ವಿದ್ಯಾರ್ಥಿಗಳಿಗೆ, ಸ್ಪರ್ಧಾರ್ಥಿಗಳಿಗೆ ಉಪಯುಕ್ತ
‘ಕನ್ನಡಕ್ಕೊಂದು ಕೈಪಿಡಿ’

   ಕನ್ನಡ ಭಾಷಾ ಅಧ್ಯಯನದಲ್ಲಿ ತೊಡಗುವ ಆಸಕ್ತರಿಗೂ, ವಿದ್ಯಾರ್ಥಿಗಳಿಗೂ ಹಾಗೂ ಸ್ಪರ್ಧಾರ್ಥಿಗಳಿಗೆ ಉಪಯೋಗವಾಗುವ ‘ಕನ್ನಡಕ್ಕೊಂದು ಕೈಪಿಡಿ’ಯನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ.
ಭಾಷಾ ಸಂಬಂಧೀ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಟಿ.ಎಸ್. ಗೋಪಾಲ್ ಅವರು ಈ ಕೃತಿಯ ರಚನೆಕಾರರು. ಕನ್ನಡ ಬಳಕೆಗೆ ಸಂಬಂಧಪಟ್ಟ ಹತ್ತು ಹಲವು ಕೌಶಲಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ.
ಈ ಪುಸ್ತಕದಲ್ಲಿ ಒಟ್ಟು 14 ಅಧ್ಯಾಯಗಳಿದ್ದು, ಸಾಕಷ್ಟು ಉದಾಹರಣೆಗಳನ್ನು ಕೊಟ್ಟಿರುವುದರಿಂದ ಓದುಗರು ಸಹಜವಾಗಿ ಓದಿಕೊಂಡು ಅರ್ಥೈಸಿಕೊಳ್ಳಬಹುದಾಗಿದೆ. ಸ್ಪರ್ಧಾರ್ಥಿಗಳ ಬಳಿ, ವಿದ್ಯಾರ್ಥಿಗಳ ಬಳಿ ಇರಲೇಬೇಕಾದ ಉಪಯುಕ್ತ ಕೈಪಿಡಿಯಿದು.

ಪುಟಗಳು : 320
ಬೆಲೆ : 290/-.
ಪ್ರಕಾಶಕರು : ನವಕರ್ನಾಟಕ ಪ್ರಕಾಶನ

ಪುಸ್ತಕ ತರಿಸಿಕೊಳ್ಳುವ ಆಸಕ್ತರು Ashok GC ಅವರಿಗೆ 7795680405 ಈ ವಾಟ್ಸಪ್ ಸಂಖ್ಯೆಗೆ ನಿಮ್ಮ ಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ. ನೀವು ಕರ್ನಾಟಕದ ಯಾವುದೇ ಹಳ್ಳಿಯಲ್ಲಿದ್ದರೂ ನಿಮ್ಮ ಮನೆ ಬಾಗಿಲಿಗೆ ರಿಜಿಸ್ಟರ್ಡ್ ಅಂಚೆ ಮೂಲಕ ಪುಸ್ತಕ ತಲುಪಿಸಲಾಗುವುದು.

Leave a Comment

This site uses Akismet to reduce spam. Learn how your comment data is processed.