ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,3,4,2017

Question 1

1. 2017 ಇಂಡಿಯಾ ಸೂಪರ್ ಸೀರಿಸ್ ಟೂರ್ನಮೆಂಟಿನ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು ಯಾರು?

A
ಪಿ ವಿ ಸಿಂಧು
B
ಸೈನಾ ನೆಹ್ವಾಲ್
C
ಕರೊಲಿನ ಮರಿನ್
D
ಸಂಗ್-ಜಿ-ಯೂನ್
Question 1 Explanation: 
ಪಿ ವಿ ಸಿಂಧು

ಒಲಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಅವರು 2017 ಇಂಡಿಯಾ ಸೂಪರ್ ಸೀರಿಸ್ ಟೂರ್ನಮೆಂಟಿನ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಫೈನಲ್ ಪಂದ್ಯದಲ್ಲಿ ಸ್ಪೇನ್ ನ ಕರೊಲಿನ ಮರಿನ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Question 2

2. 2017 ನ್ಯಾಷನಲ್ ಇನ್ಸ್ಟಿಟ್ಯೂಷನ್ಸ್ ರಾಂಕಿಂಗ್ ಫ್ರೇಮ್ ವರ್ಕ್ (ಎನ್ಐಆರ್ಎಫ್)ನಲ್ಲಿ ಪ್ರಥಮ ಸ್ಥಾನಗಳಿಸಿದ ಉನ್ನತ ಶಿಕ್ಷಣ ಸಂಸ್ಥೆ ಯಾವುದು?

A
ಐಐಟಿ, ಖರಗಪುರ
B
ಐಐಟಿ, ಚೆನ್ನೈ
C
ಐಐಎಸ್ಸಿ, ಬೆಂಗಳೂರು
D
ಐಐಟಿ, ಬಾಂಬೆ
Question 2 Explanation: 
ಐಐಎಸ್ಸಿ, ಬೆಂಗಳೂರು

ಕೇಂದ್ರ ಸರ್ಕಾರ ಪ್ರಕಟಿಸಿರುವ ದೇಶದ 100 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕ ಒಟ್ಟು ಏಳು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದ್ದು, ಕಳೆದ ಸಾಲಿನಂತೆಯೇ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಅಗ್ರ ಸ್ಥಾನ ಪಡೆದಿದೆ. ಕಳೆದ ತಿಂಗಳು "ಟೈಮ್ಸ್ ಹೈಯರ್ ಎಜುಕೇಶನ್' ಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದ್ದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸೋಮವಾರ ಪ್ರಕಟಿಸಿದ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ರಾಂಕಿಂಗ್ ನ ಎಲ್ಲ ವಿಭಾಗಗಳಲ್ಲಿಯೂ ಅಗ್ರ ಸ್ಥಾನ ಪಡೆದುಕೊಂಡಿದೆ. ನ್ಯಾಷನಲ್ ಇನ್ಸ್ಟಿಟ್ಯೂಷನ್ಸ್ ರಾಂಕಿಂಗ್ ಫ್ರೇಮ್ ವರ್ಕ್ (ಎನ್ಐಆರ್ಎಫ್) ಸಿದ್ಧ ಪಡಿಸಿರುವ ಈ ರಾಂಕಿಂಗ್ ಪಟ್ಟಿಯಲ್ಲಿ ಏಳು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕೂಡ ಟಾಪ್ 10ರಲ್ಲೇ ಸ್ಥಾನ ಪಡೆದುಕೊಂಡಿವೆ. ಟಾಪ್ 10ರ ಕಡೆಯ ಎರಡು ಸ್ಥಾನಗಳಲ್ಲಿ ಬನಾರಸ್ ಹಿಂದೂ ವಿವಿ (ಬಿಎಚ್ಯು) ಮತ್ತು ಜವಾಹರಲಾಲ್ ನೆಹರೂ ವಿವಿ (ಜೆಎನ್ಯು) ಸ್ಥಾನ ಪಡೆದಿವೆ.

Question 3

3. “2017 ವಿಶ್ವ ಆಟಿಸಂ ಜಾಗೃತಿ ದಿನ (WAAD)” ನ ಧ್ಯೇಯವಾಕ್ಯ _______?

A

ಆಟಿಸಮ್ ಮತ್ತು 2030 ಅಜೆಂಡಾ: ಇನ್ಕ್ಲೂಷನ್ ಮತ್ತು ನ್ಯೂರೋ ವೈವಿಧ್ಯತೆ

B

ಟುವರ್ಡ್ ಆಟೊನಮಿ ಅಂಡ್ ಸೆಲ್ಫ್ ಡಿಟರ್ಮಿನೇಷನ್

C

ಎಪ್ಲಾಯ್ಮೆಂಟ್: ಆಟಿಸಂ ಅಡ್ವಾಂಟೇಜ್

D

ಸಸ್ಟೈನಬಲ್ ಡೆವಲಪ್ಮೆಂಟ್: ದಿ ಪ್ರಾಮಿಸ್ ಆಫ್ ಟೆಕ್ನಾಲಜಿ

Question 3 Explanation: 

ಟುವರ್ಡ್ ಆಟೊನಮಿ ಅಂಡ್ ಸೆಲ್ಫ್ ಡಿಟರ್ಮಿನೇಷನ್ ವಿಶ್ವ ಆಟಿಸಂ ದಿನವನ್ನು ಏಪ್ರಿಲ್ 2 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಟುವರ್ಡ್ ಆಟೊನಮಿ ಅಂಡ್ ಸೆಲ್ಫ್ ಡಿಟರ್ಮಿನೇಷನ್ ಇದು ಈ ವರ್ಷದ ಧ್ಯೇಯವಾಕ್ಯ.

Question 4

4. ಖ್ಯಾತ ಹಿಂದೂಸ್ತಾನಿ ಗಾಯಕಿ ಕಿಶೋರಿ ಅಮೋನ್ಕರ್ ಅವರು ಇತ್ತೀಚೆಗೆ ನಿಧನರಾದರು. ಅವರು ಯಾವ ರಾಜ್ಯದವರು?

A
ಗುಜರಾತ್
B
ರಾಜಸ್ತಾನ
C
ಮಹಾರಾಷ್ಟ್ರ
D
ತೆಲಂಗಣ
Question 4 Explanation: 

ಮಹಾರಾಷ್ಟ್ರಖ್ಯಾತ ಹಿಂದೂಸ್ತಾನಿ ಗಾಯಕಿ ಕಿಶೋರಿ ಅಮೋನ್ಕರ್ (84) ಕೆಲಕಾಲದ ಅನಾರೋಗ್ಯದ ಬಳಿಕ ನಿಧನರಾದರು.ಜೈಪುರ ಘರಾನಾ ಶೈಲಿಯ ಗಾಯಕಿ ಕಿಶೋರಿ ಅವರು ದೇಶದ ಶ್ರೇಷ್ಠ ಹಿಂದೂಸ್ತಾನಿ ಗಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದರು. ಹಿಂದೂಸ್ತಾನಿ ಪಾರಂಪರಿಕ ರಾಗಗಳಲ್ಲಿ ಖ್ಯಾಲ್ ಹಾಡುವುದರಲ್ಲಿ ಕಿಶೋರಿ ಖ್ಯಾತರಾಗಿದ್ದರು. ಜತೆಗೆ ಲಘು ಸಂಗೀತದ ಠುಮರಿ, ಭಜನ್ ಹಾಗೂ ಚಿತ್ರ ಗೀತೆಗಳ ಗಾಯನದಲ್ಲೂ ಅವರು ಹೆಸರು ಗಳಿಸಿದ್ದರು. ಸರ್ವೋಚ್ಚ ಗೌರವಗಳಾದ ಪದ್ಮಭೂಷಣ (1987), ಪದ್ಮವಿಭೂಷಣ (2002) ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದರು.

Question 5

5. ಈ ಕೆಳಗಿನ ಯಾರು ಮದ್ರಾಸ್ ಹೈಕೋರ್ಟಿನ ಮುಖ್ಯನ್ಯಾಯಧೀಶರಾಗಿ ನೇಮಕಗೊಂಡಿದ್ದಾರೆ?

A
ಇಂದಿರಾ ಬ್ಯಾನರ್ಜಿ
B
ಸಲ್ಮಾ ತಾಸ್ಮಿನ್
C
ಸೂರ್ಯನಾರಯಣ್ ರಾವ್
D
ಮುಖೇಶ್ ರಾಣ
Question 5 Explanation: 
ಇಂದಿರಾ ಬ್ಯಾನರ್ಜಿ

ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ (59) ಅವರು ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಇಂದಿರಾ ಅವರು ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ಗೆ ನೇಮಕವಾಗಿದ್ದರು. ಆ ಸ್ಥಾನಕ್ಕೆ ಇಂದಿರಾ ಅವರನ್ನು ನೇಮಿಸಲಾಗಿದೆ.

Question 6

6. 2017ರ ಪುರುಷರ ಸಿಂಗಲ್ಸ್ ಮಿಯಾಮಿ ಓಪನ್ ಟೆನಿಸ್ ಪಂದ್ಯಾವಳಿಯನ್ನು ಯಾರು ಗೆದ್ದಿದ್ದಾರೆ?

A
ಡೊಮಿನಿಕ್ ಥೀಮ್
B
ರಾಫೆಲ್ ನಡಾಲ್
C
ಮಿಲೋಸ್ ರಾವೊನಿಕ್
D
ರೋಜರ್ ಫೆಡರರ್
Question 6 Explanation: 
ರೋಜರ್ ಫೆಡರರ್

ಸ್ವಿಟ್ಜರ್ಲ್ಯಾಂಡಿನ ವೃತ್ತಿಪರ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಅವರು 2017 ಪುರುಷರ ಸಿಂಗಲ್ಸ್ ಮಿಯಾಮಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಫೆಡರರ್ ಅವರು ರಫೆಲ್ ನಡಾಲ್ ಅವರನ್ನು ಮಣಿಸಿದರು. ಬ್ರಿಟನಿನ್ನ ಜೊಹನ್ನ ಕೊಂಟ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.

Question 7

7. 2017 ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೋ ವರ್ಲ್ಡ್ ಪ್ರೆಸ್ ಫ್ರೀಡಮ್ ಪ್ರಶಸ್ತಿಗಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?

A
ಅಹ್ಮೆಟ್ ಸಿಕ್
B
ರೀಯಟ್ ಆಲೆಮು
C
ದಾಯಿತ್ ಇಸಾಕ್
D
ಮಸೆನ್ ದರ್ವಿಶ್
Question 7 Explanation: 

ಸ್ವೀಡನ್ ಪತ್ರಕರ್ತ ದಾಯಿತ್ ಇಸಾಕ್ (Dawith Isaak) ಅವರನ್ನು 2017 ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೋ ವರ್ಲ್ಡ್ ಪ್ರೆಸ್ ಫ್ರೀಡಮ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ಕೊಲೊಂಬಿಯಾದ ಪತ್ರಕರ್ತ ಗಿಲ್ಲೆರ್ಮೊ ಕ್ಯಾನೋ ಅವರ ಸ್ಮರಣಾರ್ಥ ನೀಡಲಾಗುತ್ತಿದೆ. ಪತ್ರಿಕ ಸ್ವಾತಂತ್ರಕ್ಕೆ ಶ್ರಮಿಸುವ ವ್ಯಕ್ತಿ/ಸಂಸ್ಥೆಗಳಿಗೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Question 8

8. ದಕ್ಷಿಣ ಏಷ್ಯಾ ಉಪಪ್ರಾಂತೀಯ ಆರ್ಥಿಕ ಸಹಕಾರ (ಎಸ್ಎಎಸ್ಇಸಿ) ಹಣಕಾಸು ಸಚಿವರ ಸಭೆ ಯಾವ ದೇಶದಲ್ಲಿ ಆಯೋಜಿಸಲಾಗಿದೆ?

A
ದಕ್ಷಿಣ ಕೊರಿಯಾ
B
ಚೀನಾ
C
ನೇಪಾಳ
D
ಭಾರತ
Question 8 Explanation: 
ಭಾರತ

ನವದೆಹಲಿಯಲ್ಲಿ ದಕ್ಷಿಣ ಏಷ್ಯಾ ಉಪಪ್ರಾಂತೀಯ ಆರ್ಥಿಕ ಸಹಕಾರ (ಎಸ್ಎಎಸ್ಇಸಿ) ಹಣಕಾಸು ಸಚಿವರ ಸಭೆ ಏಪ್ರಿಲ್ 3 ರಂದು ಆರಂಭಗೊಂಡಿತು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್ಎಎಸ್ಇಸಿ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಆರ್ಥಿಕ ಸಹಕಾರ ಪ್ರೋತ್ಸಾಹಿಸಲು ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಎಸ್ಎಎಸ್ಇಸಿ ಸದಸ್ಯ ರಾಷ್ಟ್ರಗಳಾದ ಭಾರತ, ಭೂತಾನ್, ಬಾಂಗ್ಲದೇಶ, ನೇಪಾಳ, ಮಾಲ್ಡೀವ್ಸ್, ಮ್ಯಾನ್ಮಾರ್ ಮತ್ತು ಶ್ರೀಲಂಕಾ ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Question 9

9. ವಿದ್ಯುತ್ ಮಗ್ಗ ವಲಯವನ್ನು ಪ್ರೋತ್ಸಾಹಿಸುವ ಸಲುವಾಗಿ “ಪವರ್ಟೆಕ್ಸ್ ಭಾರತ (PowerTex India)” ಯೋಜನೆಗೆ ಚಾಲನೆ ನೀಡಿದ ಕೇಂದ್ರ ಸಚಿವರು ಯಾರು?

A
ನರೇಂದ್ರ ಮೋದಿ
B
ಸ್ಮೃತಿ ಇರಾನಿ
C
ರಾಜ್ನಾಥ್ ಸಿಂಗ್
D
ಅರುಣ್ ಜೇಟ್ಲಿ
Question 9 Explanation: 
ಸ್ಮೃತಿ ಇರಾನಿ

ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ವಿದ್ಯುತ್ ಮಗ್ಗ ವಲಯದ ಸಮಗ್ರ ಅಭಿವೃದ್ದಿಗೆ PoweTex India ಯೋಜನೆಗೆ ಮಹಾರಾಷ್ಟ್ರದ ಭಿವಾಂಡಿ ಜಿಲ್ಲೆಯಲ್ಲಿ ಚಾಲನೆ ನೀಡಿದರು. ವಿದ್ಯುತ್ ಮಗ್ಗ ವಲಯದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ದಿ ಹಾಗೂ ನವೀಕರಣಗೊಳಿಸುವುದು ಈ ಮೂರು ವರ್ಷ ಅವಧಿಯ ಯೋಜನೆಯ ಉದ್ದೇಶವಾಗಿದೆ. ವಿದ್ಯುತ್ ಸಮಸ್ಯೆ ಇರುವ ಕಡೆ ಸೌರ ಫಲಕಗಳನ್ನು ಅಳವಡಿಸಲು ಯೋಜನೆಯಡಿ ಹಣಕಾಸು ನೆರವನ್ನು ನೀಡಲಾಗುವುದು.

Question 10

10. “ಎನ್ಟಾಂಗ್ಕಿ ರಾಷ್ಟ್ರೀಯ ಉದ್ಯಾನವನ (Ntangki National Park)” ಯಾವ ರಾಜ್ಯದಲ್ಲಿದೆ?

A
ಮಿಜೋರಾಮ್
B
ನಾಗಾಲ್ಯಾಂಡ್
C
ಮಣಿಪುರ
D
ತ್ರಿಪುರ
Question 10 Explanation: 
ನಾಗಾಲ್ಯಾಂಡ್
There are 10 questions to complete.

[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್342017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.