ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,14,15,2017

Question 1

1. ಕ್ರೀಡೆಗಳಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಈ ಕೆಳಕಂಡ ಯಾವ ದೇಶದೊಂದಿಗೆ ಭಾರತ ಕ್ರೀಡಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ?

A
ಕೆನಡಾ
B
ಅಮೆರಿಕ
C
ರಷ್ಯಾ
D
ಆಸ್ಟ್ರೇಲಿಯಾ
Question 1 Explanation: 

(ವಿವರಣೆ:- ಕ್ರೀಡೆಗಳಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಭಾರತ ಆಸ್ಟ್ರೇಲಿಯಾದೊಂದಿಗೆ ಕ್ರೀಡಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತ-ಆಸ್ಟ್ರೇಲಿಯಾ ಕ್ರೀಡಾ ಸಹಭಾಗಿತ್ವವು ಎರಡು ದೇಶಗಳ ನಡುವೆ ಕ್ರೀಡಾಪಟುಗಳ, ತರಬೇತುದಾರರ, ತಾಂತ್ರಿಕ ಅಧಿಕಾರಿಗಳ ಮತ್ತು ಕ್ರೀಡಾ ತಂತ್ರಜ್ಞರ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ. ಇದು ಕ್ರೀಡಾಪಟುಗಳ ಮತ್ತು ತರಬೇತುದಾರರ ತರಬೇತಿ ಮತ್ತು ಅಭಿವೃದ್ಧಿ, ಕ್ರೀಡಾ ವಿಜ್ಞಾನ, ಕ್ರೀಡಾ ಆಡಳಿತ ಮತ್ತು ಸಮಗ್ರತೆ ಮತ್ತು ಜನಸಾಮಾನ್ಯ ಭಾಗವಹಿಸುವಿಕೆ ಈ ನಾಲ್ಕು ವಿಭಾಗಗಳಲ್ಲಿ ಸಹಕಾರವನ್ನು ನೀಡಲಿದೆ.

Question 2

2. ಕೇಂದ್ರ ಸರ್ಕಾರದ ಬಂದರು ಸಚಿವಾಲಯ ಬಿಡುಗಡೆಗೊಳಿಸಿದ ‘ಬಂದರುಗಳ ನೈರ್ಮಲ್ಯ ಪಟ್ಟಿ’ಯಲ್ಲಿ ಯಾವ ಬಂದರು ಅಗ್ರಸ್ಥಾನ ಪಡೆದಿದೆ?

A
ಕಂಡ್ಲಾ ಬಂದರು
B
ಕೊಚ್ಚಿನ್ ಬಂದರು
C
ಹಲ್ದಿಯಾ ಬಂದರು
D
ವಿಶಾಖಪಟ್ಟಣ ಬಂದರು
Question 2 Explanation: 

(ವಿವರಣೆ:-ಪಶ್ಚಿಮ ಬಂಗಾಳದ ಹಲ್ದಿಯಾ ಬಂದರು ಕೇಂದ್ರ ಸರ್ಕಾರದ ಬಂದರು ಸಚಿವಾಲಯ ಬಿಡುಗಡೆಗೊಳಿಸಿದ ‘ಬಂದರುಗಳ ನೈರ್ಮಲ್ಯ ಪಟ್ಟಿ’ಯಲ್ಲಿ ಅಗ್ರಸ್ಥಾನ ಪಡೆದಿದೆ. ಬಂದರು ಕಾರ್ಯಾಚರಣೆ, ಕಛೇರಿ ಪ್ರದೇಶ, ಪಟ್ಟಣ ಪ್ರದೇಶ ಮತ್ತು ಒಳಬರುವ ಹಡಗುಗಳಿಗೆ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ತ್ಯಾಜ್ಯ ಉತ್ಪಾದಿಸುವ ಮೂಲಗಳನ್ನು ಎದುರಿಸಲು ಬಂದರುಗಳು ಕೈಗೊಂಡ ಕ್ರಮಗಳ ಆಧಾರದ ಮೇಲೆ ಈ ಶ್ರೇಯಾಂಕವು ಆಧರಿಸಿದೆ. )

Question 3

3. ಭಾರತವು ತನ್ನ ಮೊದಲ ಆಧುನಿಕ ಜಲಮಾರ್ಗವನ್ನು ಅಭಿವೃದ್ಧಿಪಡಿಸುವ ಸಲುವಾಗಿ ವಿಶ್ವ ಬ್ಯಾಂಕ್ ಎಷ್ಟು ಮೊತ್ತದ ಸಾಲ ನೀಡಲು ಅಂಗೀಕರಿಸಿದೆ?

A
$ 275 ಮಿಲಿಯನ್
B
$ 375 ಮಿಲಿಯನ್
C
$ 475 ಮಿಲಿಯನ್
D
$ 575 ಮಿಲಿಯನ್
Question 3 Explanation: 

(ಭಾರತದ ಮೊದಲ ಜಲಮಾರ್ಗ ಯೋಜನೆ "ರಾಷ್ಟ್ರೀಯ ಜಲಮಾರ್ಗ (NW) 1" ಗೆ ವಿಶ್ವ ಬ್ಯಾಂಕ್ (WB) $ 375 ದಶಲಕ್ಷ ಸಾಲವನ್ನು ಅನುಮೋದಿಸಿದೆ. ವಾರಾಣಸಿ ಮತ್ತು ಹಲ್ದಿಯಾ ನಡುವೆ ಗಂಗಾ ನದಿಯ 1,360 ಕಿ.ಮೀ ಉದ್ದದ ಜಲ ಸಾರಿಗೆ ಮಾರ್ಗವನ್ನು ಸೃಷ್ಟಿಸುವ ಯೋಜನೆ ಇದಾಗಿದೆ. ಈ ಪ್ರದೇಶದಲ್ಲಿನ ಜಲ ಸಾರಿಗೆ ಅಭಿವೃದ್ಧಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನಿರ್ಮಿಸಲು ಯೋಜನೆಯು ಸಹಾಯ ಮಾಡುತ್ತದೆ. ಇದು ಆರು ಮಲ್ಟಿ-ಮೋಡಲ್ ಟರ್ಮಿನಲ್ಗಳು, ಹಡಗು-ದುರಸ್ತಿ ಸೌಲಭ್ಯಗಳು ಮತ್ತು ನದಿಯ ಉದ್ದಕ್ಕೂ ಪ್ರಯಾಣಿಕರ ಟರ್ಮಿನಲ್ ಗಳ ನಿರ್ಮಾಣಕ್ಕೆ ಹಣಕಾಸು ಸಹಾಯ ನೀಡುತ್ತದೆ. ಇದು ಫರಾಕ್ಕಾ ಕಾಲುವೆಯನ್ನು ಆಧುನೀಕರಣಗೊಳಿಸಲು ಸಹಾಯ ಮಾಡುತ್ತದೆ.)

Question 4

4. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 'ತಾರೇ ಜಮೀನ್ ಪರ್’ಎಂಬ ನೂತನ ಕಾರ್ಯಕ್ರಮವನ್ನು ಯಾವ ರಾಜ್ಯದ ಪೊಲೀಸ್ ಇಲಾಖೆ ಪ್ರಾರಂಭಿಸಿದೆ?

A
ಒಡಿಶಾ
B
ಮಣಿಪುರ
C
ಉತ್ತರಾಖಂಡ್
D
ಜಾರ್ಖಂಡ್
Question 4 Explanation: 

(ವಿವರಣೆ:- ಜಾರ್ಖಂಡ್ ನ ಪಲಾಮು ಜಿಲ್ಲೆಯಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 'ತಾರೇ ಜಮೀನ್ ಪರ್’ಎಂಬ ನೂತನ ಕಾರ್ಯಕ್ರಮವನ್ನು ರಾಜ್ಯದ ಪೊಲೀಸ್ ಇಲಾಖೆ ಪ್ರಾರಂಭಿಸಿದೆ. ತನ್ನ ರಾಜ್ಯದ ಪೊಲೀಸ್ ಪಡೆಗಳಲ್ಲಿ ಆತ್ಮವಿಶ್ವಾಸವನ್ನು ಮರುಸ್ಥಾಪಿಸುವುದು ಮತ್ತು ಹೊಸ ಪೀಳಿಗೆಯ ಮಕ್ಕಳಿಗೆ ನೆಮ್ಮದಿಯ ಜೀವನವನ್ನು ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.)

Question 5

5. 2017 ರ ಪಾನಾ ಸಂಕ್ರಾಂತಿ ಇತ್ತೀಚೆಗೆ ಭಾರತದ ಯಾವ ರಾಜ್ಯದಲ್ಲಿ ಆಚರಿಸಲಾಯಿತು?

A
ಒಡಿಶಾ
B
ತಮಿಳುನಾಡು
C
ಕೇರಳ
D
ಅಸ್ಸಾಂ
Question 5 Explanation: 

(ವಿವರಣೆ:- ಮಹಾ ಬಿಸುಬಾ ಸಂಕ್ರಾಂತಿ ಎಂದೂ ಕರೆಯಲ್ಪಡುವ ಪಣ ಸಂಕ್ರಾಂತಿ ಇತ್ತೀಚೆಗೆ ಒಡಿಸ್ಸಾ ರಾಜ್ಯದಲ್ಲಿ ಆಚರಿಸಲಾಯಿತು. ಒಡಿಸ್ಸಾದ ಬೌದ್ಧರು ಮತ್ತು ಹಿಂದೂಗಳು ಹೊಸ ವರ್ಷದ ದಿನವಾಗಿ ಈ ಉತ್ಸವವನ್ನು ಮಾಡುತ್ತಾರೆ. ಅಂದು ಮಾವು-ಹಾಲು-ಮೊಸರು-ತೆಂಗಿನಕಾಯಿಯ ಪಾನೀಯವನ್ನು ಸಿದ್ಧಪಡಿಸಿ ಸಾಂಪ್ರದಾಯಿಕವಾಗಿ ಹಂಚಲ್ಪಡುತ್ತದೆ. ಈ ಹಬ್ಬವನ್ನು ಶಿವ, ಶಕ್ತಿ, ಅಥವಾ ಹನುಮಾನ್ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಆಚರಿಸಲಾಗುತ್ತದೆ.)

Question 6

6. ಭಾರತದ ಪ್ರಪ್ರಥಮ ಖಾಸಗಿ ರೈಲ್ವೆ ನಿಲ್ದಾಣವನ್ನು ಹೊಂದಿರುವ ರಾಜ್ಯ ಯಾವುದು?

A
ತ್ರಿಪುರ
B
ಒಡಿಶಾ
C
ಕೇರಳ
D
ಮಧ್ಯ ಪ್ರದೇಶ
Question 6 Explanation: 

(ವಿವರಣೆ:- ಮಧ್ಯಪ್ರದೇಶದ ಭೋಪಾಲ್ ನ ಹಬೀಬ್ ಗಂಜ್ ನಿಲ್ದಾಣವನ್ನು ಖಾಸಗಿ ಸಂಸ್ಥೆಯೊಂದಕ್ಕೆ ಹಸ್ತಾಂತರಿಸಲಾಗಿದೆಯೆಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಇದರೊಂದಿಗೆ, ಹಬೀಬ್ ಗಂಜ್ ರೈಲ್ವೆ ನಿಲ್ದಾಣ ಭಾರತದ ಮೊದಲ ಖಾಸಗಿ ರೈಲ್ವೆ ನಿಲ್ದಾಣವಾಗಿ ಮಾರ್ಪಟ್ಟಿದೆ. ನಿಲ್ದಾಣದ ಕಟ್ಟಡವನ್ನು ವಿಮಾನ ನಿಲ್ದಾಣಕ್ಕೆ ಸರಿಸಮಾನವಾಗಿ ಅಭಿವೃದ್ಧಿಪಡಿಸಲಾಗುವುದು. ಆದರೆ ನಿಲ್ದಾಣದ ರೈಲುಗಳನ್ನು ರೈಲ್ವೇ ಇಲಾಖೆಯಿಂದಲೇ ನಡೆಸಲ್ಪಡುತ್ತವೆ.)

Question 7

7. 2017 ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂವರು ಯಾರು?

A
ಮೈಕೆಲ್ ಫೆರೀರಾ
B
ಸೌರವ್ ಕೊಥಾರಿ
C
ಪಂಕಜ್ ಅಡ್ವಾಣಿ
D
ಸುಭಾಷ್ ಅಗರ್ವಾಲ್
Question 7 Explanation: 
ಪಂಕಜ್ ಅಡ್ವಾಣಿ
Question 8

8. “ಕಾರ್ಟಿಯರ್ ವುಮೆನ್ ಇನಿಶಿಯೇಟಿವ್” ಪ್ರಶಸ್ತಿ 2017 ನ್ನು ಗೆದ್ದ ಭಾರತೀಯ ಪರಿಸರ ಇಂಜಿನಿಯರ್ ಯಾರು?

A
ತೃಪ್ತಿ ಜೈನ್
B
ಕೀರ್ತಿ ಬೋಸ್
C
ನಿತಿನ್ ಬನ್ಸಾಲ್
D
ಚಂದರೇಶ್ ಯಾದವ್
Question 8 Explanation: 

(ವಿವರಣೆ:- “ಕಾರ್ಟಿಯರ್ ವುಮೆನ್ ಇನಿಶಿಯೇಟಿವ್” ಪ್ರಶಸ್ತಿ 2017 ನ್ನು ಭಾರತೀಯ ಪರಿಸರ ಇಂಜಿನಿಯರ್ ತೃಪ್ತಿ ಜೈನ್ ರವರು ಪಡೆದಿದ್ದಾರೆ. 120 ದೇಶಗಳ ಸುಮಾರು 1,900 ಅಭ್ಯರ್ಥಿಗಳು ಭಾಗವಹಿಸಿದ್ದು, ಈ ಪೈಕಿ 6 ಜನರು ಈ ಪ್ರಸಸ್ತಿಗೆ ಭಾಜನರಾಗಿದ್ದಾರೆ.

Question 9

9. “ಎಲ್ಲರಿಗೂ ಶಕ್ತಿ” ಯೋಜನೆಗಾಗಿ ಕೇಂದ್ರ ಸರಕಾರದೊಂದಿಗೆ ಯಾವ ರಾಜ್ಯ ಸರ್ಕಾರವು ಒಪ್ಪಂದ ಮಾಡಿಕೊಂಡಿದೆ?

A
ಮಧ್ಯಪ್ರದೇಶ
B
ಜಾರ್ಖಂಡ್
C
ಹರಿಯಾಣ
D
ಉತ್ತರ ಪ್ರದೇಶ
Question 9 Explanation: 

(ವಿವರಣೆ:-“ಎಲ್ಲರಿಗೂ ಶಕ್ತಿ” ಯೋಜನೆಗಾಗಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಇತ್ತೀಚೆಗೆ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅಕ್ಟೋಬರ್ 2018 ರೊಳಗೆ ಪ್ರತಿ ಮನೆಗೆ ಮತ್ತು ಕೃಷಿ ಕ್ಷೇತ್ರಕ್ಕೆ 24 ಗಂಟೆಗಳ ಗುಣಮಟ್ಟದ ವಿದ್ಯುತ್ ಸರಬರಾಜು ಮತ್ತು ಗ್ರಾಹಕರಿಗೆ ಗುಣಮಟ್ಟದ ವಿದ್ಯುಚ್ಛಕ್ತಿಯನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವುದು ಈ ಯೋಜನೆಯ ಗುರಿಯಾಗಿದೆ. )

Question 10

10. 2017 ರ ಸಿಂಗಪುರ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದವರು ಯಾರು?

A
ಎನ್ ಎಸ್ ರೆಡ್ಡಿ
B
ಅಂಥೋನಿ ಸಿನಿಸುಕಾ ಜಿಂಟಿಂಗ್
C
ಸಾಯಿ ಪ್ರಣೀತ್
D
ಕಿದಾಂಬಿ ಶ್ರೀಕಾಂತ್
Question 10 Explanation: 
ಸಾಯಿ ಪ್ರಣೀತ್
There are 10 questions to complete.

[button link=”http://www.karunaduexams.com/wp-content/uploads/2017/06/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್14152017-1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

5 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,14,15,2017”

  1. Ravikanth Y K

    Superb
    Please upload these type of questions and also difficulty questions in future..

  2. mounesh pattar

    Comment

  3. Hanamanth Mahadev Byadagi

    Good

Leave a Comment

This site uses Akismet to reduce spam. Learn how your comment data is processed.