ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,12,13,2017

Question 1

1. ದೂರಸಂಪರ್ಕ ಇಲಾಖೆಯ (DOT) ಹೊಸ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?

A
ಪಿ.ಕೆ. ಪೂಜರಿ
B
ಜೆ ಎಸ್ ದೀಪಕ್
C
ಅರುಣಾ ಸುಂದರಾರಾಜನ್
D
ಮಂಜು ಝಾ
Question 1 Explanation: 
ಅರುಣಾ ಸುಂದರಾರಾಜನ್
Question 2

2. 2017ರ ಆರ್ಕ್ಟಿಕ್ ಎನರ್ಜಿ ಶೃಂಗಸಭೆ (AES) ಅನ್ನು ಯಾವ ದೇಶವು ಆಯೋಜಿಸುತ್ತಿದೆ?

A
ಉರುಗ್ವೆ
B
ಫಿನ್ಲ್ಯಾಂಡ್
C
ಐರ್ಲೆಂಡ್
D
ಜಾಂಬಿಯಾ
Question 2 Explanation: 
ಫಿನ್ಲ್ಯಾಂಡ್
Question 3

3. ಶ್ರವಣ ನ್ಯೂನತೆ ಹೊಂದಿರುವ ವ್ಯಕ್ತಿಗಳಿಂದ ಸಂಚಾರಿ ವಾಹನಗಳಿಗೆ ಲೋಗೊವನ್ನು(ಚಿನ್ಹೆ) ಪರಿಚಯಿಸಲು ಮುಂದಾಗಿರುವ ಮೊದಲ ಭಾರತೀಯ ರಾಜ್ಯ ಯಾವುದು?

A
ತೆಲಂಗಾಣ
B
ಹಿಮಾಚಲ ಪ್ರದೇಶ
C
ಗುಜರಾತ್
D
ಮಹಾರಾಷ್ಟ್ರ
Question 3 Explanation: 
ತೆಲಂಗಾಣ
Question 4

4. ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಹೆಪಾಟೈಟಿಸ್ ನ ವಿಶ್ವ ಆರೋಗ್ಯ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡ ಭಾರತೀಯ ವ್ಯಕ್ತಿ ಯಾರು?

A
ಶಾರುಖ್ ಖಾನ್
B
ಅಮೀರ್ ಖಾನ್
C
ಪ್ರಿಯಾಂಕಾ ಚೋಪ್ರಾ
D
ಅಮಿತಾಭ್ ಬಚ್ಚನ್
Question 4 Explanation: 
ಅಮಿತಾಭ್ ಬಚ್ಚನ್
Question 5

5. ಮೊದಲ ಬಾರಿಗೆ ಒನ್ ಬೆಲ್ಟ್ ಒನ್ ರೋಡ್ (OBOR) ಶೃಂಗಸಭೆಯನ್ನು ಆಯೋಜಿಸಿದ ದೇಶ ಯಾವುದು?

A
ಚೀನಾ
B
ಭಾರತ
C
ನೇಪಾಳ
D
ಮಾಲ್ಡೀವ್ಸ್
Question 5 Explanation: 
ಚೀನಾ
Question 6

6. ಆಹಾರ ಧಾನ್ಯಗಳ ಗರಿಷ್ಟ ಉತ್ಪಾದನೆಗಾಗಿ ಯಾವ ರಾಜ್ಯವು 2015-16 ರ ಸಾಲಿಗೆ “ಕೃಷಿ ಕಾರ್ಮನ್” ಪ್ರಶಸ್ತಿಯನ್ನು ಪಡೆದುಕೊಂಡಿದೆ?

A
ಹಿಮಾಚಲ ಪ್ರದೇಶ
B
ಆಂಧ್ರ ಪ್ರದೇಶ
C
ಮಧ್ಯ ಪ್ರದೇಶ
D
ಉತ್ತರ ಪ್ರದೇಶ
Question 6 Explanation: 

(ವಿವರಣೆ:- ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳಕ್ಕಾಗಿ ಹಿಮಾಚಲ ಪ್ರದೇಶ 2015-16 ನೇ ಸಾಲಿಗೆ “ಕೃಷಿ ಕಾರ್ಮನ್” ಪ್ರಶಸ್ತಿಯನ್ನು ಪಡೆದುಕೊಂಡಿದೆ. ರೈತರ ತಂತ್ರಜ್ಞಾನದ ಬಳಕೆ ಮತ್ತು ಸೇವೆಗಳ ವಿಸ್ತರಣೆಯಂದಾಗಿ ರಾಜ್ಯದ ಕೃಷಿ ಇಲಾಖೆ ಸತತ 3 ನೇ ಬಾರಿಗೆ ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ಟ್ರೋಫಿ, ಪ್ರಮಾಣ ಪತ್ರ ಮತ್ತು ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಇದಲ್ಲದೆ, ಪಾಲಿ-ಹೌಸ್ ಕೃಷಿ, ಮಿಶ್ರ ಬೆಳೆ, ಸಣ್ಣ ನೀರಾವರಿ, ಸಾವಯವ ಬೇಸಾಯ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆಯನ್ನು ಉತ್ತೇಜಿಸಲು ರಾಜ್ಯ ಗಮನಾರ್ಹ ಕಾರ್ಯ ಮಾಡಿದೆ.)

Question 7

7. ದೆಹಲಿ ಉಚ್ಛನ್ಯಾಯಾಲಯಕ್ಕೆ ಹೊಸದಾಗಿ ನೇಮಕಗೊಂಡ ಮುಖ್ಯ ನ್ಯಾಯಮೂರ್ತಿ ಯಾರು?

A
ಎಸ್.ಕೆ. ಕೌಲ್
B
ಗೀತಾ ಮಿತ್ತಲ್
C
ಹುಲುವಾಡಿ ಜಿ ರಮೇಶ್
D
ಜಿ. ರೋಹಿಣಿ
Question 7 Explanation: 

(ವಿವರಣೆ:-ಜಸ್ಟೀಸ್ ಗೀತಾ ಮಿತ್ತಲ್ ರವರು ದೆಹಲಿ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಅವರು ಅನೇಕ ಪ್ರಮುಖ ತೀರ್ಪುಗಳನ್ನು ನೀಡಿದ್ದಾರೆ. ದೆಹಲಿಯಲ್ಲಿ ದುರ್ಬಲ ಸಾಕ್ಷಿಯ ನಿಯೋಜನಾ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ಗಲಭೆ ಪೀಡಿತರಿಗೆ ಪರಿಹಾರದ ತೀರ್ಪುಗಳು, ವಲಸೆ ವ್ಯಕ್ತಿಗಳಿಗೆ ಆಶ್ರಯ ನೀಡುವ ಹಕ್ಕು, ಸಶಸ್ತ್ರ ಪಡೆಗಳ ಮಹಿಳಾ ಸದಸ್ಯರ ಮದುವೆಯ ಹಕ್ಕು ಇವರು ನೀಡಿದ ಪ್ರಮುಖ ತೀರ್ಪುಗಳಲ್ಲಿ ಸೇರಿವೆ. ಅವರು ಹಲವಾರು ನ್ಯಾಯಾಂಗ ಸಮಿತಿಗಳ ಸದಸ್ಯರಾಗಿದ್ದಾರೆ.)

Question 8

8. ಸಂಗ್ರೇನ್ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?

A
ಸಿಕ್ಕಿಂ
B
ಅಸ್ಸಾಂ
C
ಜಾರ್ಖಂಡ್
D
ಅರುಣಾಚಲ ಪ್ರದೇಶ
Question 8 Explanation: 

(ವಿವರಣೆ:-ಅರುಣಾಚಲಪ್ರದೇಶದಲ್ಲಿ ಸಂಗ್ರೇನ್ ಉತ್ಸವವನ್ನು ಆಚರಿಸಲಾಗುತ್ತದೆ. ಇದು ಥೇರವಾಡಾ ಬೌದ್ಧ ಸಮುದಾಯದಿಂದ ಆಚರಿಸಲ್ಪಡುತ್ತದೆ ಹಾಗೂ ಬೌದ್ಧ ಹೊಸ ವರ್ಷದ ಆರಂಭವನ್ನು ಇದು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಬುದ್ಧನ ಪ್ರತಿಮೆಗಳನ್ನು ಹೊರತೆಗೆದು ವಿಧ್ಯುಕ್ತವಾಗಿ ಸ್ನಾನವನ್ನು ಮಾಡಿಸಲಾಗುತ್ತದೆ. ಹೊಸ ವರ್ಷವನ್ನು ಕಲ್ಮಶಗಳಿಂದ ಮುಕ್ತಗೊಳಿಸುವ ಸಲುವಾಗಿ ಆಧ್ಯಾತ್ಮಿಕ ಶುದ್ಧೀಕರಣದ ಸಂಕೇತವಾಗಿ ಪರಸ್ಪರರ ಮೇಲೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ.)

Question 9

9. ಮಹಿಳೆಯರ ಸುರಕ್ಷತೆಗಾಗಿ ಯಾವ ರಾಜ್ಯ ಸರ್ಕಾರ "ಆಪರೇಷನ್ ದುರ್ಗಾ" ಅನ್ನು ಪ್ರಾರಂಭಿಸಿದೆ?

A
ಪಂಜಾಬ್
B
ಉತ್ತರ ಪ್ರದೇಶ
C
ಮಧ್ಯ ಪ್ರದೇಶ
D
ಹರಿಯಾಣ
Question 9 Explanation: 

(ವಿವರಣೆ:-ಹರಿಯಾಣ ರಾಜ್ಯ ಸರ್ಕಾರವು ಇತ್ತೀಚೆಗೆ 'ಆಪರೇಷನ್ ದುರ್ಗಾ' ಅಭಿಯಾನವನ್ನು ಪ್ರಾರಂಭಿಸಿದೆ. ಈ ಕಾರ್ಯಾಚರಣೆಯ ಅಡಿಯಲ್ಲಿ 24 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಒಂಬತ್ತು ಉಪ-ತನಿಖಾಧಿಕಾರಿಗಳು, 14 ಸಹಾಯಕ ಉಪ-ತನಿಖಾಧಿಕಾರಿಗಳು, ಆರು ಮುಖ್ಯ ಪೇದೆಗಳು ಮತ್ತು 13 ಪೊಲೀಸ್ ಪೇದೆಗಳು ಹಾಗೂ ಪ್ರತಿ ಜಿಲ್ಲೆಯ ಇತರ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ. ಈ ತಂಡಗಳು ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಿಗೆ ಗಸ್ತು ತಿರುಗುತ್ತವೆ ಮತ್ತು ಚುಡಾಯಿಸುವುದು, ಅಸಭ್ಯ ಹೇಳಿಕೆಗಳು, ಹಿಂಬಾಲಿಸುವುದು ಮತ್ತು ಇತರ ಅನೈತಿಕ ಚಟುವಟಿಕೆಗಳು ಸೇರಿದಂತೆ ಇತರೆ ಮಹಿಳಾ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಮೇಲೆ ನಿಗಾ ಇಡಲಿದೆ.)

Question 10

10. ಕೈಗಾರಿಕಾ ಅಭಿವ್ಯಕ್ತಿಗೊಳಿಸಿದ ಭಾರತದ ಮೊಟ್ಟಮೊದಲ ರೋಬೋಟ್ "ಟಾಲ್ ಬ್ರೋಬೋ" ಅನ್ನು ಯಾವ ಭಾರತೀಯ ಕಂಪನಿಯು ಪ್ರಾರಂಭಿಸಿದೆ?

A
ಟಾಟಾ ಮೋಟಾರ್ಸ್
B
ಮಾರುತಿ ಸುಜುಕಿ
C
ಮಹೀಂದ್ರಾ & ಮಹೀಂದ್ರಾ
D
ಐಚೆರ್ ಮೋಟಾರ್ಸ್
Question 10 Explanation: 

(ವಿವರಣೆ:-ಕೈಗಾರಿಕಾ ಅಭಿವ್ಯಕ್ತಿಗೊಳಿಸಿದ ಭಾರತದ ಮೊದಲ ರೋಬೋಟ್ "ಟಾಲ್ ಬ್ರೋಬೋ" ಟಾಟಾ ಮೋಟಾರ್ಸ್ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಟಾಲ್ ಮ್ಯಾನುಫ್ಯಾಕ್ಚರಿಂಗ್ ಸಲ್ಯೂಷನ್ಸ್ನಿಂದ ಪ್ರಾರಂಭಿಸಲ್ಪಟ್ಟಿದೆ. ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮದ (MSME) ಅಡಿಯಲ್ಲಿ ಸಂಪೂರ್ಣವಾದ ಪರಿಕಲ್ಪನೆ, ವಿನ್ಯಾಸ ಮತ್ತು ತಯಾರಿಸಿದ ಮೊದಲ ಕೈಗಾರಿಕಾ ರೋಬೋಟ್ ಇದಾಗಿದೆ. ಸ್ಥಳೀಯವಾಗಿ ನಿರ್ಮಿಸಿದ ರೋಬೋಟ್ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ವಸ್ತುಗಳ ಬೆಸುಗೆ ಹಾಕುವಿಕೆ, ಸೀಲಾಂಟ್ ಅಪ್ಲಿಕೇಶನ್ ಮತ್ತು ದೃಷ್ಟಿ-ಆಧಾರಿತ ತಪಾಸಣೆಗಳನ್ನು ತೆಗೆದುಕೊಳ್ಳುವುದು ಮತ್ತು ನಿಯೋಜನೆ ಮಾಡುವಂತಹ ಕಾರ್ಯಗಳಿಗಾಗಿ ಅದನ್ನು ಬಳಸಬಹುದು.)

There are 10 questions to complete.

[button link=”http://www.karunaduexams.com/wp-content/uploads/2017/06/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್12132017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,12,13,2017”

Leave a Comment

This site uses Akismet to reduce spam. Learn how your comment data is processed.