ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,6,7,2017

Question 1

1. 2015ನೇ ಸಾಲಿನಲ್ಲಿ ವಾಡಾ ಉದ್ದೀಪನ ಮದ್ದು ಸೇವನೆಯ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
ಪ್ರಥಮ ಸ್ಥಾನ
B
ತೃತೀಯ ಸ್ಥಾನ
C
ನಾಲ್ಕನೇ ಸ್ಥಾನ
D
ಐದನೇ ಸ್ಥಾನ
Question 1 Explanation: 
ತೃತೀಯ ಸ್ಥಾನ

ವಿವಿಧ ಕ್ರೀಡೆ ಗಳಲ್ಲಿ ಉದ್ದೀಪನ ಮದ್ದು ಸೇವನೆಯ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿ ರುವ ಪಟ್ಟಿಯಲ್ಲಿ ಭಾರತವು ಸತತ ಮೂರನೇ ವರ್ಷವೂ ಮೂರನೇ ಸ್ಥಾನ ದಲ್ಲಿ ಮುಂದುವರಿದಿದೆ. ವಿಶ್ವ ಉದ್ದೀಪನ ಮದ್ದು ತಡೆ ಘಟಕವು (ವಾಡಾ) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಷ್ಯಾ ಮತ್ತು ಇಟಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿವೆ. 2015–16ರ ಅವಧಿಯಲ್ಲಿ ರಷ್ಯಾ ದಲ್ಲಿ 176, ಇಟಲಿಯಲ್ಲಿ 129 ಮತ್ತು ಭಾರತದಲ್ಲಿ 117 ಪ್ರಕರಣಗಳು ದಾಖಲಾಗಿವೆ.ಭಾರತದಲ್ಲಿ 2013 ಮತ್ತು 2014ರಲ್ಲಿ ಕ್ರಮವಾಗಿ 91 ಮತ್ತು 96 ಪ್ರಕರಣಗಳು ದಾಖಲಾಗಿದ್ದವು. ಈ ಬಾರಿ ವಾಡಾ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ

Question 2

2. 2016 ಎಸಿಎಂ ಟುರಿಂಗ್ ಪ್ರಶಸ್ತಿಯನ್ನು(ACM Turing Award) ಯಾರಿಗೆ ನೀಡಲಾಗಿದೆ?

A
ಟಿಮ್ ಬರ್ನರ್ಸ್ ಲೀ
B
ಮಾರ್ಟಿನ್ ಕೂಪರ್
C
ಮೈಕಲ್ ಸ್ಟೋನ್ ಬ್ರೇಕರ್
D
ಲೆಸ್ಲಿ ಲ್ಯಾಂಪರ್ಟ್
Question 2 Explanation: 
ಟಿಮ್ ಬರ್ನರ್ಸ್ ಲೀ

ವರ್ಲ್ಡ್ ವೈಡ್ ವೆಬ್ (WWW) ನಿರ್ಮಾತ ಸರ್ ಟಿಮೊಥಿ ಜಾನ್ ಬರ್ನರ್ಸ್ ಲೀ ಅವರನ್ನು 2016 ಎಸಿಎಂ ಟುರಿಂಗ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಲೀ ಅವರು ಮಸ್ಸಚುಸೆಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಸಿಎಂ ಟುರಿಂಗ್ ಪ್ರಶಸ್ತಿಯನ್ನು “ಕಂಪ್ಯೂಟರ್ ನೊಬೆಲ್ ಪ್ರಶಸ್ತಿ”ಯೆಂದು ಕರೆಯಲಾಗುತ್ತಿದೆ. ಅಸೋಸಿಯೇಷನ್ ಫಾರ್ ಕಂಪ್ಯೂಟಿಂಗ್ ಮೆಷನರಿ ಈ ಪ್ರಶಸ್ತಿಯನ್ನು ನೀಡುತ್ತಿದೆ.

Question 3

3. ಉತ್ತರ ಪ್ರದೇಶ ರಾಜ್ಯ ಸರ್ಕಾರ ಕೈಗೊಂಡಿರುವ ರೈತರ ಸಾಲ ಮನ್ನಾ ನಿರ್ಧಾರವನ್ನು ಅನುಷ್ಟಾನ ಮಾಡಲು ಯಾವ ಸಮಿತಿಯನ್ನು ರಚಿಸಲಾಗಿದೆ?

A
ರಾಹುಲ್ ಭಟ್ನಾಗರ್ ಸಮಿತಿ
B
ರಾಜೀವ್ ಚಂದ್ರಶೇಖರ್ ಸಮಿತಿ
C
ವಿನೋದ್ ಗೊಯೆಂಕಾ ಸಮಿತಿ
D
ಶರಣ್ ಚಂದ್ರ ಸಮಿತಿ
Question 3 Explanation: 
ರಾಹುಲ್ ಭಟ್ನಾಗರ್ ಸಮಿತಿ

ಉತ್ತರ ಪ್ರದೇಶ ಸರ್ಕಾರ ರೈತರ ಸಾಲ ಮನ್ನಾ ನಿರ್ಧಾರವನ್ನು ಅನುಷ್ಟಾನ ಮಾಡಲು ಪ್ರಧಾನ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ನೇತೃತ್ವದ 8 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.

Question 4

4. ಪ್ರಸಿದ್ದ “ಬೆರ್ಹಾಮ್ಪುರ್ ತಾಕುರಾಣಿ ಯಾತ್ರೆ ಉತ್ಸವ” ಯಾವ ರಾಜ್ಯದಲ್ಲಿ ಇತ್ತೀಚೆಗೆ ಆರಂಭಗೊಂಡಿತು?

A
ತೆಲಂಗಣ
B
ಕೇರಳ
C
ಪಶ್ಚಿಮ ಬಂಗಾಳ
D
ಒಡಿಶಾ
Question 4 Explanation: 
ಒಡಿಶಾದ

ಬೆರ್ಹಾಮ್ಪುರ್ ನಲ್ಲಿ ಪ್ರಸಿದ್ದ ಬೆರ್ಹಾಮ್ಪುರ್ ತಾಕುರಾಣಿ ಯಾತ್ರೆ ಉತ್ಸವಕ್ಕೆ ಚಾಲನೆ ದೊರೆತಿದೆ. ಇದು ದಕ್ಷಿಣ ಒಡಿಶಾದ ಅತ್ಯಂತ ದೊಡ್ಡ ಉತ್ಸವ. ಒಂದು ತಿಂಗಳ ಕಾಲ ಈ ಉತ್ಸವ ನಡೆಯಲಿದೆ.

Question 5

5. ಈ ಕೆಳಗಿನ ಯಾರು ಸಾಫ್ಟ್ ವೇರ್ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಮ್)ದ ಅಧ್ಯಕ್ಷರಾಗಿ 2017-18ನೇ ಸಾಲಿಗೆ ನೇಮಕಗೊಂಡಿದ್ದಾರೆ?

A
ಸಿ ಪಿ ಗುರ್ನಾನಿ
B
ರಮಣ್ ರಾಯ್
C
ಆರ್ ಚಂದ್ರಶೇಖರ್
D
ವಿಶಾಲ್ ಸಿಕ್ಕಾ
Question 5 Explanation: 
ರಮಣ್ ರಾಯ್

ಕ್ವಾಟ್ರೋ ಸಂಸ್ಥೆಯ ಚೇರಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ರಮಣ್ ರಾಯ್ ಅವರು ನಾಸ್ಕಾಂನ ಅಧ್ಯಕ್ಷರಾಗಿ 2017-18ನೇ ಸಾಲಿಗೆ ನೇಮಕಗೊಂಡಿದ್ದಾರೆ. ಟೆಕ್ ಮಹೀಂದ್ರಾದ ಸಿಇಓ ಮತ್ತು ಎಂಡಿ ಆಗಿರುವ ಸಿ ಪಿ ಗುರ್ನಾನಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರಮಣ್ ರಾಯ್ ಅವರು ನೇಮಕಗೊಂಡಿದ್ದಾರೆ.

Question 6

6. ರೋಲ್ಯಾಂಡ್ ಸಂಸ್ಥಾಪಕ ಮತ್ತು ಡಿಜಿಟಲ್ ಸಂಗೀತ ಪ್ರವರ್ತಕ “ಇಕುಟೊರೊ ಕಕಶಶಿ” ಇತ್ತೀಚೆಗೆ ನಿಧನರಾದರು. ಇವರು ಯಾವ ದೇಶದವರು?

A
ಜಪಾನ್
B
ಅಮೆರಿಕ
C
ಇಸ್ರೇಲ್
D
ರಷ್ಯಾ
Question 6 Explanation: 
ಜಪಾನ್

“ಇಕುಟೊರೊ ಕಕಶಶಿ” ಜಪಾನ್ ಮೂಲದ ರೋಲ್ಯಾಂಡ್ ಸಂಸ್ಥಾಪಕ ಹಾಗೂ ಡಿಜಿಟಲ್ ಸಂಗೀತ ಪ್ರವರ್ತಕ ನಿಧನರಾದರು. ಕಕಶಶಿ 1972 ರಲ್ಲಿ ರೋಲ್ಯಾಂಡ್ ಕಾರ್ಪೋರೇಷನ್ ಸಂಸ್ಥಾಪಿಸಿದರು. ಆ ಮೂಲಕ ರೋಲ್ಯಾಂಡ್ ಡ್ರಮ್ ಮಷಿನ್ ಅಭಿವೃದ್ದಿಪಡಿಸಿ ವಿಶ್ವ ಪ್ರಸಿದ್ದರಾದರು.

Question 7

7. ಯಾವ ರಾಜ್ಯ “ಹಿಂದೂ ಪುರೋಹಿತಂ” ಕುರಿತಾದ ಒಂದು ವರ್ಷ ಅವಧಿಯ ಡಿಪ್ಲೋಮ ಪದವಿಯನ್ನು ಆರಂಭಿಸಲಿದೆ?

A
ಮಹಾರಾಷ್ಟ್ರ
B
ಮಧ್ಯ ಪ್ರದೇಶ
C
ಜಾರ್ಖಂಡ್
D
ಹರಿಯಾಣ
Question 7 Explanation: 
ಮಧ್ಯ ಪ್ರದೇಶ

ಮಧ್ಯಪ್ರದೇಶ ಸರ್ಕಾರದ ಮಹರ್ಷಿ ಪತಾಂಜಲಿ ಸಂಸ್ಕೃತಿ ಸಂಸ್ಥಾನ “ಹಿಂದೂ ಪುರೋಹಿತಂ” ಕುರಿತಾದ ಒಂದು ವರ್ಷ ಅವಧಿಯ ಡಿಪ್ಲೋಮ ಪದವಿಯನ್ನು ಜುಲೈ 2017ರಿಂದ ಆರಂಭಿಸಲಿದೆ. ಯಾವುದೇ ಜಾತಿ, ಧರ್ಮದವರಿಗೆ ಈ ಪದವಿ ಮುಕ್ತವಾಗಿರಲಿದೆ. ಹತ್ತನೆ ತರಗತಿ ಕನಿಷ್ಠ ವಿದ್ಯಾರ್ಹತೆ.

Question 8

8. ವಿಶ್ವ ಪ್ರಯಾಣ ಮತ್ತು ಪ್ರವಾಸೋಧ್ಯಮ ಮಂಡಳಿಯ ಇತ್ತೀಚಿನ ವರದಿಯಂತೆ, ಜಿಡಿಪಿ ಪ್ರಕಾರ ವಿಶ್ವದ ಅತಿದೊಡ್ಡ ಪ್ರವಾಸೋದ್ಯಮ ಆರ್ಥಿಕತೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
3
B
8
C
7
D
5
Question 8 Explanation: 
7

ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿಯ ವರದಿ ಪ್ರಕಾರ ಪ್ರವಾಸೋದ್ಯಮದಿಂದ ದೇಶದ ಜಿಡಿಪಿಗೆ ಕೊಡುಗೆ ನೀಡುವಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ.

Question 9

9. ವಿಶ್ವ ಆರೋಗ್ಯ ದಿನವನ್ನು __________ ರಂದು ಆಚರಿಸಲಾಗುತ್ತದೆ?

A
ಏಪ್ರಿಲ್ 4
B
ಏಪ್ರಿಲ್ 5
C
ಏಪ್ರಿಲ್ 6
D
ಏಪ್ರಿಲ್ 7
Question 9 Explanation: 
ಏಪ್ರಿಲ್ 7

ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಸಂಸ್ಥಾಪನ ದಿನವನ್ನು ವಿಶ್ವ ಆರೋಗ್ಯ ದಿನವೆಂದು ಆಚರಿಸಲಾಗುವುದು. “Depression: Let’s Talk” ಈ ವರ್ಷದ ಧ್ಯೇಯವಾಕ್ಯ.

Question 10

10. “2017 ರಾಷ್ಟ್ರೀಯ ಕ್ಷಯರೋಗ ಶೃಂಗಸಭೆ” ಯಾವ ನಗರದಲ್ಲಿ ಆರಂಭಗೊಂಡಿತು?

A
ಧರ್ಮಶಾಲ
B
ಪಾಟ್ನಾ
C
ಬೆಂಗಳೂರು
D
ಹೈದ್ರಾಬಾದ್
Question 10 Explanation: 
ಧರ್ಮಶಾಲ

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಧರ್ಮಶಾಲದಲ್ಲಿ 2017 ರಾಷ್ಟ್ರೀಯ ಕ್ಷಯರೋಗ ಶೃಂಗಸಭೆ ಏ್ರಪಿಲ್ 07, 2017 ರಂದು ಆರಂಭಗೊಂಡಿತು. “ಇಂಡಿಯಾ ವರ್ಸಸ್ ಟಿಬಿ. ಟಿಬಿ ಹರೇಗ, ದೇಶ್ ಜಿತೇಗ” ಈ ಶೃಂಗಸಭೆಯ ಟ್ಯಾಗ್ ಲೈನ್.

There are 10 questions to complete.

[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್672017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.