Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಭಾರತೀಯ ವಿದ್ಯಾರ್ಥಿ ಅಭಿವೃದ್ದಿಪಡಿಸಿದ ಲಘು ತೂಕದ ಉಪಗ್ರಹ ಉಡಾಯಿಸಿದ ನಾಸಾ

NASA_upತಮಿಳುನಾಡು ಮೂಲದ 18 ವರ್ಷದ ಬಾಲಕ ರಿಫತ್ ಶಾರಕ್ ಅವರು ವಿನ್ಯಾಸಗೊಳಿಸಿದ 64 ಗ್ರಾಂ ತೂಕದ ವಿಶ್ವದ ಅತ್ಯಂತ ಹಗುರವಾದ ಉಪಗ್ರಹವನ್ನು ನಾಸಾ ಉಡಾಯಿಸಿದೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಗೌರವಾರ್ಥ ಈ ಸಣ್ಣ ಉಪಗ್ರಹಕ್ಕೆ “ಕಲಾಂಸ್ಯಾಟ್” ಎಂದು ಹೆಸರಿಡಲಾಗಿದೆ. ಸಣ್ಣ ಉಪಗ್ರಹವನ್ನು ವಾಲೋಪ್ಸ್ ಐಲ್ಯಾಂಡಿನಲ್ಲಿರುವ ನಾಸಾದ ರಾಕೆಟ್ನಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾಯಿತು.

ಪ್ರಮುಖಾಂಶಗಳು:

  • “ಕಲಾಂಸ್ಯಾಟ್” 3-ಡಿ ಮುದ್ರಿತ ಉಪಗ್ರಹವಾಗಿದೆ. ಇದೇ ಮೊದಲ ಬಾರಿಗೆ 3-ಡಿ ಮುದ್ರಣ ತಂತ್ರಜ್ಞಾನವನ್ನು ಉಪಗ್ರಹ ವಿನ್ಯಾಸಕ್ಕೆ ಬಳಸಲಾಗಿದೆ.
  • ಜಾಗತಿಕ ಶಿಕ್ಷಣ ಸಂಸ್ಥೆ “ಐ ಡೂಡ್ಲ್ ಲರ್ನಿಂಗ್” ಮತ್ತು NASA ಪಾಲುದಾರಿಕೆಯ ಕ್ಯೂಬ್ ಸ್ಪೇಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಶಾರೂಕ್ ಮತ್ತು ಅವರ ತಂಡವು 1 ಕೆ.ಜಿ. ಕ್ಯೂಬ್ಸಾಟ್ ಅನ್ನು ವಿನ್ಯಾಸಗೊಳಿಸಿತ್ತು. ಆದರೆ ಕ್ಯೂಬ್ಸಾಟ್ ದುಬಾರಿಯಾಗಿದ್ದರಿಂದಾಗಿ, ಈ ಸ್ಪರ್ಧೆಯಲ್ಲಿ ಭಾಗವಹಿಸಲು ‘ಕಲಾಂಸ್ಯಾಟ್’ ಸಣ್ಣ ಉಪಗ್ರಹವನ್ನು ವಿನ್ಯಾಸಗೊಳಿಸಿದರು.
  • ಸಣ್ಣ ಉಪಗ್ರಹವು ಕೇವಲ 64 ಗ್ರಾಂ ತೂಕವಿದ್ದು, ಸ್ಮಾರ್ಟ್ಫೋನ್ಗಿಂತ ಹಗುರವಾಗಿದೆ. ಉಪಗ್ರಹವು ಬಲವರ್ಧಿತ ಕಾರ್ಬನ್ ಫೈಬರ್ ಪಾಲಿಮರ್ನಿಂದ ಮಾಡಲ್ಪಟ್ಟಿದೆ. ಉಪಗ್ರಹವನ್ನು ಉಡಾಯಿಸಿದ ನಂತರ ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ 12 ನಿಮಿಷಗಳ ಕಾಲ ಈ ಉಪಗ್ರಹವನ್ನು ಕಾರ್ಯಗತಗೊಳಿಸಲಾಯಿತು. 3D- ಮುದ್ರಿತ ಕಾರ್ಬನ್ ಫೈಬರ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದು ಈ ಉಪಗ್ರಹ ಉಡಾವಣೆಯ ಹಿಂದಿನ ಉದ್ದೇಶವಾಗಿದೆ.

2 Responses to “ಭಾರತೀಯ ವಿದ್ಯಾರ್ಥಿ ಅಭಿವೃದ್ದಿಪಡಿಸಿದ ಲಘು ತೂಕದ ಉಪಗ್ರಹ ಉಡಾಯಿಸಿದ ನಾಸಾ”

  1. -Koushik says:

    Super sir thanks

  2. Gouradevi says:

    Nice creative

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.