ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,29,30,2017

Question 1

1. “2017 ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್” (ಐಎಫ್ಎಫ್ಎಂ)ನ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?

A
ವಿದ್ಯಾ ಬಾಲನ್
B
ಕಂಗಾನ ರಾವತ್
C
ಪ್ರಿಯಾಂಕ ಚೋಪ್ರಾ
D
ಆಲಿಯಾ ಭಟ್
Question 1 Explanation: 
ವಿದ್ಯಾ ಬಾಲನ್

ಪ್ರಸಿದ್ಧ ಬಾಲಿವುಡ್ ಚಲನಚಿತ್ರ ನಟಿ, ವಿದ್ಯಾ ಬಾಲನ್ ರವರು “2017 ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್” (ಐಎಫ್ಎಫ್ಎಂ)”ನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

Question 2

2. ಜಾನುವಾರುಗಳಿಗಾಗಿ ಭಾರತದ ಮೊದಲ ರಕ್ತ ಬ್ಯಾಂಕ್ ಅನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುವುದು?

A
ಕೇರಳ
B
ಗುಜರಾತ್
C
ಓಡಿಶಾ
D
ಬಿಹಾರ
Question 2 Explanation: 
ಓಡಿಶಾ

ದೇಶದ ಮೊದಲ ಜಾನುವಾರುಗಳ ರಕ್ತ ಬ್ಯಾಂಕ್ ಓಡಿಶಾದಲ್ಲಿ ಸ್ಥಾಪಿಸಲಾಗುವುದು. ಒಡಿಶಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿಯ (OUAT) ಆವರಣದಲ್ಲಿ ರೂ 3.25 ಕೋಟಿ ಅಂದಾಜು ವೆಚ್ಚದಲ್ಲಿ ರಕ್ತ ಬ್ಯಾಂಕ್ ಅನ್ನು ಸ್ಥಾಪಿಸಲಾಗುವುದು. ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಭರಿಸಲಿವೆ.

Question 3

3. ಸ್ಟೀಲ್ ಮೆಟ್ರೋ ಬೋಗಿಗಳನ್ನು ತಯಾರಿಸುವ ಸಲುವಾಗಿ ಜಪಾನಿನ ಕಾವಾಸಾಕಿ ಹೆವಿ ಇಂಡಸ್ಟ್ರೀಸ್ ಲಿಮಿಟೆಡ್ (ಕೆ.ಹೆಚ್ಐ) ನೊಂದಿಗೆ ಯಾವ ಭಾರತೀಯ ಕಂಪನಿ ಒಪ್ಪಂದ ಮಾಡಿಕೊಂಡಿದೆ?

A
BHEL
B
ONGC
C
SAIL
D
TATA Steel
Question 3 Explanation: 
BHEL

ಜಪಾನಿನ ಕವಾಸಾಕಿ ಹೆವಿ ಇಂಡಸ್ಟ್ರೀಸ್ ಲಿಮಿಟೆಡ್ (ಕೆ.ಎಚ್.ಐ) ನೊಂದಿಗೆ ಮೆಟ್ರೊ ರೈಲುಗಾಗಿ ಸ್ಟೀಲ್ ಬೋಗಿಗಳನ್ನು ತಯಾರಿಸಲು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಒಪ್ಪಂದಕ್ಕೆ ಸಹಿ ಹಾಕಿದೆ. ಜಪಾನ್ ತಂತ್ರಜ್ಞಾನವನ್ನು ಬಳಸಿಕೊಂಡು BHELನಲ್ಲಿ ಬೋಗಿಗಳ ವಿನ್ಯಾಸ, ಎಂಜಿನಿಯರಿಂಗ್ ಮತ್ತು ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.

Question 4

4. ರಾಷ್ಟ್ರೀಯ ಅಂಕಿಅಂಶಗಳ ದಿನವನ್ನು ________ ರಂದು ಆಚರಿಸಲಾಗುತ್ತದೆ?

A
ಜೂನ್ 27
B
ಜೂನ್ 28
C
ಜೂನ್ 29
D
ಜೂನ್ 30
Question 4 Explanation: 
ಜೂನ್ 29

ಸಾಮಾಜಿಕ-ಆರ್ಥಿಕ ಯೋಜನೆ ಮತ್ತು ನೀತಿ ರೂಪಿಸಲು ಅಂಕಿಅಂಶಗಳ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕ ಅರಿವು ಮೂಡಿಸಲು ಜೂನ್ 29 ರಂದು ರಾಷ್ಟ್ರೀಯ ಅಂಕಿಅಂಶಗಳ ದಿನ (ಎನ್ಎಸ್ಡಿ) ವನ್ನು ಭಾರತದಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ. ಸಂಖ್ಯಾಶಾಸ್ತ್ರ ಮತ್ತು ಆರ್ಥಿಕ ಯೋಜನೆಗಳ ಕ್ಷೇತ್ರಗಳಲ್ಲಿ ತನ್ನ ಅಮೂಲ್ಯವಾದ ಕೊಡುಗೆಗಳನ್ನು ನೀಡಿರುವ ಭಾರತೀಯ ಸಂಖ್ಯಾಶಾಸ್ತ್ರದ ಪಿತಾಮಹರಾದ ಪಿ. ಸಿ. ಮಹಲಾನೊಬಿಸ್ ಅವರ ಜನ್ಮದಿನವನ್ನು ಅಂಕಿಅಂಶಗಳ ದಿನವೆಂದು ಆಚರಿಸಲಾಗುತ್ತಿದೆ.

Question 5

5. ಭಾರತದ ಅತಿ ದೊಡ್ಡ ಸಿಹಿ ನೀರಿನ ಅಕ್ವೇರಿಯಂ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಿದೆ?

A
ಜಾರ್ಖಂಡ್
B
ಓಡಿಶಾ
C
ಪಶ್ಚಿಮ ಬಂಗಾಳ
D
ಗುಜರಾತ್
Question 5 Explanation: 
ಜಾರ್ಖಂಡ್

ಜಾರ್ಖಂಡಿನ ಮುಖ್ಯಮಂತ್ರಿಯಾಗಿದ್ದ ರಘುಬರ್ ದಾಸ್ ಅವರು ಇತ್ತೀಚೆಗೆ ಭಾರತದ ಅತಿ ದೊಡ್ಡ ಸಿಹಿ ನೀರಿನ ಅಕ್ವೇರಿಯಂ "ರಾಂಚಿ ಮಚ್ಚ್ಲಿ ಘರ್" ಅನ್ನು ರಾಂಚಿಯ ಭಗವಾನ್ ಬಿರ್ಸಾ ಮುಂಡಾ ಜೀವವೈವಿಧ್ಯ ಉದ್ಯಾನದಲ್ಲಿ ಉದ್ಘಾಟಿಸಿದರು. 36,000 ಚದರ ಅಡಿ ಪ್ರದೇಶದಲ್ಲಿ ಈ ಅಕ್ವೇರಿಯಂ ಹರಡಿದೆ ಮತ್ತು ಇದು 58 ಮೀನು ತೊಟ್ಟಿಗಳನ್ನು ಹೊಂದಿದೆ, ಅಲ್ಲಿ 120 ಜಾತಿಯ 1500 ಮೀನುಗಳನ್ನು ಪ್ರದರ್ಶಿಸಲಾಗಿದೆ. ಭಾರತೀಯ ತಳಿಗಳಲ್ಲದೆ, ಅಪರೂಪದ ಮತ್ತು ಜನಪ್ರಿಯ ಜಾತಿಗಳನ್ನು ಬ್ಯಾಂಕಾಕ್, ಮಲೇಷಿಯಾ ಮತ್ತು ಸಿಂಗಾಪುರದಿಂದ ತರಲಾಗಿದೆ.

Question 6

6. ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಯಾರು?

A
ಅಚಲ್ ಕುಮಾರ್ ಜ್ಯೋತಿ
B
ಎಸ್ .ಕೆ ಖುರಾನ
C
ನಸೀಂ ಝೈದಿ
D
ಓ ಪಿ ರಾವತ್
Question 6 Explanation: 
ಅಚಲ್ ಕುಮಾರ್ ಜ್ಯೋತಿ

ಗುಜರಾತ್ ಕ್ಯಾಡೆರ್ನ ನಿವೃತ್ತ 1975-ಬ್ಯಾಚಿನ ಐಎಎಸ್ ಅಧಿಕಾರಿ ಅಚಲ್ ಕುಮಾರ್ ಜ್ಯೋತಿ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ನೇಮಕಗೊಂಡಿದ್ದಾರೆ. ಅವರ ಅಧಿಕಾರ ಅವಧಿ ಒಂದು ವರ್ಷ ಅಥವಾ 65 ವರ್ಷ ತುಂಬವವರೆಗೆ. ಜುಲೈ 6 ರಂದು ನಿವೃತ್ತರಾಗಲಿರುವ ನಸೀಂ ಝೈದಿ ಅವರ ಸ್ಥಾನವನ್ನು ಎ.ಕೆ.ಜ್ಯೋತಿ ಅವರು ತುಂಬಲಿದ್ದಾರೆ. ಪ್ರಸ್ತುತ ಎ.ಕೆ. ಜ್ಯೋತಿ, ಓಪನ್ ರಾವತ್ ಭಾರತದ ಚುನಾವಣಾ ಆಯುಕ್ತರಾಗಿದ್ದಾರೆ.

Question 7

7. ಭಾರತದ ಮೊದಲ ಅತಿದೊಡ್ಡ ಜವಳಿ ಮೇಳ "ಟೆಕ್ಸ್ಟೈಲ್ಸ್ ಇಂಡಿಯಾ 2017" ಯಾವ ನಗರದಲ್ಲಿ ಪ್ರಾರಂಭವಾಯಿತು?

A
ಸೂರತ್
B
ಗಾಂಧೀ ನಗರ
C
ಮೈಸೂರು
D
ವಿಶಾಖಪಟ್ಟಣ
Question 7 Explanation: 
ಗಾಂಧೀ ನಗರ
Question 8

8. ದುಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

A
ಉತ್ತರ ಪ್ರದೇಶ
B
ಬಿಹಾರ
C
ಹರಿಯಾಣ
D
ಉತ್ತರಖಂಡ್
Question 8 Explanation: 
ಉತ್ತರ ಪ್ರದೇಶ

ದುಧ್ವಾ ರಾಷ್ಟ್ರೀಯ ಉದ್ಯಾನವು ಉತ್ತರ ಪ್ರದೇಶದಲ್ಲಿದೆ.

Question 9

9. ಈ ಕೆಳಗಿನ ಯಾರು “2017 ಬಾಡಿ ಬಿಲ್ಡಿಂಗ್ ವಿಭಾಗದ ವಿಶ್ವ ಸುಂದರಿ” ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು?

A
ಭೂಮಿಕಾ ಶರ್ಮಾ
B
ನಿಹಾರಿಕ ಗುಪ್ತಾ
C
ಶ್ವೇತಾ ಮೆನನ್
D
ರಕ್ಷಿತಾ ಚಂದ್ರನ್
Question 9 Explanation: 
ಭೂಮಿಕಾ ಶರ್ಮಾ

ಉತ್ತರಖಂಡದ ಭೂಮಿಕಾ ಶರ್ಮ ಇಟಲಿಯ ವೆನಿಸ್ ನಲ್ಲಿ ನಡೆದ ಬಾಡಿಬಿಲ್ಡಿಂಗ್ ಚಾಂಪಿಯನ್ಶಿಪ್ನಲ್ಲಿ 2017ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Question 10

10. ಐಎಸ್ಎಸ್ಎಫ್ ಜೂನಿಯರ್ ವರ್ಲ್ಡ್ ರೈಫಲ್ / ಪಿಸ್ತೂಲ್ ಚಾಂಪಿಯನ್ಷಿಪ್ ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಶೂಟರ್ ಯಾರು?

A
ಯಶಸ್ವಿನಿ ಸಿಂಗ್ ದೇಸ್ವಾಲ್
B
ನಂದಿನಿ ಸಿಂಗ್
C
ಅಂಜಲಿ ಭಾಗವತ್
D
ಅಪೂರ್ವಿ ಚಂದೇಲಾ
Question 10 Explanation: 
ಯಶಸ್ವಿನಿ ಸಿಂಗ್ ದೇಸ್ವಾಲ್

ಜರ್ಮನಿಯ ಸುಹ್ಲ ನಲ್ಲಿ ನಡೆದ ಜೂನಿಯರ್ ವರ್ಲ್ಡ್ ರೈಫಲ್ / ಪಿಸ್ತೂಲ್ ಚಾಂಪಿಯನ್ಷಿಪ್ ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಂಡೀಗಢದ ಯಶಸ್ವಿನಿ ಸಿಂಗ್ ದೇಸ್ವಾಲ್ ಚಿನ್ನದ ಪದಕ ಗೆದ್ದುಕೊಂಡರು. ಚಾಂಪಿಯನ್ಷಿಪ್ನಲ್ಲಿ ಪುರುಷರ 25ಮೀ ಸ್ಟ್ಯಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಆನಿಷ್ ಭಾನ್ವಾಲಾ ಚಿನ್ನದ ಪದಕ ಗೆದ್ದುಕೊಂಡರು.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್29302017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.