ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,1,2,2017

Question 1

1. ಭಾರತದ ನೂತನ ಅಟಾರ್ನಿ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?

A
ಕೆ ಕೆ ವೇಣುಗೋಪಾಲ್
B
ಆರ್ ಕೆ ಥಾಮಸ್
C
ಆರ್ ನಾರಿಮನ್
D
ಕೃಷ್ಣ ಎಸ್ ದೀಕ್ಷಿತ್
Question 1 Explanation: 
ಕೆ ಕೆ ವೇಣುಗೋಪಾಲ್

ಪ್ರಸಿದ್ಧ ಸಾಂವಿಧಾನಿಕ ತಜ್ಞ ಮತ್ತು ಹಿರಿಯ ವಕೀಲರಾದ ಕೋಟ್ಯಾನ್ ಕಟಂಕೋಟ್ ವೇಣುಗೋಪಾಲ್ (86) ಭಾರತದ ಹೊಸ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದಾರೆ. 3 ವರ್ಷಗಳ ಅಧಿಕಾರದಲ್ಲಿ ಇರಲಿದ್ದಾರೆ. ಮುಕುಲ್ ರೊಹಾಟ್ಗಿ ರವರಿಂದ ತೆರವಾದ ಸ್ಥಾನವನ್ನು ವೇಣುಗೋಪಾಲ್ ತುಂಬಲಿದ್ದಾರೆ. ಭಾರತದ ಅಟಾರ್ನಿ ಜನರಲ್ ರವರು ಭಾರತ ಸರ್ಕಾರದ ಮುಖ್ಯ ಕಾನೂನು ಸಲಹೆಗಾರ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಸರ್ಕಾರದ ಪ್ರಾಥಮಿಕ ವಕೀಲರಾಗಿರುತ್ತಾರೆ. ಅಟಾರ್ನಿ ಜನರಲ್ ರವರು ಸಂವಿಧಾನದ ಅನುಚ್ಛೇದ 76 (1) ರ ಅಡಿಯಲ್ಲಿ ಭಾರತದ ರಾಷ್ಟ್ರಪತಿಯಿಂದ ನೇಮಕಗೊಳ್ಳುತ್ತಾರೆ.

Question 2

2. “2017-ಗ್ರೇಟ್ ಇಮ್ಮಿಗ್ರಾಂಟ್ಸ್: ದಿ ಪ್ರೈಡ್ ಆಫ್ ಅಮೇರಿಕಾ" ಪ್ರಶಸ್ತಿಯನ್ನು ಪಡೆದ ಭಾರತೀಯ ಅಮೆರಿಕನ್ ವ್ಯಕ್ತಿ ಯಾರು?

A

ಶಾಂತನು ನಾರಾಯಣ್ ಮತ್ತು ವಿವೇಕ್ ಮೂರ್ತಿ

B

ರಾಮಸ್ವಾಮಿ ಅಯ್ಯಂಗಾರ್ ಮತ್ತು ವಿವೇಕ್ ಮೂರ್ತಿ

C

ಸಂದೀಪ್ ಚೌಧರಿ ಮತ್ತು ಶಾಂತನು ನಾರಾಯಣ್

D

ಚಂದ್ರಶೇಖರ್ ಮತ್ತು ವಿವೇಕ್ ಮೂರ್ತಿ

Question 2 Explanation: 
ಶಾಂತನು ನಾರಾಯಣ್ ಮತ್ತು ವಿವೇಕ್ ಮೂರ್ತಿ

2017 ಜುಲೈ 4 ರಂದು ಅಮೆರಿಕದ ಸ್ವಾತಂತ್ರ್ಯ ದಿನದಂದು ಭಾರತೀಯ ಅಮೆರಿಕನ್ ಮೂಲದ ಅಡೋಬ್ ಮುಖ್ಯಸ್ಥ ಶಾಂತನು ನಾರಾಯಣ್ ಮತ್ತು ಮಾಜಿ ಯುಎಸ್ ಸರ್ಜನ್ ಜನರಲ್ ವಿವೇಕ್ ಮೂರ್ತಿ ಅವರನ್ನು 2017 ರ ಗ್ರೇಟ್ ಇಮ್ಮಿಗ್ರಾಂಟ್ಸ್: ದಿ ಪ್ರೈಡ್ ಆಫ್ ಅಮೆರಿಕ "ಪ್ರಶಸ್ತಿ ನೀಡಿ ಗೌರವಿಸಲಾಯಿತು.

Question 3

3. ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ನ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?

A
ಆರ್.ಕೆ. ಪಚ್ನಂದ
B
ರಾಜೀವ್ ಜೈನ್
C
ಕಿಶೋರ್ ಸಿಂಗ್
D
ಮನೀಶ್ ಮೌದ್ಗಿಲ್
Question 3 Explanation: 
ಆರ್.ಕೆ. ಪಚ್ನಂದ

ಪಶ್ಚಿಮ ಬಂಗಾಳದ ಕ್ಯಾಡರ್ನ 1983 ಬ್ಯಾಚ್ ಐಪಿಎಸ್ ಅಧಿಕಾರಿ ಆರ್.ಕೆ.ಪಚ್ನಂದ ಅವರು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ನ ಹೊಸ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಇವರು ಅಕ್ಟೋಬರ್ 31, 2018ರ ವರೆಗೆ ಐಟಿಬಿಪಿ ಡೈರೆಕ್ಟರ್ ಜನರಲ್ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

Question 4

4. ಪ್ರಸಿದ್ಧ ಚಲನಚಿತ್ರ ನಟ ಮಿನಕೆತನ್ ದಾಸ್ ಇತ್ತೀಚೆಗೆ ನಿಧನ ಹೊಂದಿದ್ದರು. ಇವರು ಯಾವ ಭಾಷೆಯ ಚಲನಚಿತ್ರ ಉದ್ಯಮಕ್ಕೆ ಸಂಬಂಧಿಸಿದ್ದಾರೆ?

A
ತೆಲುಗು
B
ಓಡಿಯಾ
C
ತಮಿಳು
D
ಮಲಯಾಳಂ
Question 4 Explanation: 
ಓಡಿಯಾ

ಓಡಿಯಾ ಸಿನಿಮಾದ ಪ್ರಸಿದ್ದ ನಟ ಮಿನಕೆತನ್ ದಾಸ್ (56), ಮೃತಪಟ್ಟಿದ್ದಾರೆ. ದಾಸ್ ಅವರು ತಮ್ಮ ನೆಗೆಟಿವ್ ಪಾತ್ರಗಳಿಂದ ಸಿನಿಮಾ ಮತ್ತು ದೂರದರ್ಶನ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದರು. ಬಾಲಂಗಾ ಟೋಕಾ, ಜಿಯಂತ ಭುಟಾ ಮತ್ತು ಮೋಸ್ಟ್ ವಾಂಟೆಡ್ ಸೇರಿದಂತೆ ಹಲವಾರು ಓಡಿಯಾ ಚಿತ್ರಗಳಲ್ಲಿನ ನಟನೆಗಾಗಿ ದಾಸ್ ಪ್ರಸಿದ್ದರಾಗಿದ್ದರು.

Question 5

5. 2017 ವಿಶ್ವದ ಅತ್ಯುತ್ತಮ ಜ್ಯೋತಿಷಿ ಪ್ರಶಸ್ತಿ ಯಾರಿಗೆ ಲಭಿಸಿದೆ?

A
ಟಿ ಎಸ್ ವಿನೀತ್
B
ಪಂಡಿತ್ ಗುರೂಜಿ
C
ರಾಘವೇಂದ್ರ ಚಾರ್
D
ಚಂದ್ರಶೇಖರ ಗುರೂಜಿ
Question 5 Explanation: 
ಟಿ ಎಸ್ ವಿನೀತ್

ಹೈದರಾಬಾದ್ ಮೂಲದ ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ ಟಿ.ಎಸ್. ವಿನೀತ್ ಭಟ್ ರವರಿಗೆ ಮಾಸ್ಕೋದಲ್ಲಿ ನಡೆದ ರಷ್ಯ-ಇಂಡಿಯನ್ ಎಕಾನಮಿಕ್ ಡೈಲಾಗ್ ದುಂಡು ಮೇಜಿನ ಸಭೆಯಲ್ಲಿ 'ವಿಶ್ವದ ಅತ್ಯುತ್ತಮ ಜ್ಯೋತಿಷಿ ಪ್ರಶಸ್ತಿ' ಯನ್ನು ನೀಡಿ ಗೌರವಿಸಲಾಗಿದೆ.

Question 6

6. ಈ ಕೆಳಗಿನ ಯಾರನ್ನು 2017 ಯುಎಸ್ಐಬಿಸಿ (USIBC) ಜಾಗತಿಕ ನಾಯಕತ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ?

A
ಆದಿ ಗೋದ್ರೆಜ್
B
ಅಜೀಂ ಪ್ರೇಮ್ ಜಿ
C
ಮುಖೇಶ್ ಅಂಬಾನಿ
D
ಸುಧಾ ಮೂರ್ತಿ
Question 6 Explanation: 
ಆದಿ ಗೋದ್ರೆಜ್

ಗೋದ್ರೆಜ್ ಗ್ರೂಪ್ ಅಧ್ಯಕ್ಷ ಆದಿ ಗೋದ್ರೆಜ್ ಮತ್ತು ಡೌ ಕೆಮಿಕಲ್ ಸಿಇಒ ಆಂಡ್ರ್ಯೂ ಲಿವರೀಸ್ ಅವರು ಅಮೆರಿಕ-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ)ನ 2017 ಜಾಗತಿಕ ನಾಯಕತ್ವ ಪ್ರಶಸ್ತಿಯನ್ನು ವಾಷಿಂಗ್ಟನ್ ಡಿ.ಸಿ ಯ ಯುಎಸ್ಐಬಿಸಿ 42 ನೇ ವಾರ್ಷಿಕೋತ್ಸವ ಲೀಡರ್ಶಿಪ್ ಶೃಂಗಸಭೆಯಲ್ಲಿ ಪ್ರಧಾನ ಮಾಡಲಾಯಿತು.

Question 7

7. ಅಂತಾರಾಷ್ಟ್ರೀಯ ಸಹಕಾರ ದಿನ (ಐಡಿಸಿ)ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಜುಲೈ ತಿಂಗಳ ಮೊದಲ ಸೋಮವಾರ
B
ಜುಲೈ ತಿಂಗಳ ಮೊದಲ ಬುಧವಾರ
C
ಜುಲೈ ತಿಂಗಳ ಮೊದಲ ಶುಕ್ರವಾರ
D
ಜುಲೈ ತಿಂಗಳ ಮೊದಲ ಶನಿವಾರ
Question 7 Explanation: 
ಜುಲೈ ತಿಂಗಳ ಮೊದಲ ಶನಿವಾರ

ವಿಶ್ವಸಂಸ್ಥೆಯ (ಯುಎನ್) ಅಂತಾರಾಷ್ಟ್ರೀಯ ಸಹಕಾರ ದಿನ (ಐಡಿಸಿ)ವನ್ನು ಜುಲೈ ತಿಂಗಳ ಮೊದಲ ಶನಿವಾರದಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರವನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ, ಜುಲೈ 1 ರಂದು ‘Co-operatives ensure no one is left behind’ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದೆ.

Question 8

8. 41ನೇ ವಾರ್ಷಿಕ UNESCO ವಿಶ್ವ ಪರಂಪರೆ ಸಮಿತಿಯ ಸಮ್ಮೇಳನದ ಆತಿಥ್ಯವನ್ನು ಯಾವ ದೇಶ ವಹಿಸುತ್ತಿದೆ?

A
ಜರ್ಮನಿ
B
ಪೋಲ್ಯಾಂಡ್
C
ಭಾರತ
D
ಚೀನಾ
Question 8 Explanation: 
ಭಾರತ

UNESCO ವಿಶ್ವ ಪರಂಪರೆ ಸಮಿತಿಯ 41ನೇ ಅಧಿವೇಶನ ಜುಲೈ 2 ರಿಂದ 12, 2017 ರವರೆಗೆ ಪೋಲೆಂಡ್ನ ಕ್ರಾಕೊವ್ನಲ್ಲಿ ಪ್ರಾರಂಭವಾಗಿದೆ.

Question 9

9. ಯಾವ ದೇಶದ ಫುಟ್ಬಾಲ್ ತಂಡ “2017 ಫಿಫಾ ಕಾನ್ಫೆಡರೇಷನ್ ಕಪ್“ ಅನ್ನು ಗೆದ್ದುಕೊಂಡಿತು?

A
ಜರ್ಮನಿ
B
ಮೆಕ್ಸಿಕೊ
C
ಪೋರ್ಚುಗಲ್
D
ಸ್ಪೇನ್
Question 9 Explanation: 
ಜರ್ಮನಿ

ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಫೈನಲ್ ಪಂದ್ಯದಲ್ಲಿ 1-0 ಗೋಲುಗಳ ಮೂಲಕ ಕೊಪಾ ಅಮೆರಿಕ ಚಾಂಪಿಯನ್ ಚಿಲಿಯನ್ನು ಸೋಲಿಸಿ ಜರ್ಮನಿ ತಂಡ ಫಿಫಾ ಕಾನ್ಫಡೆರೇಷನ್ ಕಪ್ ಫುಟ್ಬಾಲ್-2017 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಜರ್ಮನಿಯು ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Question 10

10. ಭಾರತದಲ್ಲಿ ಪ್ರತಿ ವರ್ಷ ಯಾವ ದಿನದಂದು “ರಾಷ್ಟ್ರೀಯ ವೈದ್ಯರ ದಿನ”ವನ್ನು ಆಚರಿಸಲಾಗುತ್ತದೆ?

A
ಜುಲೈ 1
B
ಜುಲೈ 3
C
ಜುಲೈ 4
D
ಜುಲೈ 5
Question 10 Explanation: 
ಜುಲೈ 1

ರಾಷ್ಟ್ರೀಯ ವೈದ್ಯರ ದಿನವನ್ನು ಜುಲೈ 1 ರಂದು ಆಚರಿಸಲಾಗುತ್ತದೆ. ಪ್ರತಿಷ್ಠಿತ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ. ಬಿಧಾನ್ ಚಂದ್ರ ರಾಯ್ ಅವರನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್29302017.pdf“]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,1,2,2017”

    1. Thank u sir your website is very helpful for thousands students

Leave a Comment

This site uses Akismet to reduce spam. Learn how your comment data is processed.