ಜಿಎಸ್ಟಿ ಪರಿಷತ್ ನಿಂದ ಜಿಎಸ್ಟಿ ದರ ನಿಗದಿ

GST_upಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‌ಟಿ ಪರಿಷತ್‌ ತೆರಿಗೆ ದರವನ್ನು ಅಂತಿಮಗೊಳಿಸಿದೆ ಮತ್ತು ಜಿಎಸ್‌ಟಿ ಪರಿಷತ್‌ ಆಡಳಿತಕ್ಕೆ ಪೂರಕವಾದ ಏಳು ನಿಯಮಗಳನ್ನ ಅನುಮೋದಿಸಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ. ಜಿಎಸ್‌ಟಿಯ ಉಳಿದ ಎರಡು ನಿಯಮಗಳಾದ ಟ್ರಾನ್ಸಿಷನ್ ಮತ್ತು ರಿಟರ್ನ್ ಕಾನೂನು ಸಮಿತಿಯ ಪರಿಶೀಲನೆಯಲ್ಲಿವೆ. ಒಟ್ಟಾರೆಯಾಗಿ, ಪರಿಷತ್ 1211 ಸರಕುಗಳ ದರಗಳನ್ನು ನಿಗದಿಪಡಿಸಿದೆ. ಮುಂಬರುವ ದಿನಗಳಲ್ಲಿ ಕೆಲವು ಇತರ ಸರಕುಗಳ ಮತ್ತು ಸೇವೆಗಳ ದರಗಳನ್ನು ನಿರ್ಧರಿಸಲಿದೆ.

ಪ್ರಮುಖಾಂಶಗಳು:

  • 1211 ಸರಕುಗಳ ಪೈಕಿ ಶೇ. 81% ರಷ್ಟು ಸರಕುಗಳು ಶೇ. 18% ಅಥವಾ ಅದಕ್ಕಿಂತ ಕಡಿಮೆ ತೆರಿಗೆಗೆ ಒಳಪಡಲಿವೆ. ಉಳಿದ ಶೇ.19% ರಷ್ಟು ಸರಕುಗಳಿಗೆ 28% ಗರಿಷ್ಠ ತೆರಿಗೆ ದರ ಅನ್ವಯವಾಗಲಿದೆ.
  • ಸಕ್ಕರೆ, ಚಹಾ, ಖಾದ್ಯ ಮತ್ತು ಖಾದ್ಯ ತೈಲಗಳಂತಹ ಗೃಹೋಪಯೋಗಿ ವಸ್ತುಗಳು ಶೇ.5% ತೆರಿಗೆಯನ್ನು ಆಕರ್ಷಿಸಲಿವೆ. ಧಾನ್ಯಗಳು ಮತ್ತು ಹಾಲಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
  • ಮನುಫ್ಯಾಕ್ಚರ್ಡ್ ಸರಕುಗಳಿಗೆ ಶೇ 18% ಸುಂಕವನ್ನು ವಿಧಿಸಲಾಗುವುದು.
  • ಐಷಾರಾಮಿ ಕಾರುಗಳು ಶೇ.28% ಜಿಎಸ್‌ಟಿ ಜೊತೆಗೆ ಶೇ.15% ಸೆಸ್ ವಿಧಿಸಲಾಗುವುದು. ಸಣ್ಣ ಪೆಟ್ರೋಲ್ ಕಾರುಗಳು ಶೇ.28% ಜಿಎಸ್‌ಟಿ ಮತ್ತು ಶೇ.1% ಸೆಸ್ ಮತ್ತು ಡೀಸೆಲ್ ಕಾರುಗಳನ್ನು 28% ಮತ್ತು 3% ಸೆಸ್ ಗೆ ಒಳಪಡಲಿವೆ.
  • ತಂಪು ಪಾನೀಯಗಳು ಶೇ.28% ತೆರಿಗೆ ವ್ಯಾಪ್ತಿಗೆ ಬರಲಿವೆ.

ಮಹತ್ವ:

  • ಜಿಎಸ್‌ಟಿ ಕೌನ್ಸಿಲ್ 1211 ಸರಕುಗಳ ಯಾವುದೇ ಸರಕಿನ ಒಟ್ಟಾರೆ ತೆರಿಗೆಯನ್ನು ಹೆಚ್ಚಿಸಿಲ್ಲ. ಆದರೆ ಅನೇಕ ವಸ್ತುಗಳ ಮೇಲೆ ತೆರಿಗೆ ಕಡಿಮೆಯಾಗಿದೆ. ಉದಾಹರಣೆಗೆ ಸಾಬೂನಿಗೆ ಶೇ.22-24% ನಷ್ಟು ತೆರಿಗೆ ವಿಧಿಸಲ್ಪಡುತ್ತಿದ್ದು, ಈಗ ಶೇ.18% ನಷ್ಟು ತೆರಿಗೆಯನ್ನು ವಿಧಿಸಲಾಗುವುದು.
  • ಐಷಾರಾಮಿ ವಸ್ತುಗಳ ಮೇಲೆ ಶೇ.28% ಕ್ಕಿಂತಲೂ ವಿಧಿಸಲಾಗುವು ಹೆಚ್ಚು ತೆರಿಗೆಯನ್ನು ಸೆಸ್ ಎಂದು ಪರಿಗಣಿಸಲಾಗುತ್ತದೆ. ಈ ಸೆಸ್ ಅನ್ನು ಆದಾಯ ನಷ್ಟವನ್ನು ಅನುಭವಿಸುವ ರಾಜ್ಯಗಳಿಗೆ ಪರಿಹಾರಗಳನ್ನು ನೀಡಲು ಬಳಸಲಾಗುತ್ತದೆ.
  • ಆಹಾರ ಪದಾರ್ಥಗಳು ಅಗ್ಗವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕೇಶತೈಲ, ಟೂತ್ಪೇಸ್ಟ್ ಮತ್ತು ಸಾಬೂನಿನಂತಹ ದಿನನಿತ್ಯದ ಬಳಕೆಯ ವಸ್ತುಗಳು ಶೇ.28% ರ ಬದಲು ಶೇ.18% ತೆರಿಗೆ ವ್ಯಾಪ್ತಿಯಲ್ಲಿ ಇಡಲಾಗಿದೆ.
  • ಕಲ್ಲಿದ್ದಲಿನ ಮೇಲೆ ತೆರಿಗೆ ದರ ಶೇ.11% ರಿಂದ ಶೇ.5% ಕ್ಕೆ ಇಳಿದಿರುವ ಕಾರಣ ಇಂಧನ ಉತ್ಪಾದನೆಯ ವೆಚ್ಚವು ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.