ಪ್ರಸ್ತುತ ಕೆ.ಎ.ಎಸ್ ಪರೀಕ್ಷೆ ಪೇಪರ್-2 ಸಂಬಂಧಿಸಿದಂತೆ ಪ್ರಶ್ನೋತ್ತರಗಳು ಕೆ.ಎ.ಎಸ್ (KAS)  ಪರೀಕ್ಷೆಗೆ  ಸಹಾಯವಾಗಲಿದೆ.

ಕೆ.ಎ.ಎಸ್ (KAS) ಪ್ರಶ್ನೋತ್ತರಗಳು1

Question 1

1. ಈ ಕೆಳಗಿನ ಯಾವ ವಲಯ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಹೆಚ್ಚು ಕೊಡುಗೆಯನ್ನು ನೀಡುತ್ತಿದೆ?

A
ಕೃಷಿ ವಲಯ
B
ಕೈಗಾರಿಕೆ ವಲಯ
C
ಸೇವಾ ವಲಯ
D
ಮೇಲಿನ ಯಾವುದು ಅಲ್ಲ
Question 1 Explanation: 
ಸೇವಾ ವಲಯ

ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಸೇವಾ ವಲಯದ ಕೊಡುಗೆ ಅಧಿಕವಾಗಿದೆ (ಶೇ 64.64%) ನಂತರದ ಸ್ಥಾನದಲ್ಲಿ ಕೈಗಾರಿಕೆ ಹಾಗೂ ಕೃಷಿ ವಲಯ ಇವೆ.

Question 2

2. ಕರ್ನಾಟಕ ರಾಜ್ಯದ “ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿ (State Level Single Window Clearance Committee)” ಎಷ್ಟು ಕೋಟಿಗಳ ಯೋಜನೆಗಳಿಗೆ ಅನುಮೋದನೆ ನೀಡಲು ರಚಿಸಲಾಗಿದೆ?

A
15 ಕೋಟಿಯಿಂದ 500 ಕೋಟಿ
B
15 ಕೋಟಿಯಿಂದ 100 ಕೋಟಿ
C
5 ಕೋಟಿಯಿಂದ 50 ಕೋಟಿ
D
10 ಕೋಟಿಯಿಂದ 250 ಕೋಟಿ
Question 2 Explanation: 
15 ಕೋಟಿಯಿಂದ 500 ಕೋಟಿ

15 ಕೋಟಿಯಿಂದ 500 ಕೋಟಿಗಳ ವರೆಗೆ ಯೋಜನೆಗಳ ಅನುಮೋದನೆ ನೀಡಲು ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿಯನ್ನು ರಚಿಸಲಾಗಿದೆ. ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯು ರೂ 500 ಕೋಟಿದ ಮೀರಿದ ಯೋಜನೆಗಳಿಗೆ ಅನುಮೋದನೆಯನ್ನು ನೀಡುತ್ತದೆ.

Question 3

3. ವಿಶೇಷ ಘಟಕ ಯೋಜನೆ/ ಬುಡಕಟ್ಟು ಉಪಯೋಜನೆ ಅಧಿನಯಮವನ್ನು ರಾಜ್ಯದಲ್ಲಿ ಯಾವ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತಿದೆ?

A
2012-13
B
2013-14
C
2014-15
D
2015-16
Question 3 Explanation: 
2014-15

ವಿಶೇಷ ಘಟಕ ಯೋಜನೆ/ ಬುಡಕಟ್ಟು ಉಪಯೋಜನೆ ಅಧಿನಯಮವನ್ನು 2014-15 ರಿಂದ ರಾಜ್ಯವು ಅನುಷ್ಠಾನ ಗೊಳಿಸುತ್ತಿದೆ. ಈ ಅಧಿನಿಯಮದ ಪ್ರಕಾರ ಎಸ್ಸಿಪಿ/ಟಿಎಸ್ಪಿ ಹಂಚಿಕೆಗಳನ್ನು ವರ್ಗಾಯಿಸಬಾರದು ಮತ್ತು ಈ ಹಂಚಿಕೆಯು ಬಳಕೆಯಾಗದೇ ಇರಬಾರದು. 2011ರ ಜನಗಣತಿಯ ಎಸ್ಸಿ/ಎಸ್ಟಿ ಜನಸಂಖ್ಯೆಯ ಆಧಾರದ ಮೇಲೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಎಲ್ಲಾ ಇಲಾಖೆಗಳಲ್ಲಿ 17.15% ಮತ್ತು 6.95% ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅನುಕ್ರಮವಾಗಿ ಕಾಯ್ದಿರಿಸಲಾಗಿದೆ.

Question 4

4. ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ವರದಿಯ ಪ್ರಕಾರ ಬೆಂಗಳೂರು ಜಗತ್ತಿನ ಎಷ್ಟನೇ ಅತ್ಯುತ್ತಮ ತಾಂತ್ರಿಕ ಕೇಂದ್ರವೆಂದು ಗುರುತಿಸಲಾಗಿದೆ?

A
ಮೊದಲನೇ
B
ನಾಲ್ಕನೇ
C
ಐದನೇ
D
ಆರನೇ
Question 4 Explanation: 
ನಾಲ್ಕನೇ

ವಿಶ್ವದಲ್ಲೆಲ್ಲಾ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಿಲಿಕಾನ್ ಕಣಿವೆ, ಬಾಸ್ಟನ್ ಮತ್ತು ಲಂಡನ್ ಗಳನ್ನು ಹೊರತುಪಡಿಸಿದರೆ, ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ವರದಿಯ ಪ್ರಕಾರ ಬೆಂಗಳೂರು ಜಗತ್ತಿನ ನಾಲ್ಕನೇ ಅತ್ಯುತ್ತಮ ತಾಂತ್ರಿಕ ಕೇಂದ್ರವೆಂದು ಜಾಗತಿಕ ಹೆಗ್ಗುರುತಾಗಿದೆ.

Question 5

5. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಧಾರಾವಾಡದಲ್ಲಿ IIITಯನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ (PPP) ಸ್ಥಾಪಿಸಲಾಗಿದೆ.

II) ಈ ಸಂಸ್ಥೆಯ ಸ್ಥಾಪನೆಗೆ ಭಾರತ ಸರ್ಕಾರವು (ಶೇ.50), ಕರ್ನಾಟಕ ಸರ್ಕಾರ (ಶೇ.50) ಸೂಚಿತ ಅನುಪಾತದಲ್ಲಿ ನಿಧಿಗಳನ್ನು ನೀಡಿವೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 5 Explanation: 
ಹೇಳಿಕೆ ಒಂದು ಮಾತ್ರ

IIITಯನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ (PPP) ಸ್ಥಾಪಿಸಲಾಗಿದೆ. ಈ ಸಂಸ್ಥೆಯ ಸ್ಥಾಪನೆಗೆ ಭಾರತ ಸರ್ಕಾರವು (ಶೇ.50), ಕರ್ನಾಟಕ ಸರ್ಕಾರ (ಶೇ.35) ಮತ್ತು ಖಾಸಗಿ ಸಂಸ್ಥೆಯಾದ ಕಿಯೋನಿಕ್ಸ್ (ಶೇ.15) ಸೂಚಿತ ಅನುಪಾತದಲ್ಲಿ ನಿಧಿಗಳನ್ನು ನೀಡಿವೆ.

Question 6

6. ರಾಜ್ಯದಲ್ಲಿ ಸ್ಟಾರ್ಟ್ ಆಫ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

I) ಭಾರತದಲ್ಲೇ ಮಲ್ಟಿ ಸೆಕ್ಟರ್ ಸ್ಟಾರ್ಟ್ಅಪ್ ನೀತಿಯನ್ನು ಜಾರಿಗೊಳಿಸಿದ ಮೊಟ್ಟಮೊದಲನೆಯ ರಾಜ್ಯ ಕರ್ನಾಟಕ.

II) ರಾಜ್ಯ ಸರ್ಕಾರ ಮಲ್ಟಿ ಸೆಕ್ಟರ್ ಸ್ಟಾರ್ಟ್ಅಪ್ ನೀತಿ 2016-2021ರ ಅವಧಿಯವರೆಗೆ ಇರಲಿದೆ.

III) ಈ ನೀತಿಯಡಿ 2020ರ ವೇಳೆಗೆ 20,000 ತಾಂತ್ರಿಕ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ.

ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ?

A
ಹೇಳಿಕೆ I ಮಾತ್ರ
B
ಹೇಳಿಕೆ I & II ಮಾತ್ರ
C
ಹೇಳಿಕೆ I & III ಮಾತ್ರ
D
ಮೇಲಿನ ಎಲ್ಲವೂ
Question 6 Explanation: 
ಹೇಳಿಕೆ I & III ಮಾತ್ರ

ಜಾಗತಿಕ ಸ್ಪರ್ಧಾತ್ಮಕ ಸ್ಟಾರ್ಟ್ ಅಪ್ ಇಕೋ ಸಿಸ್ಟಂ ಕಡೆಗಸಾಗಲು ಭಾರತದಲ್ಲೇ ಮಲ್ಟಿ ಸೆಕ್ಟರ್ ಸ್ಟಾರ್ಟ್ಅಪ್ ನೀತಿ 2015-2020 ಯನ್ನು ಜಾರಿಗೊಳಿಸಿದ ಮೊಟ್ಟಮೊದಲನೆಯ ರಾಜ್ಯ ಕರ್ನಾಟಕ. 2020ರ ವೇಳೆಗೆ 20,000 ತಾಂತ್ರಿಕ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ.

Question 7

7. ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?

I) ಕರ್ನಾಟಕವು ದೇಶದ ಸಾಫ್ಟ್ವೇರ್/ಸೇವಾ ರಫ್ತುಗಳಲ್ಲಿ ಮೊದಲನೇ ಸ್ಥಾನದಲ್ಲಿದೆ

II) ವಾಣಿಜ್ಯ ಸರಕು ರಫ್ತುಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ

III) ವಿಶ್ವದ ಅತ್ಯುತ್ತಮ 20 ಸ್ಟಾರ್ಟ್ ಅಪ್ ಇಕೋ ಸಿಸ್ಟಮ್ ಗಳ ಪೈಕಿ ಬೆಂಗಳೂರು ಭಾರತದ ಏಕೈಕ ಶ್ರೇಣೀಕೃತ ನಗರವೆಂದು ಗುರುತಿಸಲ್ಪಟ್ಟಿದೆ.

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಒಂದು & ಎರಡು ಸರಿ
D
ಮೇಲಿನ ಎಲ್ಲವೂ
Question 7 Explanation: 
ಮೇಲಿನ ಎಲ್ಲವೂ

ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ರಫ್ತುಗಳಲ್ಲಿ ಕರ್ನಾಟಕದ ಕೊಡುಗೆಯು ಮೂರನೆಯ ಒಂದು ಭಾಗದಷ್ಟಿದೆ. ಕರ್ನಾಟಕವು ದೇಶದ ಸಾಫ್ಟ್ವೇರ್/ಸೇವಾ ರಫ್ತುಗಳಲ್ಲಿ ಮೊದಲನೇ ಸ್ಥಾನವನ್ನು, ವಾಣಿಜ್ಯ ಸರಕು ರಫ್ತುಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 2015-16 ರಲ್ಲಿ ಕರ್ನಾಟಕದ ರಫ್ತುಗಳು ಸುಮಾರು ರೂ. 325414 ಕೋಟಿಗಳಾಗಿದ್ದು ಇದು ಸದರೀ ವರ್ಷದಲ್ಲಿ ರಾಷ್ಟ್ರದ ಒಟ್ಟು ರಫ್ತುಗಳಲ್ಲಿ ಶೇ. 14.5 ಆಗಿರುತ್ತದೆ.

Question 8

8. 2016-17ನೇ ಸಾಲಿನಲ್ಲಿ ರಾಜ್ಯದ ತಲಾದಾಯ ಎಷ್ಟಿರಲಿದೆ ಎಂದು ಅಂದಾಜಿಸಲಾಗಿದೆ?

A
159893
B
162300
C
147800
D
151657
Question 8 Explanation: 
159893
Question 9

9. ಕರ್ನಾಟಕ ರಾಜ್ಯದ ಒಟ್ಟು ಸರಾಸರಿ ಹಿಡುವಳಿಯ ವಿಸ್ತೀರ್ಣ ಎಷ್ಟಿದೆ?

A
2.1 ಹೆಕ್ಟೇರ್
B
1.55 ಹೆಕ್ಟೇರ್
C
2.22 ಹೆಕ್ಟೇರ್
D
3.1 ಹೆಕ್ಟೇರ್
Question 9 Explanation: 
1.55 ಹೆಕ್ಟೇರ್
Question 10

10. ಕರ್ನಾಟಕ ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಅತಿ ಹೆಚ್ಚು ವಿದ್ಯುತ್ ನಿಂದ ಕಡಿಮೆ ವಿದ್ಯುತ್ ಬಳಸುವ ಸರಿಯಾದ ಕ್ಷೇತ್ರಗಳನ್ನು ಗುರುತಿಸಿ?

A
ಕೃಷಿ ವಲಯ, ಗೃಹ ಬಳಕೆ, ಕೈಗಾರಿಕೆ
B
ಗೃಹ ಬಳಕೆ, ಕೃಷಿ ವಲಯ, ಕೈಗಾರಿಕೆ
C
ಕೈಗಾರಿಕೆ, ಕೃಷಿ ವಲಯ, ಗೃಹ ಬಳಕೆ
D
ಕೈಗಾರಿಕೆ, ಗೃಹ ವಲಯ, ಕೃಷಿ ವಲಯ
Question 10 Explanation: 
ಕೃಷಿ ವಲಯ, ಗೃಹ ಬಳಕೆ, ಕೈಗಾರಿಕೆ

ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆ 64227 ದಶ ಲಕ್ಷ ಯೂನಿಟ್ ಇದ್ದು, ಇದರಲ್ಲಿ ಕೃಷಿ ವಲಯ 18962 ದಶ ಲಕ್ಷ ಯೂನಿಟ್ ಬಳಸುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ ಗೃಹ ಬಳಕೆ (11243) ಮತ್ತು ಕೈಗಾರಿಕೆ (9720) ಇವೆ.

There are 10 questions to complete.

[button link=”http://www.karunaduexams.com/wp-content/uploads/2017/06/ಕೆ.ಎ.ಎಸ್-KAS-ಪ್ರಶ್ನೋತ್ತರಗಳು1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

12 Thoughts to “ಕೆ.ಎ.ಎಸ್ (KAS) ಪ್ರಶ್ನೋತ್ತರಗಳು1”

  1. raju

    Question no 5 …IIIT not there at Dharwad…. Pls cirrectvthat one …that is at Raichur

    1. Shivu

      Thanks…..
      The above given details about IIIT is correct or not.??

    2. MALLIKARJUNA PUJAR

      IIIT is there in Dharwad and new one will open in Raichur

  2. Vijay

    for Question number 2,

    Projects with investments between 15 to 100 crore will be cleared by SLSWCC and if the investment is above 100 crores, it has to be cleared by SHLCC.

    Refer kum.karnataka.gov.in for the clear picture.

  3. Sir every day gk question upload plz

  4. CHITRASHEKHAR

    sir send everyday questions please

  5. Siddanna kolakoor

    Thank u sir

  6. Srinath

    Very use full please keep it up

Leave a Comment

This site uses Akismet to reduce spam. Learn how your comment data is processed.