ಕಾಡ್ಗಿಚ್ಚು ನಿರ್ವಹಣೆಗೆ ಡ್ರೋನ್ ಬಳಕೆ ಮಾಡಲಿರುವ ಉತ್ತರಖಂಡ ಸರ್ಕಾರ

ಉತ್ತರಖಂಡ ರಾಜ್ಯ ಅರಣ್ಯ ಇಲಾಖೆ ಕಾಡ್ಗಿಚ್ಚು ನೈಜ ಸಮಯದ ನಿರ್ವಹಣೆಗಾಗಿ ಮೂರು ಡ್ರೋನ್ ಗಳನ್ನು ನಿಯೋಜಿಸಿದೆ. ಕಾಡ್ಗಿಚ್ಚು ನಿರ್ವಹಣೆಗೆ ಡ್ರೋನ್ ಗಳನ್ನು ಬಳಸಿಕೊಳ್ಳುತ್ತಿರುವುದು ದೇಶದಲ್ಲೆ ಮೊದಲೆನಿಸಿದೆ. ಕೇವಲ ಕಾಡ್ಗಿಚ್ಚು ನಿರ್ವಹಣೆ ಅಲ್ಲದೆ ಹಕ್ಕಿಗಳ ಗೂಡಿನ ಸ್ಥಿತಿ, ಮೊಸಳೆ, ನೀರಕ್ಕಿಗಳು ಹಾಗೂ ವನ್ಯಜೀವಿಗಳ ಸಂರಕ್ಷಣೆಗೂ ಡ್ರೋನ್ ಗಳನ್ನು ಬಳಸಲಾಗುತ್ತಿದೆ.

ಹಿನ್ನಲೆ:

ಉತ್ತರಖಂಡದಲ್ಲಿ ಭಾರತದಲ್ಲೆ ಅತಿ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ಕಂಡುಬರುತ್ತಿವೆ. 2016 ರಲ್ಲಿ ಸರಿಸುಮಾರು 2000ಕ್ಕೂ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳಿಂದಾಗಿ 4500 ಹೆಕ್ಟೇರ್ ಅರಣ್ಯ ಪ್ರದೇಶ ನಾಶ ಹೊಂದಿತ್ತು. ಉತ್ತರ ಪ್ರದೇಶದ ಶೇ 71% ರಷ್ಟು ಭೌಗೋಳಿಕ ಪ್ರದೇಶ ಅರಣ್ಯದಿಂದ ಕೂಡಿದೆ. ಆಗಾಗಿ ನೈಜ ಸಮಯದಲ್ಲಿ ಕಾಡ್ಗಿಚ್ಚು ಮೇಲೆ ನಿಗಾವಹಿಸುವುದರಿಂದ ಭಾರಿ ಅನಾಹುತವನ್ನು ತಪ್ಪಿಸಬಹುದಾಗಿದೆ.

  • ಉತ್ತರಖಂಡದಲ್ಲಿ ಕಂಡು ಬರುವ ಕಾಡ್ಗಿಚ್ಚು ಪ್ರಕರಣಗಳು ಮಾನವ ಪ್ರೇರಿತವಾಗಿದೆ.
  • 2016 ರಲ್ಲಿ ಉತ್ತರಖಂಡ ಹಾಗೂ ಹಿಮಾಚಲ ಪ್ರದೇಶದ ಪೈನ್ (Pine) ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡು ಭಾರಿ ಅರಣ್ಯ ಸಂಪತ್ತು ನಾಶವಾಗಿತ್ತು.
  • ಉತ್ತರಖಂಡದ ಹೆಚ್ಚಿನ ಕಾಡ್ಗಿಚ್ಚು ಪ್ರಕರಣಗಳು ಚಿರ್ ಪೈನ್ (ಪೈನಸ್ ರೊಕ್ಸ್ಬರ್ಘಿ) ಕಾಡಿನಲ್ಲಿ ಸಂಭವಿಸುತ್ತವೆ, ಏಕೆಂದರೆ ಈ ಕೋನಿಫರ್ ಮರದ ಎಲೆಗಳಿಗೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ.

ಪ್ಲಾಸ್ಟಿಕ್ ತಿನ್ನುವ “ವ್ಯಾಕ್ಸ್ ವರ್ಮ್ (Wax Worm)” ಕೀಟಾಣು

ಪ್ಲಾಸ್ಟಿಕ್ ತಿಂದು ಅರಗಿಸಿಕೊಳ್ಳುವ ಕೀಟವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಗಲ್ಲಾರೆಯಾ ಮೆಲ್ಲೊನೆಲ್ಲಾ (Galleria Mellonella) ಕೀಟದ ಲಾರ್ವೆ “ವ್ಯಾಕ್ಸ್ ವರ್ಮ್” ಪ್ಲಾಸ್ಟಿಕ್ ತಿನ್ನುವ ಕೀಟವಾಗಿದೆ. ಅತಿ ಹೆಚ್ಚಾಗಿ ಬಳಕೆಯಲ್ಲಿರುವ “ಪಾಲಿಎಥಿಲಿನ್” ಪ್ಲಾಸ್ಟಿಕ್ ಅನ್ನು ಈ ಕೀಟ ಸುಲಭವಾಗಿ ತಿಂದು ಅರಗಿಸಿಕೊಳ್ಳುತ್ತಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ವ್ಯಾಕ್ಸ್ ವರ್ಮ್ ನ ಜೀರ್ಣಶಕ್ತಿ ಇತ್ತೀಚೆಗೆ ಸಂಶೋಧಿಸಲಾದ ಇತರೆ ಸೂಕ್ಷ್ಮಾಣುಗಳುಗಿಂತ ತುಂಬಾ ವೇಗವಾಗಿದೆ ಎನ್ನಲಾಗಿದೆ. ಕಳೆದ ವರ್ಷ ಪ್ಲಾಸ್ಟಿಕ್ ತಿನ್ನುವ ಬ್ಯಾಕ್ಟೀರಿಯಾವನ್ನು ಸಂಶೋಧಿಸಲಾಗಿತ್ತು. ಈ ಬ್ಯಾಕ್ಟೀರಿಯಾ ದಿನವೊಂದಕ್ಕೆ 0.13 ಮಿ.ಗ್ರಾಂ ಪ್ಲಾಸ್ಟಿಕ್ ತಿನ್ನುವ ಸಾಮರ್ಥ್ಯವನ್ನು ಹೊಂದಿತ್ತು.

ಸಂಶೋಧನೆಯ ಮಹತ್ವ:

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಅನ್ನು ಮಿತಿಮೀರಿ ಬಳಕೆ ಮಾಡುತ್ತಿರುವುದರಿಂದ ಪರಿಸರ ಮಾಲಿನ್ಯದಲ್ಲಿ ಪ್ಲಾಸ್ಟಿಕ್ ನದೆ ಸಿಂಹ ಪಾಲು ಎನಿಸಿದೆ. ಪ್ಲಾಸ್ಟಿಕ್ ಸುಲಭವಾಗಿ ಕೊಳೆಯದ ವಸ್ತುವಾಗಿರುವುದರಿಂದ ಇದರ ಸೂಕ್ತ ವಿಲೇವಾರಿ ತಲೆನೋವಾಗಿ ಪರಿಣಮಿಸಿದೆ. ವ್ಯಾಕ್ಸ್ ವರ್ಮ್ ಪಾಲಿಎಥಿಲಿನ್ ಅನ್ನು ಎಥಿಲಿನ್ ಗ್ಲೈಕೊಲ್ ಆಗಿ ಪರಿವರ್ತಿಸುತ್ತದೆ. ಆಗಾಗಿ ಇದು ಪ್ಲಾಸ್ಟಿಕ್ ವಿಲೇವಾರಿಗೆ ಒಂದು ಉತ್ತಮ ಪರಿಹಾರವಾಗಿದೆ.

ವ್ಯಾಕ್ಸ್ ವರ್ಮ್:

ವ್ಯಾಕ್ಸ್ ವರ್ಮ್ ಗಳು ಜೇನುಗೂಡಿನಲ್ಲಿ ಜೇನುನೊಣಗಳ ಮಧ್ಯೆ ಪರಾವಲಂಭಿಗಳಾಗಿ ವಾಸಿಸುತ್ತವೆ. ಮೀನುಗಾರಿಕೆಯಲ್ಲಿ ಮೀನುಗಳ ಆಹಾರವಾಗಿ ಇವುಗಳನ್ನು ಬಳಸಲಾಗುತ್ತದೆ. ಇವುಗಳು ಮೇಣದ ಪತಂಗ (Wax moths)ಗಳ ಲಾರ್ವೆಗಳಾಗಿವೆ. ಜೇನುಗೂಡಿನಲ್ಲಿ ಈ ಮೇಣದ ಪತಂಗಗಳು ಮೊಟ್ಟೆಯನ್ನು ಇಡುತ್ತವೆ. ಬಳಿಕ ಮೊಟ್ಟೆ ಒಡೆದು ಜೇನಿನ ಮೇಣದ ಮೇಲೆಯೆ ಬೆಳೆಯುತ್ತವೆ. ವ್ಯಾಕ್ಸ್ ವರ್ಮ್ ಗಳು ಜೇನುಹುಳಗಳ ಚರ್ಮ, ಮೊಟ್ಟೆ ಹಾಗೂ ಪರಾಗಗಳನ್ನು ತಿಂದು ಬೆಳೆಯುತ್ತವೆ.

ಮುಂಬೈ ಮತ್ತು ಎಲಿಫಾಂಟ ದ್ವೀಪ ಪ್ರದೇಶ ನಡುವೆ ದೇಶದ ಮೊದಲ ರೋಪ್ ವೇ

ದೇಶದ ಮೊದಲ ಹಾಗೂ ಅತಿ ಉದ್ದನೆಯ ರೋಪ್ ವೇ ಮುಂಬೈ ಹಾಗೂ ಎಲಿಫೆಂಟ ದ್ವೀಪ ಪ್ರದೇಶದ ನಡುವೆ ಸಂಪರ್ಕ ಕಲ್ಪಿಸಲಿದೆ. ಈ ಉದ್ದೇಶಿತ ರೋಪ್ ವೇ ಯನ್ನು ಮುಂಬೈ ಪೋರ್ಟ್ ಟ್ರಸ್ಟ್ ನಿರ್ಮಿಸಲಿದ್ದು, ಅರಬ್ಬಿ ಸಮುದ್ರದ ಮೇಲೆ ನಿರ್ಮಾಣಗೊಳ್ಳಲಿದೆ. ಎಲಿಫಾಂಟ ದ್ವೀಪ ಪ್ರದೇಶ ಎಲಿಫೆಂಟ ಗುಹೆಗಳಿಂದ ವಿಶ್ವ ಪ್ರಸಿದ್ದಿಯಾಗಿದೆ. ಅಲ್ಲದೇ ಇದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಸಹ ಆಗಿದೆ. 8 ಕಿಮೀ ಉದ್ದದ ರೋಪ್ ವೇ ಮುಂಬೈಯ ಪೂರ್ವ ಕರಾವಳಿಯಲ್ಲಿರುವ ಸೆವರಿಯಿಂದ ಪ್ರಾರಂಭವಾಗಲಿದೆ ಮತ್ತು ರಾಯ್ಗಡ್ ಜಿಲ್ಲೆಯ ಎಲಿಫೆಂಟ ದ್ವೀಪದಲ್ಲಿ ಕೊನೆಗೊಳ್ಳುತ್ತದೆ.

  • 20 ಆಸನಗಳ ಸಾಮರ್ಥ್ಯ ಕೇಬಲ್ ಕಾರು ಮೂಲಕ 40 ನಿಮಿಷದಲ್ಲಿ ತಲುಪುಬಹುದಾಗಿದ್ದು, ಪ್ರವಾಸೋಧ್ಯಮಕ್ಕೆ ವರದಾನವಾಗಲಿದೆ.
  • ಸದ್ಯ ಈ ಪ್ರದೇಶಕ್ಕೆ ಹಡುಗಗಳ ಮೂಲಕ ಮಾತ್ರ ತಲುಪಬಹುದಾಗಿದ್ದು, ಸುಮಾರು 1 ಗಂಟೆಗೂ ಹೆಚ್ಚು ಸಮಯ ಹಿಡಿಯಲಿದೆ.

ಎಲಿಫೆಂಟ ಗುಹೆಗಳು:

ಎಲಿಫೆಂಟಾ ಗುಹೆಗಳು ಮುಂಬಯಿ ನಗರದ ಸಮೀಪ ಸಾಗರದಲ್ಲಿರುವ ಎಲಿಫೆಂಟಾ ದ್ವೀಪದಲ್ಲಿವೆ. ಎಲಿಫೆಂಟಾ ದ್ವೀಪದ ಮೂಲ ಮರಾಠಿ ಹೆಸರು ಘಾರಾಪುರಿ. ಪೋರ್ಚುಗೀಸರು ಈ ಹೆಸರನ್ನು ಎಲಿಫೆಂಟಾಎಂದು ಬದಲಾಯಿಸಿದರು. 1987ರಲ್ಲಿ ಎಲಿಫೆಂಟಾ ಗುಹೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು. ಎಲಿಫೆಂಟಾ ಗುಹೆಗಳ ಇತಿಹಾಸವು 9 ರಿಂದ 13ನೆಯ ಶತಮಾನದಲ್ಲಿದ್ದ ಸಿಲ್ಹರ ಅರಸರ ಕಾಲದ್ದೆಂದು ನಂಬಲಾಗಿದೆ. ಆದರೆ ಇಲ್ಲಿನ ಕೆಲ ಶಿಲಾಮೂರ್ತಿಗಳು ಮಾನ್ಯಖೇಟದ ರಾಷ್ಟ್ರಕೂಟರ ಕಾಲದವೆಂದು ಸಹ ಕೆಲ ಅಭಿಪ್ರಾಯಗಳಿವೆ. ಇಲ್ಲಿ ಶಿವನ ಮೂರು ಮುಖಗಳನ್ನು ಹೊಂದಿರುವ ತ್ರಿಮೂರ್ತಿ ಸದಾಶಿವ ವಿಗ್ರಹವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಬಲು ಮಟ್ಟಿಗೆ ಹೋಲುತ್ತದೆ. ಈ ಸದಾಶಿವ ತ್ರಿಮೂರ್ತಿಯು ರಾಷ್ಟ್ರಕೂಟರ ರಾಜಲಾಂಛನವು ಸಹ ಆಗಿತ್ತು. ನಟರಾಜ ಮತ್ತು ಅತ್ಯಾಕರ್ಷಕವಾಗಿರುವ ಅರ್ಧನಾರೀಶ್ವರ ಮೂರ್ತಿಗಳು ಸಹ ರಾಷ್ಟ್ರಕೂಟ ಶೈಲಿಯವು. ಶಿಲೆಯಲ್ಲಿ ಕೊರೆದು ರೂಪಿಸಲಾಗಿರುವ ಎಲಿಫೆಂಟಾ ಗುಹೆಗಳು ಸುಮಾರು ೬೦೦೦೦ ಚದರ ಅಡಿಗಳಷ್ಟು ವಿಸ್ತಾರವಾಗಿವೆ. ಇಲ್ಲಿ ಅನೇಕ ಮೊಗಸಾಲೆಗಳು, ಹಜಾರಗಳಿದ್ದು ಹಲವು ಗುಡಿಗಳನ್ನು ಕಾಣಬಹುದು. ಈ ಗುಡಿಗಳಲ್ಲಿ ನಾನಾ ಶಿಲಾಮೂರ್ತಿಗಳಿವೆ. ಜೊತೆಗೆ ಒಂದು ಶಿವಾಲಯವು ಸಹ ಪ್ರಧಾನವಾಗಿದೆ. ಈ ದೇವಾಲಯ ಸಂಕೀರ್ಣವು ಶಿವನ ಆವಾಸತಾಣವೆಂದು ಸ್ಥಳೀಯರ ನಂಬಿಕೆ.

Leave a Comment

This site uses Akismet to reduce spam. Learn how your comment data is processed.