ಪ್ರಸ್ತುತ ಕೆ.ಎ.ಎಸ್ ಪರೀಕ್ಷೆ ಪೇಪರ್-2 ಸಂಬಂಧಿಸಿದಂತೆ ಪ್ರಶ್ನೋತ್ತರಗಳು ಕೆ.ಎ.ಎಸ್ (KAS)  ಪರೀಕ್ಷೆಗೆ  ಸಹಾಯವಾಗಲಿದೆ.

ಕೆ.ಎ.ಎಸ್ (KAS) ಪ್ರಶ್ನೋತ್ತರಗಳು3

Question 1

1. “ಕರ್ನಾಟಕ ಉದ್ಯೋಗ ಮಿತ್ರ” ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಕರ್ನಾಟಕ ಉದ್ಯೋಗ ಮಿತ್ರ ಯೋಜನೆಯು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ

II) ರಾಜ್ಯದಲ್ಲಿ ಬಂಡವಾಳ ಹೂಡಿಕೆಗಳ ಅಭಿವೃದ್ದಿ ಮತ್ತು ಅನುಕೂಲತೆಗೆಂದು ಇದನ್ನು ಸ್ಥಾಪಿಸಲಾಗಿದೆ

ಮೇಲಿನವುಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 1 Explanation: 
ಎರಡು ಹೇಳಿಕೆ ಸರಿ
Question 2

2. ಕರ್ನಾಟಕ ಕೈಗಾರಿಕ ನೀತಿಯ ಅವಧಿ ________?

A
2014-19
B
2015-20
C
2013-18
D
2016-21
Question 2 Explanation: 
2014-19
Question 3

3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿಗೆ ಗೃಹ ಸಚಿವರು ಅಧ್ಯಕ್ಷರಾಗಿರುತ್ತಾರೆ

II) ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಗೆ ಮುಖ್ಯಮಂತ್ರಿರವರು ಮುಖ್ಯಸ್ಥರಾಗಿರುತ್ತಾರೆ.

ಮೇಲಿನವುಗಳಲ್ಲಿ ಸರಿಯಾದ ಹೇಳಿಕೆ ಯಾವುವು?

A
ಹೇಳಿಕೆ I ಮಾತ್ರ
B
ಹೇಳಿಕೆ II ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 3 Explanation: 
ಹೇಳಿಕೆ II ಮಾತ್ರ

ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿಗೆ ಪ್ರವಾಸೋದ್ಯಮ ಖಾತೆ ಸಚಿವರು ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಯು ರೂ 15 ಕೋಟಿಯಿಂದ ರೂ 500 ಕೋಟಿವರೆಗಿನ ಯೋಜನೆಗಳನ್ನು ಅನುಮೋದಿಸುತ್ತದೆ. ರೂ 500 ಕೋಟಿಗಿಂತ ಹೆಚ್ಚಿನ ಯೋಜನೆಗಳನ್ನು ಮುಖ್ಯಮಂತ್ರಿ ನೇತೃತ್ವದ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಅನುಮೋದಿಸುತ್ತದೆ.

Question 4

4. ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿ 1984ರಲ್ಲಿ ಈ ಕೆಳಕಂಡ ಯಾವ ಸಂಸ್ಥೆಯ ಸ್ಥಾಪನೆಯೊಂದಿಗೆ ಆರಂಭಗೊಂಡಿತು?

A
ಟೆಕ್ಸಾಸ್ ಇನ್ಸ್ಟ್ರಮೆಂಟ್
B
ಇನ್ಫೋಸಿಸ್
C
ಟೆಕ್ ವ್ಯಾಲಿ
D
ಅಸೆಂಚರ್
Question 4 Explanation: 
ಟೆಕ್ಸಾಸ್ ಇನ್ಸ್ಟ್ರಮೆಂಟ್
Question 5

5. ಕರ್ನಾಟಕದಲ್ಲಿ ಪರಿಪೋಷಣಾ ಕೇಂದ್ರ (Incubation Centre) ನೀತಿಯನ್ನು ಮರುನಿನ್ಯಾಸಗೊಳಿಸುವ ಸಲುವಾಗಿ ಯಾರ ನೇತೃತ್ವದಲ್ಲಿ ಕರ್ನಾಟಕ ಐ.ಸಿ.ಟಿ ಸಮೂಹ ಸಮಿತಿಯನ್ನು ರಚಿಸಲಾಗಿದೆ?

A
ಕೆ.ವಿ.ಕಾಮತ್
B
ಮೋಹನ್ ದಾಸ್ ಪೈ
C
ನಾರಾಯಣ ಮೂರ್ತಿ
D
ನಂದನ್ ನೀಲಖೇಣಿ
Question 5 Explanation: 
ಮೋಹನ್ ದಾಸ್ ಪೈ
Question 6

6. ರಾಜ್ಯ ಸರ್ಕಾರದ “ಚೇತನ” ಕಾರ್ಯಕ್ರಮದ ಬಗ್ಗೆ ಹೇಳಿಕೆಗಳನ್ನು ಗಮನಿಸಿ:

I) ಚೇತನ ಕಾರ್ಯಕ್ರಮವನ್ನು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ತಾಂತ್ರಿಕ ಕೌಶಲ್ಯ ರೂಢಿಸಿಕೊಳ್ಳಲು ರಾಜ್ಯ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಜಾರಿಗೆ ತಂದಿದೆ

II) ಸ್ಯಾಮ್ ಸಂಗ್ ಮತ್ತು ಇನ್ಫೋಸಿಸ್ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ

III) ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿದವರಿಗೆ ಮಾತ್ರ ಈ ಕಾರ್ಯಕ್ರಮ ಅನ್ವಯವಾಗಲಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
I, II & III
Question 6 Explanation: 
II & III

ಚೇತನ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಿಗೆ ಮಾತ್ರ ತಾಂತ್ರಿಕ ಕೌಶಲ್ಯ ರೂಢಿಸಿಕೊಳ್ಳಲು ರಾಜ್ಯ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಜಾರಿಗೆ ತಂದಿದೆ. ಸ್ಯಾಮ್ ಸಂಗ್ ಮತ್ತು ಇನ್ಫೋಸಿಸ್ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿದವರಿಗೆ ಮಾತ್ರ ಈ ಕಾರ್ಯಕ್ರಮ ಅನ್ವಯವಾಗಲಿದೆ. ಈ ಕಾರ್ಯಕ್ರಮಕ್ಕೆ ಏಪ್ರಿಲ್ 2016 ರಂದು ಮೈಸೂರಿನಲ್ಲಿ ಚಾಲನೆ ನೀಡಲಾಯಿತು.

Question 7

7. ಈ ಕೆಳಗಿನ ಉತ್ಪನ್ನಗಳನ್ನು ಗಮನಿಸಿ:

I) ಎಲೆಕ್ಟ್ರಾನಿಕ್ಸ್ & ಕಂಪ್ಯೂಟರ್ ಸಾಫ್ಟ್ ವೇರ್

II) ರತ್ನ ಆಭರಣಗಳು

III) ಎಂಜನಿಯರಿಂಗ್ ವಸ್ತುಗಳು

IV) ಸಿದ್ದ ಉಡುಪುಗಳು

ಮೇಲಿನವುಗಳಲ್ಲಿ ರಾಜ್ಯದ ರಫ್ತು ಪ್ರಮಾಣದಲ್ಲಿ ಹೆಚ್ಚು ಪಾಲು ಹೊಂದಿರುವ ಮೊದಲ ನಾಲ್ಕು ಉತ್ಪನ್ನಗಳು ಕ್ರಮವಾಗಿ ಗುರುತಿಸಿ?

A
I, III, IV & II
B
I, II, III & IV
C
I, III, II & IV
D
I, IV, III & II
Question 7 Explanation: 
I, II, III & IV

ರಾಜ್ಯದ ರಫ್ತುಗಳಲ್ಲಿ ಎಲೆಕ್ಟ್ರಾನಿಕ್ಸ್ & ಕಂಪ್ಯೂಟರ್ ಸಾಫ್ಟ್ ವೇರ್ ರಫ್ತಿನ ಪ್ರಮಾಣದ ಪಾಲು ಅಧಿಕವಾಗಿದೆ. 2016-16=7ನೇ ಸಾಲಿನಲ್ಲಿ ಇದು ಶೇ 78%ರಷ್ಟಿದೆ. ರಫ್ತಿನಲ್ಲಿ ಗಣನೀಯ ಪಾತ್ರವಹಿಸಿರುವ ಇತರೆ ಉತ್ಪನ್ನಗಳೆಂದರೆ ರತ್ನ ಆಭರಣಗಳು (ಶೇ 6.37%), ಎಂಜನಿಯರಿಂಗ್ ವಸ್ತುಗಳು (ಶೇ 5.63%), ಸಿದ್ದ ಉಡುಪುಗಳು (ಶೇ 2.64%).

Question 8

8. ಕರ್ನಾಟಕವು “ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ ವೇರ್” ರಫ್ತಿನಲ್ಲಿ ದೇಶದ ಒಟ್ಟು ರಫ್ತಿನ ಪ್ರಮಾಣದಲ್ಲಿ ಶೇ ______ ರಷ್ಟು ಪಾಲು ಹೊಂದಿದೆ?

A
40.43%
B
36.96%
C
39.38%
D
41.55%
Question 8 Explanation: 
36.96%
Question 9

9. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ:

A) ಕರ್ನಾಟಕ ರಾಜ್ಯ ಖನಿಜ ನೀತಿ 1. 2008

B) ಕರ್ನಾಟಕ ಸೆಮಿಕಂಡಕ್ಟರ್ ನೀತಿ 2. 2009

C) ಕರ್ನಾಟಕ ಸಮಗ್ರ ಕೃಷಿ ಉದ್ಯಮ ಅಭಿವೃದ್ದಿ ನೀತಿ` 3. 2011

D) ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 4. 2009

ಸರಿಯಾದ ಉತ್ತರಗಳು:

A
A-2, B-3, C-4, D-1
B
A-1, B-2, C-3, D-4
C
A-1, B-3, C-2, D-4
D
A-2, B-4, C-1, D-2
Question 9 Explanation: 
A-1, B-2, C-3, D-4
Question 10

10. ಕರ್ನಾಟಕ ರಾಜ್ಯವು ರಫ್ತುಗಳನ್ನು ಉದ್ದೇಶಿಸುವ ಸಲುವಾಗಿ ಈ ಕೆಳಗಿನ ಯಾವ ಸಂಸ್ಥೆಯನ್ನು ಸ್ಥಾಪಿಸಿದೆ?

A
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ
B
ಸರ್ ಮಿರ್ಜಾ ಇಸ್ಮಾಯಿಲ್ ವ್ಯಾಪಾರ ಉತ್ತೇಜನ ಕೇಂದ್ರ
C
ಕೃಷ್ಣರಾಜ ವ್ಯಾಪಾರ ಅಭಿವೃದ್ದಿ ಕೇಂದ್ರ
D
ನಿಜಲಿಂಗಪ್ಪ ವ್ಯಾಪಾರ ಅಭಿವೃದ್ದಿ ಕೇಂದ್ರ
Question 10 Explanation: 
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ
There are 10 questions to complete.

[button link=”http://www.karunaduexams.com/wp-content/uploads/2017/06/ಕೆ.ಎ.ಎಸ್-KAS-ಪ್ರಶ್ನೋತ್ತರಗಳು3.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

9 Thoughts to “ಕೆ.ಎ.ಎಸ್ (KAS) ಪ್ರಶ್ನೋತ್ತರಗಳು3”

  1. sudha

    very inormative

  2. Nice sir carry on focus more Karnataka and kArntak economic budget and survy

  3. Basavaraja Giri Hanchinal

    Realy very usefull sr..

  4. Shivamurthy. K

    Heartly thankful to thanks.good note

  5. suresh Kumar manvi

    Thankful ..really very useful information… S

  6. Shwettha

    Nice sir .

  7. Hi sir…..
    Than u.Very easy to understanding and Really more than useful kas preparation..

  8. Harshith d s

    Nice but update current affairs daily sir please

Leave a Comment

This site uses Akismet to reduce spam. Learn how your comment data is processed.