ಕಲಾಡನ್ ಬಹು-ಮಾದರಿ ಸಾರಿಗೆ ಯೋಜನೆ (ಕೆಎಂಟಿಟಿ):

KMTT ಮುಖ್ಯವಾಗಿ ಶಿಪ್ಪಿಂಗ್, ಒಳನಾಡು ಜಲಸಾರಿಗೆ ಮತ್ತು ರಸ್ತೆ ಸಾರಿಗೆ ವಿಸ್ತರಣೆಗಳನ್ನು ಒಳಗೊಂಡಿರುವ ಬಹು-ಮಾದರಿ ಸಾರಿಗೆ ಯೋಜನೆಯಾಗಿದೆ. ಇವುಗಳ ಪೈಕಿ ಕೋಲ್ಕತಾದಿಂದ ಮ್ಯಾನ್ಮಾರ್ನಲ್ಲಿನ ಸಿಟ್ವೆ ಬಂದರಿನ ಶಿಪ್ಪಿಂಗ್ ಮಾರ್ಗ ಅತಿ ಉದ್ದದು ಆಗಿದೆ.

                ಭಾರತ ಸರ್ಕಾರವು ಈ ಯೋಜನೆಗೆ ಧನಸಹಾಯವನ್ನು ನೀಡುತ್ತಿದೆ ಮತ್ತು ನೆರೆಹೊರೆಯ ರಾಷ್ಟ್ರಗಳಲ್ಲಿ ಭಾರತದ ಪ್ರಮುಖ ಬಂಡವಾಳ ಯೋಜನೆಯೆಂದು ಪರಿಗಣಿಸಲಾಗಿದೆ.

                ಸರಕುಗಳನ್ನು ಕೊಲ್ಕತ್ತಾ ಬಂದರಿನಿಂದ ಪ್ರಾರಂಭಿಸಿ ಮ್ಯಾನ್ಮಾರ್ನಲ್ಲಿ ಸಿಟ್ವೆ ಬಂದರಿಗೆ ಹಡುಗಿನ ಮೂಲಕ ಸಾಗಿಸಲಾಗುತ್ತದೆ. ಸಿಟ್ವೆ ಬಂದರನ್ನು ಕಶದನ್ ನದಿ ಸಾರಿಗೆ ಮಾರ್ಗ ಮೂಲಕ ಲಶಿಯೋಗೆ (ಮ್ಯಾನ್ಮಾರ್) ಸಂಪರ್ಕ ಮಾಡಲಾಗುತ್ತದೆ. ಲಶಿಯಾವನ್ನು ಮಿಜೋರಾಮ್ಗೆ ರಸ್ತೆ ಸಾರಿಗೆ ಮೂಲಕ (ರಾಷ್ಟ್ರೀಯ ಹೆದ್ದಾರಿ 54) ಸಂಪರ್ಕಿಸಲಾಗುತ್ತದೆ.

ಹಿನ್ನಲೆ:

ಕಲಾಡನ್ ಬಹು-ಮಾದರಿ ಸಾರಿಗೆ ಯೋಜನೆಗಳ ಕಲ್ಪನೆಯನ್ನು 2003ರಲ್ಲಿ ರೂಪಿಸಲಾಯಿತು. ಆದಾಗ್ಯೂ, ಭಾರತ ಮತ್ತು ಮ್ಯಾನ್ಮಾರ್ ಕಲಾಡನ್ ಯೋಜನೆಗೆ 2008ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. ನಿರ್ಮಾಣವು 2010 ರಲ್ಲಿ ಪ್ರಾರಂಭವಾಯಿತು ಆದರೆ ಅಸಮರ್ಪಕ ನಿಧಿ ಹಂಚಿಕೆ ಮತ್ತು ಯೋಜನಾ ವಿಫಲತೆಯು ಯೋಜನೆಯ ಪೂರ್ಣಗೊಳಿಸುವಿಕೆಯನ್ನು ವಿಳಂಬಗೊಳಿಸಿತು. 2015 ರಲ್ಲಿ, ಪ್ರಸ್ತುತ ಸರ್ಕಾರವು ಸುಮಾರು ಆರು ಬಾರಿ ಬಜೆಟ್ ಅಂದಾಜುಗಳನ್ನು ಪರಿಷ್ಕರಿಸಿದೆ ಮತ್ತು 2019 ರಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶದಿಂದ ಸಲಹೆಗಾರರಾಗಿ ಸರ್ಕಾರಿ ಸ್ವಾಮ್ಯದ ಇರ್ಕಾನ್ ಇನ್ಫ್ರಾಸ್ಟ್ರಕ್ಚರ್ ಮತ್ತು ಸರ್ವೀಸಸ್ ಲಿಮಿಟೆಡ್ ಅನ್ನು ನೇಮಿಸಿದೆ.

                ಒಪ್ಪಂದದ ನಿಯಮಗಳ ಪ್ರಕಾರ, ಭಾರತವು ಸಿಟ್ವೆದಲ್ಲಿ SEZ ಅನ್ನು ಸ್ಥಾಪಿಸಲಿದೆ. ಸಿಟ್ವೆಯಲ್ಲಿ SEZನ ಸ್ಥಾಪನೆಯ ಮೂಲಕ ಚೀನಾದ ಪ್ರಭಾವವನ್ನು ಹೊಂದಿರುವ ಪ್ರದೇಶದಲ್ಲಿನ ಭಾರತೀಯ ಬಂಡವಾಳವನ್ನು ಉತ್ತೇಜಿಸುವುದು ಗುರಿಯಾಗಿದೆ.

ಮಾಲಿನ್ಯ ಹೊರಸೂಸುವಿಕೆಯನ್ನು ತಗ್ಗಿಸಲು ಫ್ರಾನ್ಸ್ & ಇಯು ನಿಂದ ಭಾರತಕ್ಕೆ 3.5 ಮಿಲಿಯನ್ ಯುರೋಸ್ ನೆರವು

ಪ್ಯಾರಿಸ್ ಹವಾಮಾನ ಒಪ್ಪಂದದ ಅಡಿಯಲ್ಲಿ ಐರೋಪ್ಯ ಒಕ್ಕೂಟದ ಬದ್ಧತೆಯ ಭಾಗವಾಗಿ ಐರೋಪ್ಯ ಒಕ್ಕೂಟ ಮತ್ತು ಫ್ರಾನ್ಸ್ ಭಾರತದ ಮೂರು ನಗರಗಳಾದ ನಾಗ್ಪುರ್, ಕೊಚ್ಚಿ ಮತ್ತು ಅಹಮದಾಬಾದ್ ಗೆ 3.5 ದಶಲಕ್ಷ ಯುರೋಗಳಷ್ಟು ಅನುದಾನವನ್ನು ನೀಡಲಿವೆ. ಈ ನಗರಗಳಲ್ಲಿ ಮಾಲಿನ್ಯ ಹೊರಸೂಸುವಿಕೆಗಳನ್ನು ನಿಗ್ರಹಿಸಲು ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ಈ ನೆರವನ್ನು ನೀಡಲಾಗುತ್ತಿದೆ.

  • ‘ಮೊಬ್ಲೈಸ್ ಯುವರ್ ಸಿಟಿ’ (ಎಂವೈಸಿ) ಉಪಕ್ರಮದಡಿ ಭಾರತದ ಸ್ಮಾರ್ಟ್ ಸಿಟಿ ಕಾರ್ಯಕ್ರಮಕ್ಕೆ ಸಹಾಯ ಮಾಡಲು ಅನುದಾನವನ್ನು ಒದಗಿಸಲಾಗಿದೆ.
  • ಎಂವೈಸಿ ಉಪಕ್ರಮದಿಂದ ಪ್ರಯೋಜನ ಪಡೆದ ಮೊದಲ ರಾಷ್ಟ್ರ ಭಾರತ.
  • ಎಂವೈಸಿ ಉಪಕ್ರಮ ಫ್ರೆಂಚ್ ಮತ್ತು ಜರ್ಮನ್ ಸರ್ಕಾರದಿಂದ ಬೆಂಬಲಿತವಾಗಿದೆ ಮತ್ತು ಯುರೋಪಿಯನ್ ಒಕ್ಕೂಟದ (EU) ಆರ್ಥಿಕ ಬೆಂಬಲವನ್ನು ಹೊಂದಿದೆ. ಈ ಪ್ರಯತ್ನವು ವಿಶ್ವದ 100 ನಗರಗಳಲ್ಲಿ ಸುಸ್ಥಿರ ನಗರ ಸಾರಿಗೆ ಮತ್ತು ನಗರ ಸ್ಥಳಗಳಲ್ಲಿ ಸುಸ್ಥಿರತೆಯನ್ನು ಉತ್ತೇಜಿಸುವ ಮೂಲಕ ಹಸಿರು ಮನೆ ಅನಿಲ (ಜಿಹೆಚ್ಜಿಜಿ) ಹೊರಸೂಸುವಿಕೆಯನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.
  • ಪ್ರಧಾನಿ ಮೋದಿ ಅವರ ಇತ್ತೀಚಿನ ಯುರೋಪ್ ಪ್ರವಾಸದ ಸಂದರ್ಭದಲ್ಲಿ ಭಾರತೀಯ ಮತ್ತು ಯುರೋಪಿಯನ್ ಮುಖಂಡರು ಎಂವೈಸಿ ಉಪಕ್ರಮವನ್ನು ಒತ್ತು ನೀಡಿದರು.

ಜ್ಞಾನಪೀಠ ಪ್ರಶಸ್ತಿ ವಿಜೇತ ತೆಲುಗು ಕವಿ ಸಿ. ನಾರಾಯಣ ರೆಡ್ಡಿ ನಿಧನ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ತೆಲುಗು ಕವಿ ಸಿ. ನಾರಾಯಣ ರೆಡ್ಡಿ (80) ನಿಧನರಾದರು. 1931 ಜುಲೈ 29ರಂದು ಕರೀಂನಗರ ಜಿಲ್ಲೆಯಲ್ಲಿ  ಜನಿಸಿದ್ದ ಅವರು, ಕವಿತೆ, ಗೀತೆ, ನಾಟಕ, ಪ್ರಬಂಧ, ಗಜಲ್‌, ಪ್ರವಾಸ ಕಥನ, ಸಾಹಿತ್ಯ ವಿಮರ್ಶೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

  • ನಾರಾಯಣ ರೆಡ್ಡಿ ಅವರ ‘ವಿಶ್ವಂಭರ’ ಕೃತಿಗೆ 1988ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
  • 1977ರಲ್ಲಿ ಪದ್ಮಶ್ರೀ, 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.
  • ಆಂಧ್ರ ವಿಶ್ವವಿದ್ಯಾಲಯವು ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ. ಆಧುನಿಕ ತೆಲುಗು ಕವಿತೆಗಳ ಬಗ್ಗೆ ರೆಡ್ಡಿ ಅವರು ರಚಿಸಿರುವ ಸಂಶೋಧನಾ ಕೃತಿ 1967ರಲ್ಲಿ ಪ್ರಕಟಗೊಂಡಿತ್ತು.
  • ಪ್ರಸಿದ್ಧ ಗೀತರಚನೆಕಾರರಾಗಿದ್ದ ರೆಡ್ಡಿ ಅವರು ಚಲನಚಿತ್ರಗಳಿಗೆ 3,000ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ರಾಜ್ಯ ಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ  ಅವರು ತೆಲಂಗಾಣ ಸಾರಸ್ವತ ಪರಿಷತ್‌ ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಿಸಿದ್ದಾರೆ.

ಚೂರು ಪಾರು:

  • ಫ್ರೆಂಚ್ ಓಪನ್ ಜೆಲೆನಾ ಒಸ್ಟಾಪೆಂಕೊಗೆ ಪ್ರಶಸ್ತಿ: ಲ್ಯಾಟ್ವಿಯಾ ದೇಶದ 20ರ ಹರೆಯದ ಜೆಲೆನಾ ಒಸ್ಟಾಪೆಂಕೊ ಫ್ರೆಂಚ್ ಓಪನ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ವಿಶ್ವದ ನಂ. 4 ನೇ ಶ್ರೇಯಾಂಕಿತ ಆಟಗಾರ್ತಿ ರೊಮೇನಿಯಾ ದೇಶದ ಸಿಮೋನಾ ಹಾಲೆಪ್ ಅವರ ವಿರುದ್ಧ 4-6, 6-4, 6-3 ಸೆಟ್ ಗಳಿಂದ ಜಯಗಳಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
  • ಫ್ರೆಂಚ್ ಓಪನ್ ನಡಾಲ್ ಗೆ 10ನೇ ಬಾರಿ ಪ್ರಶಸ್ತಿ: ಸ್ಪೇನ್ ನ ರಾಫೆಲ್ ನಡಾಲ್ ಅವರು ಸ್ವಿಸ್ ಮೂರನೇ ಶ್ರೇಯಾಂಕದ ಸ್ಟ್ಯಾನ್ ವಾವ್ರಿಂಕಾ ಅವರನ್ನು 6-2, 6-3, 6-1 ಸೆಟ್ಗಳಿಂದ ಮಣಿಸಿ 10ನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. ಇದು ಅವರ ಹದಿನೈದನೆಯ ಪ್ರಮುಖ ಪ್ರಶಸ್ತಿ ಗೆಲುವು. ಈ ಪ್ರಶಸ್ತಿ ಗೆಲ್ಲುವ ಮೂಲಕ ಸ್ಪೇನ್‌ನ ದಿಗ್ಗಜ 15ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟರು. 18  ಗ್ರ್ಯಾಂಡ್‌ಸ್ಲಾಂ ಗೆದ್ದಿರುವ ರೋಜರ್‌ ಫೆಡರರ್‌ ನಂತರ ಅತಿಹೆಚ್ಚು ಪ್ರಶಸ್ತಿ ಗೆದ್ದ ಆಟಗಾರ ಎನ್ನುವ ದಾಖಲೆಗೆ ನಡಾಲ್‌ ಪಾತ್ರರಾಗಿದ್ದಾರೆ. ಅಲ್ಲದೇ 14 ಗ್ರ್ಯಾಂಡ್‌ಸ್ಲಾಂ ಗೆದ್ದಿದ್ದ ಅಮೆರಿಕದ ದಿಗ್ಗಜ ಪೀಟ್‌ ಸ್ಯಾಂಪರಾಸ್‌ ದಾಖಲೆಯನ್ನು ನಡಾಲ್‌ ಮುರಿದರು. ಒಂದೇ ಗ್ರ್ಯಾಂಡ್‌ಸ್ಲಾಂನಲ್ಲಿ 10 ಗೆಲುವು ಸಾಧಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೂ ನಡಾಲ್‌ ಪಾತ್ರರಾದರು.

Leave a Comment

This site uses Akismet to reduce spam. Learn how your comment data is processed.