ಇಸ್ರೋದ ಮಂಗಳ ಯಾನಕ್ಕೆ 1000 ದಿನದ ಸಂಭ್ರಮ

isro_upಇಸ್ರೋದ “ಮಾರ್ಸ್ ಆರ್ಬಿಟರ್ ಮಿಷನ್ (MOM)” 1000 ಭೂಮಿಯ ದಿನಗಳನ್ನು ಕಕ್ಷೆಯಲ್ಲಿ ಪೂರ್ಣಗೊಳಿಸಿದೆ. ತನ್ನ ನಿಗದಿತ ಜೀವಿತಾವಧಿಗಿಂತ 5 ಪಟ್ಟು ಹೆಚ್ಚು ಕಾಲ ಕಕ್ಷೆಯಲ್ಲಿ ಇರುವ ಮೂಲಕ ಮಂಗಳಯಾನ ಇತಿಹಾಸ ಸೃಷ್ಟಿಸಿದೆ. MOM ಪ್ರಸ್ತುತ 388 ಭಾರಿ ಮಂಗಳದ  ಕಕ್ಷೆಯನ್ನು ಪರಿಭ್ರಮಿಸಿದೆ ಮತ್ತು 715 ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ. ವಿಜ್ಞಾನಿಗಳ ಪ್ರಕಾರ, MOM ಉತ್ತಮ ಕಾರ್ಯನಿರ್ವಹಣೆ ಸ್ಥಿತಿಯಲ್ಲಿದ್ದು ನಿಧಾನವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಭಾರತವು ಮಂಗಳಯಾನ 2.0 ಮತ್ತು 2020ರ ನಂತರ ಶುಕ್ರ ಗ್ರಹಕ್ಕೆ ಹೊಸ ಮಿಶನ್ ಕಳುಹಿಸಲು ಯೋಜಿಸಿದೆ.

MOM:

 2013ರ ನವೆಂಬರ್ ತಿಂಗಳಲ್ಲಿ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿದ್ದ ನೌಕೆ, 2014ರ ಸೆಪ್ಟೆಂಬರ್ 24ರಂದು ಮಂಗಳ ಗ್ರಹದ ಕಕ್ಷೆಯನ್ನು ಸೇರಿತ್ತು. ಅಂದಿನಿಂದ ಇಲ್ಲಿಯವರೆಗೂ ಮಂಗಳ ಗ್ರಹದ ವಿವಿಧ ಸುಮಾರು 715 ಚಿತ್ರಗಳನ್ನು ಮಂಗಳಯಾನ ನೌಕೆ ಭೂಮಿಗೆ ಕಳುಹಿಸಿದೆ. ಭೂಮಿಯಿಂದ 21 ಕೋಟಿ ಕಿ.ಮೀ. ದೂರದಲ್ಲಿರುವ ಮಂಗಳ ಗ್ರಹದ ಮೇಲ್ಮೈ ವಾತಾವರಣ, ಮಿಥೇನ್ ಅನಿಲದ ಕುರುಹು, ಜೀವಿಗಳ ವಾಸದ ಕುರಿತು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದೆ.

ಇತರ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಕಡಿಮೆ ವೆಚ್ಚದಲ್ಲಿ ಅಂದರೆ 450 ಕೋಟಿ ರುಪಾಯಿಯಲ್ಲಿ ಮಂಗಳಯಾನ ನೌಕೆಯನ್ನು ನಿರ್ಮಿಸಿತ್ತು. ಮಂಗಳಯಾನ ನೌಕೆ ಮಂಗಳನ ಕಕ್ಷೆ ಸೇರಿ ಸಾವಿರ ದಿನ ಪೂರ್ಣಗೊಂಡಿರುವುದು ಇಸ್ರೋ ವಿಜ್ಞಾನಿಗಳಲ್ಲಿ ಹರ್ಷ ಮೂಡಿಸಿದೆ.

No Responses to “ಇಸ್ರೋದ ಮಂಗಳ ಯಾನಕ್ಕೆ 1000 ದಿನದ ಸಂಭ್ರಮ”

Trackbacks/Pingbacks

  1. ಪ್ರಚಲಿತ ವಿದ್ಯಮಾನಗಳು-ಜೂನ್,28,2017 | ಕರುನಾಡು ಎಗ್ಸಾಮ್ಸ - […] ಇಸ್ರೋದ ಮಂಗಳ ಯಾನಕ್ಕೆ  1000 ದಿನದ ಸಂಭ್ರಮ […]

Leave a Reply

Your email address will not be published. Required fields are marked *