ಭಾರತ-ರಷ್ಯಾ ನಡುವೆ ಐದು ಒಪ್ಪಂದಕ್ಕೆ ಸಹಿ

ರಷ್ಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ರಷ್ಯಾದಲ್ಲಿ ನಡೆದ ವ್ಯಾಪಕ ಮಾತುಕತೆಯ ನಂತರ ಭಾರತ ಮತ್ತು ರಷ್ಯಾ 5 ಒಪ್ಪಂದಗಳಿಗೆ ಸಹಿ ಹಾಕಿವೆ.

ಸಹಿ ಹಾಕಲಾದ ಒಪ್ಪಂದಗಳು:

  • ಎರಡು ವರ್ಷಗಳ ಅವಧಿಯ ವರೆಗೆ (2017-2019) ಸಾಂಸ್ಕೃತಿಕ ವಿನಿಮಯ ಒಪ್ಪಂದಕ್ಕೆ ಎರಡು ದೇಶಗಳ ನಡುವೆ ಸಹಿ ಹಾಕಲಾಯಿತು.
  • ತಮಿಳುನಾಡಿನ ಕೂಡುಂಕುಳಂದಲ್ಲಿರುವ ಪರಮಾಣು ವಿದ್ಯುತ್‌ ಸ್ಥಾವರದಲ್ಲಿ 5 ಮತ್ತು 6ನೇ ಘಟಕ ಸ್ಥಾಪನೆ ಸಂಬಂಧದ ಒಪ್ಪಂದಕ್ಕೆ ಸಹಿ.
  • ಇಂಡಿಯನ್ ಡಿಜಿಟಲ್ ಲೈಬ್ರರಿ ಆಫ್ ಟ್ರಡಿಷನಲ್ ನಾಲೆಡ್ಜ್ ಅನ್ನು ರಾಸ್ಪಟೆಂಟ್ ತಜ್ಞರು ಬಳಸಲು ಅನುಕೂಲವಾಗುವಂತೆ ಕೌನ್ಸಿಲ್ ಆಫ್ ಇಂಡಿಯಾ ಆನ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ರಷ್ಯಾದ ಫೆಡರಲ್ ಸರ್ವೀಸ್ ಫಾರ್ ಇಂಟಲೆಕ್ಚುಯಲ್ ಪ್ರಾಪರ್ಟಿ (ರಾಸ್ಪಟೆಂಟ್) ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
  • ನಾಗ್ಪುರ್-ಸಿಕಂದರಾಬಾದ್ ವಿಭಾಗದಲ್ಲಿ ಹೈಸ್ಪೀಡ್ ರೈಲು ಸೇವೆಯ ಅನುಷ್ಠಾನಕ್ಕೆ ಜೆಎಸ್ಸಿ (ರಷ್ಯಾದ ರೈಲ್ವೇಸ್) ಮತ್ತು ರೈಲ್ವೆಯ ಸಚಿವಾಲಯ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.
  • ALROSA ಮತ್ತು ಕೌನ್ಸಿಲ್ ಫಾರ್ ದಿ ಪ್ರವೋಷನ್ ಆಫ್ ದಿ ಎಕ್ಸಫೋರ್ಟ್ ಆಫ್ ಪ್ರಿಶಿಯಸ್ ಸ್ಟೋನ್ಸ್ ಅಂಡ್ ಜ್ಯೂವೆಲ್ಲರಿ ಆಫ್ ಇಂಡಿಯಾ ನಡುವೆ ಒಪ್ಪಂದಕ್ಕೆ ಸಹಿ.

ಇತರೆ:

ಭಾರತ ಮತ್ತು ರಷ್ಯಾ ಈ ವರ್ಷ ಪ್ರಪ್ರಥಮ ತ್ರಿಕೋನ ಸೇನೆಗಳ ಅಭ್ಯಾಸ “ಇಂದ್ರ-2017” ಆಯೋಜಿಸಲು ನಿರ್ಧರಿಸಿವೆ. ಎರಡೂ ರಾಷ್ಟ್ರಗಳು ಕಮೊವ್ -226 ಮಿಲಿಟರಿ ಹೆಲಿಕಾಪ್ಟರ್ಗಳ ಜಂಟಿ ತಯಾರಿಕೆ ಮತ್ತು ಯುದ್ದನೌಕೆಗಳ ಜಂಟಿ ಉತ್ಪಾದನೆಯನ್ನು ಆರಂಭಿಸಲು ನಿರ್ಧರಿಸಿದೆ.

            ಈ ಎಲ್ಲಾ ಒಪ್ಪಂದಗಳ ಪೈಕಿ ತಮಿಳುನಾಡಿನ ಕೂಡುಂಕುಳಂದಲ್ಲಿರುವ ಪರಮಾಣು ವಿದ್ಯುತ್‌ ಸ್ಥಾವರದಲ್ಲಿ 5 ಮತ್ತು 6ನೇ ಘಟಕ ಸ್ಥಾಪನೆ ಅತ್ಯಂತ ಮಹತ್ವದಾಗಿದೆ. ಭಾರತದ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್) ಮತ್ತು ರಷ್ಯಾದ ಆಟೊಸ್ಟ್ರಾಯ್ಎಕ್ಸ್ಪೋರ್ಟ್ ಕಂಪೆನಿಯಿಂದ ರಿಯಾಕ್ಟರುಗಳನ್ನು ನಿರ್ಮಿಸಲಾಗುವುದು. ಆಟೊಸ್ಟ್ರಾಯ್ಎಕ್ಸ್ಪೋರ್ಟ್ ಸಂಸ್ಥೆ ರೋಸಟಮ್ನ ಅಂಗಸಂಸ್ಥೆಯಾಗಿದೆ. ಎರಡು ಘಟಕಗಳು 1,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.

ಓಡಿಶಾದಲ್ಲಿ ದೇಶದ ಮೊದಲ ಕರಾವಳಿ ವಿಪತ್ತು ಎಚ್ಚರಿಕೆ ವ್ಯವಸ್ಥೆ

ಓಡಿಶಾ ಸರ್ಕಾರ ಜುಲೈ 1 ರಿಂದ ಸುನಾಮಿ ಅಥವಾ ಚಂಡಮಾರುತದಂತಹ ನೈಸರ್ಗಿಕ ವಿಪತ್ತುಗಳ ಬಗ್ಗೆ ಮುನ್ನಚ್ಚರಿಕೆ ನೀಡುವ “ಅರ್ಲಿ ವಾರ್ನಿಂಗ್ ಡಿಸ್ಸೆಮಿನೇಶನ್ ಸಿಸ್ಟಂ (Early Warning Dissemination System) ಅನ್ನು ಅಳವಡಿಸಲಿದೆ. ದೇಶದಲ್ಲೆ ಮೊದಲ ಬಾರಿಗೆ ಇಂತಹ ವ್ಯವಸ್ಥೆಯನ್ನು ಓಡಿಶಾ ಸರ್ಕಾರ ಅಳವಡಿಸಿಕೊಳ್ಳುತ್ತಿದೆ. 480 ಕಿ.ಮೀ ಉದ್ದದ ಕರಾವಳಿಯಲ್ಲಿ ನೆಲೆಸಿರುವ ಜನರಿಗೆ ನೈಸರ್ಗಿಕ ವಿಪತ್ತುಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ರವಾನಿಸಲಿದೆ. ಆಂಧ್ರ ಪ್ರದೇಶ ಸರ್ಕಾರ ಇಂತಹದೇ ಮಾದರಿ ವ್ಯವಸ್ಥೆಯನ್ನು ಅಭಿವೃದ್ದಿಪಡಿಸುತ್ತಿದೆ ಎನ್ನಲಾಗಿದೆ.

ಪ್ರಮುಖಾಂಶಗಳು:

 ನೈಸರ್ಗಿಕ ವಿಕೋಪ ಸಂಭವಿಸುವ ಸಂದರ್ಭದಲ್ಲಿ ರಾಜ್ಯ ರಾಜಧಾನಿಯಲ್ಲಿರುವ ನಿಯಂತ್ರಣಾ ಕೊಠಡಿಯಲ್ಲಿ ಒಂದು ಗುಂಡಿಯನ್ನು ಒತ್ತುವ ಮೂಲಕ ಎಚ್ಚರಿಕೆಯನ್ನು ರವಾನೆಯನ್ನು ಮಾಡಬಹುದು. ಇದರಿಂದ ರಾಜ್ಯದಾದ್ಯಂತ ಪ್ರವಾಸಿ ತಾಣಗಳು, ಬಂದರುಗಳು ಮತ್ತು ಕರಾವಳಿ ವಾಸಸ್ಥಳಗಳು ಸೇರಿದಂತೆ 122 ಸ್ಥಳಗಳಲ್ಲಿರುವ ಗೋಪುರಗಳಿಂದ ಏಕಕಾಲದಲ್ಲಿ ಸೈರನ್ ಮೊಳಗಲಿದೆ. ಗೋಪುರಗಳಿಂದ ಹೊರಹೊಮ್ಮುವ ಶಬ್ದವನ್ನು 1.5 ಕಿಮೀ ವ್ಯಾಪ್ತಿಯ ಸ್ಥಳಗಳವರೆಗೆ ಕೇಳಬಹುದಾಗಿದೆ. ಹೀಗಾಗಿ, ಒಡಿಶಾ ಸರ್ಕಾರ ರಾಜ್ಯದಾದ್ಯಂತ ಸ್ವಯಂಚಾಲಿತ ಸಾರ್ವಜನಿಕ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಮೊದಲ ರಾಜ್ಯವೆನಿಸಿದೆ.

ಚಲನಚಿತ್ರ ನಿರ್ಮಾಪಕಿ “ಪಾರ್ವತಮ್ಮ ರಾಜ್ ಕುಮಾರ್” ನಿಧನ

ವರನಟ ಡಾ.ರಾಜ್ ಕುಮಾರ್ ಅವರ ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ನಗರದ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆಶಯದಂತೆ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಕಣ್ಣುಗಳನ್ನು  ಕುಟುಂಬದವರು ನಾರಾಯಣ ನೇತ್ರಾಲಯದ ಡಾ. ರಾಜ್‌ಕುಮಾರ್ ನೇತ್ರ ಬ್ಯಾಂಕ್‌ಗೆ ದಾನ ಮಾಡಿದ್ದಾರೆ.

  • ಡಿಸೆಂಬರ್ 6, 1939ರಲ್ಲಿ ಮೈಸೂರಿನ ಸಾಲಿಗ್ರಾಮದಲ್ಲಿ ಪಾರ್ವತಮ್ಮ ಜನಿಸಿದರು.
  • ವರನಟ ಡಾ. ರಾಜ್ ಕುಮಾರ್ ಅವರನ್ನು 1953 ಜೂ.25 ರಂದು ವಿವಾಹವಾಗಿದ್ದರು.
  • ‘ಪೂರ್ಣಿಮಾ ಎಂಟರ್‌ಪ್ರೈಸಸ್‌’ ಆರಂಭಿಸಿ ಸಿನಿಮಾ ನಿರ್ಮಾಣಕ್ಕೆ ಇಳಿದು 1975ರಲ್ಲಿ ‘ತ್ರಿಮೂರ್ತಿ’ ಚಿತ್ರವನ್ನು ನಿರ್ಮಿಸಿದರು.ಹುಬ್ಬಳ್ಳಿಯಲ್ಲಿ ‘ಚಂದ್ರಿಕಾ ಮೂವೀಸ್‌’ ಹೆಸರಿನಲ್ಲಿ ಸಿನಿಮಾ ಹಂಚಿಕೆ ಆರಂಭಿಸಿದರು. ಬೆಂಗಳೂರಿನಲ್ಲಿನ ‘ವಜ್ರೇಶ್ವರಿ ಕಂಬೈನ್ಸ್‌’ ಚಿತ್ರರಂಗದ ಚಟುವಟಿಕೆಗಳ ನಿರ್ಧಾರಕ ಕೇಂದ್ರವಾಗಿ, ‘ಹೆಡ್ಡಾಫೀಸು’ ಎಂದೇ ಪ್ರಸಿದ್ಧವಾಯಿತು.
  • ನಂತರ  ಚಿತ್ರರಂಗದ ಖ್ಯಾತ ನಿರ್ಮಾಪಕಿಯಾಗಿ ಬೆಳೆದ ಪಾರ್ವತಮ್ಮ ಅವರು ‘ಹಾಲು ಜೇನು’, ‘ಚಲಿಸುವ ಮೋಡಗಳು’, ‘ಕವಿರತ್ನ ಕಾಳಿದಾಸ’, ‘ಶಂಕರ್‌ ಗುರು’, ‘ದೇವತಾ ಮನುಷ್ಯ’, ‘ಜೀವನಚೈತ್ರ’, ‘ಆಕಸ್ಮಿಕ’, ‘ಆನಂದ್’, ‘ಓಂ’, ‘ಜನುಮದ ಜೋಡಿ’,‘ನಂಜುಂಡಿ ಕಲ್ಯಾಣ’, ‘ಅಪ್ಪು’ ಸೇರಿ 80 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
  • ನಿರ್ಗತಿಕ ಮಹಿಳೆಯರು ಹಾಗೂ ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸಿ, ಜೀವನೋಪಾಯ ಕೌಶಲ್ಯ ನೀಡಿ ಅವರ ಬದುಕಿಗೆ ಆಸರೆಯಾಗಲು ಮೈಸೂರಿನ ಬಳಿ “ಶಕ್ತಿ ಧಾಮ” ಕೇಂದ್ರವನ್ನು ಅವರು ನಿರ್ಮಿಸಿದ್ದರು.

Leave a Comment

This site uses Akismet to reduce spam. Learn how your comment data is processed.