ಜಿಸ್ಯಾಟ್-17 ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ

ISRo_up1ದೂರಸಂಪರ್ಕ ಉಪಗ್ರಹ ಜಿಸ್ಯಾಟ್‌–17 ಅನ್ನು ಫ್ರೆಂಚ್‌ ಗಾಯಾನದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಪಗ್ರಹವನ್ನು ಏರಿಯಾನ್‌–5 ವಿಎ–238 ಉಡಾವಣಾ ವಾಹಕದ ಮೂಲಕ ಕಕ್ಷೆಗೆ ಸೇರಿಸಲಾಯಿತು.

  • ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ’.
  • ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋದಿಂದ ಉಡಾವಣೆಗೊಂಡ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್‌ಎಲ್‌ವಿ ಎಂಕೆ–3 ಹಾಗೂ ಪಿಎಸ್‌ಎಲ್‌ವಿ ಸಿ–38 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು.
  • ಜಿಸ್ಯಾಟ್‌–17 ಒಟ್ಟು 3,477 ಕೆ.ಜಿ ತೂಕವಿದೆ. ಹವಾಮಾನ ದತ್ತಾಂಶ, ಉಪಗ್ರಹ ಆಧಾರಿತ ಹುಡುಕಾಟದ ಸೇವೆಗೆ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ.

Leave a Reply

Your email address will not be published. Required fields are marked *