24_upಭಾರತದಲ್ಲಿ ಪ್ರತಿ ವರ್ಷ ಪಂಚಾಯತ್ ರಾಜ್ ದಿವಸವನ್ನು ಏಪ್ರಿಲ್ 24 ರಂದು ಆಚರಿಸಲಾಗುತ್ತದೆ. ಸಂವಿಧಾನದ 73ನೇ ತಿದ್ದುಪಡಿ ಕಾಯಿದೆ,-1992, ಏಪ್ರಿಲ್ 24, 1993ರಂದು ಜಾರಿಗೆ ಬಂದ ಕಾರಣ ಈ ದಿನದಂದು ಪಂಚಾಯತ್ ರಾಜ್ ದಿವಸವನ್ನು ಆಚರಿಸಲಾಗುತ್ತದೆ. ಸಂವಿಧಾನ 73ನೇ ತಿದ್ದುಪಡಿ ಜಾರಿಗೆ ಬಂದಿದ್ದು, ಭಾರತ ಇತಿಹಾಸದಲ್ಲಿ ಒಂದು ಅವಿಸ್ಮರಣಿಯ ಸಾಧನೆ ಎಂದೇ ಹೇಳಲಾಗಿದೆ. ಈ ಕಾಯಿದೆಯಿಂದಾಗಿ ರಾಜ್ಯಗಳು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳನ್ನು ರಚಿಸಿ, ಅವುಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಅಧಿಕಾರಗಳನ್ನು ಓದಗಿಸಿ ವಿಕೇಂದ್ರಿಕರಣ ಸರ್ಕಾರವನ್ನು ರಚಿಸಿವೆ. ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಪ್ರತಿ ವರ್ಷ ಈ ದಿನದಂದು ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವುದರೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತಿಗಳಿಗೆ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ/ಪಂಚಾಯತ್ ಸಶಕ್ತೀಕರಣ ಪುರಸ್ಕಾರವನ್ನು ನೀಡುತ್ತಿದೆ.

ಹಿನ್ನಲೆ:

  • ಪ್ರಪ್ರಥಮ ರಾಷ್ಟ್ರೀಯ ಪಂಚಾಯತ್ ದಿವಸವನ್ನು 2010ರಲ್ಲಿ ಆಚರಿಸಲಾಯಿತು.
  • ಸಂವಿಧಾನದ 73ನೇ ತಿದ್ದುಪಡಿ ಕಾಯಿದೆಯಡಿ ಸಂವಿಧಾನದಲ್ಲಿ ಹೊಸದಾಗಿ “ಭಾಗ IX” ಅಳವಡಿಸಲಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ “ವಿಧಿ 243 ರಿಂದ ವಿಧಿ 243 (O) ಅನ್ನು ಈ ಭಾಗ ಒಳಗೊಂಡಿದೆ.

Leave a Comment

This site uses Akismet to reduce spam. Learn how your comment data is processed.