ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ ಎನ್ ಭಗವತಿ ಇನ್ನಿಲ್ಲ

ಮಾಜಿ ಮುಖ್ಯ ನ್ಯಾಯಮೂರ್ತಿ ಪ್ರಫುಲಚಂದ್ರ ನ್ಯಾತ್ವರ್ಲಾಲ್ ಭಗವತಿ ನಿಧನರಾದರು. ಭಗವತಿ ಅವರಿಗೆ 95 ವರ್ಷ ವಯಸ್ಸಾಗಿತ್ತು. ನ್ಯಾಯಮೂರ್ತಿ ಭಗವತಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಪರಿಕಲ್ಪನೆಗಳನ್ನು ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಸಂಪೂರ್ಣ ಹೊಣೆಗಾರಿಕೆಯನ್ನು ಪರಿಚಯಿಸಿದ ಮೊದಲಿಗರು. ಯಾವ ವ್ಯಕ್ತಿಯ ಹಕ್ಕಿಗೆ ಚ್ಯುತಿ ಆಗಿದೆಯೊ ಆತನೇ ಕೋರ್ಟ್‌ ಮೆಟ್ಟಿಲು ತುಳಿಯಬೇಕು ಎಂಬ ಆಂಗ್ಲೊ ಸ್ಯಾಕ್ಸ್‌ ನ್ಯಾಯಶಾಸ್ತ್ರ ಪದ್ಧತಿಗೆ ಬದಲಾವಣೆ ತಂದವರು ಇವರು. 1978ರಲ್ಲಿ ಮೇನಕಾ ಗಾಂಧಿ ಪ್ರಕರಣದಲ್ಲಿ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡ ಸರ್ಕಾರದ ಕ್ರಮ ತಪ್ಪು ಎಂಬ ಮಹತ್ವದ ತೀರ್ಪನ್ನು ನೀಡಿದ್ದರು. ಅಲ್ಲದೆ ಖೈದಿಗಳಿಗೂ ಮೂಲಭೂತ ಹಕ್ಕು ಇದೆ ಎಂಬ ಐತಿಹಾಸಿಕ ತೀರ್ಪನ್ನು ಭಗವತಿ ಅವರು ನೀಡಿದ್ದರು.

ಭಗವತಿ ಬಗ್ಗೆ:

  • 1921ರ ಡಿಸೆಂಬರ್ 21ರಂದು ಗುಜರಾತ್‌ನಲ್ಲಿ ಜನನ
  • 941ರಲ್ಲಿ ಮುಂಬೈಯ ಎಲ್ಫಿನ್‌ಸ್ಟನ್‌ ಕಾಲೇಜಿನಲ್ಲಿ ಗಣಿತ ವಿಷಯದಲ್ಲಿ ಪದವಿ ಪಡೆದರು.
  • ಇವರ ತಂದೆ ನಟವರಲಾಲ್‌ ಎಚ್. ಭಗವತಿ ಕೂಡಾ ಸುಪ್ರೀಂ ಕೋರ್ಟ್‌  ನ್ಯಾಯಮೂರ್ತಿಯಾಗಿದ್ದವರು.
  • ಪಿ.ಎನ್.ಭಗವತಿ 1960ರ ಜುಲೈ 21ರಂದು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾದರು. 1967ರ ಸೆಪ್ಟೆಂಬರ್ 16ರಿಂದ 1973ರ ಜುಲೈ 16ರವರೆಗೆ ಇದೇ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ. ನಂತರ ಸುಪ್ರೀಂ ಕೋರ್ಟ್‌ಗೆ ಬಡ್ತಿ.  1985ರಲ್ಲಿ ಭಾರತದ  ಮುಖ್ಯ ನ್ಯಾಯಮೂರ್ತಿಯೂ ಆದರು.  1986ರ ಡಿಸೆಂಬರ್ 21ರವರೆಗೆ ಈ ಸ್ಥಾನದಲ್ಲಿದ್ದರು.
  • 1942 ರಲ್ಲಿ ಸ್ವಾತಂತ್ರ ಹೋರಾಟದಲ್ಲಿ ಇವರು ಭಾಗವಹಿಸಿದ್ದರು.
  • 1982ರಲ್ಲಿ ಬಚ್ಚನ್‌ಸಿಂಗ್‌ ಪ್ರಕರಣದಲ್ಲಿ ಮರಣದಂಡನೆ ಪದ್ಧತಿಯನ್ನು ವಿರೋಧಿಸುವ ಮೂಲಕ, ‘ನಾಗರಿಕ ಸಮಾಜದ ಯಾವೊಬ್ಬನ ಜೀವ  ತೆಗೆಯುವ ಹಕ್ಕು ಸರ್ಕಾರಕ್ಕೂ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರು.
  • 1979ರಲ್ಲಿ ಬಿಹಾರದ ಜೈಲಿನಲ್ಲಿದ್ದ ಹುಸೈನಾರ ಖಟೂನ್‌, ‘ನಾನು ಬಡವನಿದ್ದೇನೆ. ವಕೀಲರನ್ನು ನೇಮಿಸಿಕೊಂಡು ಕೇಸು ನಡೆಸುವ ಶಕ್ತಿ ನನಗಿಲ್ಲ’ ಎಂದು ಬರೆದ ಪತ್ರವನ್ನು ಪಿಟಿಷನ್‌ ಆಗಿ ಪರಿಗಣಿಸಿದ ಭಗವತಿ ದೇಶದಲ್ಲಿ ಕಾನೂನು ನೆರವಿನ ಘಟಕಗಳ ಸ್ಥಾಪನೆಗೆ ತಿದಿಯೊತ್ತಿದರು.
  • 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ, 1982ರಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಕಲಾ ಮತ್ತು ವಿಜ್ಞಾನ ಅಕಾಡೆಮಿ ಫೆಲೊಷಿಪ್‌ಗೆ ಪಾತ್ರವಾಗಿದ್ದರು. 1995ರಿಂದ 2009ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸದಸ್ಯರಾಗಿದ್ದರು. 2001ರಿಂದ 2003ರವರೆಗೆ ಈ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ತಜ್ಞರ ಸಮಿತಿ ಸದಸ್ಯರಾಗಿ 27 ವರ್ಷ ಸೇವೆ ಸಲ್ಲಿಸಿದ್ದರು.
  • ಜುಲೈ 1985 ರಿಂದ ಡಿಸೆಂಬರ್ 1986 ವರೆಗೆ ನ್ಯಾಯಮೂರ್ತಿ ಪಿ.ಎನ್. ಭಗವತಿ ಭಾರತದ 17ನೇ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು.

ಚಂದ್ರನತ್ತ ಸಣ್ಣ-ಪರಿಸರ ವ್ಯವಸ್ಥೆಯನ್ನು ಕಳುಹಿಸಿಕೊಡಲು ಚೀನಾ ಸಜ್ಜು

ಮುಂದಿನ ವರ್ಷದ ವೇಳೆಗೆ ಆಲೂಗಡ್ಡೆ ಬೀಜಗಳು ಮತ್ತು ರೇಷ್ಮೆ ಹುಳು ಮೊಟ್ಟೆಗಳನ್ನು ಒಳಗೊಂಡ ಮಿನಿ-ಪರಿಸರ ವ್ಯವಸ್ಥೆಯನ್ನು ಚಂದ್ರನತ್ತ ಕಳುಹಿಸಲು ಚೀನಾ ಚಿಂತಿಸಿದೆ. ಈ ಪ್ರಯೋಗವು ಚಂದ್ರನಲ್ಲಿ ಜೀವಿಗಳು ಹೇಗೆ ಬೆಳವಣಿಗೆಯಾಗುತ್ತವೆ ಎಂಬುದನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ.

ಪ್ರಮುಖಾಂಶಗಳು:

  • ಚೀನಾದ ಚೊಂಗ್ಕಿಂಗ್ ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ಸಂಶೋಧನಾ ತಂಡಗಳು 3-ಕಿಲೋಗ್ರಾಂಗಳ ಮಿನಿ-ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿವೆ.
  • ಮಿನಿ-ಪರಿಸರ ವ್ಯವಸ್ಥೆಯನ್ನು ಚೇಂಜ್ 4 ರಾಕೆಟ್ ಮೂಲಕ 2018ರ ವೇಳೆಗೆ ಚಂದ್ರನಿಗೆ ಕಳುಹಿಸಲಾಗುವುದು.
  • ಆಲೂಗೆಡ್ಡೆ ಬೀಜಗಳು ಮತ್ತು ರೇಷ್ಮೆ ಹುಳು ಮೊಟ್ಟೆಗಳನ್ನು 18 ಸೆಂಟಿಮೀಟರ್ ಎತ್ತರದ ಸಿಲಿಂಡರ್ ಇರಿಸಲಾಗುತ್ತದೆ. ಸಂಶೋಧಕರ ಪ್ರಕಾರ, ರೇಷ್ಮೆ ಮೊಟ್ಟೆಗಳು ಓಡೆದು ಕಾರ್ಬನ್ ಡೈಆಕ್ಸೈಡ್ ಉತ್ಪಾದನೆಯಾಗಲಿದೆ ಮತ್ತು ಆಲೂಗೆಡ್ಡೆ ಸಸ್ಯಗಳು ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತವೆ.
  • ಭವಿಷ್ಯದಲ್ಲಿ ಚಂದ್ರನ ಮೇಲೆ ಇಳಿಯಲು ಮತ್ತು ಸಂಭವನೀಯ ಮಾನವ ವಾಸಕ್ಕೆ ತಯಾರಿ ಮಾಡುವುದು ಈ ಉದ್ದೇಶದ ಹಿಂದಿನ ಮುಖ್ಯ ಗುರಿಯಾಗಿದೆ.

ವಿಶ್ವಸಂಸ್ಥೆಯ ECOSOCಗೆ ಭಾರತ ಪುನರ್ ಆಯ್ಕೆ

ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಕುರಿತಾದ ವಿಶ್ವಸಂಸ್ಥೆಯ ಪ್ರಧಾನ ಸಂಸ್ಥೆಗೆ ಮೂರು ವರ್ಷಗಳ ಅವಧಿಗೆ ಭಾರತ ಪುನರ್ ಆಯ್ಕೆಯಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್ (ECOSOC) ಚುನಾವಣೆಯಲ್ಲಿ ಗೆದ್ದ 18 ರಾಷ್ಟ್ರಗಳಲ್ಲಿ ಭಾರತವು ಒಂದು.

ಪ್ರಮುಖಾಂಶಗಳು:

  • ಚುನಾವಣೆಯಲ್ಲಿ ಭಾರತ 183 ಮತಗಳನ್ನು ಪಡೆದುಕೊಂಡಿತು. ಏಷ್ಯಾ-ಪೆಸಿಫಿಕ್ ವಿಭಾಗದಲ್ಲಿ ಜಪಾನ್ ನಂತರ ಎರಡನೇ ಅತಿ ಹೆಚ್ಚು ಮತ ಪಡೆದ ದೇಶ ಭಾರತ.
  • ಪಾಕಿಸ್ತಾನದ ಅವಧಿ ಕೂಡ ಮುಗಿದಿದ್ದು, ಮರುಚುನಾವಣೆಗೆ ಪ್ರಯತ್ನಿಸಿತ್ತು ಆದರೆ ಕೇವಲ ಒಂದು ಮತ ಗಳಿಸುವ ಮೂಲಕ ಸೋಲು ಕಂಡಿತು.
  • ECOSOC ಚುನಾವಣೆಗೊಂಡ ಇತರೆ ರಾಷ್ಟಗಳೆಂದರೆ ಬೆಲಾರಸ್, ಈಕ್ವೆಡಾರ್, ಎಲ್ ಸಾಲ್ವಡಾರ್, ಫ್ರಾನ್ಸ್, ಜರ್ಮನಿ, ಘಾನಾ, ಭಾರತ, ಐರ್ಲೆಂಡ್, ಜಪಾನ್, ಮಲಾವಿ, ಮೆಕ್ಸಿಕೊ, ಮೊರಾಕೊ, ಫಿಲಿಪೈನ್ಸ್, ಸ್ಪೇನ್, ಸುಡಾನ್, ಟೋಗೊ, ಟರ್ಕಿ ಮತ್ತು ಉರುಗ್ವೆ. 2018ರ ಜನವರಿ 1 ರಿಂದ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿವೆ.

ECOSOC:

ECOSOC ಸದಸತ್ವ ಪಡೆದುಕೊಳ್ಳಲು ಒಂದು ದೇಶವು ಒಟ್ಟು ಮತಗಳಲ್ಲಿ ಮೂರನೇ ಎರಡರಷ್ಟು ಮತಗಳನ್ನು ಪಡೆಯಬೇಕು. ECOSOC ಒಟ್ಟು 54 ಸದಸ್ಯರನ್ನು ಹೊಂದಿದೆ. ಕೌನ್ಸಿಲ್ನ 54 ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ಸಾಮಾನ್ಯ ಸಭೆಯ ಮೂಲಕ ಚುನಾಯಿಸಲಾಗುತ್ತದೆ. 54ರಲ್ಲಿ, 14 ಸ್ಥಾನಗಳನ್ನು ಆಫ್ರಿಕನ್ ರಾಷ್ಟ್ರಗಳು, 11 ಏಷ್ಯನ್ ರಾಷ್ಟ್ರಗಳು, 6 ಪೂರ್ವ ಯುರೋಪಿಯನ್ ರಾಷ್ಟ್ರಗಳು 10 ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಷ್ಟ್ರಗಳು ಮತ್ತು 13 ಪಶ್ಚಿಮ ಯುರೋಪಿಯನ್ ಮತ್ತು ಇತರ ರಾಷ್ಟ್ರಗಳು ಹಂಚಲಾಗಿದೆ.

Leave a Comment

This site uses Akismet to reduce spam. Learn how your comment data is processed.