ಸ್ಯಾಮಸಂಗ್ ಇಂಡಿಯಾ ಮತ್ತು MSME ಸಚಿವಾಲಯ ನಡುವೆ ಒಪ್ಪಂದಕ್ಕೆ ಸಹಿ

ಸ್ಯಾಮ್ಸಂಗ್ ಇಂಡಿಯಾ ಮತ್ತು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ನಡುವೆ ಬೆಂಗಳೂರು ಮತ್ತು ಜಮ್ಶೆಡ್ಪುರದಲ್ಲಿ ಎರಡು ಹೊಸ ಸ್ಯಾಮ್ಸಂಗ್ ಟೆಕ್ನಿಕಲ್ ಶಾಲೆಗಳನ್ನು ಸ್ಥಾಪಿಸಲು ಹಾಗೂ ಪ್ರಸ್ತುತ ದೇಶದಾದ್ಯಂತ ಅಸ್ತಿತ್ವದಲ್ಲಿರುವ 10 ಶಾಲೆಗಳ ಪಾಲುದಾರಿಕೆಯನ್ನು ನವೀಕರಿಸಲು ಒಪ್ಪಂದಕ್ಕೆ ಸಹಿಹಾಕಲಾಗಿದೆ.

ಪ್ರಮುಖಾಂಶಗಳು:

ಕೇಂದ್ರ ಸರ್ಕಾರದ ಬೇಟಿ ಬಚಾವೊ, ಬೇಟಿ ಪಡಾವೊ ಪ್ರಚಾರದ ಅಂಗವಾಗಿ ಸ್ಯಾಮ್ಸಂಗ್ ಇಂಡಿಯಾ ಬಾಲಕಿಯರು ಮತ್ತು ವಿಕಲಚೇತನರಿಗೆ ತರಬೇತಿ ನೀಡಲು ಎಮ್ಎಸ್ಎಮ್ಇ-ಸ್ಯಾಮ್ಸಂಗ್ ಟೆಕ್ನಿಕಲ್ ಸ್ಕೂಲ್ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು ಘೋಷಿಸಿದೆ.

            ಈ ಕಾರ್ಯಕ್ರಮದಡಿಯಲ್ಲಿ, 1,000 ಬಾಲಕಿಯರು ಮತ್ತು ವಿಕಲಚೇತನರಿಗೆ ತರಬೇತಿ ಪಡೆಯುವವರಿಗೆ ರೂ. 20,000. ಪ್ರೋತ್ಸಾಹ ಧನವನ್ನು ನೀಡಲಾಗುವುದು. ಅಲ್ಲದೆ, ತರಭೇತಿಯಲ್ಲಿ ಅತ್ಯುನ್ನತ ಸ್ಥಾನ ಪಡೆದವರಿಗೆ ರೂ 20,000 ಬಹುಮಾನವಾಗಿ ನೀಡಲಾಗುವುದು.

ಸ್ಯಾಮ್ಸಂಗ್ ಈಗಾಗಲೇ ರಾಜಸ್ಥಾನ, ಕೇರಳ, ಬಿಹಾರ, ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 10 ಶಾಲೆಗಳನ್ನು ನಡೆಸುತ್ತಿದೆ. ಈ ಶಾಲೆಗಳು ತಾಂತ್ರಿಕ ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಸ್ಯಾಮ್ಸಂಗ್ ದಕ್ಷಿಣ ಕೊರಿಯಾದ ಬಹುರಾಷ್ಟ್ರೀಯ ಸಂಸ್ಥೆ. ಇದರ ಕೇಂದ್ರ ಕಚೇರಿ ಸಿಯೋಲ್ ನಲ್ಲಿದೆ. ಸ್ಯಾಮ್ಸಂಗ್ ಸಂಸ್ಥೆಯನ್ನು 1938ರಲ್ಲಿ ಲೀ ಬೈಂಗ್-ಚುಲ್ ರವರು ಸ್ಥಾಪಿಸಿದರು

ಪ್ರಸಾರ ಭಾರತಿ ಸಿಇಓ ಆಗಿ ಶಶಿ ಶೇಖರ್ ವೆಂಪಾಟಿ ನೇಮಕ

ಇನ್ಫೋಸಿಸ್ ನ ಮಾಜಿ ಉದ್ಯೋಗಿ ಶಶಿ ಶೇಖರ್ ವೆಂಪಾಟಿ ಪ್ರಸಾರ ಭಾರತಿ ಹೊಸ ಸಿಇಒ ಆಗಿ ಆಯ್ಕೆಯಾಗಿದ್ದಾರೆ. ವೆಂಪಾಟಿ ಅವರು ಪ್ರಸಾರ ಭಾರತಿಯ ಮಂಡಳಿಯಲ್ಲಿ ಅರೆಕಾಲಿಕ ಸದಸ್ಯರಾಗಿದ್ದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನೇತೃತ್ವದ ಮೂವರು ಸದಸ್ಯರ ಶಿಫಾರಸಿನ ಮೇರೆಗೆ ಸಿಇಒ ಆಗಿ ನೇಮಿಸಲಾಗಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರು ಮತ್ತು ಮಾಹಿತಿ ಮತ್ತು ಪ್ರಸಾರ, ಇಲಾಖೆ ಕಾರ್ಯದರ್ಶಿರವರು ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದಾರೆ.

  • ಐಐಟಿ ಬಾಂಬೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ವೆಂಪಾಟಿ ಅವರನ್ನು ಐದು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ.
  • ಏಳು ತಿಂಗಳ ಹಿಂದೆ ಈ ಹಿಂದಿನ ಸಿಇಒ ಜವಾಹರ್ ಸಿರ್ಕಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರ ವೆಂಪಾಟಿ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
  • Broadcasting Technologies in India”, “National Digital Security Architecture in India”, “Creating a Global Media Platform out of India” ಎಂಬ ಪುಸ್ತಕಗಳನ್ನು ಶೇಖರ್ ವೆಂಪಾಟಿ ಬರೆದಿದ್ದಾರೆ.
  • ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕೆಳಗೆ ಬರುವ ಪ್ರಸಾರ ಭಾರತಿ ಸ್ವಾಯತ್ತ ಸಂಸ್ಥೆ. ರಾಷ್ಟ್ರೀಯ ವಾಹಿನಿ ಆಗಿರುವ ಪ್ರಸಾರ ಭಾರತಿ ಅಡಿಯಲ್ಲಿ ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನ ಕೂಡ ಬರುತ್ತದೆ.

ಜೂನ್ 5: ವಿಶ್ವ ಪರಿಸರ ದಿನ

ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು (WED) ಜೂನ್ 5 ರಂದು ಆಚರಿಸಲಾಗುತ್ತದೆ. ನಮ್ಮ ಪರಿಸರ ಮತ್ತು ಭೂಮಿಯ ರಕ್ಷಣೆಗಾಗಿ ಜಗತ್ತಿನಾದ್ಯಂತ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಪರಿಸರಕ್ಕೆ ಸಂಬಂಧಿಸಿದಂತೆ ಆಚರಿಸಲಾಗುವ ಏಕೈಕ ಅತಿದೊಡ್ಡ ಆಚರಣೆ ಇದಾಗಿದೆ. ವಿಶ್ವ ಪರಿಸರ ದಿನಾಚರಣೆಯು “ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ (ಯುಎನ್ಇಪಿ)”ನ ಜಾಗತಿಕ ಉಪಕ್ರಮವಾಗಿದೆ.

2017 ಥೀಮ್: “ಕನೆಕ್ಟಿಂಗ್ ಪೀಪಲ್ ಟು ದಿ ನೇಚರ್”

2017 ಆತಿಥ್ಯ ರಾಷ್ಟ್ರ ಕೆನಡಾ: ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯವನ್ನು ಕೆನಡಾ ವಹಿಸಿಕೊಂಡಿದೆ. 1987 ರಿಂದ, ವಿಶ್ವ ಪರಿಸರ ದಿನವನ್ನು ವಿವಿಧ ದೇಶಗಳಲ್ಲಿ ಆಯೋಜಿಸಲಾಗಿದೆ. ಆತಿಥೇಯ ರಾಷ್ಟ್ರದಲ್ಲಿ ಈ ದಿನವನ್ನು ಅಧಿಕೃತ ಆಚರಣೆ ಮಾಡಲಾಗುತ್ತದೆ. ಇತ್ತೀಚಿಗೆ ಆತಿಥ್ಯವಹಿಸಿದ್ದ ರಾಷ್ಟ್ರಗಳೆಂದರೆ ಅಂಗೋಲಾ, ಇಟಲಿ, ಬಾರ್ಬಡೋಸ್, ಬ್ರೆಜಿಲ್, ನಾರ್ವೆ ಮತ್ತು ಯುನೈಟೆಡ್ ಸ್ಟೇಟ್ಸ್.

ವಿಶ್ವ ಪರಿಸರ ದಿನಾಚರಣೆ (WED) ಅನ್ನು 1972ರಲ್ಲಿ ಆಯೋಜಿಸಲಾಗಿದ್ದ ಯುನೈಟೆಡ್ ನೇಷನ್ ಕಾನ್ಪರೆನ್ಸ್ ಆನ್ ದಿ ಹ್ಯೂಮನ್ ಎನ್ವಿರಾನ್ಮೆಂಟ್ ನ ಸ್ಮರಣಾರ್ಥ ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿ ನಿರ್ಣಯದಂತೆ ಆಚರಿಸಲಾಗುತ್ತದೆ. ಮೊದಲ ಬಾರಿಗೆ ವಿಶ್ವ ಪರಿಸರ ದಿನವನ್ನು 1973ರಲ್ಲಿ ಆಚರಿಸಲಾಯಿತು ಮತ್ತು ಆ ನಂತರ ಪ್ರತಿ ವರ್ಷ ವಿವಿಧ ಥೀಮ್ ಗಳೊಂದಿಗೆ ಆಚರಿಸಲಾಗುತ್ತಿದೆ.

UNEP:

ಯುನೈಟೆಡ್ ನೇಷನ್ ಕಾನ್ಪರೆನ್ಸ್ ಆನ್ ದಿ ಹ್ಯೂಮನ್ ಎನ್ವಿರಾನ್ಮೆಂಟ್ ಫಲಿತಾಂಶವಾಗಿ ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ (ಯುಎನ್ಇಪಿ) ಅನ್ನು ಸ್ಥಾಪಿಸಲಾಗಿದೆ. ಇದರ ಕೇಂದ್ರ ಕಚೇರಿ ಕೀನ್ಯಾದ ನೈರೋಬಿಯಲ್ಲಿದೆ. ಯುಎನ್ಇಪಿ ಆರು ವಲಯ ಕಚೇರಿಗಳನ್ನು ಹಾಗೂ ಹಲವು ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ.

            ವಿಶ್ವಸಂಸ್ಥೆಯ ವ್ಯವಸ್ಥೆಯೊಳಗೆ ಪರಿಸರದ ಬಗ್ಗೆ ಧ್ವನಿ ಎತ್ತುವ ಸಲುವಾಗಿ ಯುಎನ್ಇಪಿ ಯನ್ನು 1972ರಲ್ಲಿ ಸ್ಥಾಪಿಸಲಾಗಿದೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಜೂನ್,5,2017”

Leave a Comment

This site uses Akismet to reduce spam. Learn how your comment data is processed.