F-16 ಯುದ್ದ ವಿಮಾನ ನಿರ್ಮಾಣಕ್ಕೆ ಲಾಕ್ಹೀಡ್ ಮತ್ತು ಟಾಟಾ ನಡುವೆ ಒಪ್ಪಂದ

F16_upಲಾಕ್ಹೀಡ್ ಮಾರ್ಟಿನ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಭಾರತದಲ್ಲಿ ಎಫ್ -16 ಫೈಟರ್ ವಿಮಾನಗಳನ್ನು ಉತ್ಪಾದಿಸಲು ಒಪ್ಪಂದಕ್ಕೆ ಸಹಿ ಮಾಡಿವೆ. ಪ್ಯಾರಿಸ್ ಏರ್ ಶೋನಲ್ಲಿ ಎರಡು ಕಂಪನಿಗಳು ತಮ್ಮ ಒಪ್ಪಂದವನ್ನು ಘೋಷಿಸಿವೆ. ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಟಾಟಾದೊಂದಿಗೆ ಜಂಟಿಯಾಗಿ ತೊಡಗಿಸಿಕೊಳ್ಳುವ ಮೂಲಕ ಭಾರತೀಯ ಸೇನೆಯಿಂದ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದವನ್ನು ಎದುರು ನೋಡುತ್ತಿದೆ. ಲಾಕ್ಹೀಡ್ ಮಾರ್ಟಿನ್ ಅತಿದೊಡ್ಡ ಅಂತರಿಕ್ಷಯಾನ, ರಕ್ಷಣಾ, ಭದ್ರತೆ, ಮತ್ತು ಸುಧಾರಿತ ತಂತ್ರಜ್ಞಾನದ ಸಂಸ್ಥೆ. ಇದರ ಪ್ರಧಾನ ಕಚೇರಿ ಮೇರಿಲ್ಯಾಂಡ್ ನಲ್ಲಿದೆ. 1995 ರಲ್ಲಿ ಲಾಕ್ಹೀಡ್ ಕಾರ್ಪೊರೇಶನ್ ಮತ್ತು ಮಾರ್ಟಿನ್ ಮೇರಿಯೆಟ ವಿಲೀನಗೊಂಡ ನಂತರ ಕಂಪೆನಿಯು ರೂಪುಗೊಂಡಿತು.

ಹಿನ್ನಲೆ:

ಭಾರತದ ವಾಯುಪಡೆಯು ಸೋವಿಯತ್-ಯುಗದ ಯುದ್ದ ವಿಮಾನಗಳನ್ನು ಬದಲಿಸುವ ಅವಶ್ಯಕತೆ ಇರುವ ಕಾರಣ ನೂರಾರು ಯುದ್ದ ವಿಮಾನಗಳನ್ನು ಖರೀದಿದೆ ಎದುರು ನೋಡುತ್ತಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಕ್-ಇನ್-ಇಂಡಿಯಾ ಉಪಕ್ರಮದಡಿ ವಿದೇಶಿ ಸರಬರಾಜುದಾರರು ಸ್ಥಳೀಯ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಏರ್ಪಡಿಸುವುದು ಮತ್ತು ಭಾರತದಲ್ಲಿ ದೇಶೀಯ ಕೈಗಾರಿಕಾ ಮೂಲವನ್ನು ನಿರ್ಮಿಸುವ ಅಗತ್ಯವಿದೆ. ಇದು ಸಂಪೂರ್ಣ ಆಮದುಗಳನ್ನು ಕಡಿತಗೊಳಿಸುವ ಉದ್ದೇಶವನ್ನು ಹೊಂದಿದೆ.

ಎಫ್ -16 ತಯಾರಿಕೆ ಘಟಕ ಸ್ಥಾಪನೆಯಿಂದ ಭಾರತದಲ್ಲಿ ಹೊಸ ಉತ್ಪಾದನಾ ಉದ್ಯೋಗಗಳನ್ನು ಸೃಷ್ಟಿಯಾಗಲಿವೆ ಮತ್ತು ವಿಶ್ವದಲ್ಲೇ ವ್ಯಾಪಕ ಯುದ್ದ ವಿಮಾನ ಪೂರೈಕೆ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.