ರೈತರಿಗೆ ಅಲ್ಪಾವಧಿ ಬೆಳೆ ಸಾಲದ ಮೇಲೆ ಬಡ್ಡಿ ಕೊಡುಗೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

2017-18ರಲ್ಲಿ ರೈತರಿಗೆ ಬಡ್ಡಿ ದರ ಕೊಡುಗೆ ಯೋಜನೆಯನ್ನು (ಐಎಸ್ಎಸ್) ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ. ಸರ್ಕಾರವು ಈ ಯೋಜನೆಗೆ 20,339 ಕೋಟಿ ರೂ ಮೀಸಲಿಟ್ಟಿದೆ.

ಪ್ರಮುಖಾಂಶಗಳು:

  • ಅಲ್ಪಾವಧಿಯ ಬೆಳೆ ಸಾಲಕ್ಕೆ ಲಭ್ಯವಿರುವ ಕೃಷಿ ಸಾಲವನ್ನು ಕೈಗೆಟುಕುವ ದರದಲ್ಲಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಿಂದ ದೇಶದಲ್ಲಿ ಕೃಷಿ ಉತ್ಪಾದಕತೆ ಮತ್ತು ಉತ್ಪಾದನೆಯನ್ನು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯಡಿ ರೈತರಿಗೆ ಅಲ್ಪಾವಧಿ ಬೆಳೆ ಸಾಲವನ್ನು 3 ಲಕ್ಷ ರೂಗಳನ್ನು ವರ್ಷಕ್ಕೆ ಶೇ. 4% ನಷ್ಟು ಬಡ್ಡಿ ದರದಲ್ಲಿ ನೀಡಲಾಗುವುದು. ಈ ಯೋಜನೆಯು 1 ವರ್ಷ ಮುಂದುವರೆಯಲಿದೆ ಮತ್ತು ನಬಾರ್ಡ್ ಮತ್ತು ಆರ್ಬಿಐ ಇದನ್ನು ಜಾರಿಗೊಳಿಸಲಿವೆ.
  • ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಆರ್ಥಿಕ ನೆರವು ನೀಡಲು ಸಾರ್ವಜನಿಕ ವಲಯ ಬ್ಯಾಂಕುಗಳು (ಪಿಎಸ್ಬಿ), ಖಾಸಗಿ ವಲಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (ಆರ್ಆರ್ಬಿ) ಮತ್ತು NABARD ಗೆ ಯೋಜನೆಯಡಿ ಹಣಕಾಸನ್ನು ಒದಗಿಸಲಾಗುವುದು. ಅಲ್ಪಾವಧಿಯ ಬೆಳೆ ಸಾಲವನ್ನು ಸಮಯಕ್ಕೆ ಪಾವತಿಸುವ ರೈತರಿಗೆ ವಾರ್ಷಿಕ ಶೇ.5% ಬಡ್ಡಿದರವನ್ನು ನೀಡಲಾಗುತ್ತದೆ.ಈ ರೈತರು ಪರಿಣಾಮಕಾರಿಯಾಗಿ ಶೇ.4% ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ.

ಹಿನ್ನಲೆ:

ಬಡ್ಡಿ ಸಬ್ವೆನ್ಷನ್ ಸ್ಕೀಮ್ (ಐಎಸ್ಎಸ್) 2006-07 ರಿಂದ ಚಾಲನೆಯಲ್ಲಿದೆ. ಈ ಯೋಜನೆಯಡಿಯಲ್ಲಿ, ಬೆಳೆ ಸಾಲವನ್ನು ರೂ.3 ಲಕ್ಷ ಸಾಲವನ್ನು ಶೇ. 7% ಬಡ್ಡಿದರದಲ್ಲಿ ನೀಡಲಾಗುತ್ತದೆ. ಮುಂಗಡ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗಾಗಿ ಸಾಲಗಳನ್ನು ಮರುಪಾವತಿಸುವ ರೈತರಿಗೆ 3% ರಷ್ಟು ಹೆಚ್ಚಿನ ಸಬ್ಸಿಡನ್ನು ನೀಡಲಾಗುತ್ತದೆ.

ವೆರಿಝೋನ್ ತೆಕ್ಕೆಗೆ ಯಾಹೂ

ಟೆಲಿಕಾಂ ದೈತ್ಯ ವೆರಿಝೋನ್ ಸಂಸ್ಥೆಯು ಯಾಹೂ ಸಂಸ್ಥೆಯನ್ನು $ 4.48 ಬಿಲಿಯನ್ (£ 3.51 ಮಿ) ಗೆ ಸ್ವಾಧೀನಪಡಿಸಿಕೊಂಡಿದೆ. ಆ ಮೂಲಕ ಎರಡು-ದಶಕಗಳ ಕಾಲ ಸ್ವತಂತ್ರ ಸಂಸ್ಥೆಯಾಗಿ  ಯಾಹೂ ಕಾರ್ಯಾಚರಣೆಗೆ ತೆರೆ ಬೀಳಲಿದೆ. ವೆರಿಝೋನ್ ಅಮೆರಿಕಾದ ನಂಬರ್ 1 ನಿಸ್ತಂತು ಆಪರೇಟರ್ ಸಂಸ್ಥೆ ಆಗಿದೆ.

                ವೆರಿಝೋನ್ ಸಂಸ್ಥೆ ಎರಡು ವರ್ಷಗಳ ಹಿಂದೆ ಖರೀದಿಸಿದ್ದ AOL ಸಂಸ್ಥೆಯೊಂದಿಗೆ ಯಾಹೂವನ್ನು ಸಂಯೋಜಿಸಲಿದೆ. ಎರಡು ವರ್ಷಗಳ ಹಿಂದೆ AOL ಅನ್ನು ಖರೀದಿಸಿ ಓಥ್ ಎನ್ನುವ ಹೊಸ ಸಂಸ್ಥೆಯನ್ನು ಹುಟ್ಟುಹಾಕಿತ್ತು. ವೆರಿಝೋನ್ನ ಮೀಡಿಯಾ ಮತ್ತು ಟೆಲಿಮ್ಯಾಟಿಕ್ಸ್ ಸಂಸ್ಥೆಯಲ್ಲಿ ಓಥ್ ಒಂದು ವಿಭಾಗವಾಗಿದೆ. ಓಥ್ ಹಫ್ಪೋಸ್ಟ್, ಟೆಕ್ಕ್ರಂಚ್ ಮತ್ತು Tumblr ನಂತಹ 50 ಕ್ಕಿಂತ ಹೆಚ್ಚಿನ ಬ್ರ್ಯಾಂಡ್ಗಳನ್ನು ಹೊಂದಿದೆ.

                ಸ್ವಾಧೀನದಿಂದ, ಯಾಹೂವಿನ ಮುಖ್ಯ ಕಾರ್ಯನಿರ್ವಾಹಕ ಮರಿಸ್ಸ ಮೇಯರ್ ಅವರು ರಾಜೀನಾಮೆ ನೀಡಿದ್ದಾರೆ.

ವಿಶ್ವಾದ್ಯಂತ ಲಕ್ಷಾಂತರ ಜನರು ಬಳಸುತ್ತಿರುವ ಯಾಹೂ ಬ್ರಾಂಡ್ ಅನ್ನು ಹೇಗೆ ಬಳಸಲಿದೆ ಎಂದು ವೆರಿಝೋನ್ ಪ್ರಸ್ತಾಪಿಸಿಲ್ಲ. ಆದರೆ ಇದು ಯಾಹೂ ಸ್ಪೋರ್ಟ್ಸ್, ಯಾಹೂ ಫೈನಾನ್ಸ್, ಯಾಹೂ ಮೇಲ್ ಮತ್ತು ಇನ್ನಿತರ ಹೆಸರುಗಳನ್ನು ಹಾಗೇ ಉಳಿಸುವುದಾಗಿ ಹೇಳಿದೆ.

IOC, BPCL, HPCL ನಿಂದ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣ ಘಟಕ

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿ ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ ಮತ್ತು ಪೆಟ್ರೊಕೆಮಿಕಲ್ ಕಾಂಪ್ಲೆಕ್ಸ್ ಅನ್ನು ಜಂಟಿಯಾಗಿ ಸ್ಥಾಪಿಸಲು ಸಾರ್ವಜನಿಕ ಇಂಧನ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಜಂಟಿ ಒಪ್ಪಂದಕ್ಕೆ ಸಹಿ ಹಾಕಿವೆ.

ಪ್ರಮುಖಾಂಶಗಳು:

  • ಇಂಡಿಯನ್ ಆಯಿಲ್ ಕಾರ್ಪ್ (ಐಓಸಿ) ಶೇ.50% ಪಾಲನ್ನು ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಎಚ್ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕ್ರಮವಾಗಿ ಶೇ. 25% ಪಾಲನ್ನು ಹೊಂದಿರಲಿವೆ.
  • 3 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಶುದ್ಧೀಕರಣ ಕೇಂದ್ರವನ್ನು ಸ್ಥಾಪಿಸಲಾಗುವುದು. ಹೊಸ ಘಟಕವೂ 2022 ರ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಂಸ್ಕರಣ ಘಟಕ 60 ಮಿಲಿಯನ್ ಟನ್ಗಳಷ್ಟು ಸಂಸ್ಕರಣ ಸಾಮರ್ಥ್ಯವನ್ನು ಹೊಂದಿದೆ.
  • ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಬಾಬುಲ್ವಾಡಿ, ರಾಜಪುರದಲ್ಲಿ ಈ ಘಟಕ ತಲೆ ಎತ್ತಲಿದೆ. ಈ ಪ್ರದೇಶ ಪಶ್ಚಿಮ ಕರಾವಳಿಗೆ ಸಮೀಪದಲ್ಲಿದೆ. ಪಶ್ಚಿಮ ಕರಾವಳಿಯಲ್ಲಿರುವುದರಿಂದ ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಿಂದ ಕಚ್ಚಾ ತೈಲವನ್ನು ಸುಲಭವಾಗಿ ಸಂಗ್ರಹಿಸಲು ಸಹಾಯ ಆಗಲಿದೆ.
  • ಶುದ್ಧೀಕರಣ ಘಟಕವು 20 ಮಿಲಿಯನ್ ಟನ್ ಸಾಮರ್ಥ್ಯದ ಮೂರು ಕಚ್ಚಾ ಘಟಕಗಳನ್ನು ಹೊಂದಿರಲಿದೆ. ಪೆಟ್ರೋಲ್, ಡೀಸೆಲ್, ಎಲ್ಪಿಜಿ, ಎಟಿಎಫ್ ಮತ್ತು ಪೆಟ್ರೋಕೆಮಿಕಲ್ ತಯಾರಿಸಲು ಪೂರಕ ಉತ್ಪನ್ನಗಳನ್ನು ಸಂಸ್ಕರಣಾಗಾರವು ಉತ್ಪಾದಿಸಲಿದೆ.

ಹಿನ್ನಲೆ:

ಯುಎಸ್ ಮತ್ತು ಚೀನಾ ನಂತರ ಭಾರತ ವಿಶ್ವದ ಮೂರನೇ ಅತಿದೊಡ್ಡ ಇಂಧನ ರಾಷ್ಟ್ರವಾಗಿದೆ. ಭಾರತದಲ್ಲಿ ಪ್ರತಿವರ್ಷ ಇಂಧನ ಬಳಕೆಯು ವಿಶ್ವದ ಸರಾಸರಿ ನಾಲ್ಕನೇ ಒಂದು ಭಾಗವಾಗಿದೆ. ಆದಾಗ್ಯೂ, ದೇಶದಲ್ಲಿ ದೇಶೀಯ ತೈಲ ಬೇಡಿಕೆ 2040 ರೊಳಗೆ 458 ದಶಲಕ್ಷ ಟನ್ಗಳಷ್ಟು ಹೆಚ್ಚಾಗಲಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಇಎ) ತಿಳಿಸಿದೆ. ಇದಕ್ಕೆ ವಿರುದ್ಧವಾಗಿ ದೇಶೀಯ ಸಂಸ್ಕರಣಾ ಸಾಮರ್ಥ್ಯವು 230-235 ದಶಲಕ್ಷ ಟನ್ಗಳಷ್ಟಿದೆ. ಇದು 194.2 ದಶಲಕ್ಷ ಟನ್ಗಳ ಬೇಡಿಕೆಯನ್ನು ಮೀರಿದೆ. ಭವಿಷ್ಯದ ಇಂಧನ ಬೇಡಿಕೆ ಮತ್ತು ದೇಶದ ರಫ್ತು ಸಂಭಾವ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂಸ್ಕರಣಾಗಾರ ಸಂಕೀರ್ಣವನ್ನು ಸ್ಥಾಪಿಸಲಾಗುತ್ತಿದೆ.

ಇಸ್ರೇಲ್ ಲೇಖಕ ಡೇವಿಡ್ ಗ್ರಾಸ್ಮನ್ ಅವರಿಗೆ ಮ್ಯಾನ್ ಬುಕರ್ ಅಂತಾರಾಷ್ಟ್ರೀಯ ಪ್ರಶಸ್ತಿ

ಇಸ್ರೇಲಿ ಲೇಖಕ ಡೇವಿಡ್ ಗ್ರಾಸ್ಮನ್ ರವರ “ಎ ಹಾರ್ಸ್ ವಾಕ್ಸ್ ಇನ್ಟು ಎ ಬಾರ್” ಎಂಬ ಕಾದಂಬರಿಗಾಗಿ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆ ಮೂಲಕ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ಇಸ್ರೇಲಿ ಲೇಖಕ ಎನಿಸಿದ್ದಾರೆ. ಡೇವಿಡ್ ಗ್ರಾಸ್ಮನ್ ಅವರು ತಮ್ಮ ಭಾಷಾಂತರಕಾರ ಜೆಸ್ಸಿಕಾ ಕೊಹೆನ್ರೊಂದಿಗೆ £ 50,000 ($ 64,000) ಪ್ರಶಸ್ತಿ ಹಣವನ್ನು ಹಂಚಿಕೊಂಡಿದ್ದಾರೆ.

                ಡೇವಿಡ್ ಗ್ರಾಸ್ಮನ್ ಇತರೆ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಡೇವಿಡ್ ಗ್ರಾಸ್ಮನ್ ಅವರ 1986ರ ಕಾದಂಬರಿ “ಸೀ ಅಂಡರ್: ಲವ್” ಅಪಾರ ಮನ್ನಣೆ ಗಳಿಸಿತ್ತು.

            ಡೇವಿಡ್ ಗ್ರಾಸ್ಮನ್ನ ಇತರೆ ಮುಖ್ಯ ಕೃತಿಗಳೆಂದರೆ “ದ ಯೆಲ್ಲೋ ವಿಂಡ್, ದಿ ಎಂಡ್ ಆಫ್ ದಿ ಲ್ಯಾಂಡ್”. ಅವರ ಕೃತಿಗಳನ್ನು 30 ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಿಸಲಾಗಿದೆ. 1998 ರಲ್ಲಿ ಫ್ರಾನ್ಸ್ನ ಚೆವಾಲಿಯರ್ ಡೆ ಎಲ್’ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್ನ ಪ್ರಶಸ್ತಿ ಲಭಿಸಿದೆ. ಸಿರಿಯಾ ಸರ್ಕಾರದ ಮೇಲೆ ನಿರ್ಬಂಧ ಹೇರುವಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಸಲ್ಲಿಸಿದ್ದ ಏಳು ಪ್ರಸಿದ್ದ ಲೇಖಕರಲ್ಲಿ ಡೇವಿಡ್ ಗ್ರಾಸ್ಮನ್ ಸಹ ಒಬ್ಬರು.

ಮ್ಯಾನ್ ಬುಕರ್ ಅಂತಾರಾಷ್ಟ್ರೀಯ ಪ್ರಶಸ್ತಿ:

ದಿ ಮ್ಯಾನ್ ಬೂಕರ್ ಪ್ರಶಸ್ತಿ ವಿಶ್ವದ ಅತ್ಯಂತ ಇಂಗ್ಲಿಷ್ ಭಾಷೆಯ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾಗಿದೆ. ಇದನ್ನು 1969 ರಲ್ಲಿ ಪ್ರಾರಂಭಿಸಲಾಯಿತು. ಮ್ಯಾನ್ ಬುಕರ್ ಪ್ರಶಸ್ತಿ ಅಂತಾರಾಷ್ಟ್ರೀಯ ಆವೃತ್ತಿಯನ್ನು 2005 ರಲ್ಲಿ ಪರಿಚಯಿಸಲಾಯಿತು. 2016 ರಿಂದ ಪ್ರಶಸ್ತಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿರುವ ಹಾಗೂ ಯುನೈಟೆಡ್ ಕಿಂಗ್ಡಮ್ನಲ್ಲಿ ಪ್ರಕಟಿಸಲಾಗಿರುವ ಕೃತಿಗೆ ನೀಡಲಾಗುತ್ತಿದೆ. ಇದು 50,000 ಪೌಂಡ್ ನಗದು ಬಹುಮಾನವನ್ನು ಹೊಂದಿದೆ. ಕಳೆದ ವರ್ಷ, ದಕ್ಷಿಣ ಕೊರಿಯಾದ ಲೇಖಕ ಹ್ಯಾನ್ ಕಾಂಗ್ ಅವರ ಕಾದಂಬರಿ “ದಿ ವೆಜಿಟೇರಿಯನ್”ಗೆ ಪ್ರಶಸ್ತಿ ಒಲಿದಿತ್ತು.

3 Thoughts to “ಪ್ರಚಲಿತ ವಿದ್ಯಮಾನಗಳು-ಜೂನ್,23,2017”

  1. ಸೋಮಶೇಖರ ಬಿ ಪಿ

    ಪ್ರಚಲಿತ ಘಟನೆಗಳು ತುಂಬ ಚೆನ್ನಾಗಿವೆ ಧನ್ಯವಾದಗಳು ಗುರುಗಳೇ.

  2. Supriya

    Sir key answer or explanation bidi sir please

Leave a Comment

This site uses Akismet to reduce spam. Learn how your comment data is processed.