ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,27,28,2017

Question 1

1. ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ನ ಅತ್ಯುನ್ನತ ಗೌರವ "ಭಾರತ್ ಗೌರವ್" ಅನ್ನು ಯಾರಿಗೆ ನೀಡಲಾಗಿದೆ?

A
ಕಪಿಲ್ ದೇವ್
B
ಧನರಾಜ್ ಪಿಳ್ಳೈ
C
ಸುನೀಲ್ ಚೆಟ್ರಿ
D
ಮೇರಿ ಕೋಮ್
Question 1 Explanation: 
ಧನರಾಜ್ ಪಿಳ್ಳೈ

ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೆ ರವರಿಗೆ ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ನ ಅತ್ಯುನ್ನತ ಗೌರವವಾದ "ಭಾರತ್ ಗೌರವ್" ಅನ್ನು ನೀಡಲಾಗುವುದು. ಪಿಳ್ಳೆ ಅವರು ಭಾರತದ ಹಾಕಿ ತಂಡವನ್ನು ಪುನಶ್ಚೇತನಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಮತ್ತು 15 ವರ್ಷಗಳ ವೃತ್ತಿಜೀವನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾಲ್ಕು ಒಲಿಂಪಿಕ್ಸ್, ವಿಶ್ವ ಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಏಶಿಯನ್ ಗೇಮ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಒಟ್ಟು 339 ಪಂದ್ಯಗಳಿಂದ 170 ಗೋಲುಗಳನ್ನು ಹೊಡೆದಿದ್ದಾರೆ. ಪಿಳ್ಳೈ ರವರು ಭಾರತ ತಂಡವನ್ನು ಏಷ್ಯನ್ ಕ್ರೀಡಾಕೂಟದಲ್ಲಿ 1998 ರಲ್ಲಿ ಮುನ್ನಡೆಸಿದರು ಮತ್ತು 2003 ರಲ್ಲಿ ಏಷ್ಯಾ ಕಪ್ ತಂದು ಕೊಟ್ಟಿದ್ದರು. 1999-2000ರಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಪಿಳ್ಳೆ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮತ್ತು 2000 ರಲ್ಲಿ ಪದ್ಮಶ್ರೀ ನೀಡಲಾಗಿದೆ.

Question 2

2. 2017 ಸಾಮಾಜಿಕ ಪ್ರಗತಿ ಸೂಚ್ಯಂಕದಲ್ಲಿ (SPI) ಭಾರತ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?

A
85
B
93
C
67
D
79
Question 2 Explanation: 
93

2017 ಸಾಮಾಜಿಕ ಪ್ರಗತಿ ಸೂಚ್ಯಂಕ (ಎಸ್ಪಿಐ) ದಲ್ಲಿ 128 ದೇಶಗಳಲ್ಲಿ ಭಾರತ 93ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ ಟಾಪ್ ಐದರಲ್ಲಿವೆ.

Question 3

3. ಮೊಟ್ಟ ಮೊದಲ ಅಂತಾರಾಷ್ಟ್ರೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (MSME) ದಿನವನ್ನು ಯಾವ ದಿನದಂದು ಆಚರಿಸಲಾಗುತ್ತಿದೆ?

A
ಜೂನ್ 24
B
ಜೂನ್ 27
C
ಜೂನ್ 28
D
ಜೂನ್ 29
Question 3 Explanation: 
ಜೂನ್ 27

ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ (ಐಟಿಸಿ) ಜೂನ್ 27, 2017 ರಂದು ಮೊದಲ ಅಂತಾರಾಷ್ಟ್ರೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ದಿನವನ್ನು ಆಚರಿಸುತ್ತಿದೆ. 'ಸಣ್ಣ ಉದ್ಯಮ - ದೊಡ್ಡ ಪ್ರಭಾವ' ಈ ದಿನದ ಧ್ಯೇಯವಾಕ್ಯ. ಆರ್ಥಿಕ ಬೆಳವಣಿಗೆ ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿಗೆ MSME ಗಳ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ದಿನದ ಉದ್ದೇಶವಾಗಿದೆ.

Question 4

4. ಈ ಕೆಳಗಿನ ಯಾರು ಅಂತಾರಾಷ್ಟ್ರೀಯ ಆರ್ಥಿಕ ಸಂಘಟನೆ (IEA)ಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ಕೌಶಿಕ್ ಬಸು
B
ರಘುರಾಮ್ ರಾಜನ್
C
ಸುಶೀಲ್ ಮುಖರ್ಜಿ
D
ರಮೇಶ್ ಥೋಮರ್
Question 4 Explanation: 
ಕೌಶಿಕ್ ಬಸು

ಭಾರತದ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ರವರು ಜೂನ್ 23, 2017 ರಂದು ಇಂಟರ್ನ್ಯಾಷನಲ್ ಎಕನಾಮಿಕ್ ಅಸೋಸಿಯೇಷನ್ (ಐಇಎ)ನ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಸು ರವರು 3 ವರ್ಷಗಳ ಕಾಲ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಐಇಎ 1950 ರಲ್ಲಿ ವೃತ್ತಿಪರ ಅರ್ಥಶಾಸ್ತ್ರಜ್ಞರಿಗೆ ಸ್ಥಾಪನೆಯಾದ ಒಂದು ಪ್ರಮುಖ ಸಂಸ್ಥೆಯಾಗಿದ್ದು ಅದು ಜಾಗತಿಕ ಆರ್ಥಿಕ ನೀತಿಯನ್ನು ಮತ್ತು ಸಂಶೋಧನೆಯನ್ನು ರೂಪಿಸಲು ಪ್ರಯತ್ನಿಸುತ್ತದೆ.

Question 5

5. ಯುನೆಸ್ಕೊ ವರ್ಲ್ಡ್ ಬುಕ್ ಕ್ಯಾಪಿಟಲ್ 2019 ಎಂದು ಹೆಸರಿಸಲ್ಪಟ್ಟ ನಗರ ಯಾವುದು?

A
ಶಾರ್ಜಾ
B
ಲಂಡನ್
C
ಬರ್ಲಿನ್
D
ಜೋಹನ್ಸ್ ಬರ್ಗ್
Question 5 Explanation: 
ಶಾರ್ಜಾ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಶಾರ್ಜಾ ನಗರವನ್ನು ಯುನೆಸ್ಕೋ ವರ್ಲ್ಡ್ ಬುಕ್ ಕ್ಯಾಪಿಟಲ್ 2019 ಎಂದು ಯುನೆಸ್ಕೋ ಡೈರೆಕ್ಟರ್ ಜನರಲ್ ಇರಾನಾ ಬೊಕೊ ಅವರು ಘೋಷಿಸಿದ್ದಾರೆ.

Question 6

6. ಮತದಾರರ ನೋಂದಣಿಯನ್ನು ಜ್ಞಾಪಿಸುವ ಸಲುವಾಗಿ ಚುನಾವಣಾ ಆಯೋಗ ಯಾವ ಸಾಮಾಜಿಕ ತಾಣದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

A
ಫೇಸ್ ಬುಕ್
B
ಟ್ವಿಟ್ಟರ್
C
ಯೂಟ್ಯೂಬ್
D
ಸ್ಕೈಫ್
Question 6 Explanation: 
ಫೇಸ್ ಬುಕ್

ಭಾರತದ ಚುನಾವಣಾ ಆಯೋಗವು (ಇಸಿಐ) ಜುಲೈ 1, 2017 ರಂದು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ನಾಗರಿಕರನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ "ಮತದಾರರ ನೋಂದಣಿ ಜ್ಞಾಪನೆಯನ್ನು" ಪ್ರಾರಂಭಿಸಲು ಫೇಸ್ಬುಕ್ನೊಂದಿಗೆ ಕೈಜೋಡಿಸಿದೆ. ಈ ಅಭಿಯಾನದ ಭಾಗವಾಗಿ ಫೇಸ್ಬುಕ್ ಮತದಾರರ ನೋಂದಾವಣೆ ಜ್ಞಾಪನೆಯನ್ನು ಭಾರತದ ಎಲ್ಲಾ ಫೇಸ್ಬುಕ್ ಬಳಕೆದಾರರಿಗೆ ಜುಲೈ 1 ರಿಂದ 4, 2017 ರವರೆಗೆ ಚಾಲನೆಯಲ್ಲಿ ಇರಲಿದೆ. ಇದಕ್ಕಾಗಿ ಫೇಸ್ಬುಕ್ ವಿಶಿಷ್ಟವಾದ 'ನೊಂದಣಿ' ಗುಂಡಿಯನ್ನು ಸಕ್ರಿಯಗೊಳಿಸಲಿದೆ. ಬಳಕೆದಾರರು ಬಟನ್ ಅನ್ನು ಕ್ಲಿಕ್ ಮಾಡಿದಾಗ, ಅವರನ್ನು ರಾಷ್ಟ್ರೀಯ ಮತದಾರರ ಸೇವೆಗಳು ಪೋರ್ಟಲ್ಗೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ಅವರು ತಮ್ಮನ್ನು ಮತದಾರರಾಗಿ ನೋಂದಾಯಿಸಿಕೊಳ್ಳಬಹುದು.

Question 7

7. 2017 ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಆತಿಥ್ಯವನ್ನು ಯಾವ ಯಾವ ರಾಜ್ಯ ವಹಿಸಲಿದೆ?

A
ಕರ್ನಾಟಕ
B
ಓಡಿಶಾ
C
ಜಾರ್ಖಂಡ್
D
ಕೇರಳ
Question 7 Explanation: 
ಓಡಿಶಾ

ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 22ನೇ ಆವೃತ್ತಿಯು (ಎಎಸಿ-2017) ಒಡಿಶಾದ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಜುಲೈ 6 ರಿಂದ 9ರವರೆಗೆ ನಡೆಯಲಿದೆ. 45 ದೇಶಗಳಿಂದ ಸುಮಾರು 800 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

Question 8

8. ಯಾವ ದೇಶದಲ್ಲಿ ವಿಶ್ವದ ಮೊದಲ ಅಧಿಕೃತ ಅರಣ್ಯ ನಗರವನ್ನು ನಿರ್ಮಿಸಲಾಗುತ್ತಿದೆ?

A
ರಷ್ಯಾ
B
ಚೀನಾ
C
ಭೂತಾನ್
D
ಶ್ರೀಲಂಕಾ
Question 8 Explanation: 
ಚೀನಾ

ಮಾಲಿನ್ಯ ಮತ್ತು ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಚೀನಾ ತನ್ನ ದೇಶದ ಗುವಾಂಗ್ಕ್ಸಿ ಪ್ರಾಂತ್ಯದ ಲಿಯುಝೌ ಉತ್ತರದಲ್ಲಿ ವಿಶ್ವದ ಮೊದಲ ಅರಣ್ಯ ನಗರವನ್ನು ನಿರ್ಮಿಸಲು ಪ್ರಾರಂಭಿಸಿದೆ. ಇದು 2020 ಲ್ಲಿ ಪೂರ್ಣಗೊಳ್ಳಲಿದೆ. ವಿಶ್ವದಾದ್ಯಂತ ಹಸಿರು ಯೋಜನೆಗಳನ್ನು ಅಭಿವೃದ್ಧಿಪಡಿಸುವ ಸ್ಟೆಫಾನೊ ಬೊಯೇರಿ ಆರ್ಚಿಟೆಟ್ಟಿ ತಂಡ ಈ ನಗರವನ್ನು ವಿನ್ಯಾಸಗೊಳಿಸಿದೆ. ಲಿಯುಝೌ ಅರಣ್ಯ ನಗರ ವಾರ್ಷಿಕವಾಗಿ ಸುಮಾರು 10,000 ಟನ್ ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುವ ನಿರೀಕ್ಷೆಯಿದೆ ಮತ್ತು 900 ಟನ್ ಆಮ್ಲಜನಕವನ್ನು ಉತ್ಪಾದಿಸುತ್ತದೆ.

Question 9

9. 12 ನೇ ಜಿ 20 ಶೃಂಗಸಭೆಯ ಆತಿಥ್ಯ ವಹಿಸುವ ರಾಷ್ಟ್ರ ಯಾವುದು?

A
ಜರ್ಮನಿ
B
ಇಟಲಿ
C
ಫ್ರಾನ್ಸ್
D
ಜಪಾನ್
Question 9 Explanation: 
ಜರ್ಮನಿ

20 ಶೃಂಗಸಭೆಯ 12ನೇ ಆವೃತ್ತಿ ಜುಲೈ 7-8, 2017 ರಂದು ಜರ್ಮನಿಯ ಹ್ಯಾಂಬರ್ಗ್ನಲ್ಲಿ ನಡೆಯಲಿದೆ.

Question 10

10. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ “ಸ್ಕಿಲ್ ಇಂಡಿಯಾ ಅಭಿಯಾನ”ಕ್ಕೆ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿರುವ ಬಾಲಿವುಡ್ ನಟಿ ಯಾರು?

A
ಪ್ರಿಯಾಂಕ ಚೋಪ್ರಾ
B
ದೀಪಿಕಾ ಪಡುಕೋಣೆ
C
ಕತ್ರಿನಾ ಕೈಫ್
D
ಐಶ್ವರ್ಯ ರೈ
Question 10 Explanation: 
ಪ್ರಿಯಾಂಕ ಚೋಪ್ರಾ

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಸ್ಕಿಲ್ ಇಂಡಿಯಾ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಜುಲೈ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಕಿಲ್ ಇಂಡಿಯಾ ಯೋಜನೆಯನ್ನು ಪ್ರಾರಂಭಿಸಿದರು. 2022 ರ ವೇಳೆಗೆ ಈ ಯೋಜನೆಯಡಿ 40 ಕೋಟಿ ಜನರಿಗೆ ತರಬೇತಿ ನೀಡಲು ಭಾರತ ಸರ್ಕಾರ (ಗೋಯಿ) ಗುರಿ ಹೊಂದಿದೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್27282017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.