ಅಗ್ನಿ-3 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

agni 3_upಅಣ್ವಸ್ತ್ರ ಒಯ್ಯಬಲ್ಲ ಸಾಮರ್ಥ್ಯದ ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ಅಗ್ನಿ–3 ಅನ್ನು ಒಡಿಶಾ ಕರಾವಳಿಯ ಅಬ್ದುಲ್‌ ಕಲಾಂ ದ್ವೀಪದಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿದೆ. ಸೇನೆಯ ಕ್ಷಿಪಣಿ ನಿರ್ವಹಣಾ ಘಟಕ ‘ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್’ ಹಾಗೂ ಡಿಆರ್‌ಡಿಒ ಸಹಯೋಗದಲ್ಲಿ ಈ ಪರೀಕ್ಷೆ ನಡೆಸಲಾಯಿತು. ಅಗ್ನಿ ಕ್ಷಿಪಣಿಯ ಕಾರ್ಯಾಚರಣೆ ಸಾಮರ್ಥ್ಯವನ್ನು ಧೃಡಪಡಿಸಿಕೊಳ್ಳುವ ಸಲುವಾಗಿ ಈ ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಅಗ್ನಿ-III ಕ್ಷಿಪಣಿಯನ್ನು ಜೂನ್ 2011ರಲ್ಲಿ ಸೇನೆಗೆ ಸೇರ್ಪಡೆಗೊಳಿಸಲಾಗಿದೆ.

ವೈಶಿಷ್ಠ್ಯತೆ:

  • ಅಗ್ನಿ-III ಕ್ಷಿಪಣಿ ಎರಡು ಹಂತದ ಘನ ನೋದಕ ವ್ಯವಸ್ಥೆಯನ್ನು ಹೊಂದಿದೆ. ಅತಿ ವೇಗದಲ್ಲಿ ವಾತಾವರಣವನ್ನು ಪುನರ್ ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿದೆ. 17 ಮೀಟರ್‌ ಉದ್ದ ಹಾಗೂ 2 ಮೀಟರ್‌ ವ್ಯಾಸ ಹೊಂದಿರುವ ಇದು 2,200 ಕಿ.ಗ್ರಾಂ ತೂಕವಿದೆ. 3000ಕಿ.ಮೀ.ಗಿಂತಲೂ ದೂರದ ಗುರಿ ತಲುಪಬಲ್ಲ ಈ ಕ್ಷಿಪಣಿ 1.5 ಟನ್‌ ತೂಕದ ಪರಮಾಣು ಸಿಡಿತಲೆಯನ್ನೂ ಸಹ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.
  • ಅಣ್ವಸ್ತ್ರ ಒಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಈ ಕ್ಷಿಪಣಿ 3000 – 5000 ಕಿ.ಮೀ ವರೆಗೆ ಸಾಗಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.