ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,25,26,2017

Question 1

1. ಇತ್ತೀಚೆಗೆ ನಿಧನರಾದ “ದೇಶ್ ಬಂಧು ಗುಪ್ತಾ” ಅವರು ಯಾವ ಔಷಧೀಯ ಕಂಪೆನಿಯ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು?

A
ಲುಪಿನ್
B
ಸಿಪ್ಲಾ
C
ರೆಡ್ಡೀಸ್
D
ಸನ್ ಫಾರ್ಮಾ
Question 1 Explanation: 
ಲುಪಿನ್

ಔಷಧೀಯ ಪ್ರಮುಖ ಸಂಸ್ಥೆ ಲುಪಿನ್ ಲಿಮಿಟೆಡ್ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದ ದೇಶ್ ಬಂಧು ಗುಪ್ತಾ (79) ಮಹಾರಾಷ್ಟ್ರದ ಮುಂಬೈನಲ್ಲಿ ಜೂನ್ 25, 2017 ರಂದು ನಿಧನ ಹೊಂದಿದ್ದಾರೆ. ಅವರು 1968 ರಲ್ಲಿ ಲುಪಿನ್ ಸ್ಥಾಪಿಸಿದರು ಆ ಮೂಲಕ 100 ಕ್ಕೂ ಹೆಚ್ಚಿನ ದೇಶಗಳಲ್ಲಿ ಉಪಸ್ಥಿತಿ ಹೊಂದಿರುವ ಒಂದು ಜಾಗತಿಕ ಔಷಧೀಯ ಸಂಸ್ಥೆಯನ್ನಾಗಿ ಸೃಷ್ಟಿಸಿದರು.

Question 2

2. ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅಂತಿಮ ಕರಡು ಸಿದ್ದಪಡಿಸಲು ಯಾವ ಸಮಿತಿಯನ್ನು ರಚಿಸಲಾಗಿದೆ?

A
ಕಸ್ತೂರಿ ರಂಗನ್ ಸಮಿತಿ
B
ಅರವಿಂದ್ ಪನಾಗರಿಯಾ ಸಮಿತಿ
C
ಟಿ ಎಸ್ ಆರ್ ಸುಬ್ರಮಣ್ಯಂ ಸಮಿತಿ
D
ಈಶ್ವರ ಚಂದ್ರ ಸಮಿತಿ
Question 2 Explanation: 
ಕಸ್ತೂರಿ ರಂಗನ್ ಸಮಿತಿ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್ಆರ್ಡಿ) ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ರೂಪಿಸಲು ಒಂಬತ್ತು-ಸದಸ್ಯರ ಸಮಿತಿಯನ್ನು ನೇಮಿಸಿದೆ. ಮಾಜಿ ಐಎಸ್ಒ ಮುಖ್ಯಸ್ಥ ಡಾ. ಕೆ. ಕಸ್ತೂರಿರಂಗನ್ ಅವರು ಸಮಿತಿಯ ನೇತೃತ್ವ ವಹಿಸಿದ್ದಾರೆ

Question 3

3. ಶಾಂಘೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (SIFF)ದಲ್ಲಿ ಅತ್ಯುತ್ತಮ ಭಾರತೀಯ ಚಲನಚಿತ್ರ ಪ್ರಶಸ್ತಿ ಯಾವ ಸಿನಿಮಾಗೆ ಲಭಿಸಿದೆ?

A
ದಬಾಂಗ್
B
ಸುಲ್ತಾನ್
C
ಬಾಹುಬಲಿ: ದಿ ಕನ್ಕ್ಲೂಷನ್
D
ರುಸ್ತುಂ
Question 3 Explanation: 
ಸುಲ್ತಾನ್

ಭಾರತದ ಚಲನಚಿತ್ರ 'ಸುಲ್ತಾನ್' ಶಾಂಘೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (SIFF) ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಲಿ ಆಬಸ್ ಜಾಫರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Question 4

4. ಈ ಕೆಳಗಿನ ಯಾರು ಆಸ್ಟ್ರೇಲಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು?

A
ಕಿಡಂಬಿ ಶ್ರೀಕಾಂತ್
B
ಚೇತನ್ ಆನಂದ್
C
ಹೆಚ್ ಎಸ್ ಪ್ರಣಯ್
D
ರಾಘವ್
Question 4 Explanation: 
ಕಿಡಂಬಿ ಶ್ರೀಕಾಂತ್

ಆಸ್ಟ್ರೇಲಿಯಾದ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟ್ರೋಫಿಯನ್ನು ಭಾರತದ ಕಿಡಂಬಿ ಶ್ರೀಕಾಂತ್ ಗೆದ್ದುಕೊಂಡರು. ರಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಚೆನ್ ಲಾಂಗ್ ಅವರನ್ನು 22-20, 21-16 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

Question 5

5. ಕೆನಡಾದ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ಸಿಖ್ ಮಹಿಳೆ ಯಾರು?

A
ಪಾಲ್ಬಿಂದರ್ ಕೌರ್ ಶೆರ್ಗಿಲ್
B
ಪ್ರಣೀತಾ ಕೌರ
C
ಪ್ರಿಯಾಂಕ ಸಿಂಗ್
D
ಸುಖ್ ಪ್ರೀತ್ ಕೌರ್
Question 5 Explanation: 
ಪಾಲ್ಬಿಂದರ್ ಕೌರ್ ಶೆರ್ಗಿಲ್

ಭಾರತ ಮೂಲದ ಸಿಖ್ ಮಾನವ ಹಕ್ಕುಗಳ ವಕೀಲೆ ಪಲ್ಬಿಂದರ್ ಕೌರ್ ಶೆರ್ಗಿಲ್ ಅವರನ್ನು ನ್ಯೂ ವೆಸ್ಟ್ಮಿನಿಸ್ಟರ್ನಲ್ಲಿರುವ ಬ್ರಿಟಿಷ್ ಕೊಲಂಬಿಯಾ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ನೇಮಿಸಲಾಗಿದೆ. ಇದರೊಂದಿಗೆ, ಕೆನಡಾದ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ಸಿಖ್ ಮಹಿಳೆಯಾಗಿದ್ದಾರೆ. ಜಸ್ಟಿಸ್ ಶೆರ್ಗಿಲ್ ಅವರು ಮೇ 31 ರಂದು ನಿವೃತ್ತರಾಗಿರುವ ನ್ಯಾಯಮೂರ್ತಿ ಇ.ಎ ಅರ್ನಾಲ್ಡ್-ಬೈಲೆಯ್ ರವರ ಉತ್ತರಾಧಿಕಾರಿ.

Question 6

6. “ಮಿಹೈ ಟುಡೋಸ್” ರವರು ಯಾವ ದೇಶದ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ?

A
ರೊಮನಿಯ
B
ಇಟಲಿ
C
ಇಸ್ರೇಲ್
D
ಮೆಕ್ಸಿಕೊ
Question 6 Explanation: 
ರೊಮನಿಯ

ಮಾಜಿ ಆರ್ಥಿಕ ಸಚಿವ ಮಿಹೈ ಟುಡೋಸ್ ರೊಮೇನಿಯಾದ ಹೊಸ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ ಮತ್ತು ಜೂನ್ 29, 2017 ರಂದು ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.

Question 7

7. ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ (ಐಐಸಿ)ನ ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ಎನ್ಎನ್ ವೊಹ್ರ
B
ರಾಮಚಂದ್ರ ಗುಹಾ
C
ಸೊಲಿ ಸೋರ್ಬ್ಜಿ
D
ಸುರೇಶ್ ಸೋನಿ
Question 7 Explanation: 
ರೊಮನಿಯ

ಎನ್ಎನ್ ವೊಹ್ರ ಜಮ್ಮು ಮತ್ತು ಕಾಶ್ಮೀರ (ಜಮ್ಮು ಮತ್ತು ಕೆ) ಗವರ್ನರ್ ನರೀಂದರ್ ನಾಥ್ ವೊಹ್ರಾ ಅವರು ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ (ಐಐಸಿ)ನ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದು ದೇಶದ ಪ್ರಮುಖ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾಗಿದೆ. ವೊಹ್ರ ಅವರು ಸೋಲಿ ಸೊರಾಬ್ಜಿಯವರ ಉತ್ತರಾಧಿಕಾರಿ ಆಗಿದ್ದಾರೆ.

Question 8

8. “The Emergency-Indian Democracy’s Darkest Hour” ಪುಸ್ತಕದ ಲೇಖಕರು __________?

A
ಸೂರ್ಯ ಪ್ರಕಾಶ್
B
ನಾರಾಯಣ್ ರಾಥೋಡ್
C
ಚಂದ್ರಕಾಂತ್
D
ಅರುಣ್ ಮಿಶ್ರಾ
Question 8 Explanation: 
ಸೂರ್ಯ ಪ್ರಕಾಶ್

“The Emergency-Indian Democracy’s Darkest Hour” ಎಂಬ ಪುಸ್ತಕವನ್ನು ಪ್ರಸಾರ ಭಾರತಿಯ ಅಧ್ಯಕ್ಷ ಸೂರ್ಯ ಪ್ರಕಾಶ್ ಬರೆದಿದ್ದಾರೆ. ಈ ಪುಸ್ತಕವನ್ನು ಇತ್ತೀಚೆಗೆ ಗುಜರಾತ್ನ ಅಹಮದಾಬಾದ್ನಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಲೋಕಾರ್ಪಣೆ ಮಾಡಿದರು. 1970 ರ ದಶಕದ ಮಧ್ಯಭಾಗದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಪುನಃಸ್ಥಾಪನೆಗಾಗಿ ಹೋರಾಡಿದ ಎಲ್ಲರಿಗೂ ಗೌರವ ಸೂಚಿಸುವುದು ಪುಸ್ತಕದ ಉದ್ದೇಶ.

Question 9

9. ಈ ಕೆಳಗಿನ ಯಾರು 2017 ಗೆರ್ರಿ ವೆಬರ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು?

A
ರೋಜರ್ ಫೆಡರರ್
B
ನೊವಾಕ್ ಜೊಕೊವಿಕ್
C
ಆಂಡಿ ಮುರ್ರೆ
D
ಸ್ಟಾನ್ ವಾರ್ವಿಂಕ
Question 9 Explanation: 
ರೋಜರ್ ಫೆಡರರ್

ಸ್ವಿಸ್ ವೃತ್ತಿಪರ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಅವರು 2017 ಗೆರ್ರಿ ವೆಬರ್ ಓಪನ್ ಟೆನ್ನಿಸ್ ಪಂದ್ಯಾವಳಿಯನ್ನು ಗೆದ್ದುಕೊಂಡಿದ್ದಾರೆ. ಜರ್ಮನಿಯ ಹ್ಯಾಲೆನಲ್ಲಿರುವ ಗೆರಿ ವೆಬರ್ ಸ್ಟೇಡಿಯನ್ನಲ್ಲಿ 6-1 6-3ರಿಂದ ಅಲೆಕ್ಸಾಂಡರ್ ಝೆರೆವ್ ಅವರನ್ನು ಸೋಲಿಸಿ ಜಯ ಸಾಧಿಸಿದ್ದಾರೆ. ಈ ಜಯದೊಂದಿಗೆ, ಫೆಡರರ್ ತನ್ನ 92 ನೇ ವೃತ್ತಿಜೀವನದ ಪ್ರಶಸ್ತಿಯನ್ನು ಗೆದ್ದರು.

Question 10

10. ಸ್ಪೋರ್ಟ್ ಜರ್ನಲಿಸ್ಟ್ ಫೆಡರೇಶನ್ ಆಫ್ ಇಂಡಿಯಾದ ವರ್ಷದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಈ ಕೆಳಗಿನ ಯಾರನ್ನು ಆಯ್ಕೆ ಮಾಡಲಾಗಿದೆ?

A
ವಿರಾಟ್ ಕೊಹ್ಲಿ
B
ಪಿ ವಿ ಸಿಂಧು
C
ಕಿಡಂಬಿ ಶ್ರೀಕಾಂತ್
D
ಸಾಕ್ಷಿ ಮಲ್ಲಿಕ್
Question 10 Explanation: 
ಪಿ ವಿ ಸಿಂಧು

ಬ್ಯಾಡ್ಮಿಂಟನ್ ತಾರೆ ಮತ್ತು ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರಿಗೆ ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಜೆಎಫ್ಐ) ವರ್ಷದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ನೀಡಲಾಗುತ್ತದೆ. ವರ್ಷದ ಅತ್ಯುತ್ತಮ ತಂಡವನ್ನು ಇಂಡಿಯನ್ ಜೂನಿಯರ್ ಹಾಕಿ ತಂಡವು ಗೆದ್ದುಕೊಂಡಿದೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್25262017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.