ಚಂದ್ರನತ್ತ ಸಣ್ಣ-ಪರಿಸರ ವ್ಯವಸ್ಥೆಯನ್ನು ಕಳುಹಿಸಿಕೊಡಲು ಚೀನಾ ಸಜ್ಜು

moon_upಮುಂದಿನ ವರ್ಷದ ವೇಳೆಗೆ ಆಲೂಗಡ್ಡೆ ಬೀಜಗಳು ಮತ್ತು ರೇಷ್ಮೆ ಹುಳು ಮೊಟ್ಟೆಗಳನ್ನು ಒಳಗೊಂಡ ಮಿನಿ-ಪರಿಸರ ವ್ಯವಸ್ಥೆಯನ್ನು ಚಂದ್ರನತ್ತ ಕಳುಹಿಸಲು ಚೀನಾ ಚಿಂತಿಸಿದೆ. ಈ ಪ್ರಯೋಗವು ಚಂದ್ರನಲ್ಲಿ ಜೀವಿಗಳು ಹೇಗೆ ಬೆಳವಣಿಗೆಯಾಗುತ್ತವೆ ಎಂಬುದನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ.

ಪ್ರಮುಖಾಂಶಗಳು:

  • ಚೀನಾದ ಚೊಂಗ್ಕಿಂಗ್ ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ಸಂಶೋಧನಾ ತಂಡಗಳು 3-ಕಿಲೋಗ್ರಾಂಗಳ ಮಿನಿ-ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿವೆ.
  • ಮಿನಿ-ಪರಿಸರ ವ್ಯವಸ್ಥೆಯನ್ನು ಚೇಂಜ್ 4 ರಾಕೆಟ್ ಮೂಲಕ 2018ರ ವೇಳೆಗೆ ಚಂದ್ರನಿಗೆ ಕಳುಹಿಸಲಾಗುವುದು.
  • ಆಲೂಗೆಡ್ಡೆ ಬೀಜಗಳು ಮತ್ತು ರೇಷ್ಮೆ ಹುಳು ಮೊಟ್ಟೆಗಳನ್ನು 18 ಸೆಂಟಿಮೀಟರ್ ಎತ್ತರದ ಸಿಲಿಂಡರ್ ಇರಿಸಲಾಗುತ್ತದೆ. ಸಂಶೋಧಕರ ಪ್ರಕಾರ, ರೇಷ್ಮೆ ಮೊಟ್ಟೆಗಳು ಓಡೆದು ಕಾರ್ಬನ್ ಡೈಆಕ್ಸೈಡ್ ಉತ್ಪಾದನೆಯಾಗಲಿದೆ ಮತ್ತು ಆಲೂಗೆಡ್ಡೆ ಸಸ್ಯಗಳು ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತವೆ.
  • ಭವಿಷ್ಯದಲ್ಲಿ ಚಂದ್ರನ ಮೇಲೆ ಇಳಿಯಲು ಮತ್ತು ಸಂಭವನೀಯ ಮಾನವ ವಾಸಕ್ಕೆ ತಯಾರಿ ಮಾಡುವುದು ಈ ಉದ್ದೇಶದ ಹಿಂದಿನ ಮುಖ್ಯ ಗುರಿಯಾಗಿದೆ.

Leave a Reply

Your email address will not be published. Required fields are marked *