಂತದ ರಾಷ್ಟ್ರಗಳ ಬದ್ಧತೆಯನ್ನು ಅಳೆಯುತ್ತದೆ. ಭಾರತವು ಸೂಚ್ಯಂಕದಲ್ಲಿ 0.683 ಅಂಕಗಳೊಂದಿಗೆ 23ನೇ ಸ್ಥಾನದಲ್ಲಿದೆ. ಸಿಂಗಪುರ್ 0.925 ಅಂಕಗಳೊಂದಿಗೆ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ಸಿಂಗಾಪುರ್, ಯುನೈಟೆಡ್ ಸ್ಟೇಟ್ಸ್, ಮಲೇಷಿಯಾ, ಒಮಾನ್, ಎಸ್ಟೋನಿಯಾ, ಮಾರಿಷಸ್, ಆಸ್ಟ್ರೇಲಿಯಾ, ಜಾರ್ಜಿಯಾ, ಫ್ರಾನ್ಸ್ ಮತ್ತು ಕೆನಡಾ ಸೈಬರ್ ಭದ್ರತೆಗೆ ಅತಿ ಹೆಚ್ಚು ಬದ್ಧವಾದ 10 ದೇಶಗಳು.

Question 5

5. ವಿದ್ಯಾರ್ಥಿ ವಿಜ್ಞಾನಿ ಸಂಪರ್ಕ ಕಾರ್ಯಕ್ರಮ "ಜಿಗ್ಯಾಸ (Jigyasa)"ವನ್ನು ಅಧಿಕೃತವಾಗಿ ಯಾವ ನಗರದಲ್ಲಿ ಚಾಲನೆ ನೀಡಲಾಯಿತು?

A
ನವ ದೆಹಲಿ
B
ಬೆಂಗಳೂರು
C
ವಾರಣಾಸಿ
D
ಕರ್ನಲ್
Question 5 Explanation: 
ನವ ದೆಹಲಿ

ವಿಜ್ಞಾನದಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಬೆಳೆಸಲು ಕೇಂದ್ರ ಸರ್ಕಾರ ಅಧಿಕೃತವಾಗಿ ವಿದ್ಯಾರ್ಥಿ-ವಿಜ್ಞಾನಿ ಸಂಪರ್ಕ ಕಾರ್ಯಕ್ರಮ "ಜಿಗ್ಯಾಸ"ಕ್ಕೆ ನವದೆಹಲಿಯಲ್ಲಿ ಚಾಲನೆ ನೀಡಿತು. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಈ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಕೇಂದ್ರೀಯ ವಿದ್ಯಾಲಯ ಸಂಘಟನ್ (ಕೆವಿಎಸ್) ನೊಂದಿಗೆ ಕೈ ಜೋಡಿಸಿದೆ. ಈ ಯೋಜನೆಯು 1151 ಕೇಂದ್ರೀಯ ವಿದ್ಯಾಲಯಗಳನ್ನು CSAR ನ 38 ರಾಷ್ಟ್ರೀಯ ಪ್ರಯೋಗಾಲಯಗಳೊಂದಿಗೆ ಸಂಪರ್ಕಿಸಿ ವಾರ್ಷಿವಾಗಿ 100,000 ವಿದ್ಯಾರ್ಥಿಗಳನ್ನು ಮತ್ತು ಸುಮಾರು 1000 ಶಿಕ್ಷಕರನ್ನು ತಲುಪುವ ಗುರಿ ಹೊಂದಿದೆ.

Question 6

6. ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಭಾರತದ ಮೊದಲ ವಿಶ್ವವಿದ್ಯಾನಿಲಯವು ಯಾವ ನಗರದಲ್ಲಿ ಸ್ಥಾಪನೆಯಾಗಲಿದೆ?

A
ರಾಂಚಿ
B
ಹೈದ್ರಾಬಾದ್
C
ಭುಬನೇಶ್ವರ್
D
ಪುಣೆ
Question 6 Explanation: 
ಹೈದ್ರಾಬಾದ್

ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಭಾರತದ ಮೊದಲ ವಿಶ್ವವಿದ್ಯಾನಿಲಯವು ಹೈದ್ರಾಬಾದಿನಲ್ಲಿ ನಿರ್ಮಾಣವಾಗಲಿದೆ. ತೆಲಂಗಣ ಸರ್ಕಾರ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಎಲ್.ಕೆ.ಜಿ ಯಿಂದ ಸ್ನಾತಕೋತ್ತರ ಪದವಿಯವರಿಗೆ (ಕೆ.ಜಿ.ಗೆ ಪಿಜಿ) ಉಚಿತ ಶಿಕ್ಷಣ ನೀತಿಯ ಅಂಗವಾಗಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು.

Question 7

7. 2017 ಮಲಬಾರ್ ತ್ರಿಪಕ್ಷೀಯ ನೌಕಾಪಡೆ ಅಭ್ಯಾಸ ಭಾರತ ಮತ್ತು ಯಾವ ರಾಷ್ಟ್ರಗಳ ನಡುವೆ ಆರಂಭವಾಗಿದೆ?

A
ರಷ್ಯಾ ಮತ್ತು ಜಪಾನ್
B
ಅಮೆರಿಕ ಮತ್ತು ಜಪಾನ್
C
ಚೀನಾ ಮತ್ತು ಶ್ರೀಲಂಕಾ
D
ರಷ್ಯಾ ಮತ್ತು ಶ್ರೀಲಂಕಾ
Question 7 Explanation: 

ಜುಲೈ 7 ರಿಂದ 2017 ರವರೆಗೆ ಭಾರತ, ಅಮೆರಿಕ ಮತ್ತು ಜಪಾನ್ ನಡುವೆ ಮಲಬಾರ್ ತ್ರಿಪಕ್ಷೀಯ ನೌಕಾಪಡೆ ಅಭ್ಯಾಸ ಪ್ರಾರಂಭವಾಗಿದೆ.

Question 8

8. ಈ ಕೆಳಗಿನ ಯಾವ ಭಾರತದ ನಗರವನ್ನು ಯುನೆಸ್ಕೋ “ವಿಶ್ವ ಪಾರಂಪರಿಕ ನಗರ”ವೆಂದು ಘೋಷಿಸಿದೆ?

A
ಅಹಮದಾಬಾದ್
B
ಮುಂಬೈ
C
ಬಾದಾಮಿ
D
ಕೋಲ್ಕತ್ತಾ
Question 8 Explanation: 
ಅಹಮದಾಬಾದ್

ಅಹಮದಾಬಾದ್ ನಗರವನ್ನು “ವಿಶ್ವ ಪಾರಂಪರಿಕ ನಗರ” ವೆಂದು ಪೋಲೆಂಡ್ನ ಕ್ರ್ಯಾಕೊವ್ನಲ್ಲಿ ನಡೆದ ಯುನೆಸ್ಕೊ ವಿಶ್ವ ಪರಂಪರೆ ಸಮಿತಿಯ 41 ನೇ ಅಧಿವೇಶನದಲ್ಲಿ ಘೋಷಿಸಲಾಗಿದೆ. ಇದರೊಂದಿಗೆ ಸುಲ್ತಾನ್ ಅಹ್ಮದ್ ಷಾ ಸ್ಥಾಪಿಸಿದ 606 ವರ್ಷ ಹಳೆಯದಾದ ಅಹಮದಾಬಾದ್ ನಗರವು ಭಾರತದ ಮೊದಲ ವಿಶ್ವ ಪರಂಪರೆ ನಗರವಾಗಿದೆ. ಮಹಾತ್ಮಾ ಗಾಂಧಿಯವರ ನೇತೃತ್ವದ ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಕ್ಕೆ ಈ ನಗರವು ಕೇಂದ್ರವಾಗಿತ್ತು. ಗೋಡೆ ನಗರವೆಂದು ಕರೆಯಲಾಗುವ ಅಹಮದಾಬಾದ್ 26 ಎಎಸ್ಐ-ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ. ಪ್ಯಾರಿಸ್, ಕೈರೋ ಮತ್ತು ಎಡಿನ್ಬರ್ಗ್ ಮುಂತಾದ ವಿಶ್ವ ಪರಂಪರೆಯ ನಗರಗಳ ಪಟ್ಟಿಗೆ ಅಹಮದಾಬಾದ್ ಕೂಡ ಸೇರಿಕೊಳ್ಳಲಿದೆ. ಪ್ರಪಂಚದಾದ್ಯಂತ ಒಟ್ಟು 287 ವಿಶ್ವ ಪಾರಂಪರೆಯ ನಗರಗಳಲ್ಲಿ, ಭಾರತದ ಉಪಖಂಡದಲ್ಲಿ ಕೇವಲ ಎರಡು ನಗರಗಳಿವೆ - ನೇಪಾಳದ ಭಕ್ತಿಪುರ್ ಮತ್ತು ಶ್ರೀಲಂಕಾದಲ್ಲಿ ಗ್ಯಾಲೆ.

Question 9

9. ಸಮುದಾಯದ ಕೆಲಸಕ್ಕಾಗಿ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ "ಆರ್ಡರ್ ಆಫ್ ಆಸ್ಟ್ರೇಲಿಯಾ" ಪಡೆದ ಭಾರತೀಯ ಮೂಲದ ವ್ಯಕ್ತಿ ಯಾರು?

A
ಗುರುಸ್ವಾಮಿ ಜಯರಾಮನ್
B
ಕಿಶೋರ್ ಮನಸಿಂಗ್
C
ರಾಜೇಶ್ ಚಬ್ಬರ್
D
ಪ್ರಸಾದ್ ಕುಲಕುರ್ಣಿ
Question 9 Explanation: 
ಗುರುಸ್ವಾಮಿ ಜಯರಾಮನ್

ಭಾರತೀಯ-ಮೂಲದ ಆಸ್ಟ್ರೇಲಿಯಾ ನಿವಾಸಿ ಗುರುಸ್ವಾಮಿ ಜಯರಾಮನ್ ರವರಿಗೆ ಸಮುದಾಯದ ಕೆಲಸಕ್ಕಾಗಿ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ "ಆರ್ಡರ್ ಆಫ್ ಆಸ್ಟ್ರೇಲಿಯಾ"ವನ್ನು ನೀಡಿ ಗೌರವಿಸಿಲಾಗಿದೆ. ಜಯರಾಮನ್ ರವರು ವೂಲ್ಲಾರಾ ಮುನಿಸಿಪಲ್ ಕೌನ್ಸಿಲ್ ನಲ್ಲಿ ಹಿರಿಯ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಕಳೆದ 25 ವರ್ಷಗಳಿಂದ ತಮ್ಮ ಬಿಡುವಿನ ವೇಳೆಯನ್ನು ಸಮುದಾಯದ ಕೆಲಸಕ್ಕೆ ಅರ್ಪಿಸುತ್ತಿದ್ದಾರೆ. ಆಬರ್ನ್ ಡೈವರ್ಸಿಟಿ ಸರ್ವಿಸಸ್, ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ, ಶ್ರೀ ಓಂ ಆದಿ ಸಖಿ ಆಶ್ರಮ, ಸೇವಾ ಇಂಟರ್ನ್ಯಾಷನಲ್ ಆಸ್ಟ್ರೇಲಿಯಾ, ಮುಂತಾದ ವಿವಿಧ ಸಮುದಾಯ ಸಂಘಟನೆಗಳನ್ನು ಪ್ರತಿನಿಧಿಸಿದ್ದಾರೆ.

Question 10

10. 2017-ವಿಶ್ವ ಪೆಟ್ರೋಲಿಯಂ ಕಾಂಗ್ರೆಸ್ (WPC) ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ್ದ ರಾಷ್ಟ್ರ ಯಾವುದು?

A
ಟರ್ಕಿ
B
ಭಾರತ
C
ಸೌದಿ ಅರೇಬಿಯಾ
D
ಕತಾರ್
Question 10 Explanation: 
ಟರ್ಕಿ

22 ನೇ ವಿಶ್ವ ಪೆಟ್ರೋಲಿಯಂ ಕಾಂಗ್ರೆಸ್ (ಡಬ್ಲ್ಯೂಪಿಸಿ) ಅಂತಾರಾಷ್ಟ್ರೀಯ ಸಮ್ಮೇಳನ ಜುಲೈ 10 ರಿಂದ 12, 2017 ರವರೆಗೆ ಟರ್ಕಿಯ ಇಸ್ತಾನ್ಬುಲ್ ನಲ್ಲಿ ನಡೆಯಲಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ತೈಲ ಮತ್ತು ಅನಿಲ ಉದ್ಯಮದ `ಒಲಿಂಪಿಕ್ಸ್` ಈ ಸಮ್ಮೇಳನ ಗುರುತಿಸಲ್ಪಟ್ಟಿದೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ7892017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

5 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,7,8,9,2017”

Leave a Comment

This site uses Akismet to reduce spam. Learn how your comment data is processed.