ಭಾರತಕ್ಕೆ ಮಾನವ ರಹಿತ ಡ್ರೋನ್ ತಂತ್ರಜ್ಞಾನ ವಿನಿಮಯಕ್ಕೆ ಅಮೆರಿಕ ಒಪ್ಪಿಗೆ

dhronವಿಶಿಷ್ಠ ತಂತ್ರಜ್ಞಾನದಿಂದ ಕೂಡಿರುವ ಗಾರ್ಡಿಯನ್ 22 ಮಾನವರಹಿತ ಗಾರ್ಡಿಯನ್ ಡ್ರೋನ್ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅನುಮತಿ ನೀಡಿದೆ. ಭಾರತಕ್ಕೆ ಮಾನವ ರಹಿತ ಡ್ರೋಣ್ (UAV) ಮಾರಾಟ ಮಾಡುವ ಒಪ್ಪಂದವು $2 ರಿಂದ  3 ಶತಕೋಟಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಒಪ್ಪಂದವನ್ನು ಈಗಾಗಲೇ ಅಂಗೀಕರಿಸಿದೆಯಾದರೂ, ಒಪ್ಪಂದದ ಕುರಿತು ಅಧಿಕೃತ ಘೋಷಣೆ ಇನ್ನೂ ಘೋಷಿಸಲ್ಪಟ್ಟಿಲ್ಲ.

ಮಹತ್ವ:

  • ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ನಿಯಮ (MTCR) ಸದಸ್ಯತ್ವ ಪಡೆದುಕೊಂಡ ನಂತರ ಹಾಗೂ ಅಮೆರಿಕ ಭಾರತವನ್ನು ಒಂದು ಪ್ರಮುಖ ರಕ್ಷಣಾ ಪಾಲುದಾರನಾಗಿ ಗುರುತಿಸಿದ ನಂತರ ಅತ್ಯಾಧುನಿಕ UAV ತಂತ್ರಜ್ಞಾನವನ್ನು ವರ್ಗಾವಣೆ ಮಾಡುತ್ತಿರುವುದು ಮಹತ್ವವೆನಿಸಿದೆ. ಜೂನ್ 2016 ರಲ್ಲಿ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ನಿಯಮ (MTCR) ನ 35 ನೇ ಪೂರ್ಣ ಸದಸ್ಯ ರಾಷ್ಟ್ರವಾಗಿ ಸೇರ್ಪಡೆ್ಗೊಂಡಿತು.
  • ಗಾರ್ಡಿಯನ್ UAV ತಂತ್ರಜ್ಞಾನದ ವರ್ಗಾವಣೆಯು ಹಿಂದೂ ಮಹಾಸಾಗರವನ್ನು ರಕ್ಷಿಸಲು ಪರಸ್ಪರ ಭದ್ರತಾ ಹಿತಾಸಕ್ತಿಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

Leave a Reply

Your email address will not be published. Required fields are marked *