DRDO ದಿಂದ ನಾಗ್ ಕ್ಷಿಪಣಿ ಯಶಸ್ವಿ ಪರೀಕ್ಷೆ

DRDO_upರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ರಾಜಸ್ಥಾನದಲ್ಲಿ ‘ನಾಗ್’ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಪರೀಕ್ಷೆಯನ್ನು ಹೈದರಾಬಾದ್ನಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕ್ಷಿಪಣಿ ಕಾಂಪ್ಲೆಕ್ಸ್, ಜೋಧ್ಪುರದ ರಕ್ಷಣಾ ಪ್ರಯೋಗಾಲಯ, ಪುಣೆಯಲ್ಲಿರುವ ಅರ್ಮಾಮೆಂಟ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಆರ್ಡಿಇ) ಮತ್ತು ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ (ಎಚ್ಇಎಮ್ಆರ್ಎಲ್)ಯ ವಿಜ್ಞಾನಿಗಳು ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

ಪ್ರಮುಖಾಂಶಗಳು:

ಇಂಟಿಗ್ರೇಟೆಡ್ ಗೈಡೆಡ್ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ (ಐಜಿಎಂಡಿಪಿ) ಅಡಿಯಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಐದು ಕ್ಷಿಪಣಿ ವ್ಯವಸ್ಥೆಗಳಲ್ಲಿ ನಾಗ್ (ಆಂಟಿ-ಟ್ಯಾಂಕ್) ಕ್ಷಿಪಣಿ ಒಂದಾಗಿದೆ. ಅಗ್ನಿ, ಆಕಾಶ್, ತ್ರಿಶೂಲ್ ಮತ್ತು ಪೃಥ್ವಿ ಇತರೆ ನಾಲ್ಕು ಕ್ಷಿಪಣಿಗಳನ್ನು ಈ ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಮೂರನೇ ತಲೆಮಾರಿನ  ಆಂಟಿ ಟ್ಯಾಂಕ್ ಗೈಡೆಡ್ ಮಿಸ್ಸೈಲ್ ನಾಗ್ ನಲ್ಲಿ ಇಂಟಿಗ್ರೇಟೆಡ್ ಏವಿಯೋನಿಕ್ಸ್ ತಂತ್ರಜ್ಞಾನದೊಂದಿಗೆ ಹೆಚ್ಚು ಮುಂದುವರಿದ ಇಮೇಜಿಂಗ್ ಇನ್ಫ್ರಾರೆಡ್ ರಾಡಾರ್ (ಐಆರ್ಆರ್) ಅನ್ನು ಅಳವಡಿಸಲಾಗಿದೆ.

ಸ್ತ್ರಸಜ್ಜಿತ ಮಿಲಿಟರಿ ವಾಹನಗಳನ್ನು ಹೊಡೆಯಲು ಮತ್ತು ನಾಶಮಾಡಲು ‘ನಾಗ್’ ಕ್ಷಿಪಣಿಯನ್ನು ವಿನ್ಯಾಸಗೊಳಿಸಲಾಗಿದೆ.

ನಾಗ್ ಕ್ಷಿಪಣಿಯನ್ನು ಭೂಮಿ ಮತ್ತು ವಾಯು-ಆಧಾರಿತ ವೇದಿಕೆಗಳಿಂದ ಉಡಾಯಿಸಬಹುದು. ಹೆಲಿಕಾಪ್ಟರ್ ನಿಂದ ಉಡಾಯಿಸುವ ಕ್ಷಿಪಣಿಯನ್ನು ಹೆಲಿಕಾಪ್ಟರ್-ಎನ್ಎಜಿ (ಹೆಲಿನ್) ಎಂದು ಕರೆಯಲಾಗುತ್ತಿದ್ದು, ಧೃವ್ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್ಎಚ್) ಮತ್ತು ಎಚ್ಎಎಲ್ ರುದ್ರ ಹೆಲಿಕಾಪ್ಟರ್ನಿಂದ ದಾಳಿ ನಡೆಸಬಹುದು.

One Response to “DRDO ದಿಂದ ನಾಗ್ ಕ್ಷಿಪಣಿ ಯಶಸ್ವಿ ಪರೀಕ್ಷೆ”

  1. it is good for competaters in a competition field.

Leave a Reply

Your email address will not be published. Required fields are marked *